IND vs ENG: ಕರುಣಾಳು ಕರುಣ್ ಕ್ರೀಡಾ ಸ್ಫೂರ್ತಿಯನ್ನು ಮೆಚ್ಚಿದ ಆಂಗ್ಲರು
Karun Nair's Sportsmanship: ಓವಲ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಅವರು ಅರ್ಧಶತಕ ಸಿಡಿಸಿ ತಂಡಕ್ಕೆ ಬೆಂಬಲ ನೀಡಿದರು. ಆದಾಗ್ಯೂ ಕರುಣ್ ತಮ್ಮ ಕ್ರೀಡಾಸ್ಫೂರ್ತಿಯಿಂದ ಎಲ್ಲರ ಹೃದಯ ಗೆದ್ದರು. ರನ್ಗಾಗಿ ಓಡುವ ವೇಳೆ ಇಂಗ್ಲೆಂಡ್ ಆಟಗಾರನಿಗೆ ಗಾಯವಾಗಿದ್ದನ್ನು ಗಮನಿಸಿದ ಕರುಣ್ ನಾಲ್ಕನೇ ರನ್ ತೆಗೆದುಕೊಳ್ಳಲು ನಿರಾಕರಿಸಿದರು.

ಓವಲ್ ಟೆಸ್ಟ್‌ನ (Oval Test) ಮೊದಲ ದಿನದಾಟದಲ್ಲಿ ಕನ್ನಡಿಗ ಕರುಣ್ ನಾಯರ್ (Karun Nair) ತೊರಿದ ಕ್ರೀಡಾ ಸ್ಫೂರ್ತಿಗೆ ಇಡೀ ಕ್ರೀಡಾ ಜಗತ್ತು ಸಲಾಂ ಹೊಡೆದಿದೆ. ವಾಸ್ತವವಾಗಿ ಓವಲ್ ಟೆಸ್ಟ್ ಮೊದಲ ದಿನದಾಟದಲ್ಲಿ ಭಾರತ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡದ ಪರ ಏಕಾಂಗಿ ಹೋರಾಟ ನೀಡಿದ ಕರುಣ್ ನಾಯರ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇದೇ ವೇಳೆ ಕರುಣ್ ನಾಯರ್ ತಮ್ಮ ಬ್ಯಾಟ್‌ನಿಂದ ಮಾತ್ರವಲ್ಲದೆ ತಮ್ಮ ಕ್ರೀಡಾ ಸ್ಫೂರ್ತಿಯಿಂದಲೂ ಭಾರತ ಮತ್ತು ಇಂಗ್ಲೆಂಡ್ ಅಭಿಮಾನಿಗಳ ಹೃದಯ ಗೆದ್ದರು.
ಕರುಣ್ ನಾಯರ್ ಮಾಡಿದ್ದೇನು?
ವಾಸ್ತವವಾಗಿ, ಕರುಣ್ ನಾಯರ್ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಮಿಡ್-ಆಫ್ ಕಡೆ ಶಾಟ್ ಆಡಿದರು. ಅಲ್ಲೆ ನಿಂತಿದ್ದ ಕ್ರಿಸ್ ವೋಕ್ಸ್ ಚೆಂಡನ್ನು ಬೆನ್ನಟ್ಟಲು ಪ್ರಾರಂಭಿಸಿದರು. ಚೆಂಡನ್ನು ಹಿಡಿಯುವ ಯತ್ನದಲ್ಲಿ ವೋಕ್ಸ್ ಕೆಳಗೆ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡರು. ಇತ್ತ ಕರುಣ್ ನಾಯರ್ ಓಡುವ ಮೂಲಕ ಮೂರು ರನ್ ಗಳಿಸಿದ್ದರು. ಕರುಣ್ಗೆ ನಾಲ್ಕನೇ ರನ್ ತೆಗೆದುಕೊಳ್ಳುವ ಅವಕಾಶವೂ ಇತ್ತು. ಆದರೆ ವೋಕ್ಸ್ ಇಂಜುರಿಗೊಂಡಿದನ್ನು ನೋಡಿದ ಕರುಣ್, ರನ್ ತೆಗೆದುಕೊಳ್ಳಲು ನಿರಾಕರಿಸಿದರು. ಕರುಣ್ ನಾಯರ್ ಅವರ ಕ್ರೀಡಾ ಸ್ಫೂರ್ತಿ ಕ್ರೀಡಾಂಗಣದಲ್ಲಿ ನೆರೆದಿದ್ದವರು ಹೃದಯ ಗೆದ್ದಿತು.
My respect for Karun Nair has increased even more for his kind act. He could’ve ran 4 runs easily but didn’t as he saw Christopher Woakes lying helplessly on the ground in pain 🙏 pic.twitter.com/WdnzpHqJjT
— Troll cricket unlimitedd (@TUnlimitedd) July 31, 2025
ವರ್ಷಗಳ ನಂತರ ಅರ್ಧಶತಕ ಸಿಡಿಸಿದ ಕರುಣ್
ಇನ್ನು ಕರುಣ್ ನಾಯರ್ ಅವರ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ.. ಬರೋಬ್ಬರಿ 3146 ದಿನಗಳ ನಂತರ ಕರುಣ್ ಟೆಸ್ಟ್ ವೃತ್ತಿಜೀವನದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಕರುಣ್ ನಾಯರ್ 2018 ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸಿದ್ದರು. ಅದರ ನಂತರ ಅವರು 8 ವರ್ಷಗಳ ಕಾಲ ತಂಡದಿಂದ ಹೊರಗುಳಿದಿದ್ದರು.
IND vs ENG: ಕರುಣ್ ನಾಯರ್ ಅರ್ಧಶತಕ; 224 ರನ್ಗಳಿಗೆ ಟೀಂ ಇಂಡಿಯಾ ಆಲೌಟ್
ಇದೀಗ ಈ ಸರಣಿಯಲ್ಲಿ ಆಡುವ ಅವಕಾಶ ಪಡೆದಿದ್ದ ಕರುಣ್ ಆರಂಭಿಕ ಪಂದ್ಯಗಳಲ್ಲಿ ವಿಫಲರಾದರು. ಆದರೆ ಓವಲ್ ಟೆಸ್ಟ್‌ನಲ್ಲಿ ಸಿಕ್ಕ ಕೊನೆಯ ಅವಕಾಶದಲ್ಲಿ ಕರುಣ್ ಅರ್ಧಶತಕ ಗಳಿಸುವ ಮೂಲಕ ತಮ್ಮ ಕಾಯುವಿಕೆಯನ್ನು ಕೊನೆಗೊಳಿಸಿದರು. ಕರುಣ್ ನಾಯರ್ ಅವರ ಈ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 200 ರನ್‌ಗಳ ಗಡಿ ದಾಟಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
