India vs England: ಐದನೇ ಟೆಸ್ಟ್​ಗೂ ಮುನ್ನ ಭಾರತಕ್ಕೆ ಒಂದು ಗುಡ್ ನ್ಯೂಸ್, ಎರಡು ಬ್ಯಾಡ್ ನ್ಯೂಸ್: ಏನದು?

TV9 Digital Desk

| Edited By: Vinay Bhat

Updated on: Sep 09, 2021 | 7:29 AM

India vs England: ಐದನೇ ಟೆಸ್ಟ್ ಆರಂಭಕ್ಕೂ ಮುನ್ನ ಭಾರತಕ್ಕೆ ಶುಭ-ಅಶುಭ ಎರಡೂ ಸುದ್ದಿಗಳು ಸಿಕ್ಕಿವೆ. ಮೊದಲನೆಯದಾಗಿ ನಾಲ್ಕನೇ ಟೆಸ್ಟ್​ನಿಂದ ಹೊರಬಿದ್ದಿದ್ದ ಮೊಹಮ್ಮದ್ ಶಮಿ ಫಿಟ್ ಆಗಿದ್ದಾರೆ. ಆದರೆ, ರೋಹಿತ್ ಶರ್ಮಾ-ಪೂಜಾರ ಇನ್ನೂ ಸಂಪೂರ್ಣ ಗುಣಮುಖರಾಗಿಲ್ಲ.

India vs England: ಐದನೇ ಟೆಸ್ಟ್​ಗೂ ಮುನ್ನ ಭಾರತಕ್ಕೆ ಒಂದು ಗುಡ್ ನ್ಯೂಸ್, ಎರಡು ಬ್ಯಾಡ್ ನ್ಯೂಸ್: ಏನದು?
Team India

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಅಂತಿಮ ಐದನೇ ಟೆಸ್ಟ್ ಪಂದ್ಯ ಸೆಪ್ಟೆಂಬರ್ 10 ಶುಕ್ರವಾರದಿಂದ ಆರಂಭವಾಗಲಿದ್ದು, ಮ್ಯಾಂಚೆಸ್ಟರ್​ನ (Manchester) ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ (Team India) 2-1 ಅಂತರದ ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ಕೊಹ್ಲಿ ಪಡೆ (Virat Kohli) ಐದನೇ ಟೆಸ್ಟ್ ಅನ್ನು ಗೆಲ್ಲಲು ಸಾಧ್ಯವಾಗಿಲ್ಲವಾದರೂ ಸೋಲದೆ ಕನಿಷ್ಠ ಡ್ರಾ ಆದರೂ ಮಾಡಬೇಕಿದೆ. ಇತ್ತ ಆಂಗ್ಲರಿಗೆ ತವರಿನಲ್ಲಿ ಮುಖಭಂಗ ತಪ್ಪಿಸಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಐದನೇ ಟೆಸ್ಟ್​ಗೆ (5th Test) ಇಂಗ್ಲೆಂಡ್ ತಂಡ ಪ್ರಕಟವಾಗಿದ್ದರೆ, ಇತ್ತ ಕೊಹ್ಲಿ ಪಡೆಯ ಅಂತಿಮ ಬಳಗ ಇನ್ನೂ ತಯಾರಾಗಿಲ್ಲ. ಇಂಜುರಿ ಸಮಸ್ಯೆ ಮತ್ತೆ ಉದ್ಭವಿಸಿದೆ.

ಹೌದು, ಐದನೇ ಟೆಸ್ಟ್ ಆರಂಭಕ್ಕೂ ಮುನ್ನ ಭಾರತಕ್ಕೆ ಶುಭ-ಅಶುಭ ಎರಡೂ ಸುದ್ದಿಗಳು ಸಿಕ್ಕಿವೆ. ಮೊದಲನೆಯದಾಗಿ ನಾಲ್ಕನೇ ಟೆಸ್ಟ್​ನಿಂದ ಹೊರಬಿದ್ದಿದ್ದ ಮೊಹಮ್ಮದ್ ಶಮಿ ಫಿಟ್ ಆಗಿದ್ದಾರೆ. ಶಮಿ ಐದನೇ ಟೆಸ್ಟ್ ವೇಳೆಗೆ ಫಿಟ್ ಆಗಿದ್ದರೆ ಅವರು ತಂಡಕ್ಕೆ ಮೊದಲ ಆಯ್ಕೆಯ ವೇಗಿ ಆಗಲಿದ್ದಾರೆ ಎಂದು ಟೀಮ್ ಇಂಡಿಯಾಗೆ ಹತ್ತಿರದ ಬಿಸಿಸಿಐ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಮೊಹಮ್ಮದ್ ಶಮಿ ಆಡುವ ಬಳಗಕ್ಕೆ ಕಮ್​ಬ್ಯಾಕ್ ಮಾಡಿದರೆ ಸತತ ನಾಲ್ಕು ಟೆಸ್ಟ್‌ ಆಡಿರುವ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಬುಮ್ರಾ ಸರಣಿಯಲ್ಲಿ ಒಟ್ಟು 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಐಪಿಎಲ್ 2021 ಟೂರ್ನಿಯ ಎರಡನೇ ಚರಣ ನಡೆಯಲಿದ್ದು, ಬಳಿಕ ಐಸಿಸಿ ಟಿ-20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಹೀಗಾಗಿ ಬುಮ್ರಾ ಮೇಲಿನ ಹೊರೆಯನ್ನು ಕಡಿಮೆ ಮಾಡಲು ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ.

ಶಮಿ ತಂಡಕ್ಕೆ ಕಮ್​ಬ್ಯಾಕ್ ಮಾಡುವ ಖುಷಿ ಒಂದುಕಡೆಯಾದರೆ ತಂಡದ ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್ ಶರ್ಮಾ ಮತ್ತು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಇನ್ನೂ ಫಿಟ್ ಆಗಿಲ್ಲ. ನಾಲ್ಕನೇ ಟೆಸ್ಟ್​ನ ನಾಲ್ಕನೇ ಮತ್ತು ಐದನೇ ದಿನ ಇಂಗ್ಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್ ಮಾಡಿದಾಗ ರೋಹಿತ್ ಮತ್ತು ಪೂಜಾರ ಅವರು ಫೀಲ್ಡಿಂಗ್ ಮಾಡಲಿಲ್ಲ. ಬ್ಯಾಟಿಂಗ್ ಮಾಡುವ ವೇಳೆ ರೋಹಿತ್ ಮೊಣಕಾಲಿಗೆ ಗಾಯವಾಗಿತ್ತು. ಪೂಜಾರ ಹಿಮ್ಮಡಿ ಉಳುಕಿತ್ತು. ಇವರ ಬದಲು ಬದಲೀ ಆಟಗಾರರು ಫೀಲ್ಡಿಂಗ್ ಮಾಡಿದ್ದರು.

ವರದಿಗಳ ಪ್ರಕಾರ ರೋಹಿತ್‌ ಚೇತೇರಿಸಿಕೊಳ್ಳುತ್ತಿದ್ದಾರೆ. ಆದರೆ, ಆಡುವ ಹನ್ನೊಂದರ ಬಳಗ ಸೇರುವ ಸಾಧ್ಯತೆ ಬಗ್ಗೆ ಮಾಹಿತಿ ಇಲ್ಲ. ವೈದ್ಯಕೀಯ ತಂಡ ಫಿಟ್ನೆಸ್‌ ಟೆಸ್ಟ್‌ ನಡೆಸಿದ ಬಳಿಕವಷ್ಟೇ ಇದು ಖಾತ್ರಿಯಾಗಲಿದೆ. ರೋಹಿತ್‌ ಅಲಭ್ಯರಾದಲ್ಲಿ ಮಯಾಂಕ್ ಅಗರ್ವಾಲ್‌, ಪೃಥ್ವಿ ಶಾ ಅಥವಾ ಅಭಿಮನ್ಯು ಈಶ್ವರನ್‌ಗೆ ಓಪನಿಂಗ್ ಮಾಡುವ ಚಾನ್ಸ್‌ ಸಿಗಲಿದೆ. ಇತ್ತ ಪೂಜಾರ ಚೇತರಿಸದೇ ಇದ್ದರೆ ಅವರ ಸ್ಥಾನದಲ್ಲಿ ಹನುಮ ವಿಹಾರಿ ಅಥವಾ ಸೂರ್ಯಕುಮಾರ್ ಯಾದವ್ ತಂಡ ಸೇರಿಕೊಳ್ಳಲಿದ್ದಾರೆ.

ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಈಗಾಗಲೇ ಇಂಗ್ಲೆಂಡ್ 16 ಸದಸ್ಯರ ಬಳಗವನ್ನು ಪ್ರಕಟಿಸಿದೆ. ಈ ಬಾರಿ ಎರಡು ಬದಲಾವಣೆ ಮಾಡಲಾಗಿದ್ದು, ಅದರಂತೆ ವೈಯುಕ್ತಿಕ ಕಾರಣಗಳಿಂದ 4ನೇ ಟೆಸ್ಟ್​ನಿಂದ ಹೊರಗುಳಿದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್​ ಜೋಸ್ ಬಟ್ಲರ್ ತಂಡಕ್ಕೆ ಹಿಂತಿರುಗಿದ್ದಾರೆ. ಹಾಗೆಯೇ ಎಡಗೈ ಸ್ಪಿನ್ನರ್ ಜಾಕ್ ಲೀಚ್​ಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಇಂಗ್ಲೆಂಡ್ ತಂಡ: ಜೋ ರೂಟ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೊ, ರೋರಿ ಬರ್ನ್ಸ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಹಸೀಬ್ ಹಮೀದ್, ಡಾನ್ ಲಾರೆನ್ಸ್, ಡೇವಿಡ್ ಮಲಾನ್, ಜಾಕ್ ಲೀಚ್, ಕ್ರೇಗ್ ಓವರ್‌ಟನ್, ಒಲ್ಲಿ ಪೋಪ್ , ಓಲ್ಲಿ ರಾಬಿನ್ಸನ್, ಕ್ರಿಸ್ ವೋಕ್ಸ್ ಮತ್ತು ಮಾರ್ಕ್ ವುಡ್.

ಟೀಮ್ ಇಂಡಿಯ ವಿಶ್ವ ದರ್ಜೆಯ ಬ್ಯಾಟಿಂಗ್ ಲೈನಪ್ ಹೊಂದಿದೆ: ಮಾರ್ಕ್ ವುಡ್

2 ವರ್ಷಗಳ ನಂತರ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಕೂಲ್ ಕ್ಯಾಪ್ಟನ್ ಧೋನಿ! ಬಿಸಿಸಿಐ ಅಧಿಕೃತ ಘೋಷಣೆ

(India vs England 5th test Mohammed Shami fit But Rohit Sharma and Cheteshwar Pujara still doubt)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada