Asia Cup 2025: ಭಾರತ- ಪಾಕ್ ಫೈನಲ್ ಪಂದ್ಯಕ್ಕೆ ಮೀಸಲು ದಿನವಿದೆಯೇ? ದುಬೈ ಹವಾಮಾನ ಹೇಗಿರಲಿದೆ?

India vs Pakistan Asia Cup 2025 Final: ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಏಷ್ಯಾಕಪ್ 2025 ಫೈನಲ್ ಪಂದ್ಯ ಭಾನುವಾರ ನಡೆಯಲಿದೆ. 41 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಎರಡೂ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಪಂದ್ಯಕ್ಕೆ ಮಳೆ ಅಡ್ಡಿಯಾದಲ್ಲಿ ಮೀಸಲು ದಿನದ ಬಗ್ಗೆ ಗೊಂದಲವಿತ್ತು. ಆದರೆ, ಸೆಪ್ಟೆಂಬರ್ 29 ರ ಸೋಮವಾರವನ್ನು ಮೀಸಲು ದಿನವಾಗಿ ಇರಿಸಲಾಗಿದೆ. ದುಬೈನಲ್ಲಿ ಹವಾಮಾನ ಸ್ಪಷ್ಟವಾಗಿದ್ದು, ಯಾವುದೇ ಮಳೆಯ ಮುನ್ಸೂಚನೆ ಇಲ್ಲ.

Asia Cup 2025: ಭಾರತ- ಪಾಕ್ ಫೈನಲ್ ಪಂದ್ಯಕ್ಕೆ ಮೀಸಲು ದಿನವಿದೆಯೇ? ದುಬೈ ಹವಾಮಾನ ಹೇಗಿರಲಿದೆ?
Ind Vs Pak

Updated on: Sep 27, 2025 | 6:06 PM

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಬಹುನಿರೀಕ್ಷಿತ ಏಷ್ಯಾಕಪ್ 2025 ರ ಫೈನಲ್ (Asia Cup 2025 Final) ಪಂದ್ಯ ಭಾನುವಾರ ನಡೆಯಲಿದೆ. ಒಂದಡೆ ಟೀಂ ಇಂಡಿಯಾ ಅಜೇಯ ತಂಡವಾಗಿ ಫೈನಲ್​ಗೆ ಲಗ್ಗೆ ಇಟ್ಟಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ತಂಡವು ಸೂಪರ್ ಫೋರ್ ಸುತ್ತಿನಲ್ಲಿ ಬಾಂಗ್ಲಾದೇಶವನ್ನು 11 ರನ್ ಗಳಿಂದ ಸೋಲಿಸಿ ಫೈನಲ್​ಗೆ ಅರ್ಹತೆ ಪಡೆದಿದೆ. 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾಕಪ್ ಫೈನಲ್​ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಆದಾಗ್ಯೂ ಈ ಪಂದ್ಯ ಯಾವುದಾದರೂ ಕಾರಣಾಂತರಗಳಿಂದ ನಿಗದಿತ ದಿನದಂದು ನಡೆಯದಿದ್ದರೆ, ಈ ಪಂದಕ್ಕೆ ಮೀಸಲು ದಿನವನ್ನು (Reserve Day) ಇರಿಸಲಾಗಿದೆಯೇ ಎಂಬುದು ಪ್ರಶ್ನೆಯಾಗಿದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.

ಯಾವುದೇ ಅಡೆತಡೆಗಳ್ಳುಂಟಾಗಿಲ್ಲ

ಸೆಪ್ಟೆಂಬರ್ 9 ರಿಂದ ಆರಂಭವಾದ ಏಷ್ಯಾಕಪ್ ಪಂದ್ಯಾವಳಿ ಇಲ್ಲಿಯವರೆಗೆ ಯಾವುದೇ ಅಡೆತಡೆಗಳಿಲ್ಲದೆ ನಡೆದಿದೆ. ಆದರೆ ಮ್ಯಾಚ್ ರೆಫರಿ ವಿವಾದದಿಂದಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ 1 ಗಂಟೆ ತಡವಾಗಿ ನಡೆದಿದ್ದನ್ನು ಬಿಟ್ಟರೆ, ಉಳಿದೆಲ್ಲ ಪಂದ್ಯಗಳು ಸರಿಯಾದ ಸಮಯಕ್ಕೆ ಶುರುವಾಗಿವೆ. ಹಾಗೆಯೇ ಇಡೀ ಪಂದ್ಯಾವಳಿಗೆ ಒಮ್ಮೆಯೂ ಕೂಡ ಮಳೆ ಅಡ್ಡಿಪಡಿಸಿಲ್ಲ. ಹವಾಮಾನ ವರದಿಯ ಪ್ರಕಾರ ಫೈನಲ್ ಪಂದ್ಯಕ್ಕೂ ಯಾವುದೇ ಮಳೆಯ ಮನ್ಸೂಚನೆ ಇಲ್ಲ. ಹಾಗಿದ್ದರೂ ಇನ್ನಿತರೆ ಕಾರಣಗಳಿಂದ ನಿಗದಿತ ದಿನದಂದು ಪಂದ್ಯ ನಡೆಯದಿದ್ದರೆ?

ಏಷ್ಯಾಕಪ್‌ ಫೈನಲ್‌ಗೆ ಮೀಸಲು ದಿನವಿದೆಯೇ?

ಸೆಪ್ಟೆಂಬರ್ 28 ರ ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಯಾವುದೇ ಅಡೆತಡೆಗಳಿಲ್ಲ ಎಂಬ ಸೂಚನೆಯ ಹೊರತಾಗಿಯೂ, ಇತರ ಅಂಶಗಳು ಸಹ ಪಂದ್ಯವನ್ನು ವಿಳಂಬಗೊಳಿಸಬಹುದು. ಹೀಗಾಗಿ ಯಾವುದೇ ಸಂದರ್ಭದಲ್ಲಿ, ಪಂದ್ಯದ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರೆ, ಸೆಪ್ಟೆಂಬರ್ 29 ರ ಸೋಮವಾರವನ್ನು ಮೀಸಲು ದಿನವಾಗಿ ಇರಿಸಲಾಗಿದೆ. ಹೀಗಾಗಿ ನಿಗದಿತ ದಿನದಂದು ಪಂದ್ಯ ಪೂರ್ಣಗೊಳ್ಳದಿದ್ದರೆ, ಮೀಸಲು ದಿನದಂದು ಪಂದ್ಯ ಪೂರ್ಣಗೊಳ್ಳಲಿದೆ.

Asia Cup 2025: ಭಾರತ ಏಷ್ಯಾಕಪ್ ಗೆದ್ದರೆ ಸಿಗುವ ಹಣವೆಷ್ಟು? ಸೋತ ಪಾಕಿಸ್ತಾನಕ್ಕೆ ಸಿಗುವುದೆಷ್ಟು?

ದುಬೈನ ಹವಾಮಾನ ಮುನ್ಸೂಚನೆ ಏನು?

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಫೈನಲ್‌ ಪಂದ್ಯ ನಡೆಯಲಿದೆ. ಈ ದಿನದಂದು ದುಬೈನಲ್ಲಿ ಸ್ಪಷ್ಟ ಹವಾಮಾನ ಇರಲಿದೆ. ಅಂದರೆ ಪಂದ್ಯದ ನಿಗದಿತ ಅವಧಿಯಲ್ಲಿ ಯಾವುದೇ ಮಳೆ ಅಡ್ಡಿಪಡಿಸುವ ನಿರೀಕ್ಷೆಯಿಲ್ಲ. ಆದ್ದರಿಂದ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪಂದ್ಯವನ್ನು ನಿಗದಿತ ದಿನದಂದೇ ವೀಕ್ಷಿಸಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ