IND vs SL 1st T20: ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾದ್ದೇ ದರ್ಬಾರ್

| Updated By: ಝಾಹಿರ್ ಯೂಸುಫ್

Updated on: Jan 03, 2023 | 4:22 PM

India vs Sri Lanka Head to Head T20: ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಶ್ರೀಲಂಕಾ ಜಯ ಸಾಧಿಸಿದ್ದರೂ, ಒಟ್ಟಾರೆ ಅಂಕಿಅಂಶಗಳಲ್ಲಿ ಭಾರತ ತಂಡವೇ ಮುಂದಿದೆ. ಉಭಯ ತಂಡಗಳು ಇಲ್ಲಿಯವರೆಗೆ ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 26 ಬಾರಿ ಮುಖಾಮುಖಿಯಾಗಿವೆ.

IND vs SL 1st T20: ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾದ್ದೇ ದರ್ಬಾರ್
India vs Sri Lanka
Follow us on

IND vs SL Head to Head T20: ಭಾರತ ತಂಡವು ಶ್ರೀಲಂಕಾ ವಿರುದ್ಧದ (IND vs SL) ಟಿ20 ಸರಣಿಯೊಂದಿಗೆ ಹೊಸ ಸೀಸನ್​ ಅನ್ನು ಪ್ರಾರಂಭಿಸಲಿದೆ. ಉಭಯ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿ ಮಂಗಳವಾರದಿಂದ (ಜನವರಿ 3) ಆರಂಭವಾಗಲಿದ್ದು, ಇದಾದ ಬಳಿಕ ಏಕದಿನ ಸರಣಿ ನಡೆಯಲಿದೆ. ಇತ್ತ ಹೊಸ ವರ್ಷದ ಮೊದಲ ಪಂದ್ಯದಲ್ಲೇ ಗೆಲುವಿನೊಂದಿಗೆ ಶುಭಾರಂಭ ಮಾಡುವ ಇರಾದೆಯಲ್ಲಿರುವ ಟೀಮ್ ಇಂಡಿಯಾಗೆ ಮತ್ತೊಮ್ಮೆ ಸೋಲುಣಿಸುವ ವಿಶ್ವಾಸದಲ್ಲಿದೆ ಶ್ರೀಲಂಕಾ.

ಏಕೆಂದರೆ ಭಾರತ-ಶ್ರೀಲಂಕಾ ಕೊನೆಯ ಬಾರಿ ಮುಖಾಮುಖಿಯಾಗಿದ್ದು ಏಷ್ಯಾಕಪ್​ನಲ್ಲಿ. ಆ ಪಂದ್ಯದಲ್ಲಿ ಲಂಕಾ ತಂಡವು ಭಾರತ ತಂಡಕ್ಕೆ ಸೋಲುಣಿಸಿತ್ತು. ಇದೀಗ ಉಭಯ ತಂಡಗಳು ವರ್ಷದ ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗುತ್ತಿರುವುದರಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಇಲ್ಲಿ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಶ್ರೀಲಂಕಾ ಜಯ ಸಾಧಿಸಿದ್ದರೂ, ಒಟ್ಟಾರೆ ಅಂಕಿಅಂಶಗಳಲ್ಲಿ ಭಾರತ ತಂಡವೇ ಮುಂದಿದೆ. ಉಭಯ ತಂಡಗಳು ಇಲ್ಲಿಯವರೆಗೆ ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 26 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ ತಂಡವು 17 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ 8 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಮೂಡಿಬಂದಿರಲಿಲ್ಲ. ಅಂದರೆ ಇಲ್ಲಿ ಶ್ರೀಲಂಕಾಗಿಂತ ಭಾರತ ತಂಡವೇ ಮೇಲುಗೈ ಹೊಂದಿರುವುದು ಸ್ಪಷ್ಟ.

ಇದನ್ನೂ ಓದಿ
IPL 2023: 2 ದೇಶಗಳಿಂದ ಐಪಿಎಲ್​ಗೆ ಆಯ್ಕೆಯಾದ ಏಕೈಕ ಕ್ರಿಕೆಟಿಗ
IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
IPL 2023: ಐಪಿಎಲ್​ಗೆ ನಮೀಬಿಯಾ, ಐರ್ಲೆಂಡ್, ಜಿಂಬಾಬ್ವೆ ಆಟಗಾರರು ಎಂಟ್ರಿ
IPL 2023 RCB Team: RCB ಹೊಸ ತಂಡ ಹೀಗಿದೆ

ಇದನ್ನೂ ಓದಿ: Team India New Jersey 2023: ಟೀಮ್ ಇಂಡಿಯಾದ ಹೊಸ ಜೆರ್ಸಿ ಅನಾವರಣ

ಇನ್ನು ಉಭಯ ತಂಡಗಳ ನಡುವಣ ಟಿ20 ಸರಣಿಯ ಫಲಿತಾಂಶಗಳನ್ನು ನೋಡುವುದಾದರೆ, ಎರಡೂ ತಂಡಗಳು 9 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಶ್ರೀಲಂಕಾ ಗೆದ್ದಿರುವುದು ಕೇವಲ 1 ಬಾರಿ ಮಾತ್ರ. ಅಂದರೆ ಭಾರತ ತಂಡವು 7 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಇನ್ನು ಪಂದ್ಯವು ರದ್ದಾದ ಕಾರಣ ಫಲಿತಾಂಶ ಮೂಡಿಬಂದಿರಲಿಲ್ಲ.

ಹಾಗೆಯೇ ಕೊನೆಯ ಬಾರಿ ಉಭಯ ತಂಡಗಳು ಸರಣಿಯಲ್ಲಿ ಮುಖಾಮುಖಿಯಾದಾಗ ಟೀಮ್ ಇಂಡಿಯಾ ಶ್ರೀಲಂಕಾವನ್ನು ವೈಟ್‌ವಾಶ್ ಮಾಡಿತ್ತು. ಹೀಗಾಗಿಯೇ ಈ ಬಾರಿ ಕೂಡ ಟೀಮ್ ಇಂಡಿಯಾ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಇದಾಗ್ಯೂ ಯುವ ಪಡೆಯನ್ನು ಹೊಂದಿರುವ ಲಂಕಾದಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಭಾರತ-ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ:-

  • ಜನವರಿ 3: ಮೊದಲ ಟಿ20 ಪಂದ್ಯ (ಸ್ಥಳ-ವಾಂಖೆಡೆ ಸ್ಟೇಡಿಯಂ)
  • ಜನವರಿ 5: ಎರಡನೇ ಟಿ20 ಪಂದ್ಯ (ಸ್ಥಳ- ಪುಣೆ ಕ್ರಿಕೆಟ್ ಸ್ಟೇಡಿಯಂ)
  • ಜನವರಿ 7: ಮೂರನೇ ಟಿ20 ಪಂದ್ಯ (ಸ್ಥಳ- ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ- ರಾಜ್​ಕೋಟ್)

ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಟೀಮ್ ಇಂಡಿಯಾ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.

ಶ್ರೀಲಂಕಾ ಟಿ20 ತಂಡ: ಕುಸಾಲ್ ಮೆಂಡಿಸ್, ದಸುನ್ ಶನಕ (ನಾಯಕ) , ಪಾತುಂ ನಿಸ್ಸಂಕ , ಧನಂಜಯ ಡಿ ಸಿಲ್ವ , ಚರಿತ್ ಅಸಲಂಕ , ಭಾನುಕ ರಾಜಪಕ್ಸೆ , ವನಿಂದು ಹಸರಂಗ , ಚಾಮಿಕ ಕರುಣಾರತ್ನೆ , ಮಹೀಶ್ ತೀಕ್ಷಣ , ದಿಲ್ಶನ್ ಮಧುಶಂಕ , ಅಶ್ಮೋದ್ ಕುಮಾರ , ಅವಿಶ್ಕ ಕುಮಾರ , ಅವಿಶ್ಕ ಕುಮಾರ ವೆಲ್ಲಲಾಗೆ , ನುವಾನ್ ತುಷಾರ , ಕಸುನ್ ರಜಿತ , ಸದೀರ ಸಮರವಿಕ್ರಮ.