IND vs WI: ಜುಲೈನಲ್ಲಿ ಭಾರತ ತಂಡದಿಂದ ವೆಸ್ಟ್​ ಇಂಡೀಸ್ ಪ್ರವಾಸ: ವೇಳಾಪಟ್ಟಿ ಪ್ರಕಟ, ಪಂದ್ಯ ಎಷ್ಟು ಗಂಟೆಗೆ?

| Updated By: Vinay Bhat

Updated on: Jun 02, 2022 | 11:36 AM

India vs West Indies: ಜುಲೈ ತಿಂಗಳಾಂತ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಸರಣಿಯಲ್ಲಿ ಭಾರತ ತಂಡ ಮೂರು ಏಕದಿನ ಪಂದ್ಯವನ್ನಾಡಲಿದ್ದು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕೂಡ ಕಾದಾಡಲಿದೆ.

IND vs WI: ಜುಲೈನಲ್ಲಿ ಭಾರತ ತಂಡದಿಂದ ವೆಸ್ಟ್​ ಇಂಡೀಸ್ ಪ್ರವಾಸ: ವೇಳಾಪಟ್ಟಿ ಪ್ರಕಟ, ಪಂದ್ಯ ಎಷ್ಟು ಗಂಟೆಗೆ?
Indias tour of the West Indies
Follow us on

ಭಾರತ ಕ್ರಿಕೆಟ್ ತಂಡ (Indian Cricket Team) ಈ ವರ್ಷ ಬಿಡುವಿಲ್ಲದೆ ಸತತವಾಗಿ ಕ್ರಿಕೆಟ್ ಆಡಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ಈಗಾಗಲೇ ಮುಕ್ತಾಯಗೊಂಡಿದ್ದು ಜೂನ್ 9 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಲಿದೆ. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ ಒಂದು ಟೆಸ್ಟ್ ಜೊತೆಗೆ ಏಕದಿನ ಮತ್ತು ಟಿ20 ಸರಣಿಯಲ್ಲಿ ಕಾದಾಟ ನಡೆಸಲಿದೆ. ಇಲ್ಲಿಂದ ಐರ್ಲೆಂಡ್​ಗೆ ತೆರಳಲಿದೆ. ಇದಾದ ಬಳಿಕ ವೆಸ್ಟ್​ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಜುಲೈ ತಿಂಗಳಾಂತ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ (India vs West Indies) ಸರಣಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಸರಣಿಯಲ್ಲಿ ಭಾರತ ತಂಡ ಮೂರು ಏಕದಿನ ಪಂದ್ಯವನ್ನಾಡಲಿದ್ದು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕೂಡ ಕಾದಾಡಲಿದೆ. ಈ ವೈಟ್‌ಬಾಲ್ ಸರಣಿಯ ವೇಳಾಪಟ್ಟಿಯನ್ನು ಕ್ರಿಕೆಟ್ ವೆಸ್ಟ್ ಇಂಡೀಸ್ ಪ್ರಕಟ ಮಾಡಿದೆ.

ಜುಲೈ 22ರಿಂದ ಆಗಸ್ಟ್ 7ರವರೆಗೆ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯನ್ನಾಡಲಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಜುಲೈ 29ರಂದು ನಡೆಯಲಿದ್ದು ದಕ್ಷಿಣ ಟ್ರಿನಿಡಾಡ್‌ನ ಬ್ರಿಯನ್ ಲಾರಾ ಕ್ರಿಕಟ್ ಅಕಾಡೆಮಿಯಲ್ಲಿ ಈ ಪಂದ್ಯ ನಡೆಯಲಿದೆ. ಅದಾದ ಬಳಿಕ ಎರಡು ಹಾಗೂ ಮೂರನೇ ಪಂದ್ಯಗಳು ಸತತವಾಗಿ ನಡೆಯಲಿದ್ದು ಆಗಸ್ಟ್ 1 ಹಾಗೂ 2ರಂದು ಸೈಂಟ್ಸ್ ಕಿಟ್ಸ್‌ನ ವಾರ್ನರ್ ಪಾರ್ಕ್‌ನಲ್ಲಿ ಈ ಪಂದ್ಯಗಳು ನಡೆಯಲಿದೆ. ಇನ್ನು ನಾಲ್ಕು ಹಾಗೂ ಐದನೇ ಪಂದ್ಯಗಳು ಕೂಡ ಸತತವಾಗಿ ನಡೆಯಲಿದ್ದು ಯುಎಸ್‌ಎಯ ಫ್ಲೋರಿಡಾದಲ್ಲಿ ಈ ಪಂದ್ಯಗಳು ಆಯೋಜನೆಯಾಗಲಿದೆ.

IND vs SA: ಭಾರತಕ್ಕೆ ಬರುತ್ತಿದ್ದಂತೆ ದಕ್ಷಿಣ ಆಫ್ರಿಕಾ ಆಟಗಾರರಿಗೆ ಶುರುವಾಗಿದೆ ಭಯ: ಇದಕ್ಕೆ ಕಾರಣ ಈ ಬೌಲರ್

ಇದನ್ನೂ ಓದಿ
IPL 2022, RCB: ಐಪಿಎಲ್ 2023ಕ್ಕೂ ಮುನ್ನ ಈ 5 ಆಟಗಾರರನ್ನು ರಿಲೀಸ್ ಮಾಡಲಿದೆ ಆರ್​ಸಿಬಿ
ಹಳ್ಳಿ ಹುಡುಗಿಯರ ಥ್ರೋಬಾಲ್ ಸಾಧನೆ; ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟ ದಾವಣಗೆರೆ ರೈತರ ಮಕ್ಕಳು
Sourav Ganguly: ಸೌರವ್ ಗಂಗೂಲಿ ಹೊಸ ಯೋಜನೆ ಯಾವುದು?: ಎಲ್ಲ ಗೊಂದಲಗಳಿಗೆ ಸ್ಪಷ್ಟನೆ ನೀಡಿದ ಬಿಸಿಸಿಐ ಅಧ್ಯಕ್ಷ
Deepak Chahar Wedding: ಹರಿಶಿಣ ಕಾರ್ಯಕ್ರಮದಲ್ಲಿ ಮಿಂಚಿದ ದೀಪಕ್- ಜಯಾ; ಫೋಟೋ ನೋಡಿ

ಮೂರು ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 22, 24 ಮತ್ತು 27 ರಂದು ಪೋರ್ಟ್ ಆಫ್ ಸ್ಪೇನ್‌ ನ ಪ್ರಸಿದ್ಧ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿವೆ. ಭಾರತೀಯ ಕಾಲಮಾನದ ಪ್ರಕಾರ ಏಕದಿನ ಪಂದ್ಯಗಳು ಸಂಜೆ 7 ಗಂಟೆಗೆ ಶುರುವಾಗಲಿದೆ. ಅಂತೆಯೆ ಟಿ20 ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

ಭಾರತ ವಿರುದ್ಧದ ಸರಣಿಯ ಬಗ್ಗೆ ಮಾತನಾಡಿದ ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್, ವೆಸ್ಟ್ ಇಂಡೀಸ್ ತಂಡವು ಕ್ರಿಕೆಟ್ ಬ್ರ್ಯಾಂಡ್ ಅನ್ನು ಪುನಃಸ್ಥಾಪಿಸಲು ಉತ್ಸುಕವಾಗಿದೆ. ಈ ಬಾರಿ ನಾವು ಯುವ ತಂಡವನ್ನು ಹೊಂದಿದ್ದೇವೆ. ಟೀಮ್ ಇಂಡಿಯಾ ವಿರುದ್ಧ ಕಠಿಣ ಪೈಪೋಟಿ ನೀಡುವ ನಿಟ್ಟಿನಲ್ಲಿ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಾನು ಈ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಂತೆ, ನಮ್ಮ ಮಹತ್ವಾಕಾಂಕ್ಷೆಯು ಯಾವಾಗಲೂ ಸ್ಪರ್ಧಾತ್ಮಕವಾಗಿರಬೇಕು. ಮುಂಬರುವ ಟಿ20 ಮತ್ತು 50 ಓವರ್‌ಗಳ ವಿಶ್ವಕಪ್‌ಗಾಗಿ ನಮ್ಮ ಸಿದ್ಧತೆಗಳನ್ನು ಉತ್ತಮಗೊಳಿಸಲು ಈ ಸರಣಿ ನಮಗೆ ಸಹಕಾರಿಯಾಗಲಿದೆ, ಎಂಬುದು ಅವರ ಮಾತು.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.