IND vs NZ Head to Head: ಕಾನ್ಪುರ ಕದನಕ್ಕೂ ಮುನ್ನ ಭಾರತ- ಕಿವೀಸ್ ಎರಡೂ ತಂಡಗಳ ಟೆಸ್ಟ್ ಜಾತಕ ಹೀಗಿದೆ

IND vs NZ Head to Head:‘ ಎರಡು ತಂಡಗಳ ನಡುವೆ 60 ಟೆಸ್ಟ್ ಪಂದ್ಯಗಳು ನಡೆದಿವೆ. ಮೊದಲ ಟೆಸ್ಟ್ ಪಂದ್ಯವನ್ನು 1955-56 ರಲ್ಲಿ ಭಾರತದಲ್ಲಿ ಆಡಲಾಯಿತು. ಇದರಲ್ಲಿ ಭಾರತ 21 ಪಂದ್ಯಗಳನ್ನು ಗೆದ್ದಿದ್ದು, ನ್ಯೂಜಿಲೆಂಡ್ 13 ಪಂದ್ಯಗಳನ್ನು ಗೆದ್ದಿದೆ.

IND vs NZ Head to Head: ಕಾನ್ಪುರ ಕದನಕ್ಕೂ ಮುನ್ನ ಭಾರತ- ಕಿವೀಸ್ ಎರಡೂ ತಂಡಗಳ ಟೆಸ್ಟ್ ಜಾತಕ ಹೀಗಿದೆ
ವಿಲಿಯಮ್ಸನ್- ರಹಾನೆ
Follow us
TV9 Web
| Updated By: ಪೃಥ್ವಿಶಂಕರ

Updated on: Nov 24, 2021 | 10:33 AM

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ನವೆಂಬರ್ 25 ಗುರುವಾರದಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿವೆ. ಮೊದಲ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಇದುವರೆಗೆ ಟೆಸ್ಟ್ ಸರಣಿ ಸೋತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕೇನ್ ವಿಲಿಯಮ್ಸನ್ ನಾಯಕತ್ವದ ತಂಡವು ಈ ಇತಿಹಾಸವನ್ನು ಬದಲಾಯಿಸಲು ಬಯಸುತ್ತದೆ ಮತ್ತು ಭಾರತವು ಅದನ್ನು ಉಳಿಸಿಕೊಳ್ಳಲು ಬಯಸುತ್ತದೆ. ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ನ್ಯೂಜಿಲೆಂಡ್ ಭಾರತದ ಹಲವು ಆಕಾಂಕ್ಷೆಗಳನ್ನು ನುಚ್ಚುನೂರು ಮಾಡಿದ ತಂಡವಾಗಿದೆ. ಅದೂ ಐಸಿಸಿ ಟೂರ್ನಿಗಳಲ್ಲಿ. ಐಸಿಸಿ ಟೂರ್ನಿಗಳಲ್ಲಿ ಈ ತಂಡ ಭಾರತಕ್ಕೆ ದೊಡ್ಡ ತಲೆನೋವಾಗಿದೆ. ಕಳೆದ ಮೂರು ಟೂರ್ನಿಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಜಯ ಸಾಧಿಸಲು ಸಾಧ್ಯವಾಗಿರಲಿಲ್ಲ. 2019 ರಲ್ಲಿ ನಡೆದ ODI ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಭಾರತವನ್ನು ಸೋಲಿಸಿತ್ತು. ಇದರ ನಂತರ, ಈ ವರ್ಷದ ಜೂನ್‌ನಲ್ಲಿ ನಡೆದ ICC ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ಭಾರತವನ್ನು ಸೋಲಿಸಿತು.

ಈ ಬಾರಿ ಭಾರತವನ್ನು ತವರಿನಲ್ಲಿ ಎದುರಿಸುತ್ತಿರುವುದು ನ್ಯೂಜಿಲೆಂಡ್​ಗೆ ನುಂಗಲಾರದ ತುತ್ತಾಗಿದೆ. ಟಿ20 ಸರಣಿಯಲ್ಲಿ ಕಿವೀಸ್ ತಂಡ ಮೂರೂ ಪಂದ್ಯಗಳಲ್ಲಿ ಸೋತು ಮಣ್ಣು ಮುಕಿದ್ದು, ಇದೀಗ ಟೆಸ್ಟ್​ನಲ್ಲೂ ತನ್ನ ಮುಂದಿರುವ ಸವಾಲು ಕಡಿಮೆಯೇನಲ್ಲ. ಟೆಸ್ಟ್‌ನಲ್ಲಿ ಈ ಎರಡು ತಂಡಗಳ ಅಂಕಿಅಂಶಗಳು ಪರಸ್ಪರರ ವಿರುದ್ಧ ಹೇಗೆ ಕಾರ್ಯನಿರ್ವಹಿಸಿವೆ ಎಂಬುದನ್ನು ನೋಡೋಣ.

ಭಾರತದ ಮೇಲುಗೈ ಉಭಯ ತಂಡಗಳ ನಡುವಿನ ಒಟ್ಟು ಟೆಸ್ಟ್ ಪಂದ್ಯಗಳ ಅಂಕಿಅಂಶಗಳನ್ನು ಗಮನಿಸಿದರೆ, ಈ ಎರಡು ತಂಡಗಳ ನಡುವೆ 60 ಟೆಸ್ಟ್ ಪಂದ್ಯಗಳು ನಡೆದಿವೆ. ಮೊದಲ ಟೆಸ್ಟ್ ಪಂದ್ಯವನ್ನು 1955-56 ರಲ್ಲಿ ಭಾರತದಲ್ಲಿ ಆಡಲಾಯಿತು. ಇದರಲ್ಲಿ ಭಾರತ 21 ಪಂದ್ಯಗಳನ್ನು ಗೆದ್ದಿದ್ದು, ನ್ಯೂಜಿಲೆಂಡ್ 13 ಪಂದ್ಯಗಳನ್ನು ಗೆದ್ದಿದೆ. 26 ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ. ಮತ್ತೊಂದೆಡೆ, ನಾವು ಭಾರತದಲ್ಲಿ ಆಡಿದ ಟೆಸ್ಟ್ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಎರಡೂ ತಂಡಗಳು ಒಟ್ಟು 34 ಟೆಸ್ಟ್ ಪಂದ್ಯಗಳನ್ನು ಆಡಿವೆ ಮತ್ತು ಭಾರತವು 16 ಗೆದ್ದಿದೆ ಮತ್ತು ಅಷ್ಟೇ ಸಂಖ್ಯೆಯ ಪಂದ್ಯಗಳನ್ನು ಡ್ರಾ ಮಾಡಿದೆ.

ಇದು ಕಳೆದ ಐದು ಪಂದ್ಯಗಳ ಸ್ಥಿತಿ ಕಳೆದ ಐದು ಪಂದ್ಯಗಳನ್ನು ಗಮನಿಸಿದರೆ ಇದರಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದೆ. ಇಲ್ಲಿ ಕಿವೀಸ್ ತಂಡ 3-2 ಮುನ್ನಡೆಯಲ್ಲಿದೆ. ಉಭಯ ತಂಡಗಳ ನಡುವಿನ ಕೊನೆಯ ಟೆಸ್ಟ್ ಪಂದ್ಯವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನಡೆಯಿತು. ಅಲ್ಲಿ ನ್ಯೂಜಿಲೆಂಡ್ ಗೆದ್ದಿತ್ತು. ಇದಕ್ಕೂ ಮುನ್ನ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ 0-2 ಅಂತರದಲ್ಲಿ ಸೋತಿತ್ತು. ಈ ಸರಣಿಯನ್ನು 2019-2020 ರಲ್ಲಿ ಆಡಲಾಯಿತು. ಇದಕ್ಕೂ ಮುನ್ನ ಎರಡೂ ತಂಡಗಳು 2016ರಲ್ಲಿ ಮುಖಾಮುಖಿಯಾಗಿದ್ದವು. ನಂತರ ಕಿವೀಸ್ ತಂಡ ಭಾರತ ಪ್ರವಾಸದಲ್ಲಿತ್ತು. ಈ ಪ್ರವಾಸದಲ್ಲಿ ಭಾರತವು ನ್ಯೂಜಿಲೆಂಡ್ ಅನ್ನು ಸೋಲಿಸಿತ್ತು.

ಇದನ್ನೂ ಓದಿ:India vs New Zealand: ಕಿವೀಸ್ ಕಿವಿ ಹಿಂಡಿದ ರೋಹಿತ್ ಪಡೆ: ಭಾರತೀಯರ ಮಾರಕ ದಾಳಿಗೆ ದಂಗಾದ ನ್ಯೂಜಿಲೆಂಡ್

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ