AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pallonji Mistry: ಬಲಿಷ್ಠ ಐರ್ಲೆಂಡ್ ಕ್ರಿಕೆಟ್ ತಂಡ ಕಟ್ಟಿದ ಭಾರತೀಯ ಶತಕೋಟ್ಯಧಿಪತಿ..!

Shapoorji Pallonji: ಪಲ್ಲೋಂಜಿ ಮಿಸ್ತ್ರಿ ಅವರ ವ್ಯವಹಾರವು ಪ್ರಪಂಚದಾದ್ಯಂತ ಹರಡಿದೆ. ವಿಶೇಷವಾಗಿ ಭಾರತದಲ್ಲಿ ಹೆಚ್ಚಿನ ಉದ್ಯಮವನ್ನು ಹೊಂದಿದ್ದಾರೆ.

Pallonji Mistry: ಬಲಿಷ್ಠ ಐರ್ಲೆಂಡ್ ಕ್ರಿಕೆಟ್ ತಂಡ ಕಟ್ಟಿದ ಭಾರತೀಯ ಶತಕೋಟ್ಯಧಿಪತಿ..!
Pallonji Mistry-Ireland Cricket team
TV9 Web
| Edited By: |

Updated on: Jun 28, 2022 | 1:18 PM

Share

ಶಾಪೂರ್​ಜೀ ಪಲ್ಲೋಂಜಿ (Shapoorji Pallonji) ಸಮೂಹ ಸಂಸ್ಥೆಯ ಅಧ್ಯಕ್ಷ 93 ವರ್ಷದ ಪಲ್ಲೋಂಜಿ ಮಿಸ್ತ್ರಿ (Pallonji Mistry) ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ. ದಕ್ಷಿಣ ಮುಂಬೈನ ಅವರ ನಿವಾಸದಲ್ಲಿ ಸೋಮವಾರ ಮಧ್ಯರಾತ್ರಿ ಮತ್ತು ಮಂಗಳವಾರ ಮುಂಜಾನೆಯ  ನಡುವೆ ನಿದ್ದೆಯಲ್ಲೇ ಪಲ್ಲೋಂಜಿ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಉದ್ಯಮ ಲೋಕದಲ್ಲಿ ಶತಕೋಟಿ ಒಡೆಯ ಎಂದೇ ಗುರುತಿಸಿಕೊಂಡಿದ್ದ ಪಲ್ಲೋಂಜಿ ಮಿಸ್ತ್ರಿ ಅವರು ಭಾರತೀಯ ಪೌರತ್ವದ ಜೊತೆಗೆ ಐರ್ಲೆಂಡ್ ದೇಶದ ಪೌರತ್ವವನ್ನೂ ಕೂಡ ಹೊಂದಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಪಲ್ಲೋಂಜಿ ಅವರು 15 ವರ್ಷಗಳ ಹಿಂದೆ, ಅಂದರೆ 2003 ರಲ್ಲಿ ಐರಿಷ್ ದೇಶದ ಪೌರತ್ವ ಪಡೆದಿದ್ದರು. ಆ ಬಳಿಕ ಹೆಚ್ಚಿನ ಸಮಯವನ್ನು ವಿದೇಶದಲ್ಲಿ ಕಳೆದಿದ್ದರು. ಅಷ್ಟೇ ಅಲ್ಲದೆ ಐರ್ಲೆಂಡ್ ಕ್ರಿಕೆಟ್​ ತಂಡವನ್ನು ಉತ್ತುಂಗಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ವಾಸ್ತವವಾಗಿ, ಭಾರತದಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದ ಪಲ್ಲೊಂಜಿ ಅವರ ಪತ್ನಿ ಪೆಸ್ಟಿ ಪೆರಿನ್ ದುಬಾಸ್ ಐರ್ಲೆಂಡ್‌ ಮೂಲದವರು. ಹೀಗಾಗಿಯೇ ಪಲ್ಲೋಂಜಿ ಮಿಸ್ತ್ರಿ ಅವರಿಗೂ ಐರಿಷ್ ಪೌರತ್ವ ಲಭಿಸಿತ್ತು. ಆದರೆ ಐರ್ಲೆಂಡ್​ನಲ್ಲಿ ಕೇವಲ ಪೌರನಾಗಿ ಉಳಿಯದೇ ದೇಶದ ಪ್ರಗತಿಯಲ್ಲಿ ಹಲವು ಕೊಡುಗೆಗಳನ್ನು ನೀಡಿರುವುದು ವಿಶೇಷ. ಅದರಲ್ಲೂ ಐರ್ಲೆಂಡ್ ಕ್ರಿಕೆಟ್​ ಇಂದು ಪ್ರಮುಖ ಟೂರ್ನಿಗಳನ್ನು ಆಡುತ್ತಿದ್ದರೆ ಅದಕ್ಕೆ ಒಂದು ಕಾರಣ ಪಲ್ಲೋಂಜಿ ಎಂದರೆ ತಪ್ಪಾಗಲಾರದು. ಏಕೆಂದರೆ ಐರ್ಲೆಂಡ್ ತಂಡವು ಏನೂ ಅಲ್ಲದ ಕಾಲದಲ್ಲಿ, ಅಂದರೆ 2014 ರಲ್ಲಿ ಶಾಪೂರ್​ಜೀ ಪಲ್ಲೋಂಜಿ ಗ್ರೂಪ್ 10 ವರ್ಷಗಳ ಕಾಲ ಐರ್ಲೆಂಡ್ ತಂಡದ ಪ್ರಾಯೋಜಕತ್ವನ್ನು ವಹಿಸಿಕೊಂಡಿತ್ತು.

ಹೀಗಾಗಿಯೇ ಐರ್ಲೆಂಡ್ ತಂಡ ವಿಶ್ವಕಪ್‌ನಲ್ಲಿ ಕಣಕ್ಕಿಳಿದಾಗ ತಂಡದ ಅಭಿಮಾನಿಗಳು ಪಲ್ಲೋಂಜಿ ಅವರಿಗೆ ಧನ್ಯವಾದ ಹೇಳುವ ಬ್ಯಾನರ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ. ಏಕೆಂದರೆ ಪಲ್ಲೋಂಜಿ ಅವರು ಅಲ್ಲಿನ ಕ್ರಿಕೆಟ್ ತಂಡಕ್ಕೆ ಬಹಳ ವರ್ಷಗಳಿಂದ ಸಾಕಷ್ಟು ಆರ್ಥಿಕ ಸಹಾಯವನ್ನು ನೀಡುತ್ತಾ ಬಂದಿದ್ದಾರೆ. ಅಷ್ಟೇ ಯಾಕೆ ಪ್ರಸ್ತುತ ಟೀಮ್ ಇಂಡಿಯಾ-ಐರ್ಲೆಂಡ್ ಆಡುತ್ತಿರುವ ಡಬ್ಲಿನ್ ಗ್ರೌಂಡ್​ ಕೂಡ ಪಲ್ಲೋಂಜಿ ಮಿಸ್ತ್ರಿ ಅವರ ಕೊಡುಗೆ ಎಂಬುದೇ ವಿಶೇಷ.

ಇದನ್ನೂ ಓದಿ
Image
Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
Image
Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
Image
ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Image
Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

ಈ ಮೈದಾನವನ್ನು ಶಾಪೂರ್​ಜೀ ಪಲ್ಲೋಂಜಿ ನ್ಯಾಷನಲ್ ಅಕಾಡೆಮಿ ಅಥವಾ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಎಂದೇ ಕರೆಯಲಾಗುತ್ತದೆ. ಡಬ್ಲಿನ್‌ನ ಮಲಾಹೈಡ್‌ನಲ್ಲಿರುವ ಈ ಕ್ರಿಕೆಟ್ ಕ್ಲಬ್ ಐರ್ಲೆಂಡ್ ಆಟಗಾರರ ತರಬೇತಿ ಕೇಂದ್ರವಾಗಿದೆ. ಈ ಅಕಾಡೆಮಿಯ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ 17 ಆಟಗಾರರು ಐರ್ಲೆಂಡ್​ ತಂಡದ ಭಾಗವಾಗಿದ್ದಾರೆ. ಟೀಮ್ ಇಂಡಿಯಾ ವಿರುದ್ದ ಆಡುತ್ತಿರುವ ಜೋಶ್ ಲಿಟಲ್, ಹ್ಯಾರಿ ಟೆಕ್ಟರ್ ಕೂಡ ಪಲ್ಲೋಂಜಿ ಅಕಾಡೆಮಿಯಲ್ಲಿ ಅರಳಿದ ಪ್ರತಿಭೆಗಳು ಎಂಬುದು ಮತ್ತೊಂದು ವಿಶೇಷ. ಅಷ್ಟೇ ಅಲ್ಲದೆ ಅಲ್ಲಿ ದೇಶೀಯ ಕ್ರಿಕೆಟ್‌ ಪಂದ್ಯಾವಳಿಯನ್ನು ಶುರು ಮಾಡುವಲ್ಲಿ ಕೂಡ ಪಲ್ಲೋಂಜಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿಯೇ ಐರ್ಲೆಂಡ್​ ಕ್ರಿಕೆಟ್​ನಲ್ಲಿ ಪಲ್ಲೋಂಜಿ ಮಿಸ್ತ್ರಿ ಅವರಿಗೆ ವಿಶೇಷ ಸ್ಥಾನವಿದೆ.

ಐರ್ಲೆಂಡ್ ಅಲ್ಲದೆ, ಪಲ್ಲೋಂಜಿ ಮಿಸ್ತ್ರಿ ಅವರ ವ್ಯವಹಾರವು ಪ್ರಪಂಚದಾದ್ಯಂತ ಹರಡಿದೆ. ವಿಶೇಷವಾಗಿ ಭಾರತದಲ್ಲಿ ಹೆಚ್ಚಿನ ಉದ್ಯಮವನ್ನು ಹೊಂದಿದ್ದಾರೆ. ಹಾಗೆಯೇ ಮುಂಬೈನ ಮಲಬಾರ್ ಹಿಲ್ಸ್ ನಲ್ಲಿ ದೊಡ್ಡ ಬಂಗಲೆ ಇದ್ದು, ಪುಣೆಯಲ್ಲಿ 200 ಎಕರೆ ತೋಟದ ಮನೆ ಹೊಂದಿದ್ದಾರೆ. ಐರ್ಲೆಂಡ್ ಹೊರತುಪಡಿಸಿ ಪಲ್ಲೋಂಜಿ ಮುಂಬೈ ಹಾಗೂ ಪುಣೆಯಲ್ಲೇ ಹೆಚ್ಚಾಗಿ ಉಳಿಯುತ್ತಿದ್ದರು. ಅಂದಹಾಗೆ ಐರ್ಲೆಂಡ್ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಕೂಡ ಪಲ್ಲೋಂಜಿ ಮಿಸ್ತ್ರಿ ಎಂಬುದೇ ಇಲ್ಲಿ ವಿಶೇಷ. ಒಟ್ಟು 14.6 ಶತಕೋಟಿ ಡಾಲರ್ ಆದಾಯ ಹೊಂದುವ ಮೂಲಕ ಪಲ್ಲೋಂಜಿ ಐರಿಷ್ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ .

ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?