ಎಂಎಸ್ ಧೋನಿ (MS Dhoni)ಯ ವೇಗ, ವಿಕೆಟ್ ಹಿಂದಿನ ಬುದ್ಧಿವಂತಿಕೆ ಎಲ್ಲರಿಗೂ ತಿಳಿದಿದೆ. ಅವರು ಕಣ್ಣು ಮಿಟುಕಿಸುವಷ್ಟರಲ್ಲಿ ಹಲವು ಬಾರಿ ಬ್ಯಾಟ್ಸ್‌ಮನ್‌ಗಳನ್ನು ರನೌಟ್ ಮಾಡಿದ್ದಾರೆ. ಅನೇಕ ಬಾರಿ ಧೋನಿ ಬ್ಯಾಟ್ಸ್‌ಮನ್‌ನನ್ನು ಔಟ್ ಮಾಡಿರುವುದು, ತನ್ನ ತಂಡದ ಸಹ ಆಟಗಾರರಿಗೆ ಅಥವಾ ಎದುರಾಳಿ ಬ್ಯಾಟರ್ಗೆ ಕೆಲವು ಸೆಕೆಂಡುಗಳವರೆಗೆ ಅರಿವಿಗೆ ಬಂದಿರುವುದಿಲ್ಲ. ಇದೇ ದೃಷ್ಟಿಕೋನವನ್ನು ಮತ್ತೊಮ್ಮೆ ಭಾರತೀಯ ವಿಕೆಟ್ ಕೀಪರ್ ತೋರಿಸಿದ್ದಾರೆ. ಟೀಂ ಇಂಡಿಯಾದ ಮಹಿಳಾ ಕ್ರಿಕೆಟರ್ ಯಾಸ್ತಿಕಾ ಭಾಟಿಯಾ (Yastika Bhatia) ಅವರ ಅದ್ಬುತತೆ ಎಲ್ಲರಿಗೂ ಧೋನಿಯನ್ನು ನೆನಪಿಸಿತು. ಭಾಟಿಯಾ ಅವರ ಈ ರನೌಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಸೋಮವಾರ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾಟಿಯಾ ತಮ್ಮ ಚಾಣಾಕ್ಷತನದ ಬಲದಿಂದ ಅನುಷ್ಕಾ ಸಂಜೀವನಿ (Anushka Sanjeevani)ಯನ್ನು ಪೆವಿಲಿಯನ್‌ಗೆ ಕಳುಹಿಸಿದರು.
ಕಣ್ಣು ಮಿಟುಕಿಸುವಷ್ಟರಲ್ಲಿ ರನೌಟ್
ಭಾಟಿಯಾ ಏನು ಮಾಡಿದ್ದಾರೆಂದು ಸ್ವಲ್ಪ ಸಮಯದವರೆಗೆ ಶ್ರೀಲಂಕಾ ಬ್ಯಾಟರ್ಗೆ ಹಾಗೂ ಭಾರತದ ಆಟಗಾರರಿಗೂ ಅರ್ಥವಾಗಲಿಲ್ಲ. ಆದರೆ, ರೀಪ್ಲೇ ನೋಡಿದ ಮೂರನೇ ಅಂಪೈರ್ ಅನುಷ್ಕಾ ರನ್ ಔಟ್ ಎಂದು ಘೋಷಿಸಿದರು. ಅನುಷ್ಕಾ 25 ರನ್ ಗಳಿಸಿ ರನೌಟ್ ಆದರು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 173 ರನ್ ಗಳಿಸಿತು. 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಅನುಷ್ಕಾ 23 ನೇ ಓವರ್‌ನಲ್ಲಿ ದೀಪ್ತಿ ಶರ್ಮಾ ಅವರ ಮೂರನೇ ಎಸೆತದಲ್ಲಿ ರಿವರ್ಸ್ ಸ್ವೀಪ್ ಆಡಲು ತಯಾರಿ ನಡೆಸುತ್ತಿದ್ದರು. ಆದರೆ ತಕ್ಷಣವೇ ಅನುಷ್ಕಾ ತಮ್ಮ ಶಾಟ್ ಅನ್ನು ಬದಲಾಯಿಸಿ ಡಿಫೆಂಡ್ ಮಾಡಿದರು. ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಭಾಟಿಯಾ ಚೆಂಡನ್ನು ಹಿಡಿದು ಸ್ಟಂಪ್ಗೆ ಹೊಡೆದರು. ತಾನು ಕ್ರೀಸ್ನಲ್ಲೇ ನಿಂತಿರುವುದಾಗಿ ಭಾವಿಸಿದ್ದ ಅನಷ್ಕಾ ಔಟಾಗಿ ಪೆವಿಲಿಯನ್‌ಗೆ ತೆರಳ ಬೇಕಾಯಿತು.
Brilliant glove work by Yastika Bhatia in the second ODI. pic.twitter.com/FKLoT23q63
— Johns. (@CricCrazyJohns) July 4, 2022
ರೇಣುಕಾ ಮಾರಕ ಬೌಲಿಂಗ್
ಇದಕ್ಕೂ ಮೊದಲು ಟಾಸ್ ಗೆದ್ದ ಭಾರತ ಶ್ರೀಲಂಕಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಸ್ವಲ್ಪ ಹೊತ್ತಿನಲ್ಲೇ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಈ ನಿರ್ಧಾರ ಸರಿಯಾಗಿದೆ ಎಂದು ಸಾಬೀತಾಯಿತು. ರೇಣುಕಾ ಮೊದಲ ಓವರ್‌ನಲ್ಲಿ ಹಾಸಿನಿ ಪೆರೇರಾ ರೂಪದಲ್ಲಿ ಶ್ರೀಲಂಕಾಕ್ಕೆ ಮೊದಲ ಹೊಡೆತ ನೀಡಿದರು. ಇದಾದ ನಂತರ ರೇಣುಕಾ 7 ರನ್‌ಗಳಿಗೆ ವಿಶ್ಮಿ ಅವರನ್ನು ಔಟ್ ಮಾಡುವ ಮೂಲಕ ಎರಡನೇ ಹೊಡೆತ ನೀಡಿದರು. ಇಬ್ಬರೂ ಆರಂಭಿಕರು ಪೆವಿಲಿಯನ್‌ಗೆ ಮರಳಿದ ನಂತರ, ಶ್ರೀಲಂಕಾ ತಂಡಕ್ಕೆ ನಿಂತು ಆಡಲು ಸಾಧ್ಯವಾಗಲಿಲ್ಲ. ತಂಡದ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಬೀಳುತ್ತಲೇ ಇದ್ದವು. ಒಂದು ಸಮಯದಲ್ಲಿ ಎಮ್ಮಾ ಕಾಂಚನಾ ಸ್ವಲ್ಪ ಪ್ರತಿರೋಧ ತೋರಿದರು. ಆದರೆ ಅವರಿಗೆ ಇನ್ನೊಂದು ತುದಿಯಲ್ಲಿ ಸರಿಯಾದ ಸಾಥ್ ಸಿಗಲಿಲ್ಲ. ಕಾಂಚನಾ 47 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರನ್ನು ಹೊರತುಪಡಿಸಿ ನೀಲಾಕ್ಷಿ 32 ರನ್ ಗಳಿಸಿದರು. ಈ ಇಬ್ಬರಿಂದಾಗಿ ಶ್ರೀಲಂಕಾ ತಂಡ ನಿಗದಿತ ಓವರ್‌ನಲ್ಲಿ 173 ರನ್ ಗಳಿಸಲಷ್ಟೇ ಶಕ್ತವಾಯಿತು. ರೇಣುಕಾ ಹೊರತಾಗಿ ದೀಪ್ತಿ ಶರ್ಮಾ ಮತ್ತು ಮೇಘನಾ ಸಿಂಗ್ ತಲಾ 2 ವಿಕೆಟ್ ಪಡೆದರು.
ಮಂಧಾನ- ಶೆಫಾಲಿ ಅದ್ಭುತ ಜೊತೆಯಾಟ
ಗುರಿ ಬೆನ್ನಟ್ಟಿದ ಭಾರತ ತಂಡವು ಬಿರುಸಿನ ಆರಂಭವನ್ನು ಮಾಡಿತು. ರೇಣುಕಾ ನಂತರ, ಶೆಫಾಲಿ ವರ್ಮಾ ಮತ್ತು ಮಂಧಾನ ಅವರ ವಿಧ್ವಂಸಕ ಬ್ಯಾಟಿಂಗ್ ಶ್ರೀಲಂಕಾದ ಗೆಲುವಿನ ಕನಸಿಗೆ ನೀರೇರೆಚಿತು. ಭಾರತದ ಆರಂಭಿಕ ಜೋಡಿ ಶ್ರೀಲಂಕಾದ ಬೌಲರ್‌ಗಳನ್ನು ಎರಡೂ ತುದಿಗಳಿಂದ ದಂಡಿಸಿದರು. ಆದರೆ ಮಂಧಾನಾಗೆ ಶತಕ ಪೂರೈಸಲು ಸಾಧ್ಯವಾಗಲಿಲ್ಲ. ಮಂಧಾನ 83 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 94 ರನ್ ಗಳಿಸಿ ಅಜೇಯರಾಗಿ ಉಳಿದರು. ಶೆಫಾಲಿ 71 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದರು. ಜೊತೆಗೆ ಶೆಫಾಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಕೂಡ ಬಾರಿಸಿದರು.
Published On - 5:50 pm, Mon, 4 July 22