IND vs SL: ಬುಮ್ರಾ, ಜಡ್ಡುಗೆ ಸ್ಥಾನ ಖಚಿತ.. ಯಾರಿಗೆ ಕೋಕ್? ಮೊದಲ ಟಿ20ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11

| Updated By: ಪೃಥ್ವಿಶಂಕರ

Updated on: Feb 22, 2022 | 7:32 PM

IND vs SL: ರವೀಂದ್ರ ಜಡೇಜಾ ಅವರನ್ನು ತಂಡದಲ್ಲಿ ಇರಿಸಿಕೊಳ್ಳಲು ನಾಯಕ ರೋಹಿತ್ ಶರ್ಮಾ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವಾಸ್ತವವಾಗಿ, ಜಡೇಜಾ ಅನುಪಸ್ಥಿತಿಯಲ್ಲಿ, ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಆಲ್ ರೌಂಡರ್‌ಗಳಾಗಿ ಪ್ರಯತ್ನಿಸಲಾಯಿತು

IND vs SL: ಬುಮ್ರಾ, ಜಡ್ಡುಗೆ ಸ್ಥಾನ ಖಚಿತ.. ಯಾರಿಗೆ ಕೋಕ್? ಮೊದಲ ಟಿ20ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11
ಭಾರತ ತಂಡ
Follow us on

ಭಾರತ ಮತ್ತು ಶ್ರೀಲಂಕಾ ನಡುವಿನ T20 ಸರಣಿ (India vs Sri Lanka, 1st T20) ಫೆಬ್ರವರಿ 24 ರಿಂದ ಪ್ರಾರಂಭವಾಗಲಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಲಕ್ನೋದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿಯೇ ಟೀಂ ಇಂಡಿಯಾದ ಇಬ್ಬರು ದೊಡ್ಡ ಆಟಗಾರರು ಆಡುವ XI ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರವೀಂದ್ರ ಜಡೇಜಾ (Ravindra Jadeja) ಮತ್ತು ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಟಿ 20 ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊದಲ ಟಿ20ಯಲ್ಲಿ, ಎಲ್ಲರ ಕಣ್ಣು ರವೀಂದ್ರ ಜಡೇಜಾ ಮೇಲೆ ಇರುತ್ತದೆ ಏಕೆಂದರೆ ಈ ಆಟಗಾರ ಕಳೆದ ಮೂರು ತಿಂಗಳಿಂದ ಕ್ರಿಕೆಟ್ ಮೈದಾನದಿಂದ ದೂರವಿದ್ದರು. ಜಡೇಜಾ ಗಾಯಗೊಂಡು ಕ್ರಿಕೆಟ್​ನಿಂದ ದೂರವಿದ್ದರು. ಆದರೆ ಈಗ ಅವರು ಸಂಪೂರ್ಣ ಫಿಟ್ ಆಗಿದ್ದಾರೆ. ಜಡೇಜಾ ಫಿಟ್ ಆಗಿದ್ದಾರೆ ಎಂದರೆ ಆಡುವ XI ನಲ್ಲಿ ಅವರನ್ನು ಸೇರಿಸಿಕೊಳ್ಳುವುದು ಖಚಿತ. ಈಗ ಜಡೇಜಾ ಆಡುವ XI ಗೆ ಮರಳಿದರೆ, ನಂತರ ಪ್ರಶ್ನೆ, ಅವರು ಯಾರ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ ಎಂಬುದಾಗಿದೆ.

ರವೀಂದ್ರ ಜಡೇಜಾ ಅವರನ್ನು ತಂಡದಲ್ಲಿ ಇರಿಸಿಕೊಳ್ಳಲು ನಾಯಕ ರೋಹಿತ್ ಶರ್ಮಾ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ (India Playing XI 1st T20). ವಾಸ್ತವವಾಗಿ, ಜಡೇಜಾ ಅನುಪಸ್ಥಿತಿಯಲ್ಲಿ, ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಆಲ್ ರೌಂಡರ್‌ಗಳಾಗಿ ಪ್ರಯತ್ನಿಸಲಾಯಿತು ಮತ್ತು ಮೂವರೂ ಉತ್ತಮ ಪ್ರದರ್ಶನ ನೀಡಿದರು. ಜಡೇಜಾ ಅನುಪಸ್ಥಿತಿಯಲ್ಲಿ, ಟೀಂ ಇಂಡಿಯಾ ಕಳೆದ ಸರಣಿಯಲ್ಲಿ ಯುಜ್ವೇಂದ್ರ ಚಹಾಲ್ ಮತ್ತು ರವಿ ಬಿಷ್ಣೋಯ್ ಸೇರಿದಂತೆ ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳನ್ನು ಆಡಿಸಿತ್ತು. ಹೀಗಾಗಿ ಜಡೇಜಾ ವಾಪಸಾದ ಬಳಿಕ ತಂಡದಲ್ಲಿ ಕೇವಲ ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್​ನನ್ನು ಮಾತ್ರ ತಂಡದಲ್ಲಿ ಉಳಿಸಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.

ರವಿ ಬಿಷ್ಣೋಯ್ ಔಟ್?

ಜಡೇಜಾ ಮರಳುವುದರೊಂದಿಗೆ ರವಿ ಬಿಷ್ಣೋಯ್ ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಗಬಹುದು ಎಂದು ಊಹಿಸಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ T20 ಸರಣಿಯಲ್ಲಿ ಬಿಷ್ಣೋಯ್ ಅದ್ಭುತವಾಗಿ ಬೌಲಿಂಗ್ ಮಾಡಿ ಮೂರು ವಿಕೆಟ್‌ ಪಡೆದಿದ್ದರು. ಯುಜ್ವೇಂದ್ರ ಚಹಾಲ್ ಕೂಡ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದು, ಅವರ ಅನುಭವಕ್ಕೆ ತಂಡವು ಆದ್ಯತೆ ನೀಡಬಹುದು.

ಯಾರು ಆರಂಭಿಸುತ್ತಾರೆ?

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಯಾರು ಓಪನ್ ಮಾಡಲಿದ್ದಾರೆ ಎಂಬುದು ಕೂಡ ಪ್ರಮುಖ ಪ್ರಶ್ನೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ T20 ಪಂದ್ಯದಲ್ಲಿ, ರೋಹಿತ್ ಶರ್ಮಾ ನಾಲ್ಕನೇ ಕ್ರಮಾಂಕದಲ್ಲಿ ಇಳಿದಿದ್ದರು ಮತ್ತು ಇಶಾನ್ ಕಿಶನ್-ರಿತುರಾಜ್ ಜೋಡಿಯು ಆರಂಭಿಕರಾಗಿ ಕಣಕ್ಕಿಳಿದಿದ್ದರು. ಶ್ರೀಲಂಕಾ ವಿರುದ್ಧವೂ ಈ ಪ್ರಯೋಗ ಮಾಡಬಹುದು. ರೋಹಿತ್ ಶರ್ಮಾ ಮತ್ತೆ 3 ಅಥವಾ 4 ರಲ್ಲಿ ಕಾಣಿಸಿಕೊಳ್ಳಬಹುದು. ತಂಡದ ಆಡಳಿತವು ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಭಾರತದ ಸಂಭಾವ್ಯ ಪ್ಲೇಯಿಂಗ್ XI

ರೋಹಿತ್ ಶರ್ಮಾ, ರಿತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ

ಇದನ್ನೂ ಓದಿ:ಅಷ್ಟು ಸುಲಭವಾಗಿ ಬಿಡುವುದಿಲ್ಲ, ಕಠಿಣ ಕ್ರಮ ಕೈಗೊಳ್ಳುತ್ತೇವೆ! ಪತ್ರಕರ್ತರ ವಿರುದ್ಧದ ಸಾಹ ಆರೋಪಕ್ಕೆ ಬಿಸಿಸಿಐ ಸ್ಪಷ್ಟನೆ