Updated on:Jan 19, 2023 | 12:53 PM
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ SA20 ಲೀಗ್‌ನಲ್ಲಿ ಕೆಲವು ಅಚ್ಚರಿಯ ಪ್ರದರ್ಶನಗಳು ಕಂಡು ಬರುತ್ತಿವೆ. ವಿಶ್ವದ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರೆನಿಸಿಕೊಂಡಿರುವ ಅಫ್ಘಾನ್ ತಂಡದ ರಶೀದ್ ಖಾನ್, SA20 ಲೀಗ್‌ನಲ್ಲಿ ಬೌಲಿಂಗ್ ಆಲ್ರೌಂಡರ್ ಬ್ಯಾಟಿಂಗ್ ದಾಳಿಗೆ ಸಿಲುಕಿ ನಲುಗಿ ಹೋಗಿದ್ದಾರೆ.
SA20 ಲೀಗ್‌ನಲ್ಲಿ ಜನವರಿ 18ರಂದು ನಡೆದ ಮುಂಬೈ ಇಂಡಿಯನ್ಸ್ ಕೇಪ್ ಟೌನ್ vs ಸನ್ ರೈಸರ್ಸ್ ಈಸ್ಟರ್ನ್ ಕ್ಯಾಪ್ ನಡುವಣ ಪಂದ್ಯದಲ್ಲಿ ಸನ್ ರೈಸರ್ಸ್ ಈಸ್ಟರ್ನ್ ಕ್ಯಾಪ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ತಂಡದ ಪರ ಅಬ್ಬರಿಸಿದ ಮಾರ್ಕೊ ಯಾನ್ಸೆನ್ ಸನ್ ರೈಸರ್ಸ್ ತಂಡದ ಗೆಲುವಿನ ಹೀರೋ ಎನಿಸಿಕೊಂಡರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಕೇಪ್ ಟೌನ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಈಸ್ಟರ್ನ್ ಕ್ಯಾಪ್ ತಂಡ ಇನ್ನೂ 3 ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಸೇರಿತು.
ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಮೊರ್ಕೊ ಯಾನ್ಸೆನ್ ಕೇವಲ 27 ಎಸೆತಗಳಲ್ಲಿ 66 ರನ್ ಗಳಿಸಿದ್ದಲ್ಲದೆ, 3 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದರು.
ಅದರಲ್ಲೂ ಯಾನ್ಸೆನ್, ರಶೀದ್ ಖಾನ್ ಓವರ್ನಲ್ಲಿ ಬರೋಬ್ಬರಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 28 ರನ್‌ಗಳು ಚಚ್ಚಿದರು. ಈ ಆಟ ಇಡೀ ಪಂದ್ಯದ ದಿಕ್ಕನೇ ಬದಲಾಯಿಸಿತು. ತನ್ನ ಕೈಚೆಳಕದಿಂದ ಅದೇಷ್ಟೋ ಖ್ಯಾತ ಕ್ರಿಕೆಟಿಗರಿಗೆ ಪೆವಿಲಿಯನ್ ದಾರಿ ತೋರಿಸಿರುವ ರಶೀದ್ ಖಾನ್, ಆಫ್ರಿಕಾ ಬೌಲರ್ ಎದುರು ಮಂಕಾಗಿ ಹೋದರು. ಪರಿಣಾಮವಾಗಿ ಮುಂಬೈ ತಂಡ ಸೋಲನುಭವಿಸಬೇಕಾಯಿತು.
Published On - 12:50 pm, Thu, 19 January 23