ಟೀಮ್ ಇಂಡಿಯ ವಿಶ್ವ ದರ್ಜೆಯ ಬ್ಯಾಟಿಂಗ್ ಲೈನಪ್ ಹೊಂದಿದೆ: ಮಾರ್ಕ್ ವುಡ್

ಕೆ ಎಲ್ ರಾಹುಲ್ ಅವರು ಬ್ಯಾಟಿಂಗ್ ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ಆಫ್ ಸ್ಟಂಪ್ ನಿಂದ ಅಚೆ ಹೋಗುವ ಎಸೆತಗಳನ್ನು ಅವರು ಜಡ್ಜ್ ಮಾಡುವ ರೀತಿ ಶ್ಲಾಘನೀಯ. ಒಮ್ಮೆ ಸೆಟ್ಲ್ ಆದರೆ ಅವರನ್ನು ಔಟ್ ಮಾಡುವುದು ಕಷ್ಟ ಎಂದು ವುಡ್ ಹೇಳಿದ್ದಾರೆ

ಟೀಮ್ ಇಂಡಿಯ ವಿಶ್ವ ದರ್ಜೆಯ ಬ್ಯಾಟಿಂಗ್ ಲೈನಪ್ ಹೊಂದಿದೆ: ಮಾರ್ಕ್ ವುಡ್
ಮಾರ್ಕ್​ ವುಡ್
Follow us
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 09, 2021 | 2:08 AM

ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನಪ್ ಗೆ ಇಂಗ್ಲೆಂಡ್ ನಲ್ಲಿ ಮತ್ತೊಬ್ಬ ಅಭಿಮಾನಿ ಹುಟ್ಟಿಕೊಂಡಿದ್ದಾರೆ. ಭಾರತ ಮತ್ತು ಆಂಗ್ಲರ ನಡುವೆ ಮ್ಯಾಂಚೆಸ್ಟರ್ನಲ್ಲಿ ಶುಕ್ರವಾರ ಆರಂಭವಾಗಲಿರುವ ಮೊದಲು ಬುಧವಾರ ಸುದ್ದಿಗಾರರರೊಂದಿಗೆ ವರ್ಚ್ಯುಯಲ್ ಆಗಿ ಮಾತಾಡಿದ ಅತಿಥೇಯರ ವೇಗದ ಬೌಲರ್ ಮಾರ್ಕ್ ವುಡ್ ಅವರು, ಇಂಡಿಯ ವಿಶ್ವ ದರ್ಜೆಯ ಬ್ಯಾಟಿಂಗ್ ಲೈನಪ್ ಹೊಂದಿದೆ ಎಂದು ಹೇಳಿದರು. ‘ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನಪ್ ವಿಶ್ವ ದರ್ಜೆಯದ್ದಾಗಿದೆ. ಅವರ ಬ್ಯಾಟ್ಸ್​ಮನ್​​ಗಳ ಬಗ್ಗೆ ನೀವು ಒಂದೆಡೆ ಕೂತು ಯೋಚಿಸಿದರೆ, ಒಬ್ಬರು ಶ್ರೇಷ್ಠ ರೆನಿಸಿದರೆ ಮತ್ತೊಬ್ಬರು ಅತ್ಯುತ್ತಮ ಎನಿಸುತ್ತಾರೆ. ರೋಹಿತ್ ಶರ್ಮ ಅಪ್ರತಿಮ ಪ್ರತಿಭಾವಂತ. ಕಂಡೀಷನ್ ಹೇಗೇ ಇರಲಿ, ಅವರಿಗೆ ಬೌಲ್ ಮಾಡುವುದು ಕಷ್ಟ,’ ಎಂದು ವುಡ್ ಹೇಳಿದರು.

ಐದು-ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ. ಲಾರ್ಡ್ಸ್ನಲ್ಲಿ ನಡೆದ ಎರಡನೇ ಟೆಸ್ಟ್ ಮತ್ತು ದಿ ಓವಲ್ ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯಗಳನ್ನು ಭಾರತ ಕ್ರಮವಾಗಿ 151 ಮತ್ತು 157 ರನ್ಗಳ ಜಯ ಸಾಧಿಸಿದೆ.

ಅತಿಥೇಯರು ಲೀಡ್ಸ್ ನಲ್ಲಿ ನಡೆದ ಮೂರನೇ ಟೆಸ್ಟ್ ಅನ್ನು ಒಂದು ಇನ್ನಿಂಗ್ಸ್ ಹಾಗೂ 76 ರನ್ಗಳಿಂದ ಗೆದ್ದಿದ್ದರು.

‘ಕೆ ಎಲ್ ರಾಹುಲ್ ಅವರು ಬ್ಯಾಟಿಂಗ್ ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ಆಫ್ ಸ್ಟಂಪ್ ನಿಂದ ಅಚೆ ಹೋಗುವ ಎಸೆತಗಳನ್ನು ಅವರು ಜಡ್ಜ್ ಮಾಡುವ ರೀತಿ ಶ್ಲಾಘನೀಯ. ಒಮ್ಮೆ ಸೆಟ್ಲ್ ಆದರೆ ಅವರನ್ನು ಔಟ್ ಮಾಡುವುದು ಕಷ್ಟ, ಸರಣಿಯಲ್ಲಿ ಅವರು ಅತ್ಯುತ್ತಮವಾಗಿ ಆಡಿದ್ದಾರೆ, ಆರಂಭ ಆಟಗಾರರರು ನಮಗೆ ಬಿಗ್ ವಿಕೆಟ್​ಗಳು,’ ಎಂದು ವುಡ್ ಹೇಳಿದರು.

ಇದುವರೆಗೆ 21 ಟೆಸ್ಟ್ ಗಳನ್ನಾಡಿರುವ 31 ವರ್ಷ ವಯಸ್ಸಿನ ವುಡ್ ಅವರು 64 ವಿಕೆಟ್ಗಳನ್ನು ಪಡೆದಿದ್ದಾರೆ. ಐದನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಬೌಲರ್ಗಳು ಪ್ರತಿ ಭಾರತೀಯ ಬ್ಯಾಟ್ಸ್ಮನ್ ಗೆ ಒಂದೊಂದು ವಿಶಿಷ್ಟ ಪ್ಲ್ಯಾನ್ ನೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂದು ವುಡ್ ಹೇಳಿದರು.

‘ಅವರಲ್ಲಿ ಚೇತೇಶ್ವರ ಇದ್ದಾರೆ, ಕೊಹ್ಲಿ ಇದ್ದಾರೆ. ಯಾವುದೇ ಫಾರ್ಮಾಟ್ ಆಗಿರಲಿ ಕೊಹ್ಲಿಗೆ ಬೌಲ್ ಮಾಡುವುದು ಬಹಳ ಕಷ್ಟ. ಹಾಗಾಗಿ ಇಂಡಿಯಾದ ಬ್ಯಾಟಿಂಗ್ ಲೈನಪ್ ವಿಶ್ವ ದರ್ಜೆಯದ್ದು. ಅವರನ್ನು ಎರಡೆರಡು ಬಾರಿ ಔಟ್ ಮಾಡುವ ವಿಶ್ವಾಸ ನಿಮ್ಮಲ್ಲಿ ಇಲ್ಲದೆ ಹೋದರೆ, ಆಡುವುದರಲ್ಲಿ ಯಾವುದೇ ಅರ್ಥವಿಲ್ಲ,’ ಎಂದು ವುಡ್ ಹೇಳಿದರು.

‘ಒಂದು ಟೀಮ್ ಆಗಿ ನಮಗೆ ನಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇದೆ. ಪ್ರತಿ ಇಂಡಿಯನ್ ಬ್ಯಾಟ್ಸ್ಮನ್ ಗೆ ನಮ್ಮಲ್ಲಿ ಒಂದು ಪ್ಲ್ಯಾನ್ ಇದೆ. ಒಂದು ಪ್ಲ್ಯಾನ್ ಫೇಲಾದರೆ ಎರಡನೇ ಪ್ಲ್ಯಾನ್ ಅನ್ನೂ ನಾವು ತಯಾರು ಮಾಡಿಕೊಂಡಿದ್ದೇವೆ. ಯೋಜನೆಗಳು ಕೆಲ ಸಲ ಯಶ ಕಾಣುತ್ತವೆ, ಕೆಲವೊಮ್ಮೆ ವಿಫಲವಾಗುತ್ತವೆ. ಅದರೆ ನಿಮ್ಮ ಎದುರು ಇಂಥ ಬ್ಯಾಟಿಂಗ್ ಲೈನಪ್ ಇದ್ದರೆ, ನಿಮ್ಮ ಪ್ರಯತ್ನ ನಿಲ್ಲಬಾರದು. ಪ್ರಯತ್ನ ನಿಂತರೆ ಅವರು ನಮ್ಮನ್ನು ದಂಡಿಸುತ್ತಾರೆ,’ ಎಂದು ವುಡ್ ಹೇಳಿದರು.

ಸರಣಿಯು ತೀವ್ರ ಪೈಪೋಟಿಯಿಂದ ಕೂಡಿದೆ ಎಂದು ಹೇಳಿದ ವುಡ್ ಲಾರ್ಡ್ಸ್ ಟೆಸ್ಟ್ ನಲ್ಲಿ ತಮ್ಮ ಟೀಮ್ ಪ್ರಮಾದವೆಸಗಿತು. ಅದರೆ, ಅದನೆಲ್ಲ ಹಿಮ್ಮೆಟ್ಟಿ ತಮ್ಮ ಟೀಮ್ ಬೌನ್ಸ್ ಬ್ಯಾಕ್ ಮಾಡಲಿದೆ ಎಂದು ಅವರು ಹೇಳಿದರು

‘ನಾವು ಪಂದ್ಯಗಳನ್ನು ಸೋಲುತ್ತಿರುವುದು ನಿಜವಾದರೂ ಉತ್ತಮ ಬ್ಯಾಟ್ಸ್‌ಮನ್‌ಗಳ ವಿರುದ್ಧ ಆಡುವಾಗ ಸಪ್ಪೆ ಬೀಳಬಾರದು. ನಮ್ಮ ಪ್ರದರ್ಶನ ಗಣನೆಗೆ ಬರುವಂತಿರಬೇಕು. ಕೊನೆಯ ಟೆಸ್ಟ್ನಲ್ಲಿ ನಾವು ಅದನ್ನೇ ಮಾಡಲು ಪ್ರಯತ್ನಿಸುತ್ತೇವೆ. ಪುಟಿದೇಳುವುದು ನಮ್ಮ ಗುರಿ ಹಾಗೂ ನಮ್ಮ ಸಾಮರ್ಥ್ಯದ ನಾವು ಅದನ್ನು ಮಾಡಬಹುದು ಅಂತ ನಾವು ಭಾವಿಸುತ್ತೇವೆ,’ ಎಂದು ವುಡ್ ಹೇಳಿದರು.

ಇದನ್ನೂ ಓದಿ:  T20 World Cup: ಟಿ 20 ವಿಶ್ವಕಪ್​ಗೆ ಬಲಿಷ್ಠ ಯುವ ಭಾರತ ಪ್ರಕಟ; ಪ್ರತಿಯೊಬ್ಬರ ಟಿ 20 ಕ್ರಿಕೆಟ್​ ಜಾತಕ ಹೀಗಿದೆ