IND vs ENG: ಐದಕ್ಕೆ 5 ಪಂದ್ಯದಲ್ಲೂ ಟಾಸ್ ಸೋತ ಭಾರತ; ಕರುಣ್ ಇನ್, ಬುಮ್ರಾ ಔಟ್
India vs England 5th Test: ಓವಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಿದೆ. ಇಂಗ್ಲೆಂಡ್ 2-1 ಮುನ್ನಡೆಯಲ್ಲಿದೆ. ಟೀಂ ಇಂಡಿಯಾ ನಾಲ್ಕು ಬದಲಾವಣೆಗಳೊಂದಿಗೆ ಸರಣಿ ಸಮಬಲಗೊಳಿಸಲು ಹೋರಾಡುತ್ತಿದೆ. ಗಿಲ್ ಮತ್ತು ರಾಹುಲ್ ಅವರ ಉತ್ತಮ ಪ್ರದರ್ಶನ ಅಗತ್ಯವಿದೆ. ಬೆನ್ ಸ್ಟೋಕ್ಸ್ ಇಲ್ಲದಿರುವುದು ಇಂಗ್ಲೆಂಡ್‌ಗೆ ಹೊಡೆತವಾಗಿದ್ದು, ಓಲಿ ಪೋಪ್ ನಾಯಕತ್ವ ವಹಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯವು ಓವಲ್ ಕ್ರಿಕೆಟ್ ಮೈದಾನದಲ್ಲಿ (Oval Test Match) ಆರಂಭವಾಗಿದೆ. ಈ ಸರಣಿಯಲ್ಲಿ, ಆತಿಥೇಯ ತಂಡ 2-1 ಮುನ್ನಡೆಯಲ್ಲಿದ್ದು, ಸರಣಿಯನ್ನು ಸಮಬಲಗೊಳಿಸಲು, ಟೀಂ ಇಂಡಿಯಾ (Team India) ಯಾವುದೇ ಬೆಲೆ ತೆತ್ತಾದರೂ ಈ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಾಗುತ್ತದೆ. ಇದಕ್ಕಾಗಿ, ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಈ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ನಾಯಕ ಶುಭ್ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಮತ್ತೊಮ್ಮೆ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಈ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ. ಹೀಗಾಗಿ ಓಲ್ಲಿ ಪೋಪ್ ಅವರಿಗೆ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಲಾಗಿದೆ.
ಭಾರತ ತಂಡದಲ್ಲಿ 4 ಬದಲಾವಣೆ
ಇನ್ನು ಈ ಪಂದ್ಯದಲ್ಲಿ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಓಲಿ ಪೋಪ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಇತ್ತ ಈ ಸರಣಿಯ ಒಂದೇ ಒಂದು ಪಂದ್ಯದಲ್ಲೂ ಟಾಸ್ ಗೆಲ್ಲದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ಇದರ ಜೊತೆಗೆ ಟೀಂ ಇಂಡಿಯಾದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಲಾಗಿದ್ದು, ವಿಕೆಟ್ ಕೀಪರ್ ರಿಷಭ್ ಪಂತ್ ಬದಲಿಗೆ ದ್ರುವ್ ಜುರೇಲ್, ಶಾರ್ದೂಲ್ ಠಾಕೂರ್ ಬದಲಿಗೆ ಕರುಣ್ ನಾಯರ್, ಜಸ್ಪ್ರೀತ್ ಬುಮ್ರಾ ಬದಲಿಗೆ ಪ್ರಸಿದ್ಧ್ ಕೃಷ್ಣ ಹಾಗೂ ಅನ್ಶುಲ್ ಕಾಂಬೋಜ್ ಬದಲಿಗೆ ಆಕಾಶ್ ದೀಪ್ಗೆ ಅವಕಾಶ ನೀಡಲಾಗಿದೆ.
ಇಂಗ್ಲೆಂಡ್ ತಂಡದಲ್ಲೂ 4 ಬದಲಾವಣೆ
ಇತ್ತ ಇಂಗ್ಲೆಂಡ್ ತಂಡವು ಕೂಡ ತನ್ನ ಪ್ಲೇಯಿಂಗ್-11 ರಲ್ಲಿ ಒಟ್ಟು ನಾಲ್ವರು ಆಟಗಾರರನ್ನು ಬದಲಾಯಿಸಿದೆ. ಬೆನ್ ಸ್ಟೋಕ್ಸ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್ ಮತ್ತು ಲಿಯಾಮ್ ಡಾಸನ್ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಸ್ಟೋಕ್ಸ್ ಬದಲಿಗೆ ಸ್ಪಿನ್ ಆಲ್ರೌಂಡರ್ ಜಾಕೋಬ್ ಬೆಥೆಲ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಅವರು ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಅದೇ ಸಮಯದಲ್ಲಿ, ಸರ್ರೆಯ ಇಬ್ಬರು ಪೇಸ್ ಬೌಲಿಂಗ್ ಆಲ್ರೌಂಡರ್‌ಗಳಾದ ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್ ಮತ್ತು ಜೋಶ್ ಟಂಗ್ ಅವರನ್ನು ಸಹ ಆಯ್ಕೆ ಮಾಡಲಾಗಿದೆ.
🚨 Toss and Team Update 🚨
England win the toss in the 5th Test and elect to field.
A look at #TeamIndia's Playing XI for the 5th and Final Test 👌👌
Updates ▶️ https://t.co/Tc2xpWNayE#ENGvIND pic.twitter.com/fxzEfXEzLA
— BCCI (@BCCI) July 31, 2025
ಉಭಯ ತಂಡಗಳು
ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ತಂಡ: ಜ್ಯಾಕ್ ಕ್ರೌಲಿ, ಬೆನ್ ಡಕೆಟ್, ಓಲಿ ಪೋಪ್ (ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್ ಮತ್ತು ಜೋಶ್ ಟಂಗ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:13 pm, Thu, 31 July 25
