India Vs Hong Kong Playing XI: ಟಾಸ್ ಗೆದ್ದ ಹಾಂಗ್​ ಕಾಂಗ್; ಉಭಯ ತಂಡಗಳು ಹೀಗಿವೆ

| Updated By: ಪೃಥ್ವಿಶಂಕರ

Updated on: Aug 31, 2022 | 7:26 PM

India Vs Hong Kong Playing XI: ದುಬೈನಲ್ಲಿಯೇ ನಡೆಯುತ್ತಿರುವ ಈ ಪಂದ್ಯದಲ್ಲಿ ಹಾಂಕಾಂಗ್ ನಾಯಕ ನಿಜಾಕತ್ ಖಾನ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

India Vs Hong Kong Playing XI: ಟಾಸ್ ಗೆದ್ದ ಹಾಂಗ್​ ಕಾಂಗ್; ಉಭಯ ತಂಡಗಳು ಹೀಗಿವೆ
ಬುಮ್ರಾ ಜೊತೆಗೆ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಹಾರ್ ಮತ್ತು ಯುಜ್ವೇಂದ್ರ ಚಹಾಲ್ ಕೂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಅವಕಾಶ ಪಡೆದಿದ್ದಾರೆ. ಮೊಹಮ್ಮದ್ ಶಮಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ, ಶಮಿಯನ್ನು ಸ್ಟ್ಯಾಂಡ್ ಬೈ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
Follow us on

ಏಷ್ಯಾಕಪ್ 2022 (Asia Cup 2022)ರಲ್ಲಿ ಪಾಕ್ ಮಣಿಸಿ ಶುಭಾರಂಭ ಮಾಡಿದ ಟೀಂ ಇಂಡಿಯಾ ಈಗ ‘ಸೂಪರ್ ಫೋರ್’ ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಯತ್ನಿಸುತ್ತಿದೆ. ಇದಕ್ಕಾಗಿ ಭಾರತ, ಹೊಸ ತಂಡ ಹಾಂಕಾಂಗ್ ಸವಾಲನ್ನು ಎದುರಿಸಬೇಕಾಗಿದೆ. ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿದ ನಂತರ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ ಬಲವಾದ ಉದ್ದೇಶದಿಂದ ಕೆಳಗಿಳಿಯುತ್ತಿದೆ. ದುಬೈನಲ್ಲಿಯೇ ನಡೆಯುತ್ತಿರುವ ಈ ಪಂದ್ಯದಲ್ಲಿ ಹಾಂಕಾಂಗ್ ನಾಯಕ ನಿಜಾಕತ್ ಖಾನ್ (Nizakat Khan) ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

ಭಾರತ ತಂಡ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದೇ ಮೈದಾನದಲ್ಲಿ ನಡೆದ ಆ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಪಾಕಿಸ್ತಾನವನ್ನು ಕೇವಲ 147 ರನ್‌ಗಳಿಗೆ ಆಲೌಟ್ ಮಾಡಿದ್ದರು. ಅದೇ ಮೈದಾನದಲ್ಲಿ ಮೊದಲು ಬೌಲಿಂಗ್ ಮಾಡಿದ ಅಫ್ಘಾನಿಸ್ತಾನ ಕೂಡ ಶ್ರೀಲಂಕಾವನ್ನು ಕೇವಲ 105 ರನ್‌ಗಳಿಗೆ ಕಟ್ಟಿಹಾಕಿತು. ಹಾಂಗ್ ಕಾಂಗ್ ಹೆಚ್ಚು ಬಲಿಷ್ಠ ತಂಡವಾಗಿಲ್ಲದಿರಬಹುದು, ಆದರೆ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡುವಾಗ ಹಾಂಗ್ ಕಾಂಗ್ ಅನ್ನು ಲಘುವಾಗಿ ಪರಿಗಣಿಸುವುದಿಲ್ಲ. ಇದರ ಹೊರತಾಗಿಯೂ, ಪಂದ್ಯಾವಳಿಯ ಮುಂಬರುವ ಪಂದ್ಯಗಳು ಮತ್ತು ಟಿ 20 ವಿಶ್ವಕಪ್‌ಗೆ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿಯಾಗಿ ಆಡುವ ನಿರೀಕ್ಷೆಯಿದೆ.

ಪಂತ್ ವಾಪಸ್, ಯಾರು ಔಟ್?

ಈ ಪಂದ್ಯಕ್ಕೆ ಆಡುವ XI ಬಗ್ಗೆ ಮಾತನಾಡುವುದಾದರೆ, ಭಾರತ ತಂಡ ಕೇವಲ ಒಂದು ಬದಲಾವಣೆಯನ್ನು ಮಾಡಿದೆ. ಪಾಕಿಸ್ತಾನ ವಿರುದ್ಧ ತಂಡದ ಗೆಲುವಿನ ಸ್ಟಾರ್ ಆಗಿದ್ದ ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ. ಬದಲಿಗೆ ಮೊದಲ ಪಂದ್ಯದಲ್ಲಿ ದಿನೇಶ್ ಕಾರ್ತಿಕ್​ಗೆ ಸ್ಥಾನ ಬಿಟ್ಟುಕೊಡಬೇಕಿದ್ದ ರಿಷಬ್ ಪಂತ್​ಗೆ ಅವಕಾಶ ನೀಡಲಾಗಿದೆ. ಹಾರ್ದಿಕ್ ತಂಡಕ್ಕೆ ಅತ್ಯಂತ ಪ್ರಮುಖ ಆಟಗಾರನಾಗಿದ್ದು ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದ್ದಾರೆ ಎಂದು ನಾಯಕ ರೋಹಿತ್ ಹೇಳಿದ್ದಾರೆ. ಈ ಪಂದ್ಯದಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಮೇಲೆ ಒತ್ತಡ ಹೇರಲು ಪಂತ್​ಗೆ ಅವಕಾಶವಿದೆ.

IND vs HKG: ಎರಡೂ ತಂಡಗಳೂ ಹೀಗಿವೆ

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್ ಮತ್ತು ಯುಜ್ವೇಂದ್ರ ಚಾಹಲ್

ಹಾಂಗ್ ಕಾಂಗ್: ನಿಜಾಕತ್ ಖಾನ್ (ನಾಯಕ), ಬಾಬರ್ ಹಯಾತ್, ಯಾಸಿಮ್ ಮೊರ್ತಜಾ, ಕಿಂಚಿತ್ ಶಾ, ಸ್ಕಾಟ್ ಮೆಕೆಂಜಿ (ವಿಕೆಟ್ ಕೀಪರ್), ಹರೂನ್ ಅರ್ಷದ್, ಐಜಾಜ್ ಖಾನ್, ಜೀಶನ್ ಅಲಿ, ಎಹ್ಸಾನ್ ಖಾನ್, ಆಯುಷ್ ಶುಕ್ಲಾ, ಮೊಹಮ್ಮದ್ ಘಜನ್ಫರ್

Published On - 7:07 pm, Wed, 31 August 22