IND vs BAN 2nd T20 Highlights: ಭಾರತಕ್ಕೆ 86 ರನ್ ಜಯ; ಟಿ20 ಸರಣಿ ಕೈವಶ

ಪೃಥ್ವಿಶಂಕರ
|

Updated on:Oct 09, 2024 | 10:38 PM

India vs Bangladesh 2nd T20I Highlights in Kannada: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟಿ20 ಪಂದ್ಯ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ 86 ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿ ಟಿ20 ಸರಣಿಯನ್ನು ತನ್ನ ವಶ ಮಾಡಿಕೊಂಡಿದೆ. 222 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ 9 ವಿಕೆಟ್ ಕಳೆದುಕೊಂಡು 135 ರನ್ ಗಳಿಸಲಷ್ಟೇ ಶಕ್ತವಾಯಿತು.

IND vs BAN 2nd T20 Highlights: ಭಾರತಕ್ಕೆ 86 ರನ್ ಜಯ; ಟಿ20 ಸರಣಿ ಕೈವಶ
ಭಾರತ- ಬಾಂಗ್ಲಾದೇಶ

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟಿ20 ಪಂದ್ಯ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ 86 ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿ ಟಿ20 ಸರಣಿಯನ್ನು ತನ್ನ ವಶ ಮಾಡಿಕೊಂಡಿದೆ. 222 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ 9 ವಿಕೆಟ್ ಕಳೆದುಕೊಂಡು 135 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ನಿತೀಶ್ ರೆಡ್ಡಿ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು. ಇದಕ್ಕೂ ಮುನ್ನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿತ್ತು. ಟೀಂ ಇಂಡಿಯಾ ಪರ ನಿತೀಶ್ ರೆಡ್ಡಿ 34 ಎಸೆತಗಳಲ್ಲಿ 74 ರನ್ ಗಳಿಸಿದರೆ, ರಿಂಕು ಸಿಂಗ್ 53 ರನ್ ಕಲೆಹಾಕಿದ್ದರು.

LIVE NEWS & UPDATES

The liveblog has ended.
  • 09 Oct 2024 10:35 PM (IST)

    IND vs BAN Live Score: ಭಾರತಕ್ಕೆ 86 ರನ್‌ಗಳ ಜಯ

    ಎರಡನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು 86 ರನ್‌ಗಳಿಂದ ಸೋಲಿಸಿದ ಭಾರತ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಕೊನೆಯ ಓವರ್‌ನಲ್ಲಿ ನಿತೀಶ್ ರೆಡ್ಡಿ ಒಂದು ವಿಕೆಟ್ ಪಡೆದು ಬಾಂಗ್ಲಾದೇಶವನ್ನು 9 ವಿಕೆಟ್‌ಗೆ ಕೇವಲ 135 ರನ್‌ಗಳಿಗೆ ಸೀಮಿತಗೊಳಿಸಿದರು. ನಿತೀಶ್ ರೆಡ್ಡಿ 74 ರನ್ ಗಳಿಸಿದ್ದಲ್ಲದೆ 2 ವಿಕೆಟ್ ಪಡೆದರು.

  • 09 Oct 2024 10:27 PM (IST)

    IND vs BAN Live Score: ಎಂಟನೇ ವಿಕೆಟ್ ಪತನ

    ಬ್ಯಾಟಿಂಗ್‌ನಲ್ಲಿ ಬಾಂಗ್ಲಾದೇಶವನ್ನು ಧ್ವಂಸಗೊಳಿಸಿದ ನಿತೀಶ್ ಕುಮಾರ್ ರೆಡ್ಡಿ ಬೌಲಿಂಗ್‌ನಲ್ಲೂ ತಮ್ಮ ಜಾದೂ ಪ್ರದರ್ಶಿಸಿದ್ದಾರೆ. ನಿತೀಶ್ 18ನೇ ಓವರ್​ನಲ್ಲಿ ಬಾಂಗ್ಲಾದೇಶಕ್ಕೆ 8ನೇ ಹೊಡೆತ ನೀಡಿದರು. ಇದರೊಂದಿಗೆ ಈ ಪಂದ್ಯದಲ್ಲಿ ವಿಕೆಟ್ ಪಡೆದ ಭಾರತದ ಏಳನೇ ಬೌಲರ್ ಎನಿಸಿಕೊಂಡಿದ್ದಾರೆ.

  • 09 Oct 2024 10:12 PM (IST)

    IND vs BAN Live Score: 100 ರನ್ ಪೂರ್ಣ

    ಬಾಂಗ್ಲಾದೇಶ ಸೋಲು ಖಚಿತ ಆದರೆ ಹೇಗಾದರೂ ಮಾಡಿ ತಂಡದ ಸೋಲಿನ ಅಂತರ ತಗ್ಗಿಸಲು ಮಹಮ್ಮದುಲ್ಲಾ ಪ್ರಯತ್ನಿಸುತ್ತಿದ್ದಾರೆ. ಬಾಂಗ್ಲಾದೇಶವನ್ನು 100 ರನ್‌ಗಳ ಗಡಿ ದಾಟಿಸಿದ್ದಾರೆ.

  • 09 Oct 2024 10:12 PM (IST)

    IND vs BAN Live Score: ಏಳನೇ ವಿಕೆಟ್

    ಹಾರ್ದಿಕ್ ಪಾಂಡ್ಯ ಲಾಂಗ್ ಆನ್‌ನಲ್ಲಿ ಅತ್ಯುತ್ತಮ ಕ್ಯಾಚ್ ಪಡೆಯುವ ಮೂಲಕ ಬಾಂಗ್ಲಾದೇಶಕ್ಕೆ 7 ನೇ ಹೊಡೆತ ನೀಡಿದರು. ವರುಣ್ ಚಕ್ರವರ್ತಿ ಎಸೆತದಲ್ಲಿ ರಿಶಾದ್ ಹೊಸೇನ್ ಕ್ಯಾಚಿತ್ತು ಔಟಾದರು.

  • 09 Oct 2024 09:55 PM (IST)

    IND vs BAN Live Score: 6ನೇ ವಿಕೆಟ್ ಪತನ

    ಬಾಂಗ್ಲಾದೇಶ 12 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿದೆ. ಅಲಿ (1) ಮತ್ತು ಮೆಹದಿ ಹಸನ್ ರೂಪದಲ್ಲಿ ಬಾಂಗ್ಲಾದೇಶ ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿದೆ.

  • 09 Oct 2024 09:52 PM (IST)

    IND vs BAN Live Score: ಐದನೇ ವಿಕೆಟ್ ಪತನ

    ಬಾಂಗ್ಲಾದೇಶದ 5ನೇ ವಿಕೆಟ್ ಪತನವಾಗಿದ್ದು, ರಿಯಾನ್ ಪರಾಗ್ ಕೂಡ ತಮ್ಮ ಮೊದಲ ಓವರ್​ನಲ್ಲೇ ವಿಕೆಟ್ ಪಡೆದರು. ಮೆಹದಿ ಹಸನ್ ಮೀರಜ್ ಕ್ಯಾಚಿತ್ತು ಪೆವಿಲಿಯನ್​ಗೆ ಮರಳಿದರು.

  • 09 Oct 2024 09:43 PM (IST)

    IND vs BAN Live Score: ಅರ್ಧ ಇನಿಂಗ್ಸ್ ಮುಗಿದಿದೆ

    ಬಾಂಗ್ಲಾದೇಶದ ಇನ್ನಿಂಗ್ಸ್‌ನ ಅರ್ಧದಷ್ಟು ಅಂದರೆ 10 ಓವರ್‌ಗಳು ಕೊನೆಗೊಂಡಿವೆ. ಆದರೆ ಸ್ಕೋರ್ ಇನ್ನೂ 70 ರನ್ ಆಗಿದ್ದು, 4 ವಿಕೆಟ್‌ಗಳು ಬಿದ್ದಿವೆ. ಮೆಹದಿ ಹಸನ್ ಮೀರಜ್ ಮತ್ತು ಮಹಮ್ಮದುಲ್ಲಾ ಕ್ರೀಸ್‌ನಲ್ಲಿದ್ದು, ತಂಡಕ್ಕೆ ಉಳಿದ 60 ಎಸೆತಗಳಲ್ಲಿ 152 ರನ್‌ಗಳ ಅಗತ್ಯವಿದೆ.

  • 09 Oct 2024 09:40 PM (IST)

    IND vs BAN Live Score: ನಾಲ್ಕನೇ ವಿಕೆಟ್ ಪತನ

    ಬಾಂಗ್ಲಾದೇಶದ ನಾಲ್ಕನೇ ವಿಕೆಟ್ ಕೂಡ ಬಿದ್ದಿದೆ. ಅಭಿಷೇಕ್ ಶರ್ಮಾ ತನ್ನ ಮೊದಲ ಓವರ್‌ನಲ್ಲಿಯೇ ತೌಹೀದ್ ಹೃದಯ್ ಅವರನ್ನು ಬೌಲ್ಡ್ ಮಾಡಿದರು.

  • 09 Oct 2024 09:22 PM (IST)

    IND vs BAN Live Score: ಮೂರನೇ ವಿಕೆಟ್ ಪತನ

    ಬಾಂಗ್ಲಾದೇಶದ ಇನ್ನಿಂಗ್ಸ್‌ ತತ್ತರಿಸಲು ಆರಂಭಿಸಿದ್ದು, ಮೂರನೇ ವಿಕೆಟ್‌ ಕೂಡ ಪತನಗೊಂಡಿದೆ. ಆರನೇ ಓವರ್‌ನಲ್ಲಿ ವರುಣ್ ಚಕ್ರವರ್ತಿ ತಮ್ಮ ಮೊದಲ ಎಸೆತದಲ್ಲಿ ಲಿಟನ್ ದಾಸ್​ರನ್ನು ಬೌಲ್ಡ್ ಮಾಡಿದರು.

  • 09 Oct 2024 09:22 PM (IST)

    IND vs BAN Live Score: ಎರಡನೇ ವಿಕೆಟ್ ಪತನ

    ಬಾಂಗ್ಲಾದೇಶ ಪವರ್‌ಪ್ಲೇನಲ್ಲಿಯೇ ಎರಡನೇ ವಿಕೆಟ್ ಕಳೆದುಕೊಂಡಿದ್ದು, ನಾಯಕ ನಜ್ಮುಲ್ ಹೊಸೈನ್ ಶಾಂಟೊ 11 ರನ್ ಗಳಿಸಿ ಔಟಾದರು. ವಾಷಿಂಗ್ಟನ್ ಸುಂದರ್ ತಮ್ಮ ಮೊದಲ ಓವರ್‌ನಲ್ಲಿಯೇ ವಿಕೆಟ್ ಪಡೆದರು.

  • 09 Oct 2024 09:21 PM (IST)

    IND vs BAN Live Score: ಮೊದಲ ವಿಕೆಟ್ ಪತನ

    ಬಾಂಗ್ಲಾದೇಶಕ್ಕೆ ಮೊದಲ ಹೊಡೆತ ಬಿದ್ದಿದ್ದು, ಈ ಬಾರಿಯೂ ಅರ್ಷದೀಪ್ ಸಿಂಗ್ ಮೊದಲ ಪಂದ್ಯದಂತೆ ಪರ್ವೇಜ್ ಎಮನ್ (16) ಅವರನ್ನು ಬೌಲ್ಡ್ ಮಾಡಿದರು.

  • 09 Oct 2024 09:21 PM (IST)

    IND vs BAN Live Score: ಬಾಂಗ್ಲಾದೇಶದ ಇನ್ನಿಂಗ್ಸ್ ಆರಂಭ

    ಬಾಂಗ್ಲಾದೇಶದ ಇನ್ನಿಂಗ್ಸ್‌ ಆರಂಭಗೊಂಡಿದ್ದು, ಆರಂಭಿಕ ಆಟಗಾರ ಪರ್ವೇಜ್‌ ಹೊಸೈನ್‌ ಎಮೋನ್‌, ಅರ್ಷದೀಪ್‌ ಸಿಂಗ್‌ ಮೇಲೆ 3 ಬೌಂಡರಿ ಬಾರಿಸಿ ಒಟ್ಟು 14 ರನ್‌ ಗಳಿಸಿದರು.

  • 09 Oct 2024 08:46 PM (IST)

    IND vs BAN Live Score: 222 ರನ್ ಟಾರ್ಗೆಟ್

    ಟೀಂ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿದೆ. ಕೊನೆಯ ಓವರ್‌ನಲ್ಲಿ ರಿಷಾದ್ ಹೊಸೇನ್ 3 ವಿಕೆಟ್ ಕಬಳಿಸಿ ಕೇವಲ 7 ರನ್ ನೀಡಿ ಭಾರತ ತಂಡವನ್ನು ದೊಡ್ಡ ಸ್ಕೋರ್ ಮಾಡದಂತೆ ತಡೆದರು. ರಿಶಾದ್ 3 ವಿಕೆಟ್ ಕಬಳಿಸಿದರಲ್ಲದೆ ಗರಿಷ್ಠ 55 ರನ್ ನೀಡಿದರು. ಉಳಿದಂತೆ ಮೆಹದಿ ಹಸನ್ ಮಿರಾಜ್ 3 ಓವರ್‌ಗಳಲ್ಲಿ 46 ರನ್ ನೀಡಿದರೂ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

  • 09 Oct 2024 08:39 PM (IST)

    IND vs BAN Live Score: ರಿಯಾನ್ ಮತ್ತು ಹಾರ್ದಿಕ್ ಔಟ್

    ಭಾರತ ಸತತ 2 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡಿದೆ. 19ನೇ ಓವರ್​ನಲ್ಲಿ ರಿಯಾನ್ ಪರಾಗ್ (15 ರನ್, 6 ಎಸೆತ) ಸತತ 2 ಸಿಕ್ಸರ್ ಬಾರಿಸಿದರೂ ಕೊನೆಯ ಎಸೆತದಲ್ಲಿ ಔಟಾದರು. ನಂತರ ಹಾರ್ದಿಕ್ (32 ರನ್, 19 ಎಸೆತ) ಕೂಡ 20ನೇ ಓವರ್‌ನ ಮೊದಲ ಎಸೆತದಲ್ಲಿ ಔಟಾದರು.

  • 09 Oct 2024 08:39 PM (IST)

    IND vs BAN Live Score: ಭಾರತದ 200 ರನ್

    ಭಾರತ 19ನೇ ಓವರ್‌ನಲ್ಲಿ 200 ರನ್ ಪೂರೈಸಿದೆ. ಹಾರ್ದಿಕ್ ಪಾಂಡ್ಯ ಒಂದು ಬೌಂಡರಿ ಬಾರಿಸಿ ತಂಡವನ್ನು 200 ರನ್‌ಗಳ ಗಡಿ ದಾಟಿಸಿದರು. ಟಿ20 ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 200 ರನ್ ಗಳಿಸಿದ್ದು ಇದೇ ಮೊದಲು.

  • 09 Oct 2024 08:38 PM (IST)

    IND vs BAN Live Score:ರಿಂಕು ಸಿಂಗ್ ಔಟ್

    ರಿಂಕು ಸಿಂಗ್ ಅವರ ಸ್ಫೋಟಕ ಇನ್ನಿಂಗ್ಸ್ ಕೂಡ ಕೊನೆಗೊಂಡಿದೆ. 17ನೇ ಓವರ್‌ನಲ್ಲಿ ತಸ್ಕಿನ್ ಅಹ್ಮದ್ ಅವರ ಕೊನೆಯ ಎಸೆತದಲ್ಲಿ ರಿಂಕು ವಿಕೆಟ್ ಕಳೆದುಕೊಂಡರು. ರಿಂಕು 29 ಎಸೆತಗಳಲ್ಲಿ 53 ರನ್ ಗಳಿಸಿದರು.

  • 09 Oct 2024 08:28 PM (IST)

    IND vs BAN Live Score: ರಿಂಕು ಅರ್ಧಶತಕ

    ನಿತೀಶ್ ಔಟಾದ ಬಳಿಕ ರಿಂಕು ಸಿಂಗ್ ದಾಳಿ ಮುಂದುವರಿಸಿ ಕೇವಲ 26 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ತಂಝೀಮ್ ಹಸನ್ ಅವರ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ರಿಂಕು ಅರ್ಧಶತಕ ಪೂರೈಸಿದರು.

  • 09 Oct 2024 08:16 PM (IST)

    IND vs BAN Live Score: ನಿತೀಶ್ ಔಟ್

    ಟೀಂ ಇಂಡಿಯಾ 14 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿದೆ. ಟೀಂ ಇಂಡಿಯಾದ ನಾಲ್ಕನೇ ವಿಕೆಟ್ ನಿತೀಶ್ ರೆಡ್ಡಿ ರೂಪದಲ್ಲಿ ಪತನಗೊಂಡಿದೆ. ನಿತೀಶ್ ಕೇವಲ 34 ಎಸೆತಗಳಲ್ಲಿ 74 ರನ್‌ ಬಾರಿಸಿ ಔಟಾದರು.

  • 09 Oct 2024 08:13 PM (IST)

    IND vs BAN Live Score: ನಿತೀಶ್ ರೆಡ್ಡಿ ಅರ್ಧಶತಕ

    ನಿತೀಶ್ ಕುಮಾರ್ ರೆಡ್ಡಿ ಅವರು ತಮ್ಮ ವೃತ್ತಿಜೀವನದ ಎರಡನೇ ಪಂದ್ಯದಲ್ಲಿ ಮೊದಲ ಅರ್ಧಶತಕವನ್ನು ಗಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ 21 ವರ್ಷದ ನಿತೀಶ್ ಕೇವಲ 27 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ ಅರ್ಧಶತಕ ದಾಖಲಿಸಿದರು.

  • 09 Oct 2024 08:01 PM (IST)

    IND vs BAN Live Score: 100 ರನ್ ಪೂರ್ಣ

    ಕಳಪೆ ಆರಂಭದ ಹೊರತಾಗಿಯೂ ಭಾರತ ಕೇವಲ 10 ಓವರ್‌ಗಳಲ್ಲಿ 100 ರನ್ ಪೂರೈಸಿತು. ನಿತೀಶ್ ಮತ್ತು ರಿಂಕು ಒಟ್ಟಿಗೆ 6 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸಿ ಟೀಮ್ ಇಂಡಿಯಾವನ್ನು ಈ ಸ್ಕೋರ್ ಮೀರಿ ಕೊಂಡೊಯ್ದರು.

  • 09 Oct 2024 07:57 PM (IST)

    IND vs BAN Live Score: ನಿತೀಶ್ ಸತತ 2 ಸಿಕ್ಸರ್‌

    ನಿತೀಶ್ ಕುಮಾರ್ ಲೆಗ್ ಸ್ಪಿನ್ನರ್ ರಿಷಾದ್ ಹೊಸೈನ್ ಓವರ್ನಲ್ಲಿ ಸತತ ಎರಡು ಸಿಕ್ಸರ್ ಬಾರಿಸಿದರು. ಮೊದಲ ಸಿಕ್ಸರ್ ನೇರ ಬೌಂಡರಿಯಿಂದ ಹೊರಗೆ ಬಿದ್ದರೆ, ಮುಂದಿನದು ಲಾಂಗ್‌ನಲ್ಲಿ ಬಿದ್ದಿತು. ನಂತರ ಓವರ್‌ನ ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಕೂಡ ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 24 ರನ್‌ಗಳು ಬಂದವು. ಆ ಓವರ್‌ನ ಮೊದಲ ಎಸೆತವನ್ನೂ ಬೌಂಡರಿ ಬಾರಿಸಲಾಯಿತು.

  • 09 Oct 2024 07:43 PM (IST)

    IND vs BAN Live Score: ರಿಂಕು ಸಿಕ್ಸರ್

    ಎಂಟನೇ ಓವರ್‌ನಲ್ಲಿ ಭಾರತದ ಇನ್ನಿಂಗ್ಸ್‌ನ ಮೊದಲ ಸಿಕ್ಸರ್‌ ಸಿಡಿಯಿತು. ಲೆಗ್ ಸ್ಪಿನ್ನರ್ ರಿಶಾದ್ ಹೊಸೈನ್ ಅವರ ಎಸೆತದಲ್ಲಿ ರಿಂಕು ಸಿಂಗ್ ಭರ್ಜರಿ ಸಿಕ್ಸರ್ ಬಾರಿಸಿದರು.

  • 09 Oct 2024 07:32 PM (IST)

    IND vs BAN Live Score: 3ನೇ ವಿಕೆಟ್, ಪವರ ಪ್ಲೇ ಅಂತ್ಯ

    ಟೀಂ ಇಂಡಿಯಾd ಮೂರನೇ ವಿಕೆಟ್ ಪತನವಾಗಿದೆ. ಸೂರ್ಯಕುಮಾರ್ ಯಾದವ್ 10 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು. ಭಾರತದ ಸ್ಕೋರ್ 3 ವಿಕೆಟ್‌ಗೆ 41 ರನ್ ಆಗಿದೆ. ಇದರೊಂದಿಗೆ ಭಾರತದ ಪವರ್ ಪ್ಲೇ ಕೂಡ ಅಂತ್ಯಗೊಂಡಿದೆ.

  • 09 Oct 2024 07:17 PM (IST)

    IND vs BAN Live Score: ಅಭಿ ಔಟ್

    ಟೀಂ ಇಂಡಿಯಾದ ಎರಡನೇ ವಿಕೆಟ್ ಪತನವಾಗಿದೆ. ಅಭಿಷೇಕ್ ಶರ್ಮಾ 15 ರನ್ ಗಳಿಸಿ ಔಟಾದರು. ಟೀಂ ಇಂಡಿಯಾ 3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 25 ರನ್ ಗಳಿಸಿದೆ.

  • 09 Oct 2024 07:12 PM (IST)

    IND vs BAN Live Score: ಸಂಜು ಔಟ್

    ಟೀಂ ಇಂಡಿಯಾ ಮೊದಲ ವಿಕೆಟ್ ಪತನವಾಗಿದೆ. ಸಂಜು ಸ್ಯಾಮ್ಸನ್ 10 ರನ್ ಗಳಿಸಿ ಔಟಾದರು. ಭಾರತ 2 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 17 ರನ್ ಗಳಿಸಿದೆ.

  • 09 Oct 2024 07:10 PM (IST)

    IND vs BAN Live Score: ಸ್ಫೋಟಕ ಆರಂಭ

    1 ಓವರ್‌ನಲ್ಲಿ ತಂಡ 15 ರನ್ ಗಳಿಸಿದೆ. ಸಂಜು ಸ್ಯಾಮ್ಸನ್ 9 ರನ್ ಹಾಗೂ ಅಭಿಷೇಕ್ ಶರ್ಮಾ 6 ರನ್ ಗಳಿಸಿ ಆಡುತ್ತಿದ್ದಾರೆ. ಬಾಂಗ್ಲಾದೇಶದ ಮೊದಲ ಓವರ್ ಅನ್ನು ಮೆಹದಿ ಹಸನ್ ಮಿರಾಜ್ ಎಸೆದರು.

  • 09 Oct 2024 06:44 PM (IST)

    IND vs BAN Live Score: ಬಾಂಗ್ಲಾದೇಶ ತಂಡ

    ಪರ್ವೇಜ್ ಹುಸೇನ್ ಎಮೋನ್, ಲಿಟನ್ ದಾಸ್ (ವಿಕೆಟ್ ಕೀಪರ್), ನಜ್ಮುಲ್ ಹುಸೇನ್ ಶಾಂಟೊ (ನಾಯಕ), ತೌಹೀದ್ ಹೃದಯೋಯ್, ಮಹ್ಮುದುಲ್ಲಾ, ಜೆಕರ್ ಅಲಿ, ಮೆಹದಿ ಹಸನ್ ಮಿರಾಜ್, ರಿಶಾದ್ ಹುಸೇನ್, ತಸ್ಕಿನ್ ಅಹ್ಮದ್, ತಂಝೀಮ್ ಹಸನ್ ಸಾಕಿಬ್, ಮುಸ್ತಾಫಿಜುರ್ ರಹಮಾನ್.

  • 09 Oct 2024 06:44 PM (IST)

    IND vs BAN Live Score: ಭಾರತ ತಂಡ

    ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.

  • 09 Oct 2024 06:33 PM (IST)

    IND vs BAN Live Score: ಟಾಸ್ ಗೆದ್ದ ಬಾಂಗ್ಲಾ

    ಟಾಸ್ ಗೆದ್ದ ಬಾಂಗ್ಲಾದೇಶ ನಾಯಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Published On - Oct 09,2024 6:33 PM

    Follow us
    ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
    ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
    ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
    ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
    ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
    ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
    ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
    ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
    ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
    ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
    ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
    ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
    ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
    ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
    ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
    ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
    ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
    ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
    ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ
    ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ