‘ಅಣ್ಣ, ನೀನೇ ಕ್ಯಾಪ್ಟನ್, ನೀನೇ ನನ್ನ ತಂಡದಿಂದ ಹೊರಗಿಟ್ಟಿದ್ದೆ’; ರೋಹಿತ್ ಪ್ರಶ್ನೆಗೆ ಕಿಶನ್ ಖಡಕ್ ರಿಪ್ಲೇ! ವಿಡಿಯೋ ನೋಡಿ

IND vs NZ: ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ದ್ವಿಶತಕ ಸಿಡಿಸಿದ್ದರು. ಆದರೆ ನಂತರ ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಿಗೆ ಕಿಶನ್ ಆಯ್ಕೆಯಾಗಿರಲಿಲ್ಲ.

‘ಅಣ್ಣ, ನೀನೇ ಕ್ಯಾಪ್ಟನ್, ನೀನೇ ನನ್ನ ತಂಡದಿಂದ ಹೊರಗಿಟ್ಟಿದ್ದೆ; ರೋಹಿತ್ ಪ್ರಶ್ನೆಗೆ ಕಿಶನ್ ಖಡಕ್ ರಿಪ್ಲೇ! ವಿಡಿಯೋ ನೋಡಿ
ಶುಭ್​ಮನ್ ಗಿಲ್, ರೋಹಿತ್ ಶರ್ಮಾ, ಇಶಾನ್ ಕಿಶನ್
Edited By:

Updated on: Jan 19, 2023 | 4:14 PM

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (India Vs New Zealand) 13 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾ ಪರ ದಾಖಲೆಯ ದ್ವಿಶತಕ ಸಿಡಿಸಿದ ಶುಭ್​ಮನ್ ಗಿಲ್ (Shubman Gill) ಈ ಗೆಲುವಿನ ಹೀರೋ ಎನಿಸಿಕೊಂಡರು. ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ಗಿಲ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಈ ಪಂದ್ಯದ ಬಳಿಕ ನಡೆದ ಮೂವರು ಕ್ರಿಕೆಟಿಗರ ನಡುವಣ ಸಂದರ್ಶನ ಈಗ ಸಖತ್ ವೈರಲ್ ಆಗುತ್ತಿದೆ. ವಾಸ್ತವವಾಗಿ ಪಂದ್ಯ ಮುಗಿದ ನಂತರ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಬಿಸಿಸಿಐ (BCCI) ಟಿವಿಗಾಗಿ ಸಂದರ್ಶನವೊಂದನ್ನು ನಡೆಸಿಕೊಟ್ಟರು. ಇದರಲ್ಲಿ ಪಂದ್ಯದ ಹೀರೋ ಶುಭ್​ಮನ್ ಗಿಲ್ ಹಾಗೂ ಇಶಾನ್ ಕಿಶನ್ (Ishan Kishan) ಭಾಗಿಯಾಗಿದ್ದರು. ಈ ವೇಳೆ ಇಶಾನ್ ಕಿಶನ್ ಬಗ್ಗೆಯೂ ಚರ್ಚೆ ನಡೆಯಿತು. ಇದೀಗ ನಾಯಕ ರೋಹಿತ್ ಕೇಳಿದ ಪ್ರಶ್ನೆಗೆ ತಮಾಷೆಯಾಗಿ ಕಿಶನ್ ಕೊಟ್ಟ ಉತ್ತರ ಇದೀಗ ಭಾರಿ ವೈರಲ್ ಆಗುತ್ತಿದೆ.

ದ್ವಿಶತಕ ಬಾರಿಸಿದರೂ ಮೂರು ಪಂದ್ಯಗಳಿಂದ ಔಟ್

ಚರ್ಚೆಯ ವೇಳೆ ಇಶಾನ್ ಕಿಶನ್ ಬಳಿ ರೋಹಿತ್ ಶರ್ಮಾ, ‘ಇಶಾನ್ ನೀನು ದ್ವಿಶತಕ ಗಳಿಸಿದ ನಂತರ ಮೂರು ಪಂದ್ಯಗಳನ್ನು ಆಡಲಿಲ್ಲ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ತಮಾಷೆಯಾಗಿಯೇ ಉತ್ತರಿಸಿದ ಇಶಾನ್ ಕಿಶನ್ ‘ಅಣ್ಣ, ನೀನೇ ಕ್ಯಾಪ್ಟನ್. ನೀನೇ ನನ್ನ ತಂಡದಿಂದ ಹೊರಗಿಟ್ಟಿದ್ದೆ ಎಂದು ಉತ್ತರಿಸಿದ್ದಾರೆ.

Rahul Dravid: ಕರ್ನಾಟಕ ತಂಡಕ್ಕೆ ರಾಹುಲ್ ದ್ರಾವಿಡ್ ಪುತ್ರ ನಾಯಕ..!

ನಕ್ಕು ಸುಮ್ಮನಾದ ರೋಹಿತ್

ವಾಸ್ತವವಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ದ್ವಿಶತಕ ಸಿಡಿಸಿದ್ದರು. ಆದರೆ ನಂತರ ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಿಗೆ ಕಿಶನ್ ಆಯ್ಕೆಯಾಗಿರಲಿಲ್ಲ. ಮಾಧ್ಯಮಗಳು ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲೂ ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಇದೇ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ ರೋಹಿತ್ ಶರ್ಮಾಗೆ, ಇಶಾನ್ ಕಿಶನ್ ನೀಡಿದ ಉತ್ತರ ಕೊಂಚ ಮುಜುಗರ ತಂದಿತು ಎಂದು ತೋರುತ್ತದೆ. ಹೀಗಾಗಿ ಮುಜುಗರ ತಪ್ಪಿಸಿಕೊಳ್ಳಲು ನಾಯಕ ರೋಹಿತ್ ನಗುವ ಮೂಲಕ ಈ ಪ್ರಸಂಗಕ್ಕೆ ತೆರೆ ಎಳೆದರು.

39 ದಿನಗಳ ನಂತರ ಗಿಲ್ ದ್ವಿಶತಕ

ಬಾಂಗ್ಲಾ ವಿರುದ್ಧ ಇಶಾನ್ ಕಿಶನ್ 131 ಎಸೆತಗಳಲ್ಲಿ 210 ರನ್ ಗಳಿಸಿದ್ದರೆ, ಸರಿಯಾಗಿ 39 ದಿನಗಳ ನಂತರ ಶುಭಮನ್ ಗಿಲ್ ಕೂಡ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೂ ಗಿಲ್ ಪಾತ್ರರಾದರು. ಇದುವರೆಗೆ 19 ಏಕದಿನ ಪಂದ್ಯಗಳನ್ನಾಡಿರುವ ಗಿಲ್, 68.88 ಸರಾಸರಿಯಲ್ಲಿ 1102 ರನ್ ಗಳಿಸಿದ್ದಾರೆ. 109 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ ರನ್ ಗಳಿಸಿರುವ ಗಿಲ್, ತನ್ನ ಅದ್ಭುತ ಪ್ರದರ್ಶನದೊಂದಿಗೆ 2023 ರ ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:14 pm, Thu, 19 January 23