ಐಸಿಸಿ ಮಹಿಳಾ ವಿಶ್ವಕಪ್ 2022 (ICC Women’s World Cup 2022)ರಲ್ಲಿ ಭಾರತದ ಮುಂದಿನ ಸ್ಪರ್ಧೆಯು ಮಂಗಳವಾರ ಬಾಂಗ್ಲಾದೇಶದ ವಿರುದ್ಧ ನಡೆಯಲಿದೆ. ಈ ಪಂದ್ಯ ಭಾರತ ತಂಡಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಏಕೆಂದರೆ, ಇದರಲ್ಲಿ ಗೆಲುವು ಸಾಧಿಸುವುದರಿಂದ ಭಾರತ ಸೆಮಿಫೈನಲ್‌ಗೆ ತಲುಪುವ ಭರವಸೆ ಹೆಚ್ಚಲಿದೆ. ಮತ್ತೊಂದೆಡೆ, ಬಾಂಗ್ಲಾದೇಶದ ಪರಿಸ್ಥಿತಿಯೂ ಇದೇ ಆಗಿದೆ. ಬಾಂಗ್ಲಾದೇಶಕ್ಕೆ ಸೆಮಿಫೈನಲ್‌ಗೆ ತಲುಪುವ ಭರವಸೆ ಜೀವಂತವಾಗಿದೆ ಆದರೆ ಇದಕ್ಕಾಗಿ ಅವರು ತಮ್ಮ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಈ ಸಂದರ್ಭದಲ್ಲಿ ಪೈಪೋಟಿ ಜೋರಾಗುವ ನಿರೀಕ್ಷೆಯಿದೆ. ಹೀಗಾಗಿ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಸಹ ಅಂತಹ ಪಂದ್ಯವನ್ನು ವೀಕ್ಷಿಸಲು ಆಸಕ್ತಿ ಹೊಂದಿರುತ್ತಾರೆ.
ಮುಖಾಮುಖಿ ವರದಿ
ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ನಾಲ್ಕು ಏಕದಿನ ಪಂದ್ಯಗಳ ವರದಿ ತೆಗೆದುಕೊಂಡರೆ. ಈ ಎಲ್ಲಾ ಪಂದ್ಯಗಳ ಫಲಿತಾಂಶ ಏಕಪಕ್ಷೀಯವಾಗಿದೆ. ಭಾರತ ಬಾಂಗ್ಲಾದೇಶವನ್ನು ಈ ನಾಲ್ಕೂ ಪಂದ್ಯಗಳಲ್ಲೂ ಮಣಿಸಿದೆ. ಐಸಿಸಿ ಮಹಿಳಾ ವಿಶ್ವಕಪ್‌ನ ಪಿಚ್‌ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಅದೇ ಸಮಯದಲ್ಲಿ, ಈ ಇಬ್ಬರ ನಡುವಿನ ಕೊನೆಯ ODI ಪಂದ್ಯವು 2017 ರ ಆರಂಭದಲ್ಲಿ ನಡೆದಿತ್ತು. ಅಂದರೆ, 5 ವರ್ಷಗಳ ನಂತರ ಭಾರತ ಮತ್ತು ಬಾಂಗ್ಲಾದೇಶಗಳು ಪರಸ್ಪರ ಎದುರಾಗಲಿವೆ.
ಐಸಿಸಿ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಬಾಂಗ್ಲಾದೇಶ ಇದುವರೆಗೆ ಕೇವಲ 4 ಪಂದ್ಯಗಳನ್ನು ಆಡಿದ ಅನುಭವ ಹೊಂದಿದೆ. ಇದರಲ್ಲಿ ಒಂದು ಪಂದ್ಯ ಗೆದ್ದು 3ರಲ್ಲಿ ಸೋತಿದೆ. ಅದೇ ಸಮಯದಲ್ಲಿ, ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಇದುವರೆಗೆ 68 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 36 ಪಂದ್ಯಗಳನ್ನು ಗೆದ್ದಿದೆ. ಅನುಭವದ ದೃಷ್ಟಿಯಿಂದ ನೋಡಿದರೆ ಭಾರತ,ಬಾಂಗ್ಲಾದೇಶಕ್ಕಿಂತ ಎಲ್ಲಾ ವಿಭಾಗದಲ್ಲೂ ಮೇಲುಗೈ ಸಾಧಿಸಿದೆ. ಇದರ ಪರಿಣಾಮವನ್ನು ಪಂದ್ಯದ ಮೇಲೂ ಕಾಣಬಹುದು.
ಭಾರತ ತಂಡ ಪ್ರಸ್ತುತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಅವರು ಇಲ್ಲಿಯವರೆಗೆ 5 ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ 2ರಲ್ಲಿ ಗೆದ್ದಿದ್ದರೆ, 3 ಪಂದ್ಯಗಳಲ್ಲಿ ಸೋತಿದ್ದಾರೆ. ಆದರೆ ಬಾಂಗ್ಲಾದೇಶ ಇದುವರೆಗೆ 4 ಪಂದ್ಯಗಳನ್ನು ಆಡಿದೆ, ಇದರಲ್ಲಿ ಪಾಕಿಸ್ತಾನದ ವಿರುದ್ಧ ಕೇವಲ ಒಂದು ಪಂದ್ಯ ಗೆದ್ದು 3 ಪಂದ್ಯಗಳಲ್ಲಿ ಸೋತಿದೆ. ಈಗ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವನ್ನು ನಾವು ಎಲ್ಲಿ ಮತ್ತು ಯಾವ ರೀತಿ ನೋಡಬಹುದು ಎಂಬುದು ಪ್ರಶ್ನೆಯಾಗಿದೆ. ಅದೆಲ್ಲದ್ದಕ್ಕೂ ಇಲ್ಲಿದೆ ಉತ್ತರ.
ಪಂದ್ಯದ ಪೂರ್ಣ ಮಾಹಿತಿ
ಭಾರತ ಮತ್ತು ಬಾಂಗ್ಲಾದೇಶ ನಡುವಿನ ICC ಮಹಿಳಾ ವಿಶ್ವಕಪ್ 2022 ಪಂದ್ಯವನ್ನು ಯಾವಾಗ ಮತ್ತು ಯಾವ ಸಮಯದಲ್ಲಿ ಆಡಲಾಗುತ್ತದೆ?
ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮಾರ್ಚ್ 22 ಮಂಗಳವಾರದಂದು ಮುಖಾಮುಖಿಯಾಗಲಿವೆ. ಈ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 6.30ಕ್ಕೆ ಆರಂಭವಾಗಲಿದೆ. ಈ ಪಂದ್ಯದ ಟಾಸ್ ಬೆಳಗ್ಗೆ 6 ಗಂಟೆಗೆ ನಡೆಯಲಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಈ ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮಹಿಳಾ ವಿಶ್ವಕಪ್ 2022 ರ 23 ನೇ ಪಂದ್ಯವು ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.
ಭಾರತ ಮತ್ತು ಬಾಂಗ್ಲಾದೇಶ ಪಂದ್ಯದ ನೇರ ಪ್ರಸಾರವನ್ನು ನಾನು ಎಲ್ಲಿ ವೀಕ್ಷಿಸಬಹುದು?
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವಿವಿಧ ಭಾಷೆಗಳಲ್ಲಿ ವೀಕ್ಷಿಸಬಹುದು.
ಭಾರತ ಮತ್ತು ಬಾಂಗ್ಲಾದೇಶ ಪಂದ್ಯದ ನೇರ ಪ್ರಸಾರವನ್ನು ನಾನು ಆನ್‌ಲೈನ್‌ನಲ್ಲಿ ಎಲ್ಲಿ ವೀಕ್ಷಿಸಬಹುದು?
ಲೈವ್ ಸ್ಟ್ರೀಮಿಂಗ್ ಚಂದಾದಾರಿಕೆಯೊಂದಿಗೆ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಪಂದ್ಯವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ:PAK vs WI: ಬರೋಬ್ಬರಿ 13 ವರ್ಷಗಳ ನಂತರ ವಿಶ್ವಕಪ್‌ನಲ್ಲಿ ಮೊದಲ ಗೆಲುವು ಕಂಡ ಪಾಕಿಸ್ತಾನ!