IPL 2022: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ! IPL 2022 ಯಾವಾಗ ಪ್ರಾರಂಭ ಗೊತ್ತಾ? ಇಲ್ಲಿದೆ ವಿವರ
IPL 2022: ಮೆಗಾ ಟೂರ್ನಮೆಂಟ್ ಭಾರತದಲ್ಲಿ ಏಪ್ರಿಲ್ 2, 2022 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ಸುದ್ದಿ. ಮುಂದಿನ ವರ್ಷದ 15ನೇ ಆವೃತ್ತಿಯ ಐಪಿಎಲ್ ವೇಳಾಪಟ್ಟಿ ಅಂತಿಮಗೊಂಡಿದೆಯಂತೆ. ಮೆಗಾ ಟೂರ್ನಮೆಂಟ್ ಭಾರತದಲ್ಲಿ ಏಪ್ರಿಲ್ 2, 2022 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಜೂನ್ 4 ಅಥವಾ 5 ರಂದು ಐಪಿಎಲ್ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ.ಈ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು ಒಟ್ಟು 74 ಪಂದ್ಯಗಳು ನಡೆಯಲಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಬಿಸಿಸಿಐನಿಂದ ಅಧಿಕೃತ ಪ್ರಕಟಣೆಗಾಗಿ ನಾವು ಕಾಯಬೇಕಾಗಿದೆ.
IPL 2022 ನಿಯಮಗಳು, ಮೆಗಾ ಆಕ್ಷನ್ ದಿನಾಂಕ ಮುಂದಿನ ವರ್ಷದ ಐಪಿಎಲ್-15ರ ಸೀಸನ್ ಪ್ರೇಕ್ಷಕರಿಗೆ ಡಬಲ್ ಮನರಂಜನೆ ನೀಡಲಿದೆ. ಈಗಿರುವ 8 ತಂಡಗಳ ಜೊತೆಗೆ ಎರಡು ಹೊಸ ತಂಡಗಳು ಬರುವುದರಿಂದ ಟೂರ್ನಿ ಇನ್ನಷ್ಟು ರೋಚಕವಾಗಲಿದೆ. ಸೀಸನ್ ಆರಂಭಕ್ಕೂ ಮುನ್ನ ಮೆಗಾ ಆಕ್ಷನ್ ಕೂಡ ನಡೆಯಲಿದೆ. ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳು ನಾಲ್ಕು ಆಟಗಾರರನ್ನು ಉಳಿಸಿಕೊಳ್ಳುತ್ತವೆ. ಫ್ರಾಂಚೈಸಿಯು ನವೆಂಬರ್ 31 ರಂದು ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಎರಡು ಹೊಸ ತಂಡಗಳು ನಂತರ ಬಿಡುಗಡೆಯಾದ ಪಟ್ಟಿಯಿಂದ ಮೂರು ಆಟಗಾರರನ್ನು ಅಥವಾ ಡಿಸೆಂಬರ್ 25 ರೊಳಗೆ ಕ್ರಮದಲ್ಲಿರುವ ಮೂವರನ್ನು ಆಯ್ಕೆ ಮಾಡುತ್ತವೆ.
ಇತ್ತೀಚೆಗೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಐಪಿಎಲ್ ಭಾರತಕ್ಕೆ ಮರಳುತ್ತಿದೆ ಎಂದು ಹೇಳಿದರು. 15ನೇ ಸೀಸನ್ ಭಾರತದಲ್ಲಿಯೇ ನಡೆಯಲಿದ್ದು, ಈ ಬಾರಿ 2 ಹೊಸ ತಂಡಗಳು ಕೂಡ ಮೈದಾನಕ್ಕಿಳಿಯಲಿರುವ ಕಾರಣ ಈ ಬಾರಿಯ ಟೂರ್ನಿ ಹೆಚ್ಚು ಮೋಜಿನದ್ದಾಗಿದೆ. ಇದೀಗ ಮೆಗಾ ಹರಾಜು ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ತಂಡಗಳು ಹೊಚ್ಚಹೊಸದಾಗಿ ಕಾಣಲಿವೆ. ಜನವರಿ ಮೊದಲ ವಾರದಲ್ಲಿ ಐಪಿಎಲ್ ಮೆಗಾ ಆಕ್ಷನ್ ಆತಿಥ್ಯ ವಹಿಸುವ ಸಾಧ್ಯತೆಯಿದೆ ಎಂದು ಪ್ರಮುಖ ರಾಷ್ಟ್ರೀಯ ಕ್ರೀಡಾ ಮಾಧ್ಯಮ ‘ಇನ್‌ಸೈಡ್ ಸ್ಪೋರ್ಟ್’ ವರದಿ ಮಾಡಿದೆ. ಈ ಮಹಾ ಘಟನೆ ಯಾವಾಗ? ಎಲ್ಲಿ ನಡೆಯುತ್ತಿದೆ ಎಂದು ತಿಳಿಯಬೇಕು. ಆದಾಗ್ಯೂ, ಆಕ್ಷನ್ ಮತ್ತು ಐಪಿಎಲ್ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ ಹಾಟ್ ಸ್ಟಾರ್ ಅಪ್ಲಿಕೇಶನ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.
ಇದನ್ನೂ ಓದಿ:AB de Villiers: ಐಪಿಎಲ್ನಲ್ಲಿ ಎಲ್ಲರನ್ನೂ ಬೆರಗುಗೊಳಿಸಿದ ಎಬಿಡಿಯ 5 ಅದ್ಭುತ ಇನ್ನಿಂಗ್ಸ್ಗಳಿವು..!