IND vs SL: ಇಂಜುರಿ ನಡುವೆಯೂ ಅಬ್ಬರಿಸಿದ ಪೃಥ್ವಿ ಶಾ; ಲಂಕಾ ಬೌಲರ್​ಗಳಿಗೆ ಬೌಂಡರಿಗಳ ಉಡುಗೂರೆ ನೀಡಿದ ದ್ರಾವಿಡ್ ಶಿಷ್ಯ

IND vs SL: ಪೃಥ್ವಿ ಶಾ ಒಂಬತ್ತು ಬೌಂಡರಿಗಳ ಸಹಾಯದಿಂದ 24 ಎಸೆತಗಳಲ್ಲಿ 43 ರನ್ ಗಳಿಸಿದರು. ಇದು ಭಾರತಕ್ಕೆ ಶೀಘ್ರ ಆರಂಭ ನೀಡಿತು.

IND vs SL: ಇಂಜುರಿ ನಡುವೆಯೂ ಅಬ್ಬರಿಸಿದ ಪೃಥ್ವಿ ಶಾ; ಲಂಕಾ ಬೌಲರ್​ಗಳಿಗೆ ಬೌಂಡರಿಗಳ ಉಡುಗೂರೆ ನೀಡಿದ ದ್ರಾವಿಡ್ ಶಿಷ್ಯ
ಅಬ್ಬರಿಸಿದ ಪೃಥ್ವಿ ಶಾ
Follow us
TV9 Web
| Updated By: ಪೃಥ್ವಿಶಂಕರ

Updated on: Jul 18, 2021 | 8:36 PM

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಓಪನರ್ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರ ಹೆಲ್ಮೆಟ್‌ಗೆ ಚೆಂಡು ಬಡಿಯಿತು. ಶ್ರೀಲಂಕಾದ ವೇಗದ ಬೌಲರ್ ದುಷ್ಮಂತಾ ಚಮಿರಾ ಅವರ ಬೌನ್ಸರ್ ಭಾರತದ ಬ್ಯಾಟ್ಸ್‌ಮನ್‌ಗೆ ಗಾಯ ಮಾಡಿದ್ದು, ಇದರಿಂದಾಗಿ ಪಂದ್ಯವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಬೇಕಾಯಿತು. ಈ ಘಟನೆ ನಡೆದಿದ್ದು ಭಾರತದ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ. ಚೆಂಡು ಬಿದ್ದ ರಬಸಕ್ಕೆ ಶಾ ಅವರ ಹೆಲ್ಮೆಟ್‌ನ ನೆಕ್‌ಗಾರ್ಡ್ ಮುರಿದುಹೋಗಿದೆ. ಆದರೆ ಅದೃಷ್ಟವಾತು ಪೃಥ್ವಿ ಶಾಗೆ ಯಾವುದೇ ಇಂಜುರಿ ಆದಂತೆ ಕಾಣುತ್ತಿಲ್ಲ. ಆದರೆ ಈ ಅವಘಡ ನಡೆದ ನಂತರದ ಎಸೆತದಲ್ಲೇ ಅವರು ವಿಕೆಟ್ ಒಪ್ಪಿಸದರು. ಪೃಥ್ವಿ ಶಾ ಒಂಬತ್ತು ಬೌಂಡರಿಗಳ ಸಹಾಯದಿಂದ 24 ಎಸೆತಗಳಲ್ಲಿ 43 ರನ್ ಗಳಿಸಿದರು. ಇದು ಭಾರತಕ್ಕೆ ಶೀಘ್ರ ಆರಂಭ ನೀಡಿತು.

ಶಿಖರ್ ಧವನ್ ಅವರೊಂದಿಗೆ ಬ್ಯಾಟಿಂಗ್ ಪ್ರಾರಂಭಿಸಿದ ಪೃಥ್ವಿ ಶಾ ಅವರು ಅಬ್ಬರದ ಬ್ಯಾಟಿಂಗ್ ಪ್ರಾರಂಭಿಸಿದರು. ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಬೌಂಡರಿ ಗಳಿಸಿದರು. ಅದರ ನಂತರ ಪೃಥ್ವಿ ಅಬ್ಬರಿಸಲು ಆರಂಭಿಸಿದರು. ದುಷ್ಮಂತಾ ಚಮಿರಾ ಅವರ ಮೊದಲ ಓವರ್‌ನಲ್ಲಿ ಶಾ ಎರಡು ಬೌಂಡರಿ ಬಾರಿಸಿದರು. ನಂತರ ಮುಂದಿನ ಓವರ್‌ನಲ್ಲಿ ಇಸುರು ಉದಾನಗೆ ಎರಡು ಬೌಂಡರಿ ಬಾರಿಸಿದರು. ಭಾರತದ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಅವರು ಸತತ ಮೂರು ಬೌಂಡರಿಗಳನ್ನು ಹೊಡೆದರು.

ಇದರಿಂದಾಗಿ ಭಾರತದ ಸ್ಕೋರ್ ನಾಲ್ಕು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿತು. ಮುಂದಿನ ಓವರ್‌ನಲ್ಲಿ ಶಾ ಚಮಿರಾ ಅವರ ಓವರ್‌ನಲ್ಲಿ ಎರಡು ಬೌಂಡರಿ ಗಳಿಸಿದರು. ಆದರೆ ಕೊನೆಯ ಚೆಂಡು ಅವರ ಹೆಲ್ಮೆಟ್‌ಗೆ ಬಡಿಯಿತು. ಆದಾಗ್ಯೂ, ಇದರ ನಂತರದ ಎಸೆತಕ್ಕೆ ಶಾ ಲೆಗ್​ಸೈಡ್​ನಲ್ಲಿ ಬೌಂಡರಿ ಬಾರಿಸಿದರು.

ಗಾಯದ ನಂತರ ಮುಂದಿನ ಎಸೆತದಲ್ಲಿ ಶಾ ಔಟ್ ಚಮಿರಾ ಅವರ ಚೆಂಡು ವೇಗವಾಗಿ ಬಂದು ಶಾ ಅವರ ಹೆಲ್ಮೆಟ್‌ನ ಬದಿಗೆ ಬಡಿಯಿತು. ಇದರಿಂದ ನೆಕ್‌ಗಾರ್ಡ್ ಮುರಿದು ಹೋಯಿತು. ಪಿಸಿಶೀಯನ್, ಶಾ ಅವರನ್ನು ಪರಿಶೀಲಿಸಿ ಆಟವಾಡುವುದನ್ನು ಮುಂದುವರೆಸುವಂತೆ ತಿಳಿಸಿದರು. ಶಾ ಗಾಯಗೊಂಡ ಓವರ್‌ಗೆ ಸ್ವಲ್ಪ ಮುಂಚೆ, ಚಮಿರಾ ಎರಡು ಬೌನ್ಸರ್‌ಗಳನ್ನು ಬೌಲ್ ಮಾಡಿದ್ದರು. ಆದರೆ ಅವರ ಬೌನ್ಸರ್​ಗಳನ್ನು ಪೃಥ್ವಿ ಶಾ ತಪ್ಪಿಸಿಕೊಂಡರು.

ಚಮಿರಾ ಓವರ್ ಆದ ನಂತರ ಧನಂಜಯ್ ಡಿ ಸಿಲ್ವಾ ಬೌಲಿಂಗ್ ಮಾಡಲು ಬಂದರು. ಈ ಓವರ್‌ನಲ್ಲಿ ಮೊದಲ ಎರಡು ಎಸೆತಗಳನ್ನು ಆಡಿದ ಶಿಖರ್ ಧವನ್ ಒಂದು ರನ್ ತೆಗೆದುಕೊಂಡು ಸ್ಟ್ರೈಕ್ ಅನ್ನು ಶಾ ಅವರಿಗೆ ನೀಡಿದರು. ಶಾ ಆಡಿದ ಮೊದಲ ಚೆಂಡನ್ನು ಗಾಳಿಯಲ್ಲಿ ಭಾರಿಸಿದರು ಆದರೆ ಆ ಚೆಂಡು ಅವಿಷ್ಕಾ ಫರ್ನಾಂಡೊ ಅವರ ಕೈ ಸೇರಿತು. ಔಟಾಗುವ ಮೊದಲು ಅವರು ಮೊದಲ ವಿಕೆಟ್‌ಗೆ ಶಿಖರ್ ಧವನ್ ಅವರೊಂದಿಗೆ 33 ಎಸೆತಗಳಲ್ಲಿ 58 ರನ್ ಜೊತೆಯಾಟವನ್ನು ಹಂಚಿಕೊಂಡರು.