IND vs WI: ನಿರ್ಣಾಯಕ ಹಂತದಲ್ಲಿ ಕ್ಯಾಚ್​ ಬಿಟ್ಟ ಭುವಿ; ಮೈದಾನದಲ್ಲೇ ಬಾಲ್ ಒದ್ದು ಕೋಪಗೊಂಡ ರೋಹಿತ್

| Updated By: ಪೃಥ್ವಿಶಂಕರ

Updated on: Feb 19, 2022 | 11:15 AM

Rohit Sharma: ರೋವ್‌ಮನ್ ಪೊವೆಲ್ ದೊಡ್ಡ ಹೊಡೆತವನ್ನು ಆಡುವ ಮನಸ್ಥಿತಿಯಲ್ಲಿ ಚೆಂಡನ್ನು ಎತ್ತರಕ್ಕೆ ಆಡಿದರು. ಭುವನೇಶ್ವರ್ ಕುಮಾರ್ ಸುಲಭವಾಗಿ ಕ್ಯಾಚ್ ಹಿಡಿಯಬಹುದಿತ್ತು, ಆದರೆ ನಿರ್ಣಾಯಕ ಕ್ಷಣದಲ್ಲಿ ಅವರು ಕ್ಯಾಚ್ ಅನ್ನು ಕೈಬಿಟ್ಟರು. ಇದರಿಂದ ಪಕ್ಕದಲ್ಲೇ ನಿಂತಿದ್ದ ರೋಹಿತ್ ಶರ್ಮಾ ಸಿಟ್ಟಿಗೆದ್ದರು.

IND vs WI: ನಿರ್ಣಾಯಕ ಹಂತದಲ್ಲಿ ಕ್ಯಾಚ್​ ಬಿಟ್ಟ ಭುವಿ; ಮೈದಾನದಲ್ಲೇ ಬಾಲ್ ಒದ್ದು ಕೋಪಗೊಂಡ ರೋಹಿತ್
ರೋಹಿತ್- ಭುವಿ ಪ್ರಸಂಗ
Follow us on

ನಿನ್ನೆ ನಡೆದ ಎರಡನೇ ರೋಚಕ ಟಿ20 ಪಂದ್ಯದಲ್ಲಿ ಭಾರತ (India) ತಂಡ ವೆಸ್ಟ್ ಇಂಡೀಸ್ (West Indies)ವಿರುದ್ಧ ಎಂಟು ರನ್ ಗಳ ಜಯ ಸಾಧಿಸಿದೆ . ವೆಸ್ಟ್ ಇಂಡೀಸ್ ನಿಗದಿತ 20 ಓವರ್​ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ, ಭಾರತ ನೀಡಿದ್ದ 187 ರನ್ ಗಳ ಗುರಿಯನ್ನು ಮುಟ್ಟುವಲ್ಲಿ ವಿಫವಾಯಿತು. ಭಾರತ ಇದೀಗ ಮೂರು ಪಂದ್ಯಗಳ T20I ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ವೆಸ್ಟ್ ಇಂಡೀಸ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರೋವ್‌ಮನ್ ಪೊವೆಲ್ (68) ಮತ್ತು ನಿಕೋಲಸ್ ಪೂರನ್ (62) ಮೈದಾನದಲ್ಲಿ ಬ್ಯಾಟಿಂಗ್​ನಲ್ಲಿರುವಷ್ಟು ಸಮಯ ವೆಸ್ಟ್ ಇಂಡೀಸ್ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತದೆ ಎಂದು ತೋರುತ್ತಿತ್ತು ಇಬ್ಬರೂ ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಸಿಡಿಸಿ ಭಾರತದ ಬೌಲಿಂಗ್‌ಗೆ ಕಡಿವಾಣ ಹಾಕಿದರು. ಮೂರನೇ ವಿಕೆಟ್‌ಗೆ 100 ರನ್ ಸೇರಿಸಿದರು. ಕೊನೆಯ ಮೂರು ಓವರ್‌ಗಳಲ್ಲಿ ಗೆಲುವಿನ ಅಲೆಯು ವೆಸ್ಟ್ ಇಂಡೀಸ್ ಪರವಾಗಿ ತಿರುಗಿತು. ಆದರೆ 19 ಮತ್ತು 20ನೇ ಓವರ್​ನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್ ಪಟೇಲ್ ಪಂದ್ಯದ ದಿಕ್ಕನ್ನೂ ಬದಲಿಸಿದರು.

ವಿಂಡೀಸ್ ಸೋಲಿಗೆ ಕಾರಣವೇನು?

ಪೊವೆಲ್ ಮತ್ತು ಪುರನ್ ದೊಡ್ಡ ಹೊಡೆತಗಳನ್ನು ಆಡಲು ಭಾರತದ ಬೌಲರ್​ಗಳು ಅವಕಾಶ ನೀಡಲಿಲ್ಲ. ಹಾಗಾಗಿ ಪಂದ್ಯ ಭಾರತದ ಪರ ಸಾಗಿತು. ಕೊನೆಯ ಓವರ್‌ನಲ್ಲಿ ಪೊವೆಲ್ ಎರಡು ಸಿಕ್ಸರ್ ಬಾರಿಸಿ ಭಾರತೀಯ ಅಭಿಮಾನಿಗಳಲ್ಲಿ ಟೆನ್ಶನ್ ಹೆಚ್ಚಿಸಿದರು. ಆದರೆ ಕೊನೆಯ ಎರಡು ಎಸೆತಗಳಲ್ಲಿ ಹರ್ಷಲ್ ಪಟೇಲ್ ದೊಡ್ಡ ಹೊಡೆತಗಳಿಗೆ ಅವಕಾಶ ನೀಡಲಿಲ್ಲ, ಅಲ್ಲಿ ಭಾರತ ಪಂದ್ಯವನ್ನು ಗೆದ್ದಿತು. ಈ ಗೆಲುವಿನೊಂದಿಗೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಕೋಪಗೊಂಡ ಘಟನೆಯೂ ನಡೆಯಿತು. ಆವೇಶದ ಭರದಲ್ಲಿ ಮೈದಾನದಲ್ಲಿ ಚೆಂಡನ್ನು ಒದ್ದು ಭುವನೇಶ್ವರ್ ಕುಮಾರ್ ಮೇಲೆ ರೋಹಿತ್ ಗರಂ ಆದರು.

ನಿಖರವಾಗಿ ಏನಾಯಿತು?

ಪಂದ್ಯದ 16ನೇ ಓವರ್ ಪ್ರಾರಂಭವಾಗಿತ್ತು. ರೋವ್ಮನ್ ಪೊವೆಲ್ ಮತ್ತು ನಿಕೋಲಸ್ ಪೂರನ್ aಬ್ಬರಿಸಲು ಪ್ರಾರಂಭಿಸಿದರು. ಈ ಜೋಡಿ ಮುರಿಯುವ ಅಗತ್ಯವಿತ್ತು. ಪಂದ್ಯ ಸಂಪೂರ್ಣವಾಗಿ ವೆಸ್ಟ್ ಇಂಡೀಸ್ ಕೈಯಲ್ಲಿತ್ತು. ಹೀಗಿರುವಾಗ ಈ ಜೋಡಿಯನ್ನು ಮುರಿದು ವಿಕೆಟ್ ಕಬಳಿಸುವುದು ಅನಿವಾರ್ಯವಾಯಿತು. 16ನೇ ಓವರ್​ನಲ್ಲಿ ಭುವನೇಶ್ವರ್ ಕುಮಾರ್​ಗೆ ಈ ಅವಕಾಶ ಸಿಕ್ಕಿತ್ತು. ಅವರ ಬೌಲಿಂಗ್‌ನಲ್ಲಿ, ರೋವ್‌ಮನ್ ಪೊವೆಲ್ ದೊಡ್ಡ ಹೊಡೆತವನ್ನು ಆಡುವ ಮನಸ್ಥಿತಿಯಲ್ಲಿ ಚೆಂಡನ್ನು ಎತ್ತರಕ್ಕೆ ಆಡಿದರು. ಭುವನೇಶ್ವರ್ ಕುಮಾರ್ ಸುಲಭವಾಗಿ ಕ್ಯಾಚ್ ಹಿಡಿಯಬಹುದಿತ್ತು, ಆದರೆ ನಿರ್ಣಾಯಕ ಕ್ಷಣದಲ್ಲಿ ಅವರು ಕ್ಯಾಚ್ ಅನ್ನು ಕೈಬಿಟ್ಟರು. ಇದರಿಂದ ಪಕ್ಕದಲ್ಲೇ ನಿಂತಿದ್ದ ರೋಹಿತ್ ಶರ್ಮಾ ಸಿಟ್ಟಿಗೆದ್ದರು. ಅವರು ಮೈದಾನದಲ್ಲಿ ಚೆಂಡನ್ನು ಒದ್ದು ತಮ್ಮ ಆಕ್ರೋಶ ಹೊರ ಹಾಕಿದರು.

ಭುವನೇಶ್ವರ್ ಅವರ 19ನೇ ಓವರ್ ನಿರ್ಣಾಯಕ

ಭುವನೇಶ್ವರ್ ಕುಮಾರ್ ಅವರ ಕ್ಯಾಚ್ ದುಬಾರಿ ಎನಿಸಿದರೂ, 19ನೇ ಓವರ್‌ನಲ್ಲಿ ಅವರು ಉತ್ತಮವಾಗಿ ಬೌಲಿಂಗ್ ಮಾಡಿದರು. ಭುವನೇಶ್ವರ್ ಆ ಓವರ್‌ನಲ್ಲಿ ನಿಕೋಲಸ್ ಪುರಾನ್ ಅವರ ನಿರ್ಣಾಯಕ ವಿಕೆಟ್ ಪಡೆದರು. ಆದ್ದರಿಂದ 20ನೇ ಓವರ್ ಬೌಲ್ ಮಾಡಿದ ಹರ್ಷಲ್ ಪಟೇಲ್​ಗೆ ಟಾಸ್ಕ್ ಸುಲಭವಾಯಿತು. 19ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದು ಕೇವಲ 4 ರನ್ ಮಾತ್ರ ಬಿಟ್ಟುಕೊಟ್ಟರು. 20ನೇ ಓವರ್​ನಲ್ಲಿ ಹರ್ಷಲ್ ಹೆಚ್ಚಾಗಿ ಯಾರ್ಕರ್ ಎಸೆತಗಳನ್ನು ಹಾಕಿದ್ದರಿಂದ ಪೊವೆಲ್ ಮುಕ್ತವಾಗಿ ಚೆಂಡನ್ನು ಹೊಡೆಯಲು ಅವಕಾಶ ಸಿಗಲಿಲ್ಲ.

ಇದನ್ನೂ ಓದಿ:Rohit Sharma: ಪಂದ್ಯ ಮುಗಿದ ಬಳಿಕ ಕೊಹ್ಲಿ ಆಟದ ಬಗ್ಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ನೋಡಿ