Wriddhiman Saha: ಕಳಪೆ ಆಟದ ನಡುವೆ 3ನೇ ದಿನ ವಿಕೆಟ್ ಕೀಪಿಂಗ್​ಗೆ ಬರದ ವೃದ್ದಿಮಾನ್ ಸಾಹ: ಕಾರಣವೇನು ಗೊತ್ತೇ?

KS Bharat replaced Wridhiman Saha, IND vs NZ Test: ವೃದ್ದಿಮಾನ್ ಸಾಹ ಅವರ ಕುತ್ತಿಗೆಗೆ ಪೆಟ್ಟಾಗಿದ್ದು ನೋವಿನಿಂದ ಬಳಲುತ್ತಿದ್ದಾರಂತೆ. ಹೀಗಾಗಿ ಇವರ ಬದಲು ಭಾರತ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್​ನ ಮೂರನೇ ದಿನ ಕೆಎಸ್ ಭರತ್ ಕೀಪಿಂಗ್ ಗ್ಲೌಸ್ ತೊಟ್ಟು ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತಿದ್ದಾರೆ.

Wriddhiman Saha: ಕಳಪೆ ಆಟದ ನಡುವೆ 3ನೇ ದಿನ ವಿಕೆಟ್ ಕೀಪಿಂಗ್​ಗೆ ಬರದ ವೃದ್ದಿಮಾನ್ ಸಾಹ: ಕಾರಣವೇನು ಗೊತ್ತೇ?
Wriddhiman Saha KS Bharat IND vs NZ
Follow us
TV9 Web
| Updated By: Vinay Bhat

Updated on: Nov 27, 2021 | 10:32 AM

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand 1st Test) ನಡುವಣ ಮೊದಲ ಟೆಸ್ಟ್ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಮೂರನೇ ದಿನದಾಟ ಪ್ರಗತಿಯಲ್ಲಿದೆ. ನ್ಯೂಜಿಲೆಂಡ್ ಓಪನರ್​ಗಳು ತಂಡಕ್ಕೆ ಅದಾಗಲೇ ಭರ್ಜರಿ ಆರಂಭ ಒದಗಿಸಿ ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿದ್ದಾರೆ. ಇದರ ನಡುವೆ 3ನೇ ದಿನದಾಟದ (IND vs NZ 1st test Day 3) ಆರಂಭದಲ್ಲಿ ಕ್ರಿಕೆಟ್ ಪ್ರಿಯರಿಗೆ ಅಚ್ಚರಿಯೊಂದು ಕಾದಿತ್ತು. ಟೀಮ್ ಇಂಡಿಯಾ (Team India) ಪರ ವಿಕೆಟ್ ಕೀಪಿಂಗ್ ಗ್ಲೌಸ್ ತೊಟ್ಟು ವೃದ್ದಿಮಾನ್ ಸಾಹ (Wriddhiman Saha) ಬದಲು ಕೆಎಸ್ ಭರತ್ (KS Bharat) ಕಣಕ್ಕಿಳಿದರು. ಅಷ್ಟಕ್ಕೂ ಸಾಹ ಬದಲು ಭರತ್ ಆಡಲು ಕಾರಣವೇನು ಎಂಬುದು ಇದೀಗ ತಿಳಿದುಬಂದಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಹಿತಿ ಹಂಚಿಕೊಂಡಿದೆ. ಸಾಹ ಅವರು ಇಂಜುರಿಯಿಂದ (Wriddhiman Saha Injury) ಬಳಲುತ್ತಿದ್ದಾರಂತೆ.

ಹೌದು, ವೃದ್ದಿಮಾನ್ ಸಾಹ ಅವರ ಕುತ್ತಿಗೆಗೆ ಪೆಟ್ಟಾಗಿದ್ದು ನೋವಿನಿಂದ ಬಳಲುತ್ತಿದ್ದಾರಂತೆ. ಹೀಗಾಗಿ ಇವರನ್ನು ಬಿಸಿಸಿಐ ಮೆಡಿಕಲ್ ತಂಡ ಪರೀಕ್ಷೆ ನಡೆಸುತ್ತಿದೆ. ಹೀಗಾಗಿ ಇವರ ಬದಲು ಕೆಎಸ್ ಭರತ್ ಕೀಪಿಂಗ್ ಗ್ಲೌಸ್ ತೊಟ್ಟು ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತಿದ್ದಾರೆ ಎಂದು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

2010 ರಲ್ಲಿ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ವೃದ್ದಿಮಾನ್ ಸಾಹ ಈವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಇವರ ಜಾಗಕ್ಕೆ ರಿಷಭ್ ಪಂತ್ ಆಯ್ಕೆಯಾದರು. ಪಂತ್ ಅನೇಕ ಬಾರಿ ಭಾರತಕ್ಕೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ, ಸದ್ಯ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಪಂತ್ ಅವರಿಗೆ ವಿಶ್ರಾಂತಿ ನೀಡಿರುವ ಕಾರಣ ಸಾಹ ಸ್ಥಾನ ಪಡೆದುಕೊಂಡಿದ್ದಾರೆ.

ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಬೇಕಾದರೆ ಈ ಸರಣಿಯಲ್ಲಿ ಸಾಹ ಅವರಿಂದ ದೊಡ್ಡ ಇನ್ನಿಂಗ್ಸ್ ಬರಲೇಬೇಕಿದೆ. ಆದರೆ, ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 1 ರನ್​ಗೆ ಔಟ್ ಆಗುವ ಮೂಲಕ ಮತ್ತೆ ಕಳಪೆ ಆಟ ಪ್ರದರ್ಶಿಸಿದ್ದಾರೆ. ಹೀಗಾಗಿ ಎರಡನೇ ಟೆಸ್ಟ್​ನಲ್ಲಿ ಸಾಹ ಆಡುವುದು ಅನುಮಾನ ಭರತ್ ಪದಾರ್ಪಣೆ ಮಾಡುವುದು ಬಹುತೇಕ ಖಚಿತವಾಗಿದೆ.

ಸದ್ಯ ಸಾಗುತ್ತಿರುವ ಕಾನ್ಪುರ ಟೆಸ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತವನ್ನು 345 ರನ್​ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಕೇನ್ ಪಡೆ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದೆ. ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 129 ರನ್ ಪೇರಿಸಿತ್ತು. 2ನೇ ದಿನ ಒಂದೂ ವಿಕೆಟ್ ಕೀಳಲು ಭಾರತೀಯ ಬೌಲರ್​ಗಳಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಇಂದಿನ ಮೂರನೇ ದಿನದಾಟ ಟೀಮ್ ಇಂಡಿಯಾಕ್ಕೆ ಬಹುಮುಖ್ಯವಾಗಿದ್ದು, ನ್ಯೂಜಿಲೆಂಡ್ ಅನ್ನು ಆದಷ್ಟು ಬೇಗ ಕಟ್ಟಿಹಾಕಬೇಕಿದೆ. ಮೂವರು ಸ್ಪಿನ್ನರ್​ಗಳನ್ನು ಒಳಗೊಂಡಿರುವ ಭಾರತ ವಿಕೆಟ್ ಕೀಳುವತ್ತ ಹೆಚ್ಚಿನ ಗಮನ ಹರಿಸಬೇಕಿದೆ.

Nathan Smith Catch: ನ್ಯೂಜಿಲೆಂಡ್ ಆಟಗಾರ ಹಿಡಿದ ಕ್ಯಾಚ್ ಕಂಡು ನಿಬ್ಬೆರಗಾದ ಕ್ರಿಕೆಟ್ ಜಗತ್ತು: ಇಲ್ಲಿದೆ ರೋಚಕ ವಿಡಿಯೋ

IND vs NZ 1st Test, Day 3 LIVE Score:

(India vs New Zealand 1st test Day 3 KS Bharat on keeping instead of Wriddhiman Saha here is the reason)

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ