IND vs ENG: 2ನೇ ಇನ್ನಿಂಗ್ಸ್​ನಲ್ಲಿ 245 ರನ್​ಗಳಿಗೆ ಭಾರತ ಆಲೌಟ್; ಇಂಗ್ಲೆಂಡ್​ ಗೆಲುವಿಗೆ ಬೇಕು 378 ರನ್

| Updated By: ಪೃಥ್ವಿಶಂಕರ

Updated on: Jul 04, 2022 | 7:05 PM

IND vs ENG: 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಭಾರತ 378 ರನ್​ಗಳ ಗುರಿ ನೀಡಿದೆ. ಪಂದ್ಯದ ನಾಲ್ಕನೇ ದಿನವಾದ ಸೋಮವಾರ, ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲೌಟ್ ಆಗಿದೆ.

IND vs ENG: 2ನೇ ಇನ್ನಿಂಗ್ಸ್​ನಲ್ಲಿ 245 ರನ್​ಗಳಿಗೆ ಭಾರತ ಆಲೌಟ್; ಇಂಗ್ಲೆಂಡ್​ ಗೆಲುವಿಗೆ ಬೇಕು 378 ರನ್
IND vs ENG
Follow us on

5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಭಾರತ 378 ರನ್​ಗಳ ಗುರಿ ನೀಡಿದೆ. ಪಂದ್ಯದ ನಾಲ್ಕನೇ ದಿನವಾದ ಸೋಮವಾರ, ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲೌಟ್ ಆಗಿದೆ. ಆ ಮೂಲಕ ಭಾರತ ಆತಿಥೇಯರಿಗಿಂತ 377 ರನ್‌ಗಳ ಮುನ್ನಡೆ ಸಾಧಿಸಿದೆ. ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಗಳಿಸಿತ್ತು, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ 284 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಬಲ ಮುನ್ನಡೆ ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ (Rishabh Pant), 2ನೇ ಇನ್ನಿಂಗ್ಸ್​ನಲ್ಲಿ ಅರ್ಧಶತಕ ದಾಖಲಿಸಿದರು. ಚೇತೇಶ್ವರ ಪೂಜಾರ (Cheteshwar Pujara) ಮೂರನೇ ದಿನವೇ ಅರ್ಧಶತಕ ಪೂರೈಸಿದ್ದರು. ಪಂತ್ 86 ಎಸೆತಗಳಲ್ಲಿ 57 ರನ್ ಗಳಿಸಿದರು. ಚೇತೇಶ್ವರ ಪೂಜಾರ ಮತ್ತು ಪಂತ್ ನಾಲ್ಕನೇ ದಿನದಂತ್ಯಕ್ಕೆ ಭಾರತದ ಸ್ಕೋರ್ ಅನ್ನು 3 ವಿಕೆಟ್​ ನಷ್ಟಕ್ಕೆ 125ಕ್ಕೆ ಕೊಂಡೊಯ್ದಿದ್ದರು.

ನಾಲ್ಕನೇ ದಿನ ಪೂಜಾರ 168 ಎಸೆತಗಳಲ್ಲಿ 66 ರನ್ ಗಳಿಸಿದರು. ಇವರಿಬ್ಬರನ್ನು ಬಿಟ್ಟರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬೇರೆ ಯಾವುದೇ ಬ್ಯಾಟ್ಸ್‌ಮನ್ ರನ್ ಗಳಿಸಲು ಸಾಧ್ಯವಾಗಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ರವೀಂದ್ರ ಜಡೇಜಾ 23 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇಂಗ್ಲೆಂಡ್ ಈ ಗುರಿಯನ್ನು ಸಾಧಿಸಿದರೆ, ಅದು ಇತಿಹಾಸವನ್ನು ಸೃಷ್ಟಿಸುತ್ತದೆ, ಏಕೆಂದರೆ ಇಲ್ಲಿಯವರೆಗೆ ಇಂಗ್ಲೆಂಡ್ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅಂತಹ ದೊಡ್ಡ ಗುರಿಯನ್ನು ಸಾಧಿಸಿಲ್ಲ. 2019 ರಲ್ಲಿ, ಆಸ್ಟ್ರೇಲಿಯಾ ವಿರುದ್ಧ ಲೀಡ್ಸ್‌ನಲ್ಲಿ, ಇಂಗ್ಲೆಂಡ್ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 359 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಸಾಧಿಸಿತ್ತು.

ಇಂಗ್ಲೆಂಡ್ ಇಲ್ಲಿಯವರೆಗೆ ಈ ಸಾಧನೆ ಮಾಡಿಲ್ಲ

ಇದನ್ನೂ ಓದಿ
IND VS ENG: 90 ವರ್ಷಗಳ ಭಾರತದ ಟೆಸ್ಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಿದ ರಿಷಬ್ ಪಂತ್..!
IND vs SL: ಶೆಫಾಲಿ- ಮಂಧಾನ 174 ರನ್‌ಗಳ ಜೊತೆಯಾಟ; ಸರಣಿಯೊಂದಿಗೆ ಭಾರತಕ್ಕೆ 10 ವಿಕೆಟ್‌ ಜಯ

ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಇಲ್ಲಿಯವರೆಗೆ ಯಾವುದೇ ತಂಡಕ್ಕೆ ಇಷ್ಟು ದೊಡ್ಡ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಈ ಮೈದಾನದಲ್ಲಿ ಎರಡು ಬಾರಿ ಮಾತ್ರ ಸಾಧಿಸಲಾಗಿದೆ. 2008 ರಲ್ಲಿ ದಕ್ಷಿಣ ಆಫ್ರಿಕಾ ತಂಡವು ಈವರೆಗಿನ ದೊಡ್ಡ ಗುರಿಯನ್ನು ಸಾಧಿಸಿತ್ತು. ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ವಿರುದ್ಧ 281 ರನ್‌ಗಳ ಗುರಿಯನ್ನು ಸಾಧಿಸಿತ್ತು. ಅದೇ ಸಮಯದಲ್ಲಿ, ಇಂಗ್ಲೆಂಡ್ 1999 ರಲ್ಲಿ ನ್ಯೂಜಿಲೆಂಡ್ ವಿರುದ್ಧ 208 ರನ್‌ಗಳ ಗುರಿಯನ್ನು ಸಾಧಿಸಿತ್ತು. ಆದರೆ, ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಎಡ್ಜ್‌ಬಾಸ್ಟನ್ ಮೈದಾನದಲ್ಲಿ 378 ರನ್‌ಗಳ ಗುರಿಯನ್ನು ಸಾಧಿಸುವುದು ಇಂಗ್ಲೆಂಡ್‌ಗೆ ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತ ಎಡ್ಜ್‌ಬಾಸ್ಟನ್‌ನಲ್ಲಿ ಇತಿಹಾಸ ಸೃಷ್ಟಿಸಲು ತಯಾರಿ ನಡೆಸುತ್ತಿದೆ, ಏಕೆಂದರೆ ಇಲ್ಲಿಯವರೆಗೆ ಭಾರತಕ್ಕೆ ಈ ಮೈದಾನದಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ.

Published On - 6:23 pm, Mon, 4 July 22