IND vs IRE: ಭಾರತ-ಐರ್ಲೆಂಡ್ ದ್ವಿತೀಯ ಟಿ20 ಪಂದ್ಯಕ್ಕಿದೆಯೆ ಮಳೆಯ ಕಾಟ?: ಇಲ್ಲಿದೆ ಹವಾಮಾನ ವರದಿ

IRE vs IND 2nd T20I Weather Prediction: ಇಂದು ಡಬ್ಲಿನ್​ನಲ್ಲಿ ಭಾರತ-ಐರ್ಲೆಂಡ್ ನಡುವ ದ್ವಿತೀಯ ಟಿ20 ಪಂದ್ಯ ಆಯೋಜಿಸಲಾಗಿದೆ. ಈ ಪಂದ್ಯದಲ್ಲಿಯೂ ಮಳೆಯಾಗುವ ಸಾಧ್ಯತೆಯಿದೆ. ಡಬ್ಲಿನ್​ನಲ್ಲಿ ಹಗಲು ಶೇ. 91 ರಷ್ಟು ಮಳೆ ಆಗಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.

IND vs IRE: ಭಾರತ-ಐರ್ಲೆಂಡ್ ದ್ವಿತೀಯ ಟಿ20 ಪಂದ್ಯಕ್ಕಿದೆಯೆ ಮಳೆಯ ಕಾಟ?: ಇಲ್ಲಿದೆ ಹವಾಮಾನ ವರದಿ
IND vs IRE Weather Report
Edited By:

Updated on: Jun 28, 2022 | 10:40 AM

ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್​ಗಳ ಗೆಲುವು ಸಾಧಿಸಿದ್ದ ಭಾರತ (India vs Ireland) ಇದೀಗ ಎರಡನೇ ಕದನಕ್ಕೆ ಸಜ್ಜಾಗುತ್ತಿದೆ. ಇಂದು ಡಬ್ಲಿನ್​ನಲ್ಲಿ ದ್ವಿತೀಯ ಟಿ20 ಪಂದ್ಯ ಆಯೋಜಿಸಲಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ರವಿವಾರದ ಮೊದಲ ಮುಖಾಮುಖಿ ಭಾರೀ ಮಳೆಯಿಂದಾಗಿ 12 ಓವರ್‌ಗಳಿಗೆ ಸೀಮಿತಗೊಂಡಿತ್ತು. ಇದನ್ನು ಭಾರತ 7 ವಿಕೆಟ್‌ಗಳಿಂದ ಜಯಿಸಿತ್ತು. ಐರ್ಲೆಂಡ್‌ 4 ವಿಕೆಟಿಗೆ 108 ರನ್‌ ಮಾಡಿದರೆ, ಪಾಂಡ್ಯ  ಪಡೆ 9.2 ಓವರ್‌ಗಳಲ್ಲಿ 3 ವಿಕೆಟಿಗೆ 111 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು. ಸದ್ಯ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಹಾರ್ದಿಕ್ (Hardik Pandya) ಪಡೆ ಈ ಪಂದ್ಯವನ್ನೂ ಗೆದ್ದರೆ ಸರಣಿ ವಶಪಡಿಸಿಕೊಳ್ಳುವ ಜೊತೆ ಕ್ಲೀನ್​​ಸ್ವೀಪ್ ಮಾಡಿದ ಸಾಧನೆ ಗೈಯಲ್ಲಿದೆ. ಆದರೆ, ಎರಡನೇ ಟಿ20 ಪಂದ್ಯಕ್ಕೂ ಮಳೆಯಾಗುವ (Rain) ಸಾಧ್ಯತೆ ಇದೆ.

ಹೌದು, ಈ ಪಂದ್ಯದಲ್ಲಿಯೂ ಮಳೆಯಾಗುವ ಸಾಧ್ಯತೆಯಿದೆ. ಡಬ್ಲಿನ್​ನಲ್ಲಿ ಹಗಲು ಶೇ. 91 ರಷ್ಟು ಮಳೆ ಆಗಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. ಅಂತೆಯೆ ಪಂದ್ಯ ನಡೆಯುವ ಸಂಜೆಯ ವೇಳೆ ಶೇ. 25 ರಷ್ಟು ವರುಣನ ಕಾಟ ಇರಲಿದೆಯಂತೆ. ಇಡೀ ದಿನ ಮೋಡ ಕವಿದ ವಾತಾವರಣ ಕೂಡಿರಲಿದೆ. ಮಳೆ ನಿಂತು ಪಂದ್ಯ ಆರಂಭವಾದರೆ ಪಿಚ್ ತೇವವಾಗುವ ಕಾರಣ ಬೌಲರ್‌ಗಳಿಗೆ ಇದು ಅನುಕೂಲಕರವಾಗಲಿದೆ. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವಾಗಲಿದೆಯಂತೆ.

IND vs IRE: ಇಂದು ಎರಡನೇ ಟಿ20 ಪಂದ್ಯ: ಟೀಮ್ ಇಂಡಿಯಾ ಆಟಗಾರರಿಂದ ಭರ್ಜರಿ ಅಭ್ಯಾಸ

ಇದನ್ನೂ ಓದಿ
IND vs IRE: ಒಂದು ಬದಲಾವಣೆ: ದ್ವಿತೀಯ ಟಿ20ಗೆ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ ಟೀಮ್ ಇಂಡಿಯಾ
T20 Cricket Records: ಟಿ20ಕ್ರಿಕೆಟ್​ನಲ್ಲಿ ಕಾಂಗರೂಗಳ ದಾಖಲೆ ಮುರಿದ ಭಾರತದ ಹುಲಿಗಳು..!
IND vs ENG: ಭಾರತ ವಿರುದ್ಧದ ಅಂತಿಮ ಟೆಸ್ಟ್​ಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ! ಯಾರಿಗೆಲ್ಲ ಚಾನ್ಸ್?
Wimbledon 2022: ಗೆಲುವಿನೊಂದಿಗೆ ಶುಭಾರಂಭ ಮಾಡಿದ ನೊವಾಕ್ ಜೊಕೊವಿಕ್; ಎರಡನೇ ಸುತ್ತಿಗೆ ಪ್ರವೇಶ

ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ:

ಐರ್ಲೆಂಡ್ ಟಿ20 ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಎಲ್ಲ ಪಂದ್ಯಗಳಲ್ಲು ಆರಂಭಿಕರಾಗಿ ಆಡಿದ್ದ ಯುವ ರುತುರಾಜ್‌ ಗಾಯಕ್ವಾಡ್‌ ನಿರೀಕ್ಷೆ ಮೂಡಿಸಿಲ್ಲ. ಹೀಗಾಗಿ ಐರ್ಲೆಂಡ್‌ ಎದುರಿನ ಮೊದಲ ಪಂದ್ಯದಲ್ಲಿ ಮಧ್ಯಮ ಕ್ರಮಾಂಕಕ್ಕೆ ಜಾರಿದ್ದರು. ಅಲ್ಲದೆ ಗಾಯಕ್ವಾಡ್‌ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಇವರ ಜಾಗದಲ್ಲಿ ಆಡಿದ ದೀಪಕ್‌ ಹೂಡ ಸ್ಪೋಟಕ ಬ್ಯಾಟಿಂಗ್‌ ನಡೆಸಿ ಕೇವಲ 29 ಎಸೆತಗಳಲ್ಲಿ 6 ಫೋರ್‌ ಮತ್ತು 2 ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 47 ರನ್‌ಗಳನ್ನು ಸಿಡಿಸಿದರು.

ಹೀಗಾಗಿ ಎರಡನೇ ಪಂದ್ಯದಲ್ಲೂ ಹೂಡ ಓನರ್‌ ಆಗಿಯೇ ಆಡುವ ಸಾಧ್ಯತೆ ಹೆಚ್ಚಿದೆ. ಗಾಯದ ಸಮಸ್ಯೆಯಿಂದ ರುತುರಾಜ್‌ ಚೇತರಿಸದೇ ಇದ್ದರೆ, ಅವರ ಜಾಗದಲ್ಲಿ ಸಂಜು ಸ್ಯಾಮ್ಸನ್‌ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬಲವಾಗಿ ಸೇರಿಕೊಳ್ಳಲಿದ್ದಾರೆ. ಹೀಗೆ ತಂಡದಲ್ಲಿ ಒಂದು ಮುಖ್ಯ ಬದಲಾವಣೆ ನಿರೀಕ್ಷಿಸಲಾಗಿದೆ. ಇನ್ನು ಚೊಚ್ಚಲ ಪಂದ್ಯವಾಡಿದ ಬಹು ನಿರೀಕ್ಷೆಯ ವೇಗಿ ಉಮ್ರಾನ್‌ ಮಲಿಕ್‌ ಒಂದೇ ಓವರ್‌ನಲ್ಲಿ 14 ರನ್‌ ನೀಡಿ ದುಬಾರಿಯಾದರು. ಇವರೂ ನಿಯಂತ್ರಣ ಸಾಧಿಸಬೇಕಿದೆ. ಮಲಿಕ್‌ ಹಳೆ ಚೆಂಡಿನಲ್ಲಿ ಉತ್ತಮ ನಿಯಂತ್ರಣ ಸಾಧಿಸುವ ಸಾಧ್ಯತೆ ಇರುವುದರಿಂದ ಅವರನ್ನು ಪವರ್‌ ಪ್ಲೇ ಬಳಿಕ ದಾಳಿಗೆ ಇಳಿಸುವುದು ಪಾಂಡ್ಯ ಯೋಜನೆ.

ಭಾರತ ಮತ್ತು ಐರ್ಲೆಂಡ್ ನಡುವಿನ ಈ ದ್ವಿತೀಯ ಟಿ20 ಪಂದ್ಯ ಡಬ್ಲಿನ್‌ನಲ್ಲಿ ನಡೆಯಲಿದ್ದು, ರಾತ್ರಿ 9 ಗಂಟೆಗೆ ಆರಂಭಗೊಳ್ಳಲಿದೆ. ಇನ್ನು ಈ ಕ್ರೀಡಾಂಗಣದ ಮೊದಲ ಪಂದ್ಯದಂತೆಯೇ ಮೊದಲು ಬೌಲರ್‌ಗಳಿಗೆ ಸಹಕರಿಸಲಿದ್ದು, ಟಾಸ್ ಗೆಲ್ಲುವ ತಂಡದ ನಾಯಕ ಹೆಚ್ಚಾಗಿ ಚೇಸಿಂಗ್ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಈ ಪಂದ್ಯದಲ್ಲಿಯೂ ಮಳೆಯಾಗುವ ಸಾಧ್ಯತೆಯಿದ್ದು, ಪಿಚ್ ತೇವವಾಗುವ ಕಾರಣ ಬೌಲರ್‌ಗಳಿಗೆ ಇದು ಅನುಕೂಲಕರವಾಗಲಿದೆ. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿರಲಿದೆ. ಈ ಪಂದ್ಯದ ನೇರ ಪ್ರಸಾರವನ್ನು ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ನಲ್ಲಿ ಹಾಗೂ ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.

Rohit Sharma: ಕೊರೊನಾ ನಡುವೆ ಇಂಗ್ಲೆಂಡ್ ಆಟಗಾರರಿಗೆ ಖಡಕ್ ಸಂದೇಶ ರವಾನಿಸಿದ ರೋಹಿತ್ ಶರ್ಮಾ