Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ Final Highlights: ಭಾರತದ ಮುಡಿಗೆ 3ನೇ ಚಾಂಪಿಯನ್ಸ್ ಟ್ರೋಫಿ ಕಿರೀಟ

ಪೃಥ್ವಿಶಂಕರ
|

Updated on:Mar 09, 2025 | 10:23 PM

India vs New Zealand Champions Trophy 2025 Final Highlights in Kannada: ಟೀಮ್ ಇಂಡಿಯಾ 2025 ರ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ, ಭಾರತ ತಂಡವು 9 ತಿಂಗಳೊಳಗೆ ಎರಡನೇ ಟ್ರೋಫಿಯನ್ನು ಎತ್ತಿ ಹಿಡಿದಿದೆ. 2024 ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ನಂತರ, ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 12 ವರ್ಷಗಳ ನಂತರ ಮತ್ತೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು.

IND vs NZ Final Highlights: ಭಾರತದ ಮುಡಿಗೆ 3ನೇ ಚಾಂಪಿಯನ್ಸ್ ಟ್ರೋಫಿ ಕಿರೀಟ
Champions Trophy 2025

ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2025 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ತೀರ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಬಲಿಷ್ಠ ಕಿವೀಸ್ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿದ ರೋಹಿತ್ ಪಡೆ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 7 ವಿಕೆಟ್‌ಗಳನ್ನು ಕಳೆದುಕೊಂಡು 251 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಸುಲಭವಾಗಿ ಗೆಲುವಿನ ದಡ ಮುಟ್ಟಿತು.

LIVE NEWS & UPDATES

The liveblog has ended.
  • 09 Mar 2025 10:17 PM (IST)

    IND vs NZ 2025 Final: ಚಾಂಪಿಯನ್ ಭಾರತ

    ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. 12 ವರ್ಷಗಳ ನಂತರ ಟೀಮ್ ಇಂಡಿಯಾ ಈ ಟೂರ್ನಿಯನ್ನು ಗೆದ್ದಿದೆ. ಗೆಲ್ಲಲು 252 ರನ್‌ಗಳ ಗುರಿ ಪಡೆದ ಭಾರತ ಇನ್ನೊಂದು ಓವರ್‌ ಬಾಕಿ ಇರುವಂತೆಯೇ ಗುರಿ ಸಾಧಿಸಿತು. ಭಾರತದ ಗೆಲುವಿನ ನಾಯಕ ರೋಹಿತ್ ಶರ್ಮಾ, 83 ಎಸೆತಗಳಲ್ಲಿ 76 ರನ್ ಗಳಿಸಿದರು. ಅಯ್ಯರ್ ಕೂಡ 48 ರನ್‌ಗಳ ಇನ್ನಿಂಗ್ಸ್ ಆಡಿದರು. ಕೆಎಲ್ ರಾಹುಲ್ 34 ರನ್ ಗಳಿಸಿ ಅಜೇಯರಾಗುಳಿದರು. ಬೌಲಿಂಗ್​ನಲ್ಲಿ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.

  • 09 Mar 2025 09:52 PM (IST)

    IND vs NZ 2025 Final: ಹಾರ್ದಿಕ್ ಪಾಂಡ್ಯ ಔಟ್

    ಹಾರ್ದಿಕ್ ಪಾಂಡ್ಯ ಕೆಟ್ಟ ಹೊಡೆತ ಆಡುವ ಮೂಲಕ ವಿಕೆಟ್ ಕಳೆದುಕೊಂಡರು. ಕೈಲ್ ಜೇಮಿಸನ್ ವಿಕೆಟ್ ಪಡೆದರು. ಪಾಂಡ್ಯ ತುಂಬಾ ಕೆಟ್ಟ ಹೊಡೆತ ಆಡಿದರು.

  • 09 Mar 2025 09:47 PM (IST)

    IND vs NZ 2025 Final: 18 ಎಸೆತಗಳಲ್ಲಿ 12 ರನ್‌ ಬೇಕು

    ವಿಲಿಯಂ ಓ’ರೂರ್ಕೆ ಅವರ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಆ ಓವರ್‌ನಲ್ಲಿ ಒಟ್ಟು 11 ರನ್‌ಗಳು ಬಂದವು. ಭಾರತ ಈಗ ಗೆಲುವಿನ ಹಾದಿಯಲ್ಲಿದೆ

  • 09 Mar 2025 09:41 PM (IST)

    IND vs NZ 2025 Final: ಪಾಂಡ್ಯ-ರಾಹುಲ್ಬಿರುಗಾಳಿಯ ಇನ್ನಿಂಗ್ಸ್

    ರಚಿನ್ ರವೀಂದ್ರ ಅವರ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಲಾಂಗ್ ಸಿಕ್ಸರ್ ಬಾರಿಸಿದರು. ಕೆಎಲ್ ರಾಹುಲ್ ಕೂಡ ಬೌಂಡರಿಗಳ ಮೇಲೆ ಬೌಂಡರಿಗಳನ್ನು ಹೊಡೆಯುತ್ತಿದ್ದಾರೆ. ಭಾರತ ಈಗ ಗೆಲುವಿನ ಸನಿಹದಲ್ಲಿದೆ.

  • 09 Mar 2025 09:25 PM (IST)

    IND vs NZ 2025 Final: ಅಕ್ಷರ್ ಪಟೇಲ್ ಔಟ್

    ಅಕ್ಷರ್ ಪಟೇಲ್ 29 ರನ್ ಗಳಿಸಿ ಬ್ರೇಸ್‌ವೆಲ್ ಬೌಲಿಂಗ್​ನಲ್ಲಿ ಔಟಾದರು. ಭಾರತ 205/3

  • 09 Mar 2025 09:08 PM (IST)

    IND vs NZ 2025 Final: ಅಯ್ಯರ್ ಔಟ್

    ಶ್ರೇಯಸ್ ಅಯ್ಯರ್ 48 ರನ್ ಗಳಿಸಿ ಔಟಾದರು. ತುಂಬಾ ಕೆಟ್ಟ ಶಾಟ್ ಆಡಿ ಸ್ಯಾಂಟ್ನರ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು.

  • 09 Mar 2025 08:49 PM (IST)

    IND vs NZ 2025 Final: ಭಾರತದ 150 ರನ್ ಪೂರ್ಣ

    ಗ್ಲೆನ್ ಫಿಲಿಪ್ಸ್ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಬೌಂಡರಿ ಬಾರಿಸಿದರು. ಇದರೊಂದಿಗೆ ಭಾರತ 32.5 ಓವರ್‌ಗಳಲ್ಲಿ 150 ರನ್‌ಗಳನ್ನು ಪೂರ್ಣಗೊಳಿಸಿತು. ಅಯ್ಯರ್ ಈಗ ವೈಯಕ್ತಿಕ ಸ್ಕೋರ್ 30 ತಲುಪಿದ್ದಾರೆ.

  • 09 Mar 2025 08:25 PM (IST)

    IND vs NZ 2025 Final: ರೋಹಿತ್ ಔಟ್

    ಭಾರತದ ಮೂರನೇ ವಿಕೆಟ್ ಪತನವಾಯಿತು, ರೋಹಿತ್ ಶರ್ಮಾ 76 ರನ್ ಗಳಿಸಿ ಔಟಾದರು. ರವೀಂದ್ರ ಅವರ ಬೌಲಿಂಗ್‌ನಲ್ಲಿ ಅವರು ಸ್ಟಂಪ್ ಔಟ್ ಆದರು.

  • 09 Mar 2025 08:04 PM (IST)

    IND vs NZ 2025 Final: ವಿರಾಟ್ ಕೊಹ್ಲಿ ಔಟ್

    ವಿರಾಟ್ ಕೊಹ್ಲಿ ಫೈನಲ್‌ನಲ್ಲಿ ವಿಫಲರಾದರು, ಕೇವಲ 2 ಎಸೆತಗಳಲ್ಲಿ ಒಂದು ರನ್ ಗಳಿಸಿ ಔಟಾದರು. ಬ್ರೇಸ್‌ವೆಲ್ ವಿಕೆಟ್ ಪಡೆದರು.

  • 09 Mar 2025 07:54 PM (IST)

    IND vs NZ 2025 Final: ಮೊದಲ ವಿಕೆಟ್

    ಟೀಂ ಇಂಡಿಯಾಕ್ಕೆ ಮೊದಲ ಹೊಡೆತ, ಶುಭಮನ್ ಗಿಲ್ 31 ರನ್ ಗಳಿಸಿ ಔಟಾದರು. ಗ್ಲೆನ್ ಫಿಲಿಪ್ಸ್ ಅದ್ಭುತ ಕ್ಯಾಚ್ ಹಿಡಿದರು. ಸ್ಯಾಂಟ್ನರ್ ವಿಕೆಟ್ ಪಡೆದರು.

  • 09 Mar 2025 07:45 PM (IST)

    IND vs NZ 2025 Final: ರೋಹಿತ್-ಗಿಲ್ ಅದ್ಭುತ ಪ್ರದರ್ಶನ

    ರೋಹಿತ್ ಮತ್ತು ಶುಭಮನ್ ಗಿಲ್ ನಡುವೆ ಶತಕದ ಜೊತೆಯಾಟವಿದೆ. ಇಬ್ಬರೂ 17 ಓವರ್‌ಗಳಲ್ಲಿ 100 ರನ್‌ಗಳನ್ನು ಕಲೆಹಾಕಿದ್ದಾರೆ. ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಒಂದು ತಂಡದ ಆರಂಭಿಕರು ಶತಕದ ಜೊತೆಯಾಟವಾಡಿದಾಂತ್ತಾಗಿದೆ.

  • 09 Mar 2025 07:38 PM (IST)

    IND vs NZ 2025 Final: ರೋಹಿತ್ ಅರ್ಧಶತಕ

    ರೋಹಿತ್ ಶರ್ಮಾ 41 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಐಸಿಸಿ ಫೈನಲ್‌ನಲ್ಲಿ ಅರ್ಧಶತಕ ಗಳಿಸಿದರು. ಅಲ್ಲದೆ ಈ ಟೂರ್ನಿಯಲ್ಲಿ ಇದು ರೋಹಿತ್ ಅವರ ಮೊದಲ ಅರ್ಧಶತಕವಾಗಿದೆ.

  • 09 Mar 2025 07:20 PM (IST)

    IND vs NZ 2025 Final: 10 ಓವರ್‌ಗಳಲ್ಲಿ ಸ್ಕೋರ್ 63

    10 ಓವರ್‌ಗಳ ನಂತರ ಭಾರತದ ಸ್ಕೋರ್ 63 ರನ್‌ಗಳು. ಈ ಫೈನಲ್‌ನಲ್ಲಿ ಟೀಮ್ ಇಂಡಿಯಾ ಗೆಲುವಿನತ್ತ ಸಾಗುತ್ತಿದೆ. ಅಂದಹಾಗೆ, ರೋಹಿತ್ ಅರ್ಧಶತಕಕ್ಕೆ ಕೇವಲ ಒಂದು ರನ್ ದೂರದಲ್ಲಿದ್ದಾರೆ.

  • 09 Mar 2025 07:14 PM (IST)

    IND vs NZ 2025 Final: 50 ರನ್ ಪೂರ್ಣ

    ಭಾರತ ತಂಡ 7.2 ಓವರ್‌ಗಳಲ್ಲಿ ಐವತ್ತರ ಗಡಿ ತಲುಪಿತು. ನಾಥನ್ ಸ್ಮಿತ್ ಎಸೆತದಲ್ಲಿ ರೋಹಿತ್ ಲಾಂಗ್ ಸಿಕ್ಸರ್ ಬಾರಿಸಿದರು. ಇದು ಇನ್ನಿಂಗ್ಸ್‌ನ ಮೂರನೇ ಸಿಕ್ಸರ್ ಆಗಿದೆ.

  • 09 Mar 2025 06:55 PM (IST)

    IND vs NZ 2025 Final: 2 ಬೌಂಡರಿ

    ವಿಲಿಯಂ ಓ’ರೂರ್ಕೆ ಅವರ ಓವರ್‌ನಲ್ಲಿ ರೋಹಿತ್ ಶರ್ಮಾ ಎರಡು ಬೌಂಡರಿಗಳನ್ನು ಬಾರಿಸಿದರು. ಭಾರತ 2 ಓವರ್‌ಗಳಲ್ಲಿ 22 ರನ್ ಗಳಿಸಿತು. ಭಾರತಕ್ಕೆ ವೇಗದ ಆರಂಭ

  • 09 Mar 2025 06:55 PM (IST)

    IND vs NZ 2025 Final: ರೋಹಿತ್ ಅದ್ಭುತ ಆರಂಭ

    ರೋಹಿತ್ ಶರ್ಮಾ ಸಿಕ್ಸರ್ ಮೂಲಕ ತಮ್ಮ ಖಾತೆ ತೆರೆದರು. ಜೇಮೀಸನ್ ಅವರ ಎರಡನೇ ಎಸೆತದಲ್ಲಿ ಲಾಂಗ್ ಸಿಕ್ಸ್.

  • 09 Mar 2025 06:02 PM (IST)

    IND vs NZ 2025 Final: 252 ರನ್ ಗುರಿ

    2025 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ಭಾರತಕ್ಕೆ 252 ರನ್‌ಗಳ ಗುರಿಯನ್ನು ನೀಡಿದೆ.

  • 09 Mar 2025 05:49 PM (IST)

    IND vs NZ 2025 Final: ಡ್ಯಾರಿಲ್ ಮಿಚೆಲ್ ಔಟ್

    ಮೊಹಮ್ಮದ್ ಶಮಿ ಅವರ ಓವರ್‌ನಲ್ಲಿ ಡ್ಯಾರಿಲ್ ಮಿಚೆಲ್ ಸತತ ಎರಡು ಬೌಂಡರಿಗಳನ್ನು ಬಾರಿಸಿದರು ಆದರೆ ಮೂರನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಕಿವೀಸ್ ಬ್ಯಾಟ್ಸ್‌ಮನ್ 63 ರನ್ ಗಳಿಸಿ ಔಟಾದರು.

  • 09 Mar 2025 05:35 PM (IST)

    IND vs NZ 2025 Final: ಮಿಚೆಲ್ ಅರ್ಧಶತಕ

    ಡ್ಯಾರಿಲ್ ಮಿಚೆಲ್ 91 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 11 ವರ್ಷಗಳಲ್ಲಿ ಮೊದಲ ಬಾರಿಗೆ ಕಿವೀಸ್ ಬೌಲರ್ ಒಬ್ಬರು ಇಷ್ಟು ನಿಧಾನಗತಿಯ ಏಕದಿನ ಅರ್ಧಶತಕ ಗಳಿಸಿದ್ದಾರೆ.

  • 09 Mar 2025 05:08 PM (IST)

    IND vs NZ 2025 Final: ನ್ಯೂಜಿಲೆಂಡ್‌ ಐದನೇ ವಿಕೆಟ್ ಪತನ

    38ನೇ ಓವರ್‌ನಲ್ಲಿ ನ್ಯೂಜಿಲೆಂಡ್ ಐದನೇ ವಿಕೆಟ್ ಕಳೆದುಕೊಂಡಿತು. ವರುಣ್ ಚಕ್ರವರ್ತಿ ಗ್ಲೆನ್ ಫಿಲಿಪ್ಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಪ್ರಸ್ತುತ ಡ್ಯಾರಿಲ್ ಮಿಚೆಲ್ ಮತ್ತು ಮೈಕೆಲ್ ಬ್ರೇಸ್‌ವೆಲ್ ಕ್ರೀಸ್‌ನಲ್ಲಿದ್ದಾರೆ. 38 ಓವರ್‌ಗಳ ನಂತರ ಕಿವೀಸ್ 5 ವಿಕೆಟ್‌ಗಳಿಗೆ 165 ರನ್ ಗಳಿಸಿದೆ.

  • 09 Mar 2025 05:02 PM (IST)

    IND vs NZ 2025 Final: ಮತ್ತೊಂದು ಕ್ಯಾಚ್ ಮಿಸ್

    ಮತ್ತೊಮ್ಮೆ ಕ್ಯಾಚ್ ಮಿಸ್ ಆಯಿತು. ಈ ಬಾರಿ ಶುಭಮನ್ ಗಿಲ್ ತಪ್ಪು ಮಾಡಿದರು. ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಗ್ಲೆನ್ ಫಿಲಿಪ್ಸ್ ಕ್ಯಾಚ್ ಅನ್ನು ಶುಭಮನ್ ಗಿಲ್ ಕೈಬಿಟ್ಟರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟಿದೆ.

  • 09 Mar 2025 04:40 PM (IST)

    IND vs NZ 2025 Final: ಫಿಲಿಪ್ಸ್ ಅದ್ಭುತ ಬ್ಯಾಟಿಂಗ್

    ಕುಲ್ದೀಪ್ ಯಾದವ್ ಅವರ ಕೊನೆಯ ಎಸೆತದಲ್ಲಿ ಗ್ಲೆನ್ ಫಿಲಿಪ್ಸ್ ಸಿಕ್ಸರ್ ಬಾರಿಸಿದರು. 81 ಎಸೆತಗಳ ನಂತರ ಸಿಕ್ಸರ್ ಬಂತು.

  • 09 Mar 2025 04:38 PM (IST)

    IND vs NZ 2025 Final: 4ನೇ ವಿಕೆಟ್

    24ನೇ ಓವರ್‌ನಲ್ಲಿ ಭಾರತಕ್ಕೆ ನಾಲ್ಕನೇ ವಿಕೆಟ್ ಸಿಕ್ಕಿದೆ. ರವೀಂದ್ರ ಜಡೇಜಾ, ಟಾಮ್ ಲ್ಯಾಥಮ್ ಅವರನ್ನು ಔಟ್ ಮಾಡಿದ್ದಾರೆ. ಲ್ಯಾಥಮ್ ಕೇವಲ 14 ರನ್ ಗಳಿಸಿ ಔಟಾದರು.

  • 09 Mar 2025 04:37 PM (IST)

    IND vs NZ 2025 Final:100 ರನ್ ಪೂರ್ಣ

    ಕಳೆದ 5 ಓವರ್‌ಗಳಲ್ಲಿ ನ್ಯೂಜಿಲೆಂಡ್ ತಂಡವು ಯಾವುದೇ ಬೌಂಡರಿ ಬಾರಿಸಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ 20ನೇ ಓವರ್‌ನಲ್ಲಿ 100 ರನ್‌ಗಳನ್ನು ಪೂರ್ಣಗೊಳಿಸಿತು.

  • 09 Mar 2025 03:52 PM (IST)

    IND vs NZ 2025 Final: 15 ಓವರ್‌ಗಳ ಅಂತ್ಯ

    15 ಓವರ್‌ಗಳ ಅಂತ್ಯಕ್ಕೆ ನ್ಯೂಜಿಲೆಂಡ್ ಮೂರು ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದೆ. ಪ್ರಸ್ತುತ, ಡ್ಯಾರಿಲ್ ಮಿಚೆಲ್ ಒಂಬತ್ತು ರನ್ ಮತ್ತು ಟಾಮ್ ಲ್ಯಾಥಮ್ ಎರಡು ರನ್‌ ಬಾರಿಸಿ ಆಡುತ್ತಿದ್ದಾರೆ.

  • 09 Mar 2025 03:39 PM (IST)

    IND vs NZ 2025 Final: ಕೇನ್ ಔಟ್

    ನ್ಯೂಜಿಲೆಂಡ್ 75 ರನ್‌ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿದೆ.11 ರನ್ ಗಳಿಸಿ ಕೇನ್ ವಿಲಿಯಮ್ಸನ್ ಔಟ್ ಆದರು. ಕುಲ್ದೀಪ್ ತಮ್ಮದೇ ಎಸೆತದಲ್ಲಿ ವಿಲಿಯಮ್ಸನ್ ಅವರ ಸುಲಭ ಕ್ಯಾಚ್ ಪಡೆದರು.

  • 09 Mar 2025 03:27 PM (IST)

    IND vs NZ 2025 Final: 2ನೇ ವಿಕೆಟ್ ಪತನ

    ಕುಲ್ದೀಪ್ ಯಾದವ್ ತಮ್ಮ ಮೊದಲ ಓವರ್‌ನ ಮೊದಲ ಎಸೆತದಲ್ಲೇ ರಚಿನ್ ರವೀಂದ್ರ ಅವರನ್ನು ಬೌಲ್ಡ್ ಮಾಡಿದರು. ರಚಿನ್ 29 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರು.

  • 09 Mar 2025 03:25 PM (IST)

    IND vs NZ 2025 Final: ಯಂಗ್ ಔಟ್

    ಕೊನೆಗೂ ವರುಣ್ ಚಕ್ರವರ್ತಿ ವಿಕೆಟ್ ಪಡೆದರು. ವಿಲ್ ಯಂಗ್ 15 ರನ್ ಗಳಿಸಿ ಔಟಾದರು.

  • 09 Mar 2025 03:24 PM (IST)

    IND vs NZ 2025 Final: ಅರ್ಧಶತಕ

    ನ್ಯೂಜಿಲೆಂಡ್ ಕೇವಲ 7 ಓವರ್‌ಗಳಲ್ಲಿ 50 ರನ್ ಗಳಿಸಿದೆ. ರಚಿನ್ ರವೀಂದ್ರ ಮತ್ತು ವಿಲ್ ಯಂಗ್ ಕೇವಲ 42 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಿದೆ,

  • 09 Mar 2025 03:23 PM (IST)

    IND vs NZ 2025 Final: ನ್ಯೂಜಿಲೆಂಡ್ ಬ್ಯಾಟಿಂಗ್ ಆರಂಭ

    ಮೊದಲ ಓವರ್‌ನಲ್ಲಿ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ಮಾಡಿದರು. ಮೊದಲ ಓವರ್‌ನಲ್ಲಿ ನಾಲ್ಕು ರನ್‌ಗಳು ಬಂದವು. ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ವಿಲ್ ಯಂಗ್ ತಮ್ಮ ಖಾತೆಯನ್ನು ತೆರೆದರು.

  • 09 Mar 2025 02:12 PM (IST)

    IND vs NZ 2025 Final: ಭಾರತ ತಂಡ

    ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ.

  • 09 Mar 2025 02:11 PM (IST)

    IND vs NZ 2025 Final: ನ್ಯೂಜಿಲೆಂಡ್

    ಮಿಚೆಲ್ ಸ್ಯಾಂಟ್ನರ್ (ನಾಯಕ), ವಿಲ್ ಯಂಗ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಾಮ್ ಲ್ಯಾಥಮ್, ಮೈಕೆಲ್ ಬ್ರೇಸ್‌ವೆಲ್, ಕೈಲ್ ಜೇಮಿಸನ್, ವಿಲ್ ಒ’ರೂರ್ಕ್, ನಾಥನ್ ಸ್ಮಿತ್.

  • 09 Mar 2025 02:05 PM (IST)

    IND vs NZ 2025 Final: ಟಾಸ್ ಗೆದ್ದ ನ್ಯೂಜಿಲೆಂಡ್

    ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.

  • 09 Mar 2025 01:46 PM (IST)

    IND vs NZ Final Live Score: 25 ವರ್ಷಗಳ ನಂತರ ಫೈನಲ್‌ನಲ್ಲಿ ಸ್ಪರ್ಧೆ

    ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 25 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಇದಕ್ಕೂ ಮೊದಲು, ಈ ಎರಡೂ ತಂಡಗಳು 2000 ನೇ ಇಸವಿಯಲ್ಲಿ ಮುಖಾಮುಖಿಯಾಗಿದ್ದವು. ಆಗ ನ್ಯೂಜಿಲೆಂಡ್ ತಂಡ ಗೆದ್ದು ಪ್ರಶಸ್ತಿ ಗೆದ್ದಿತ್ತು.

  • 09 Mar 2025 01:40 PM (IST)

    IND vs NZ Final Live Score: ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ಪಂದ್ಯ

    2025 ರ ಚಾಂಪಿಯನ್ಸ್ ಟ್ರೋಫಿಯ ಪ್ರಶಸ್ತಿ ಹೋರಾಟವು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿದೆ. ಎರಡೂ ತಂಡಗಳು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಪಂದ್ಯದ ಟಾಸ್ ಮಧ್ಯಾಹ್ನ 2:00 ಗಂಟೆಗೆ ನಡೆಯಲಿದ್ದು, ಪಂದ್ಯ ಮಧ್ಯಾಹ್ನ 2:30 ಕ್ಕೆ ಆರಂಭವಾಗಲಿದೆ.

Published On - Mar 09,2025 1:38 PM

Follow us
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!
ಅಯ್ಯೋ ಕರ್ಮವೇ..ನಿಂತ ಕಾರಿನ ನಾಲ್ಕು ಟೈರ್ ಬಿಚ್ಚಿಕೊಂಡು ಹೋದ ಖದೀಮರು!
ಅಯ್ಯೋ ಕರ್ಮವೇ..ನಿಂತ ಕಾರಿನ ನಾಲ್ಕು ಟೈರ್ ಬಿಚ್ಚಿಕೊಂಡು ಹೋದ ಖದೀಮರು!