Virat Kohli: ಪಾಕ್ ನಾಯಕನ ದಾಖಲೆ ಉಡೀಸ್ ಮಾಡ್ತಾರ ವಿರಾಟ್: ಒಂದಲ್ಲ ಎರಡಲ್ಲ ಮೂರು ದಾಖಲೆ ಮೇಲೆ ಕೊಹ್ಲಿ ಕಣ್ಣು

India vs New Zealand, T20 World Cup: ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿ ನಾಯಕನಾಗಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತನ್ನ ಖಾತೆಗೆ ಮತ್ತೆ ಸೇರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸದ್ಯ ಮೊದಲ ಸ್ಥಾನದಲ್ಲಿ ಪಾಕ್ ನಾಯಕ ಬಾಬರ್ ಅಜಾಮ್ ಅವರಿದ್ದಾರೆ.

Virat Kohli: ಪಾಕ್ ನಾಯಕನ ದಾಖಲೆ ಉಡೀಸ್ ಮಾಡ್ತಾರ ವಿರಾಟ್: ಒಂದಲ್ಲ ಎರಡಲ್ಲ ಮೂರು ದಾಖಲೆ ಮೇಲೆ ಕೊಹ್ಲಿ ಕಣ್ಣು
Virat Kohli India vs New Zealand
Follow us
TV9 Web
| Updated By: Vinay Bhat

Updated on: Oct 31, 2021 | 9:36 AM

ಐಸಿಸಿ ಟಿ-20 ವಿಶ್ವಕಪ್​​ನ (ICC T20 World Cup) ಸೂಪರ್​​​​-12ರ (Super 12) ಗ್ರೂಪ್​ 2ರಲ್ಲಿಂದು ಹೈವೋಲ್ಟೇಜ್ ಕದನ ನಡೆಯಲಿದೆ. ವಿಶ್ವ ಕ್ರಿಕೆಟ್​ನ ಬಲಿಷ್ಠ ತಂಡಗಳಾದ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand)​ ಮುಖಾಮುಖಿಯಾಗುತ್ತಿವೆ. ಸೆಮಿಫೈನಲ್​ ಹಾದಿ ಸುಗಮಗೊಳಿಸುವ ಉದ್ದೇಶದಿಂದ ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಈಗಾಗಲೇ ಎರಡು ತಂಡಗಳು ಪಾಕ್ (Pakistan)​ ವಿರುದ್ಧ ಆಡಿರುವ ಪಂದ್ಯದಲ್ಲಿ ಸೋಲು ಕಂಡಿದ್ದರಿಂದ ಗೆಲುವಿನ ಖಾತೆ ತೆರೆಯುವ ಪ್ಲಾನ್​ನಲ್ಲಿದೆ. ಇದರ ನಡುವೆ ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಹೊಸ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ. ಅದು ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ದಾಖಲೆಯ ಸನಿಹದಲ್ಲಿದ್ದಾರೆ. ಇಂದಿನ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ದಾಖಲೆ ನಿರ್ಮಿಸುತ್ತಾರ ಎಂಬುದು ನೋಡಬೇಕಿದೆ.

ಮೊದಲನೇಯದಾಗಿ ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿ ನಾಯಕನಾಗಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತನ್ನ ಖಾತೆಗೆ ಮತ್ತೆ ಸೇರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸದ್ಯ ಮೊದಲ ಸ್ಥಾನದಲ್ಲಿ ಪಾಕ್ ನಾಯಕ ಬಾಬರ್ ಅಜಾಮ್ ಅವರಿದ್ದು, ಇವರು 26 ಟಿ20 ಇನ್ನಿಂಗ್ಸ್​ಗಳಲ್ಲಿ 13 ಹಾಫ್ ಸೆಂಚುರಿ ಗಳಿಸಿದ್ದಾರೆ. ಇತ್ತ ಕೊಹ್ಲಿ 44 ಇನ್ನಿಂಗ್ಸ್​ಗಳಲ್ಲಿ 13 ಅರ್ಧಶತಕ ಬಾರಿಸಿದ್ದಾರೆ. ಬಾಬರ್ ಕಳೆದ ಪಂದ್ಯದಲ್ಲಷ್ಟೆ ಕೊಹ್ಲಿ ಖಾತೆಯಲ್ಲಿದ್ದ ಈ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಸದ್ಯ ಕೊಹ್ಲಿಗೆ ಈ ದಾಖಲೆಯನ್ನ ಮತ್ತೆ ತನ್ನ ಹೆಸರಿಗೆ ಸೇರಿಸುವ ಅವಕಾಶವಿದೆ.

ಇನ್ನು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ದಾಖಲೆಯನ್ನು ಕೊಹ್ಲಿ ಮಾಡುವ ಸನಿಹದಲ್ಲಿದ್ದಾರೆ. ಸದ್ಯ ಮೊದಲ ಸ್ಥಾನದಲ್ಲಿ ಐರ್ಲೆಂಡ್ ತಂಡದ ಪಿಆರ್ ಸ್ಟಿರ್ಲಿಂಗ್ ಅವರಿದ್ದು, ಇವರು 91 ಇನ್ನಿಂಗ್ಸ್​ಗಳಲ್ಲಿ 295 ಫೋರ್ ಬಾರಿಸಿದ್ದಾರೆ. ಕೊಹ್ಲಿ 85 ಇನ್ನಿಂಗ್ಸ್​ನಲ್ಲಿ 290 ಬೌಂಡರಿ ಸಿಡಿಸಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್ 6 ಬೌಂಡರಿ ಚಚ್ಚಿದರೆ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಫೋರ್ ಬಾರಿಸಿದ ಬ್ಯಾಟರ್ ಎಂಬ ಸಾಧನೆ ಮಾಡಲಿದ್ದಾರೆ.

ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್​ನಲ್ಲಿ 100 ಸಿಕ್ಸರ್ ಸಿಡಿಸುವ ಸನಿಹದಲ್ಲಿದ್ದಾರೆ. ಟೀಮ್ ಇಂಡಿಯಾ ನಾಯಕ ಖಾತೆಯಲ್ಲಿ ಸದ್ಯ 91 ಸಿಕ್ಸರ್​ಗಳಿವೆ. ಕೊಹ್ಲಿ ಸಿಕ್ಸರ್​ಗಳ ಸಂಖ್ಯೆ ಮೂರಂಕಿ ದಾಟಿದರೆ ಮಾರ್ಟಿನ್ ಗಪ್ಟಿಲ್, ರೋಹಿತ್ ಶರ್ಮಾ, ಕ್ರಿಸ್ ಗೇಲ್, ಇಯಾನ್ ಮಾರ್ಗನ್ ಜೊತೆ ವಿಶೇಷ ಸ್ಥಾನ ಹಂಚಿಕೊಳ್ಳಲಿದ್ದಾರೆ.

ಅಲ್ಲದೆ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡ ಇದುವರೆಗೂ ನ್ಯೂಜಿಲೆಂಡ್ ಎದುರು ಗೆದ್ದಿಲ್ಲ, ಅಲ್ಲದೆ, ಕಳೆದ 18 ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಕಿವೀಸ್ ತಂಡಕ್ಕೆ ಶರಣಾಗುತ್ತಾ ಬಂದಿರುವ ಭಾರತ ತಂಡ ಗೆಲುವಿನ ಬರ ಎದುರಿಸುತ್ತಿದೆ. ಇದೀಗ ಮಹತ್ವದ ಪಂದ್ಯದಲ್ಲಿ ಗೆಲುವಿನೊಂದಿಗೆ ಐತಿಹಾಸಿಕ ಗೆಲುವು ಕಾಣುತ್ತಾ ನೋಡಬೇಕಿದೆ.

India vs New Zealand: ಭಾರತ- ನ್ಯೂಜಿಲೆಂಡ್ ನಡುವೆ ಇಂದು ಹೈವೋಲ್ಟೇಜ್ ಪಂದ್ಯ: ಐತಿಹಾಸಿಕ ಗೆಲುವಿನತ್ತ ಕೊಹ್ಲಿ ಕಣ್ಣು

Jos Buttler: ಬಟ್ಲರ್ ಸ್ಫೋಟಕ ಆಟಕ್ಕೆ ನಲುಗಿದ ಆಸ್ಟ್ರೇಲಿಯಾ: ಇಂಗ್ಲೆಂಡ್ ಸೆಮಿ ಫೈನಲ್ ಹಾದಿ ಖಚಿತ

(India vs New Zealand Virat Kohli all set to create a new three records in Today IND vs NZ T20 World Cup Match)

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್