India Vs Pakistan, T20 Highlights: ಕೊಹ್ಲಿ ಬೊಂಬಾಟ್ ಬ್ಯಾಟಿಂಗ್; ಪಾಕ್ ಮಣಿಸಿದ ಭಾರತ

TV9 Web
| Updated By: ಪೃಥ್ವಿಶಂಕರ

Updated on:Oct 23, 2022 | 5:40 PM

India Vs Pakistan, T20 world Cup 2022 Highlights: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಅಮೋಘವಾಗಿ ಆರಂಭಿಸಿದೆ.

India Vs Pakistan, T20 Highlights: ಕೊಹ್ಲಿ ಬೊಂಬಾಟ್ ಬ್ಯಾಟಿಂಗ್; ಪಾಕ್ ಮಣಿಸಿದ ಭಾರತ
India Vs Pakistan

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಅಮೋಘವಾಗಿ ಆರಂಭಿಸಿದೆ. ಪಾಕಿಸ್ತಾನ ನೀಡಿದ 160 ರನ್‌ಗಳ ಗುರಿಯನ್ನು ಭಾರತ 6 ವಿಕೆಟ್ ನಷ್ಟದಲ್ಲಿ ಸಾಧಿಸಿತು. ವಿರಾಟ್ ಕೊಹ್ಲಿ 82 ರನ್ ಗಳಿಸಿ ಅಜೇಯರಾಗಿ ಉಳಿದರು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 159 ರನ್ ಗಳಿಸಿತು. ಶಾನ್ ಮಸೂದ್ ಮತ್ತು ಇಫ್ತಿಕರ್ ಅಹ್ಮದ್ ಇಬ್ಬರೂ ಅರ್ಧಶತಕ ಗಳಿಸಿದರು. ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭ ಕಳಪೆಯಾಗಿದ್ದರೂ ಆ ಬಳಿಕ ಕೊಹ್ಲಿ ಹಾಗೂ ಪಾಂಡ್ಯ ತಂಡವನ್ನು ಗೆಲುವಿನ ದಡ ಸೇರಿಸಿದರು.

LIVE NEWS & UPDATES

The liveblog has ended.
  • 23 Oct 2022 05:38 PM (IST)

    ಭಾರತಕ್ಕೆ ಜಯ

    ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಅಮೋಘವಾಗಿ ಆರಂಭಿಸಿದೆ. ಪಾಕಿಸ್ತಾನ ನೀಡಿದ 160 ರನ್‌ಗಳ ಗುರಿಯನ್ನು ಭಾರತ 6 ವಿಕೆಟ್ ನಷ್ಟದಲ್ಲಿ ಸಾಧಿಸಿತು.

  • 23 Oct 2022 04:52 PM (IST)

    ಭಾರತಕ್ಕೆ 5 ಓವರ್‌ಗಳಲ್ಲಿ 60 ರನ್‌ಗಳ ಅಗತ್ಯವಿದೆ

    ಭಾರತದ 100 ರನ್‌ಗಳು ಪೂರ್ಣಗೊಂಡಿದ್ದು, ಇದೀಗ ಭಾರತದ ಗೆಲುವಿಗೆ 5 ಓವರ್‌ಗಳಲ್ಲಿ 60 ರನ್‌ಗಳ ಅಗತ್ಯವಿದೆ. ಕೊಹ್ಲಿ ಮತ್ತು ಪಾಂಡ್ಯ ಕ್ರೀಸ್‌ನಲ್ಲಿ ಫ್ರೀಜ್ ಆಗಿದ್ದಾರೆ. ಸ್ಪರ್ಧೆಯು ಬಹಳ ರೋಚಕವಾಗಿ ಮಾರ್ಪಟ್ಟಿದೆ

  • 23 Oct 2022 04:45 PM (IST)

    ಅರ್ಧ ಶತಕದ ಜೊತೆಯಾಟ

    ಕೊಹ್ಲಿ ಮತ್ತು ಪಾಂಡ್ಯ ಕ್ರೀಸ್‌ನಲ್ಲಿ ನೆಲೆಯೂರಿದ್ದಾರೆ. 40 ಎಸೆತಗಳಲ್ಲಿ ಇಬ್ಬರ ನಡುವಿನ 50 ರನ್‌ಗಳ ಜೊತೆಯಾಟ ಪೂರ್ಣಗೊಂಡಿದೆ. ಇಬ್ಬರೂ ಹೋರಾಟವನ್ನು ಮುಂದುವರೆಸುತ್ತಿದ್ದಾರೆ.

  • 23 Oct 2022 04:37 PM (IST)

    ಒಂದೇ ಓವರ್​ನಲ್ಲಿ 3 ಸಿಕ್ಸ್

    4 ವಿಕೆಟ್ ಉರುಳಿದ ಬಳಿಕ ನಿದಾನಗತಿಯ ಬ್ಯಾಟಿಂಗ್​ಗೆ ಮುಂದಾಗಿದ್ದ ಭಾರತ 12ನೇ ಓವರ್​ನಲ್ಲಿ ಲಯಕ್ಕೆ ಮರಳಿದಂತೆ ತೋರುತ್ತಿದೆ. ಈ ಓವರ್​ನಲ್ಲಿ ಪಾಂಡ್ಯ 2 ಸಿಕ್ಸರ್ ಭಾರಿಸಿದರೆ, ಕೊಹ್ಲಿ ಒಂದು ಸಿಕ್ಸರ್ ಬಾರಿಸಿದರು.

  • 23 Oct 2022 04:35 PM (IST)

    ಭಾರತದ ಅರ್ಧಶತಕ ಪೂರ್ಣ

    11ನೇ ಓವರ್‌ನ ಶಾದಾಬ್ ಖಾನ್ ಮೂರನೇ ಎಸೆತದಲ್ಲಿ ಸಿಂಗಲ್ ರನ್ ಗಳಿಸುವ ಮೂಲಕ ಭಾರತದ 50 ರನ್ ಪೂರ್ಣಗೊಂಡಿತು.

  • 23 Oct 2022 04:33 PM (IST)

    ಮೊದಲ ಸಿಕ್ಸರ್

    ಟೀಂ ಇಂಡಿಯಾದ ಮೊದಲ ಸಿಕ್ಸರ್ ಪಾಂಡ್ಯ ಬ್ಯಾಟ್​ನಿಂದ ಬಂದಿದೆ. 12ನೇ ಓವರ್ ಎಸೆದ ನವಾಜ್ ಅವರ ಮೊದಲ ಎಸೆತವನ್ನು ಪಾಂಡ್ಯ ಡೀಪ್ ಮಿಡ್​ ವಿಕೆಟ್​ನಲ್ಲಿ ಸಿಕ್ಸರ್​ಗಟ್ಟಿದರು.

  • 23 Oct 2022 04:32 PM (IST)

    ಪಾಂಡ್ಯ ಫೋರ್

    11ನೇ ಓವರ್​ನಲ್ಲಿ ಪಾಂಡ್ಯ ಸ್ಟ್ರೈಟ್ ಹಿಟ್ ಮಾಡುವ ಮೂಲಕ ಬೌಂಡರಿ ಬಾರಿಸಿದರು. ಇದು ಪಾಂಡ್ಯ ಅವರ ಮೊದಲ ಬೌಂಡರಿಯಾಗಿದೆ.

  • 23 Oct 2022 04:25 PM (IST)

    10 ಓವರ್ ಆಟ ಮುಕ್ತಾಯ

    10 ಓವರ್​ಗಳ ಆಟ ಮುಗಿದಿದ್ದು, ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲಿಕಿದೆ. ತಂಡದ ಪ್ರಮುಖ 4 ವಿಕೆಟ್​ಗಳು ಉರುಳಿದ್ದು, 10 ಓವರ್​ಗಳಲ್ಲಿ ತಂಡ ಕೇವಲ 45 ರನ್ ಗಳಿಸಿದೆ. ಕೊಹ್ಲಿ ಹಾಗೂ ಪಾಂಡ್ಯ ಬ್ಯಾಟಿಂಗ್​ನಲ್ಲಿದ್ದಾರೆ.

  • 23 Oct 2022 04:14 PM (IST)

    ಅಕ್ಷರ್ ಪಟೇಲ್ ಔಟ್

    7ನೇ ಓವರ್​ ಮೊದಲನೇ ಎಸೆತದಲ್ಲಿ ಅಕ್ಷರ್ ಪಟೇಲ್ ರನೌಟ್ ಆಗಿ ಬಲಿಯಾಗಿದ್ದಾರೆ. ಶಾದಬ್ ಎಸೆದ ಈ ಓವರ್​ನಲ್ಲಿ ಅಕ್ಷರ್ ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಕೊಹ್ಲಿ- ಹಾಗೂ ಅಕ್ಷರ್ ನಡುವೆ ಉಂಟಾದ ಗೊಂದಲದಲ್ಲಿ ಅಕ್ಷರ್ ರನೌಟ್ ಆದರು.

  • 23 Oct 2022 04:08 PM (IST)

    ಪವರ್ ಪ್ಲೇ ಅಂತ್ಯ

    ಪವರ್ ಪ್ಲೇ ಮುಗಿದ್ದಿದ್ದು, ಟೀಂ ಇಂಡಿಯಾ ಈ 6 ಓವರ್​ಗಳಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ತಂಡದ ಖಾತೆಯಲ್ಲಿ ಕೇವಲ 31 ರನ್ ಮಾತ್ರ ಸೇರಿವೆ.

  • 23 Oct 2022 04:04 PM (IST)

    ಸೂರ್ಯ ಬೌಂಡರಿ, ಔಟ್

    6ನೇ ಓವರ್​ನ 2ನೇ ಎಸೆತವನ್ನು ಸೂರ್ಯಕುಮಾರ್ ಮಿಡ್ ವಿಕೆಟ್ ಕಡೆ ಬೌಂಡರಿಗಟ್ಟಿದ್ದಾರೆ. ನಂತರದ ಎಸೆತದಲ್ಲೇ ಸೂರ್ಯ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ಔಟಾದರು. ಭಾರತ 26 ರನ್​ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

  • 23 Oct 2022 03:56 PM (IST)

    ರೋಹಿತ್ ಔಟ್

    4ನೇ ಓವರ್ 2ನೇ ಎಸೆತದಲ್ಲಿ ರೋಹಿತ್ ಫಸ್ಟ್ ಸ್ಲಿಪ್​ಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 23 Oct 2022 03:52 PM (IST)

    3ನೇ ಓವರ್ ಅಂತ್ಯ

    3ನೇ ಓವರ್ ಅಂತ್ಯಕ್ಕೆ ಟೀಂ ಇಂಡಿಯಾ 1 ವಿಕೆಟ್ ಕಳೆದುಕೊಂಡು 10 ರನ್ ಗಳಿಸಿದೆ. ಕೊಹ್ಲಿ 2 ರನ್ ಗಳಿಸಿದ್ದರೆ, ರೋಹಿತ್ 4 ರನ್ ಬಾರಿಸಿದ್ದಾರೆ.

  • 23 Oct 2022 03:47 PM (IST)

    ರಾಹುಲ್ ಔಟ್

    ಆರಂಭಿಕ ರಾಹುಲ್ ಮತ್ತೊಮ್ಮೆ ಪಾಕ್ ವಿರುದ್ಧ ವಿಫಲರಾಗಿದ್ದಾರೆ. 2ನೇ ಓವರ್ ಎಸೆದ ನಸೀಮ್ 5ನೇ ಎಸೆತದಲ್ಲಿ ರಾಹುಲ್ ವಿಕೆಟ್ ಒಪ್ಪಿಸಿದ್ದಾರೆ.

  • 23 Oct 2022 03:37 PM (IST)

    ಭಾರತದ ಬ್ಯಾಟಿಂಗ್ ಆರಂಭ

    ಟೀಂ ಇಂಡಿಯಾ ಪರ ರೋಹಿತ್ ಹಾಗೂ ರಾಹುಲ್ ಕಣಕ್ಕಿಳಿದಿದ್ದಾರೆ. ಪಾಕ್ ಪರ ಆಫ್ರಿದಿ ಬೌಲಿಂಗ್ ದಾಳಿ ಆರಂಭಿಸಿದ್ದಾರೆ.

  • 23 Oct 2022 03:36 PM (IST)

    ಭಾರತಕ್ಕೆ 160 ರನ್‌ಗಳ ಗುರಿ

    ಭುವನೇಶ್ವರ್ ಅವರ ಕೊನೆಯ ಓವರ್‌ನಲ್ಲಿ ಹ್ಯಾರಿಸ್ ರೌಫ್ ಸಿಕ್ಸರ್ ಬಾರಿಸಿದರು. ಬಳಿಕ ಕೂಡ ಕೊನೆಯ ಎಸೆತದಲ್ಲಿ 2 ರನ್ ಸೇರಿಸಿದರು. ಇದರೊಂದಿಗೆ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 159 ರನ್ ಗಳಿಸಿತು. ಭಾರತಕ್ಕೆ 160 ರನ್‌ಗಳ ಗುರಿ ಸಿಕ್ಕಿತು.

  • 23 Oct 2022 03:19 PM (IST)

    ಶಾನ್ ಮಸೂದ್ ಅರ್ಧಶತಕ

    ಭಾರತದ ಕಠಿಣ ದಾಳಿಯ ಮುಂದೆ ಶಾನ್ ಮಸೂದ್ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

  • 23 Oct 2022 03:13 PM (IST)

    ಮಸೂದ್ 2 ಬೌಂಡರಿ

    18ನೇ ಓವರ್ ಎಸೆದ ಶಮಿಯ ಎರಡು ಎಸೆತಗಳನ್ನು ಮಸೂದ್ ಬೌಂಡರಿಗಟ್ಟಿದರು. ಮೊದಲ ಬೌಂಡರಿ ಸ್ಲಿಪ್​ನಲ್ಲಿ ಬೌಂಡರಿಗೊದರೆ, ನಂತರದ ಎಸೆತ ಮಿಡ್​ ಆಫ್​ನಲ್ಲಿ ಬೌಂಡರಿ ತಲುಪಿತು.

  • 23 Oct 2022 03:03 PM (IST)

    7ನೇ ವಿಕೆಟ್ ಪತನ

    17ನೇ ಓವರ್ ಎಸೆದ ಅರ್ಷದೀಪ್ ತಮ್ಮ ಖಾತೆಗೆ 3 ವಿಕೆಟ್ ಹಾಕಿಕೊಂಡಿದ್ದಾರೆ. 17ನೇ ಓವರ್​ನ 4ನೇ ಎಸೆತದಲ್ಲಿ ಆಸೀಫ್ ಕಾರ್ತಿಕ್​ಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 23 Oct 2022 02:57 PM (IST)

    ನವಾಜ್ 2 ಬೌಂಡರಿ, ಔಟ್

    ಹಾರ್ದಿಕ್ ಎಸೆದ 16ನೇ ಓವರ್​ನಲ್ಲಿ 2 ಬೌಂಡರಿ ಬಾರಿಸಿದ ನವಾಜ್ ಅಂತಿಮವಾಗಿ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. 16ನೇ ಓವರ್​ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್ ಕಾರ್ತಿಕ್​ಗೆ ಕ್ಯಾಚಿತ್ತು ನವಾಜ್ ಔಟಾದರು.

  • 23 Oct 2022 02:47 PM (IST)

    ಹಾರ್ದಿಕ್​ಗೆ 2 ವಿಕೆಟ್

    ಶಾದಬ್ ವಿಕೆಟ್ ಬಳಿಕ ಬಂದಿದ್ದ ಹೈದರ್ ಕೂಡ ಕೇವಲ 2 ರನ್​ಗಳಿಗೆ ಸುಸ್ತಾಗಿದ್ದಾರೆ. ಹೈದರ್​ ಕೂಡ ಸಾದಬ್ ರಿತಿಯಲ್ಲಿ ಬಿಗ್ ಶಾಟ್ ಆಡುವ ಯತ್ನ ಮಾಡಿ ಸೂರ್ಯಗೆ ಕ್ಯಾಚಿತ್ತು ನಿರ್ಗಮಿಸಿದ್ದಾರೆ.

  • 23 Oct 2022 02:43 PM (IST)

    ಶಾದಬ್ ಔಟ್

    ಇಫ್ತಿಕರ್ ವಿಕೆಟ್ ಬಳಿಕ ಬಂದ ಶಾದಬ್ ಖಾನ್ 14ನೇ ಓವರ್ ಎಸೆದ ಹಾರ್ದಿಕ್ ಅವರ 2ನೇ ಎಸೆತವನ್ನು ಬಿಗ್ ಶಾಟ್ ಆಡಲು ಯತ್ನಿಸಿದರು. ಆದರೆ ಚೆಂಡು ಸೀದಾ ಲಾಂಗ್ ಆನ್​ನಲ್ಲಿ ನಿಂತಿದ್ದ ಸೂರ್ಯ ಕೈಸೇರಿತು.

  • 23 Oct 2022 02:38 PM (IST)

    ಇಫ್ತಿಕರ್ ಔಟ್

    ಅರ್ಧಶತಕ ಸಿಡಿಸಿದ ಇಫ್ತಿಕರ್ ಕೊನೆಗೂ ಶಮಿ ಬಲೆಗೆ ಬಿದ್ದಿದ್ದಾರೆ. ಶಮಿ ಎಸೆದ 13ನೇ ಓವರ್​ನಲ್ಲಿ 2ನೇ ಎಸೆತದಲ್ಲಿ ಇಫ್ತಿಕರ್ ಎಲ್​ಬಿ ಬಲೆಗೆ ಬಿದ್ದರು.

  • 23 Oct 2022 02:36 PM (IST)

    ಒಂದೇ ಓವರ್​ನಲ್ಲಿ 3 ಸಿಕ್ಸ್

    12ನೇ ಓವರ್ ಎಸೆದ ಅಕ್ಷರ್ ಪಟೇಲ್​ಗೆ ಇಫ್ತಿಕರ್ ಬರೋಬ್ಬರಿ 3 ಸಿಕ್ಸರ್ ಬಾರಿಸಿದ್ದಾರೆ. ಎರಡು ಸಿಕ್ಸರ್ ಲಾಂಗ್ ಆನ್ ಹಾಗೂ ಲಾಂಗ್ ಆಫ್​ನಲ್ಲಿ ಬಂದರೆ, ಮತ್ತೊಂದು ಸಿಕ್ಸರ್ ಡೀಪ್ ಮಿಡ್ ವಿಕೆಟ್ ಕಡೆ ಬಂತು.

  • 23 Oct 2022 02:31 PM (IST)

    ಇಫ್ತಿಕರ್ ಸಿಕ್ಸ್

    11ನೇ ಓವರ್​ನ 5ನೇ ಎಸೆತದಲ್ಲಿ ಅಂತಿಮವಾಗಿ ಪಾಕ್ ತಂಡದ ಮೊದಲ ಸಿಕ್ಸರ್ ಬಂದಿದೆ. ಅಶ್ವಿನ್ ಎಸೆತವನ್ನು ಮಿಡ್​ ಆನ್ ಮೇಲೆ ಆಡಿ ಇಫ್ತಿಕರ್ ಭರ್ಜರಿ ಸಿಕ್ಸರ್ ಬಾರಿಸಿದ್ದಾರೆ.

  • 23 Oct 2022 02:27 PM (IST)

    10 ಓವರ್ ಆಟ ಅಂತ್ಯ

    10ನೇ ಓವರ್ ಅನ್ನು ಹಾರ್ದಿಕ್ ಎಸೆದರು. ಈ ಓವರ್​ನಲ್ಲಿ ಇಫ್ತಿಕರ್ ಥಡ್ರ್ ಮ್ಯಾನ್ ಕಡೆ ಬೌಂಡರಿ ಬಾರಿಸಿದರು. ಆ ಬಳಿಕ ತಂಡ ಸಿಂಗಲ್ ಮೊರೆ ಹೋಯಿತು. 10 ಓವರ್​ಗಳ ಆಟ ಅಂತ್ಯಗೊಂಡಿದ್ದು, ಇದರಲ್ಲಿ ಪಾಕಿಸ್ತಾನ 2 ವಿಕೆಟ್ ಕಳೆದುಕೊಂಡು 60 ರನ್ ಗಳಿಸಿದೆ. ಇಫ್ತಿಕರ್ 21 ರನ್ ಗಳಿಸಿದ್ದರೆ, ಮಸೂದ್ 29 ರನ್ ಗಳಿಸಿದ್ದಾರೆ.

  • 23 Oct 2022 02:18 PM (IST)

    ಸ್ಪಿನ್ ದಾಳಿ ಆರಂಭ

    8 ಓವರ್​ಗಳ ಬಳಿಕ ಈಗ ನಾಯಕ ರೋಹಿತ್ ಸ್ಪಿನ್ ದಾಳಿಯನ್ನು ಕಣಕ್ಕಿಳಿಸಿದ್ದಾರೆ. 9ನೇ ಓವರ್​ನಲ್ಲಿ ಅಶ್ವಿನ್ ದಾಳಿಗಿಳಿದಿದ್ದಾರೆ.

  • 23 Oct 2022 02:17 PM (IST)

    ಮಸೂದ್​ಗೆ 2 ಜೀವದಾನ

    ಶಾನ್ ಮಸೂದ್​ಗೆ ಈ ಪಂದ್ಯದಲ್ಲಿ ಎರಡು ಜೀವದಾನ ಸಿಕ್ಕಂತಾಗಿದೆ. ಮೊದಲು ಕೊಹ್ಲಿ ರನ್​ ಔಟ್ ಮಿಸ್ ಮಾಡಿದರೆ, 8ನೇ ಓವರ್​ನಲ್ಲಿ ರವಿ ಅಶ್ವಿನ್ ಕ್ಯಾಚ್ ಹಿಡಿಯುವಲ್ಲಿ ಯಡವಟ್ಟು ಮಾಡಿದರು. ಹೀಗಾಗಿ ಮಸೂದ್​ಗೆ 2 ಜೀವದಾನ ಸಿಕ್ಕಂತ್ತಾಗಿದೆ.

  • 23 Oct 2022 02:12 PM (IST)

    ಶಾನ್ ಮಸೂದ್ ಬೌಂಡರಿ

    7ನೇ ಓವರ್ ಎಸೆದ ಹಾರ್ದಿಕ್ ಅವರ ಕೊನೆಯ ಎಸೆತವನ್ನು ಮಸೂದ್ ಬೌಂಡರಿಗಟ್ಟಿದ್ದಾರೆ. ಪಾಂಡ್ಯರ ಈ ಬೌನ್ಸರ್ ಎಸೆತವನ್ನು ಮಸೂದ್, ಥರ್ಡ್​ ಮ್ಯಾನ್ ಕಡೆ ಆಡಿ ಬೌಂಡರಿ ಗಳಿಸಿದರು.

  • 23 Oct 2022 02:04 PM (IST)

    ಪವರ್ ಪ್ಲೇ ಅಂತ್ಯ.. ಪಾಕ್- 32/2

    ಪವರ್ ಪ್ಲೇ ಮುಗಿದಿದ್ದು, ಈ 6 ಓವರ್​ಗಳಲ್ಲಿ ಪಾಕ್ ತಂಡ ಪ್ರಮುಖ 2 ವಿಕೆಟ್ ಕಳೆದುಕೊಂಡು 32 ರನ್ ಗಳಿಸಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ರಿಜ್ವಾನ್ ಹಾಗೂ ಬಾಬರ್ ಅರ್ಷದೀಪ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದಾರೆ. ಹೀಗಾಗಿ ಪಾಕ್ ತಂಡ ಒತ್ತಡಕ್ಕೆ ಸಿಲುಕಿದೆ.

  • 23 Oct 2022 01:59 PM (IST)

    ಇಫ್ತಿಕರ್ ಬೌಂಡರಿ

    ರಿಜ್ವಾನ್ ವಿಕೆಟ್ ಬಳಿಕ ಬಂದ ಇಫ್ತಿಕರ್, ಭುವಿ ಓವರ್​ನ 5ನೇ ಎಸೆತದಲ್ಲಿ ಮಿಡ್​ ವಿಕೆಟ್​ ಕಡೆ ಅದ್ಭುತ ಶಾಟ್ ಆಡಿ ಬೌಂಡರಿ ಬಾರಿಸಿದರು.

    5ನೇ ಓವರ್ ಅಂತ್ಯಕ್ಕೆ ಪಾಕ್- 24/2

  • 23 Oct 2022 01:55 PM (IST)

    ರಿಜ್ವಾನ್ ಔಟ್

    4ನೇ ಓವರ್​ ಎಸೆದ ಅರ್ಷದೀಪ್ ಮತ್ತೊಮ್ಮೆ ಟೀಂ ಇಂಡಿಯಾಕ್ಕೆ ವಿಕೆಟ್ ತಂದುಕೊಟ್ಟಿದ್ದಾರೆ. ತನ್ನ ಓವರ್​ನ ಕೊನೆಯ ಎಸೆದಲ್ಲಿ ರಿಜ್ವಾನ್ ಅವರನ್ನು ಔಟ್ ಮಾಡುವ ಮೂಲಕ ಪಾಕ್ ಪಡೆಗೆ 2ನೇ ಶಾಕ್ ನೀಡಿದ್ದಾರೆ. ಅರ್ಷದೀಪ್ ಎಸೆತವನ್ನು ರಿಜ್ವಾನ್ ಫೈನ್​ ಲೆಗ್ ಕಡೆ ಆಡಿದರು. ಆದರೆ ಅಲ್ಲೆ ನಿಂತಿದ್ದ ಭುವಿ ಅದ್ಭುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ರಿಜ್ವಾನ್​ಗೆ ಪೆವಿಲಿಯನ್ ದಾರಿ ತೋರಿದರು.

  • 23 Oct 2022 01:45 PM (IST)

    ರಿಜ್ವಾನ್ ಬೌಂಡರಿ

    ಎರಡನೇ ಓವರ್​ನ ಕೊನೆಯ ಎಸೆತದಲ್ಲಿ ರಿಜ್ವಾನ್, ಫೈನ್​ ಲೆಗ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಮೊದಲ ಫೋರ್ ಗಳಿಸಿದರು.

  • 23 Oct 2022 01:40 PM (IST)

    ಶೂನ್ಯಕ್ಕೆ ಬಾಬರ್ ಔಟ್

    ಎರಡನೇ ಓವರ್ ಎಸೆದ ಅರ್ಷದೀಪ್ ತನ್ನ ಮೊದಲ ಎಸೆತದಲ್ಲೇ ಟೀಂ ಇಂಡಿಯಾಗೆ ಯಶಸ್ಸು ತಂದಿದ್ದಾರೆ. ಮೊದಲ ಎಸೆತ ಎದುರಿಸಿದ ನಾಯಕ ಬಾಬರ್ ಎಲ್​ಬಿಡ್ಬ್ಲ್ಯೂ ಬಲೆಗೆ ಬಿದ್ದಿದ್ದಾರೆ. ರಿವ್ಯೂವ್ ತೆಗೆದುಕೊಂಡರಾದರೂ ಯಾವುದೇ ಪ್ರಯೋಜನವಾಗಲಿಲ್ಲ.

  • 23 Oct 2022 01:37 PM (IST)

    ಮೊದಲ ಓವರ್ ಮುಕ್ತಾಯ

    ಭುವಿ ಎಸೆದ ಮೊದಲ ಓವರ್​ನಲ್ಲಿ ಪಾಕ್ ಬ್ಯಾಟರ್ ರಿಜ್ವಾನ್ ಯಾವುದೇ ರನ್ ಗಳಿಸಲಿಲ್ಲ. ಆದರೆ ವೈಡ್ ಮೂಲಕ ಒಂದು ರನ್ ಬಂತು.

  • 23 Oct 2022 01:34 PM (IST)

    ರಿಜ್ವಾನ್​ಗೆ ಇಂಜುರಿ

    ಮೊದಲ ಓವರ್​ನ ಎರಡನೇ ಎಸೆತದಲ್ಲೇ ರಿಜ್ವಾನ್ ಇಂಜುರಿಗೆ ತುತ್ತಾಗಿದ್ದಾರೆ. ಭುವಿ ಎಸೆದ ಚೆಂಡು, ರಿಜ್ವಾನ್ ಹೆಬ್ಬೆರಳಿಗೆ ತಾಗಿತು. ರಿಜ್ವಾನ್ ಕೆಲ ಸಮಯ ನೋವಿನಿಂದ ನರಳಿದರು. ಆ ಬಳಿಕ ಬ್ಯಾಟಿಂಗ್ ಮುಂದುವರೆಸಿದ್ದಾರೆ.

  • 23 Oct 2022 01:30 PM (IST)

    ಪಾಕ್ ಇನ್ನಿಂಗ್ಸ್ ಆರಂಭ

    ಪಾಕ್ ತಂಡದ ಬ್ಯಾಟಿಂಗ್ ಆರಂಭವಾಗಿದ್ದು, ಪಾಕ್ ಪರ್ ರಿಜ್ವಾನ್ ಹಾಗೂ ಬಾಬರ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಭಾರತ ಪರ ಭುವಿ ಬೌಲಿಂಗ್ ಆರಂಭಿಸಿದ್ದಾರೆ.

  • 23 Oct 2022 01:10 PM (IST)

    ಪಾಕಿಸ್ತಾನ ಪ್ಲೇಯಿಂಗ್ XI

    ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್‌ ಕೀಪರ್), ಶಾನ್ ಮಸೂದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಹೈದರ್ ಅಲಿ, ಇಫ್ತಿಖರ್ ಅಹ್ಮದ್, ಅಸಿಫ್ ಅಲಿ, ಶಾಹೀನ್ ಅಫ್ರಿದಿ, ನಸೀಂ ಶಾ, ಹ್ಯಾರಿಸ್ ರೌಫ್.

  • 23 Oct 2022 01:09 PM (IST)

    ಭಾರತ ಪ್ಲೇಯಿಂಗ್ XI

    ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಆರ್ಷದೀಪ್ ಸಿಂಗ್.

  • 23 Oct 2022 01:05 PM (IST)

    ಟಾಸ್ ಗೆದ್ದ ಭಾರತ

    ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 23 Oct 2022 12:51 PM (IST)

    ತುಂಬಿದ ಕ್ರೀಡಾಂಗಣ

    ಟಾಸ್‌ಗೆ ಕೆಲವೇ ಕ್ಷಣಗಳು ಬಾಕಿ ಇವೆ.  ಮೆಲ್ಬೋರ್ನ್‌ನ ಕ್ರೀಡಾಂಗಣವು ಅಭಿಮಾನಿಗಳಿಂದ ತುಂಬಿ ತುಳುಕುತ್ತಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಹೈವೋಲ್ಟೇಜ್ ಸ್ಪರ್ಧೆಯ ರೋಚಕತೆ ಶುರುವಾಗಲಿದೆ.

  • 23 Oct 2022 12:50 PM (IST)

    ಭಾರತ ತಂಡದ ಅಭ್ಯಾಸ ಆರಂಭ

    ಮೆಲ್ಬೋರ್ನ್​ ತಲುಪಿರುವ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

  • 23 Oct 2022 12:07 PM (IST)

    ಮೆಲ್ಬೋರ್ನ್‌ನಲ್ಲಿ ಮಳೆ ಇರುವುದಿಲ್ಲ

    ಭಾರತ-ಪಾಕಿಸ್ತಾನ ಪಂದ್ಯದ ಮೇಲೆ ಹವಾಮಾನದ ಪರಿಣಾಮ ಕಡಿಮೆಯಾಗಿದೆ. ಮಳೆಯ ಭೀತಿ ದೂರವಾಗುವಂತಿದ್ದು, ಮೆಲ್ಬೋರ್ನ್‌ನಲ್ಲಿ ಮಳೆಯ ಸಾಧ್ಯತೆ ಬಹುತೇಕ ಕಡಿಮೆಯಾಗಿದೆ.

  • Published On - Oct 23,2022 12:05 PM

    Follow us
    ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
    ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
    ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
    ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
    ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
    ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
    ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
    ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
    ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
    ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
    ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
    ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
    ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
    ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
    ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
    ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
    ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
    ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
    ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
    ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ