India vs England: ‘ಇದು ಟೆಸ್ಟ್ ಕ್ರಿಕೆಟ್ ಅಂತ್ಯದ ಆರಂಭ’: 5ನೇ ಟೆಸ್ಟ್ ರದ್ದಾಗಿದ್ದಕ್ಕೆ ಇನ್ನೂ ನಿಂತಿಲ್ಲ ಆಂಗ್ಲರ ಟೀಕೆಗಳು

| Updated By: Vinay Bhat

Updated on: Sep 12, 2021 | 7:13 AM

ಇಲ್ಲಿ ಟೆಸ್ಟ್‌ಗಿಂತ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದನ್ನು ನೋಡಿ ನನ್ನ ಮನಸ್ಸಿನಲ್ಲಿ ಏನು ಯೋಚನೆ ಬರುತ್ತಿದೆಯೆಂದರೆ ಇಂಥ ನಡೆ ಟೆಸ್ಟ್‌ ಕ್ರಿಕೆಟ್‌ನ ಅಂತ್ಯ ಶುರುವಾಗುವುದನ್ನು ಸೂಚಿಸುತ್ತದೆ - ಸ್ಟೀವ್ ಹಾರ್ಮಿಸನ್.

India vs England: ‘ಇದು ಟೆಸ್ಟ್ ಕ್ರಿಕೆಟ್ ಅಂತ್ಯದ ಆರಂಭ’: 5ನೇ ಟೆಸ್ಟ್ ರದ್ದಾಗಿದ್ದಕ್ಕೆ ಇನ್ನೂ ನಿಂತಿಲ್ಲ ಆಂಗ್ಲರ ಟೀಕೆಗಳು
India vs England
Follow us on

ಮ್ಯಾಂಚೆಸ್ಟರ್​ನಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಅಂತಿಮ ಐದನೇ ಟೆಸ್ಟ್ (5th Test) ಪಂದ್ಯ ರದ್ದಾಗಿದ್ದಕ್ಕೆ ಕ್ರಿಕೆಟ್ ವಲಯದಿಂದ ಮಿಶ್ರ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ಅದರಲ್ಲೂ ಇಂಗ್ಲೆಂಡ್ ಕ್ರಿಕೆಟಿಗರು, ಮಾಜಿ ಆಟಗಾರರು ಕಟುವಾಗಿ ಟೀಕೆ ಮಾಡುವುದನ್ನು ಮುಂದುವರೆಸುತ್ತಿದ್ದಾರೆ. ಎಲ್ಲಾದರು ಕೊರೊನಾ ಸೋಂಕು ತಗುಲಿದರೆ ಐಪಿಎಲ್‌ ಟೂರ್ನಿಯಿಂದ ದೂರ ಉಳಿಯಬೇಕಾಗುತ್ತದೆ. ಟೀಮ್‌ ಇಂಡಿಯಾ (Team India) ಆಟಗಾರರು ಐಪಿಎಲ್‌ (IPL 2021) ಹಣದಾಸೆಗೆ ಇಂಗ್ಲೆಂಡ್‌ ವಿರುದ್ಧ ಅಂತಿಮ ಪಂದ್ಯವನ್ನಾಡಲು ನಿರಾಕರಿಸಿದ್ದಾರೆಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್‌ (Michael Vaughan) ಆರೋಪಿಸಿದ್ದಾರೆ. ಸದ್ಯ ಇದರ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ವೇಗಿ ಸ್ಟೀವ್ ಹಾರ್ಮಿಸನ್ (Steve Harmison) ಕೂಡ, ಭಾರತಕ್ಕೆ ಐದನೇ ಟೆಸ್ಟ್‌ ಪಂದ್ಯ ಆಡಲು ಆಸಕ್ತಿಯೇ ಇರಲಿಲ್ಲ. ಟೀಮ್ ಇಂಡಿಯಾದ ಈ ನಡೆ ಟೆಸ್ಟ್ ಕ್ರಿಕೆಟ್ ಅಂತ್ಯದ ಆರಂಭ ಎಂದು ಹೇಳಿದ್ದಾರೆ.

4ನೇ ಟೆಸ್ಟ್‌ ಪಂದ್ಯದ ವೇಳೆ ಟೀಮ್ ಇಂಡಿಯಾದ ಮುಖ್ಯ ಕೋಚ್‌ ರವಿ ಶಾಸ್ತ್ರಿ, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಆರ್‌ ಶ್ರೀಧರ್‌ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇದರ ನಡುವೆ ಇನ್ನೇನೇ ಶುಕ್ರವಾರ ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಮ್ಯಾಂಚೆಸ್ಟರ್‌ನಲ್ಲಿ ಐದನೇ ಟೆಸ್ಟ್‌ ಆರಂಭವಾಗಬೇಕಿತ್ತು. ಆದರೆ, ಗುರುವಾರ ಟೀಮ್‌ ಇಂಡಿಯಾ ಕ್ಯಾಂಪ್‌ನಲ್ಲಿ ಮತ್ತೊಂದು ಕೋವಿಡ್‌ -19 ಪ್ರಕರಣ ದಾಖಲಾಯಿತು. ಫಿಜಿಯೋ ಯೋಗೇಶ್‌ ಪರ್ಮಾರ್‌ ಅವರಿಗೆ ಸೋಂಕು ತಗುಲಿದ್ದು, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಯಿತು.

ಕೊನೇಯ ಕ್ಷಣದ ವರೆಗೂ ಅಂತಿಮ ಐದನೇ ಟೆಸ್ಟ್‌ ಪಂದ್ಯ ನಡೆಯುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಪಂದ್ಯ ಶುರುವಾಗಲು ಇನ್ನೇನು ಕೆಲವೇ ಕ್ಷಣಗಳು ಬಾಕಿಯಿರುವಾಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪಂದ್ಯ ರದ್ದೆಂದು ಘೋಷಿಸಿತು. ವಿರಾಟ್ ಕೊಹ್ಲಿ ಹಾಗೂ ತಂಡ ಕೊನೆಯ ಕ್ಷಣಗಳಲ್ಲಿ ಕೋವಿಡ್-19 ಸೋಂಕು ಹರಡುವ ಆತಂಕ ವ್ಯಕ್ತಪಡಿಸಿದ ಕಾರಣ ಪಂದ್ಯ ರದ್ದುಗೊಳಿಸಲು ಬಿಗಿ ಪಟ್ಟು ಹಿಡಿದಿದ್ದರಿಂದ ಇಸಿಬಿಯೊಂದಿಗೆ ಚರ್ಚಿಸಿ ಬಿಸಿಸಿಐ ಪಂದ್ಯ ರದ್ದುಗೊಳಿಸಿತು.

ಸದ್ಯ ಇದೇ ವಿಚಾರ ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. “ಟೀಮ್ ಇಂಡಿಯಾದ ಕೋಚಿಂಗ್ ಬಳಗ ಮತ್ತು ಬೆಂಬಲ ಸಿಬ್ಬಂದಿಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಕಾಣಸಿಕೊಂಡಿದ್ದರಿಂದ ಐದನೇ ಟೆಸ್ಟ್‌ ಪಂದ್ಯ ಆಡದಿರಲು ಭಾರತೀಯ ಕ್ರಿಕೆಟ್‌ ಆಟಗಾರರು ನಿರ್ಧರಿಸಿದ್ದರು. ಆದರೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮತ್ತು ಅಲ್ಲಿನ ಆಟಗಾರರು ಬೇರೆನೇ ಕಾರಣ ನೀಡುತ್ತಿದ್ದಾರೆ. ಭಾರತೀಯ ಆಟಗಾರರಿಗೆ ಕೊನೇಯ ಟೆಸ್ಟ್ ಆಡಲು ಆಸಕ್ತಿ ಇರಲಿಲ್ಲ. ಯಾಕೆಂದರೆ ಅವರಿಗೆ ಟೆಸ್ಟ್ ಕ್ರಿಕೆಟ್‌ನಿಂದ ಐಪಿಎಲ್‌ನಲ್ಲಿ ಆಡೋದೇ ಮುಖ್ಯವಾಗಿತ್ತು” ಎಂದು ಸ್ಟೀವ್ ಹಾರ್ಮಿಸನ್ ಹೇಳಿದ್ದಾರೆ.

“ಕೋಚ್‌ಗಳು ಇರಲಿಲ್ಲ, ಬೆಂಬಲ ಸಿಬ್ಬಂದಿ ಇರಲಿಲ್ಲ ಎನ್ನುವ ಭಾರತೀಯರ ಕಾರಣ ನಿಜಕ್ಕೂ ಅಸಂಬದ್ಧ. ನಿಜಕ್ಕೂ ಅವರ ಮಾತು ಒಪ್ಪಲು ಸಾಧ್ಯವಿಲ್ಲ. ಇದನ್ನು ನೋಡಿ ನನ್ನ ಮನಸ್ಸಿನಲ್ಲಿ ಏನು ಯೋಚನೆ ಬರುತ್ತಿದೆಯೆಂದರೆ ಇಂಥ ನಡೆ ಟೆಸ್ಟ್‌ ಕ್ರಿಕೆಟ್‌ನ ಅಂತ್ಯ ಶುರುವಾಗುವುದನ್ನು ಸೂಚಿಸುತ್ತದೆ. ಇಲ್ಲಿ ಟೆಸ್ಟ್‌ಗಿಂತ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಭಾರತ ನೀಡಿದ ಕಾರಣ ಒಪ್ಪಿಕೊಳ್ಳಲು ನಾನು ಎಷ್ಟು ಪ್ರಯತ್ನಿಸಿದರೂ ನನ್ನಿಂದ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂಬುದು ಹಾರ್ಮಿಸನ್ ಮಾತು.

ಇಂಗ್ಲೆಂಡ್-ಇಂಡಿಯ ನಡುವಿನ ಕೊನೆ ಟೆಸ್ಟ್ ರದ್ದಾಗಿದ್ದು ಐಪಿಎಲ್​ಗೋಸ್ಕರವೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ: ಮೈಕೆಲ್ ವಾನ್

IND vs ENG: ಭಾರತ- ಇಂಗ್ಲೆಂಡ್ ಅಂತಿಮ ಟೆಸ್ಟ್​ ರದ್ದು; ಇಸಿಬಿ ಖಜಾನೆಗೆ ಬಿತ್ತು ಭಾರಿ ಮೊತ್ತದ ಬರೆ!