India vs New Zealand 2nd T20: ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿದ ಭಾರತ

| Updated By: ಝಾಹಿರ್ ಯೂಸುಫ್

Updated on: Jan 29, 2023 | 10:29 PM

India vs New Zealand 2nd T20: ಮೊದಲ 10 ಓವರ್​ಗಳಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ಟೀಮ್ ಇಂಡಿಯಾ ಬೌಲರ್​ಗಳು ದ್ವಿತಿಯಾರ್ಧದಲ್ಲೂ ಪರಾಕ್ರಮ ಮರೆದರು.

India vs New Zealand 2nd T20: ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿದ ಭಾರತ
Team India
Follow us on

India vs New Zealand 2nd T20: ಲಕ್ನೋನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಇದಕ್ಕೂ ಮುನ್ನ ಮುನ್ನ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ ನಾಯಕನ ನಿರ್ಧಾರ ತಪ್ಪು ಎಂಬುದನ್ನು ಟೀಮ್ ಇಂಡಿಯಾ ಬೌಲರ್​ಗಳು ಪವರ್​ಪ್ಲೇನಲ್ಲೇ ನಿರೂಪಿಸಿದ್ದರು. 4ನೇ ಓವರ್​ನಲ್ಲಿ ಫಿನ್ ಅಲೆನ್​ (11) ರನ್ನು ಕ್ಲೀನ್ ಬೌಲ್ಡ್ ಮಾಡಿ ಚಹಾಲ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಡೆವೊನ್ ಕಾನ್ವೆ (11) ಸುಂದರ್​ಗೆ ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ಗ್ಲೆನ್ ಫಿಲಿಪ್ಸ್ (5) ದೀಪಕ್ ಹೂಡಾ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು. ಇನ್ನು ಡೇರಿಲ್ ಮಿಚೆಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕುಲ್ದೀಪ್ ಯಾದವ್ ಟೀಮ್ ಇಂಡಿಯಾಗೆ 5ನೇ ಯಶಸ್ಸು ತಂದುಕೊಟ್ಟರು. ಈ ವೇಳೆ 10 ಓವರ್​ಗಳಲ್ಲಿ ನ್ಯೂಜಿಲೆಂಡ್ ಕಲೆಹಾಕಿದ್ದು ಕೇವಲ 60 ರನ್​ ಮಾತ್ರ.

ಮೊದಲ 10 ಓವರ್​ಗಳಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ಟೀಮ್ ಇಂಡಿಯಾ ಬೌಲರ್​ಗಳು ದ್ವಿತಿಯಾರ್ಧದಲ್ಲೂ ಪರಾಕ್ರಮ ಮರೆದರು. ಪರಿಣಾಮ ನ್ಯೂಜಿಲೆಂಡ್ ಬ್ಯಾಟರ್​ಗಳು ರನ್​ಗಳಿಸಲು ಪರದಾಡಿದರು. ಇದಾಗ್ಯೂ ಮೈಕೆಲ್ ಬ್ರೇಸ್​ವೆಲ್ 14 ರನ್​ಗಳಿಸಿದರೆ, ನಾಯಕ ಮಿಚೆಲ್ ಸ್ಯಾಂಟ್ನರ್ ಅಜೇಯ 19 ರನ್​ ಕಲೆಹಾಕಿದರು. ಅದರಂತೆ ನಿಗದಿತ 20 ಓವರ್​ಗಳಲ್ಲಿ ನ್ಯೂಜಿಲೆಂಡ್ ತಂಡವು 8 ವಿಕೆಟ್​ ನಷ್ಟಕ್ಕೆ 99 ರನ್​ಗಳಿಸಲಷ್ಟೇ ಶಕ್ತರಾದರು.

ಇದನ್ನೂ ಓದಿ
IPLನ ಒಂದು ಪಂದ್ಯಕ್ಕೆ 107 ಕೋಟಿ ರೂ: PSL ನ 1 ಪಂದ್ಯಕ್ಕೆ ಎಷ್ಟು ಗೊತ್ತಾ?
ಟೀಮ್ ಇಂಡಿಯಾ ಪರ ಅತೀ ಹೆಚ್ಚು ಬಾರಿ 150 ಕ್ಕೂ ಅಧಿಕ ರನ್ ಬಾರಿಸಿದ್ದು ಯಾರು ಗೊತ್ತಾ?
Team India: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ದಾಖಲೆ ಉಡೀಸ್

ಟೀಮ್ ಇಂಡಿಯಾ ಪರ 2 ಓವರ್​ಗಳಲ್ಲಿ ಕೇವಲ 7 ರನ್​ ನೀಡಿ ಅರ್ಷದೀಪ್ ಸಿಂಗ್ 2 ವಿಕೆಟ್ ಪಡೆದರೆ, ಚಹಾಲ್, ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್ ಹಾಗೂ ದೀಪಕ್ ಹೂಡಾ ತಲಾ 1 ವಿಕೆಟ್ ಕಬಳಿಸಿದರು.

ಇನ್ನು 100 ರನ್​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಕೂಡ ಉತ್ತಮ ಆರಂಭವೇನು ಪಡೆದಿರಲಿಲ್ಲ. ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಶುಭ್​ಮನ್ ಗಿಲ್ ಈ ಬಾರಿ ಕೂಡ ಕೇವಲ 11 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಇಶಾನ್ ಕಿಶನ್ ಹಾಗೂ ರಾಹುಲ್ ತ್ರಿಪಾಠಿ 28 ರನ್​ಗಳ ಜೊತೆಯಾಟವಾಡಿದರು. ಇದೇ ವೇಳೆ ರನ್​ ಕದಿಯುವ ಯತ್ನ ಮಾಡಿದ ಇಶಾನ್ ಕಿಶನ್ (19) ರನೌಟ್ ಆಗಿ ನಿರ್ಗಮಿಸಿದರು. ಪರಿಣಾಮ ಟೀಮ್ ಇಂಡಿಯಾ ಮೊದಲ 10 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 49 ರನ್​ಗಳು ಮಾತ್ರ.

11ನೇ ಓವರ್​ನಲ್ಲಿ ರಾಹುಲ್ ತ್ರಿಪಾಠಿ (13) ಕ್ಯಾಚ್ ನೀಡಿ ಹೊರನಡೆದರು. ಇನ್ನು ಸೂರ್ಯಕುಮಾರ್ ಯಾದವ್ ಮಾಡಿದ ತಪ್ಪಿನಿಂದಾಗಿ ವಾಷಿಂಗ್ಟನ್ ಸುಂದರ್ (10) ರನೌಟ್ ಆಗುವ ಮೂಲಕ ವಿಕೆಟ್ ತ್ಯಾಗ ಮಾಡಿದರು. ಪರಿಣಾಮ ಕೊನೆಯ 3 ಓವರ್​ಗಳಲ್ಲಿ ಟೀಮ್ ಇಂಡಿಯಾ 18 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಆಟವಾಡಿದರು. ಅದರಂತೆ ಕೊನೆಯ ಓವರ್​ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 6 ರನ್​ಗಳು ಬೇಕಿತ್ತು.

ಕೊನೆಯ ಓವರ್​ನ ಮೊದಲೆರಡು ಎಸೆತಗಳಲ್ಲಿ ಟಿಕ್ನರ್ ಕೇವಲ 1 ರನ್​ ಮಾತ್ರ ನೀಡಿದರು. 3ನೇ ಎಸೆತದಲ್ಲಿ 1 ರನ್​. ನಾಲ್ಕನೇ ಎಸೆತದಲ್ಲಿ 1 ರನ್​. 5ನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಫೋರ್ ಬಾರಿಸಿ ಭಾರತ ತಂಡಕ್ಕೆ 6 ವಿಕೆಟ್​ಗಳ ಜಯ ತಂದುಕೊಟ್ಟರು.

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಶುಭ್​ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ) ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಶಿವಂ ಮಾವಿ, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್.

ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್​ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್​ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.