ಇಂಗ್ಲೆಂಡ್ (England) ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಕಂಡ ಪರಿಣಾಮ ಭಾರತ (India) ಎರಡನೇ ಟೆಸ್ಟ್ಗೆ ಸಜ್ಜಾಗುತ್ತಿದೆ. ಇದಕ್ಕಾಗಿ ವಿರಾಟ್ ಕೊಹ್ಲಿ (Virat Kohli) ಪಡೆ ಲಂಡನ್ಗೆ ಪ್ರಯಾಣ ಬೆಳೆಸಿ ಲಾರ್ಡ್ಸ್ ಕ್ರೀಡಾಂಗಣಕ್ಕೆ ತಲುಪಿದೆ. ಆಗಸ್ಟ್ 12 ರಿಂದ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಹೀಗಾಗಿ ಇಂದು ಮತ್ತು ನಾಳೆ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದೆ. ಇತ್ತ ಆಂಗ್ಲರ ನಾಡಿಗೆ ತಲುಪಿರುವ ಸೂರ್ಯಕುಮಾರ್ ಯಾದವ್ ಮತ್ತು ಫೃಥ್ವಿ ಶಾ ಕ್ವಾರಂಟೈನ್ನಲ್ಲಿದ್ದಾರೆ.
ಭಾರತ ತಂಡ ಲಂಡನ್ಗೆ ತೆರಳುತ್ತಿರುವ ಬಗ್ಗೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮೊಹಮ್ಮದ್ ಶಮಿ, ವೃದ್ಧಿಮಾನ್ ಸಾಹಾ, ಮೊಹಮ್ಮದ್ ಸಿರಾಜ್ ಸೇರಿದಂತೆ ತಂಡದ ಇತರೆ ಸಿಬ್ಬಂದಿಗಳು ಕಾಣಿಸುತ್ತಿದ್ದಾರೆ. ಈ ಫೋಟೋದೊಂದಿಗೆ ಪೂಜಾರ “ದುರದೃಷ್ಟವಶಾತ್ ಸಂಪೂರ್ಣ ಪಂದ್ಯವನ್ನು ಆಡಲು ನಮ್ಮಿಂದ ಸಾಧ್ತವಾಗಲಿಲ್ಲ. ಆದರೆ ಈಗ ನಾವು ಮುಂದಿನ ಸವಾಲನ್ನು ಸ್ವೀಕರಿಸುತ್ತಿದ್ದೇವೆ” ಎಂದು ಕ್ಯಾಪ್ಶನ್ ಬರೆದಿದ್ದಾರೆ. ಲಂಡನ್ಗೆ ತೆರಳುವ ಮುನ್ನ ಭಾರತದ ಎಲ್ಲ ಆಟಗಾರರಿಗೆ ಕೋವಿಡ್ ಟೆಸ್ಟ್ ನಡೆಸಲಾಗಿತ್ತು.
ಇತ್ತ ಆಂಗ್ಲರ ನಾಡಿಗೆ ತೆರಳಿರುವ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ 10 ದಿನಗಳ ಕ್ವಾರಂಟೈನ್ನಲ್ಲಿದ್ದಾರೆ. ಇವರ ಕ್ವಾರಂಟೈನ್ ಅವದಿ ಆಗಸ್ಟ್ 13ಕ್ಕೆ ಮುಕ್ತಾಯಗೊಳ್ಳುವ ಕಾರಣ ಎರಡನೇ ಟೆಸ್ಟ್ಗೆ ಲಭ್ಯರಿಲ್ಲ. ಆಗಸ್ಟ್ 25 ರಿಂದ ಲೀಡ್ಸ್ನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ಗೆ ಇವರು ಅವಕಾಶ ಪಡೆಯುವ ಸಾಧ್ಯತೆ ಇದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 65.4 ಓವರ್ನಲ್ಲಿ 183 ರನ್ಗೆ ಆಲೌಟ್ ಆಯಿತು. ಭಾರತ ಕೆ. ಎಲ್ ರಾಹುಲ್ ಅವರ 84 ಹಾಗೂ ರವೀಂದ್ರ ಜಡೇಜಾ ಅವರ 56 ರನ್ಗಳ ನೆರವಿನಿಂದ 278 ರನ್ ಬಾರಿಸಿತು. 95 ರನ್ಗಳ ಹಿನ್ನಡಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ಗೆ ನಾಯಕ ರೂಟ್ ಶತಕ ಸಿಡಿಸಿ ಮತ್ತೆ ತಂಡಕ್ಕೆ ಆಸರೆಯಾದರು. 172 ಎಸೆತಗಳಲ್ಲಿ 109 ರನ್ ಗಳಿಸಿದ ರೂಟ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಇಂಗ್ಲೆಂಡ್ 303 ರನ್ ಗಳಿಸಿ ಭಾರತಕ್ಕೆ 209 ರನ್ಗಳ ಟಾರ್ಗೆಟ್ ನೀಡಿತು.
ಈ ಗುರಿ ಬೆನ್ನಟ್ಟಿದ ಭಾರತ ನಾಲ್ಕನೆ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 52 ರನ್ ಗಳಿಸಿತ್ತು. ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ತಲಾ 12 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಭಾರತದ ಗೆಲುವಿಗೆ 157 ರನ್ಗಳ ಅವಶ್ಯಕತೆಯಿತ್ತು. ಆದರೆ, ಎಡಬಿಡದೆ ಸುರಿದ ಮಳೆಯು ಮೊದಲ ಟೆಸ್ಟ್ ನಲ್ಲಿ ಭಾರತದ ಕೈಯಿಂದ ಗೆಲುವನ್ನು ಕಸಿದುಕೊಂಡಿತು. ಒಂದೂ ಎಸೆತ ಕಾಣದೆ ರದ್ದಾದ ಕಾರಣ ಉಭಯ ತಂಡಗಳು ತಲಾ 4 ಅಂಕವನ್ನು ಹಂಚಿಕೊಂಡಿವೆ. ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 12ಕ್ಕೆ ಆರಂಭವಾಗಲಿದ್ದು ಆಗಸ್ಟ್ 16ರ ವರೆಗೆ ನಡೆಯಲಿದೆ.
ಪ್ರಸಕ್ತ ವಿಶ್ವ ಕ್ರಿಕೆಟ್ನ ನಾಲ್ವರು ಉತ್ಕೃಷ್ಟ ಬೌಲರ್ಗಳಲ್ಲಿ ಜಸ್ಪ್ರೀತ್ ಬುಮ್ರಾ ಒಬ್ಬರು: ಸ್ಟೀವ್ ಸ್ಮಿತ್
ನಾನು ಗೆದ್ದಿರುವ ಚಿನ್ನದ ಪದಕ ಕೇವಲ ನನಗೆ ಮಾತ್ರ ಅಲ್ಲ ಸಮಸ್ತ ಭಾರತೀಯರಿಗೆ ಸೇರಿದ್ದು: ನೀರಜ್ ಚೋಪ್ರಾ
(India vs England Virat Kohli Team India off to London for Lords Second Test Prithvi and Suryakumar in quarantine)
Published On - 7:14 am, Tue, 10 August 21