ಭಾರತ ತಂಡದ ದಿಗ್ಗಜ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಅವರ ಫಾರ್ಮ್ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಕೊಹ್ಲಿಯ ಬ್ಯಾಟ್ ಅಬ್ಬರಿಸುತ್ತಿಲ್ಲ ಎಂದು ಎಲ್ಲರೂ ಅಣಕಿಸುತ್ತಿದ್ದರು. ಕೊಹ್ಲಿ 2019 ರಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿಲ್ಲ, ಆದರೆ ಶುಕ್ರವಾರ ವೆಸ್ಟ್ ಇಂಡೀಸ್ (West Indies) ವಿರುದ್ಧ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ವಿರಾಟ್ ತಮ್ಮ ಹಳೆಯ ಫಾರ್ಮ್ ಅನ್ನು ಪ್ರದರ್ಶಿಸಿದರು ಮತ್ತು ಅದ್ಭುತ ಅರ್ಧಶತಕವನ್ನು ಗಳಿಸಿದ್ದಾರೆ. ಈ ಪಂದ್ಯದಲ್ಲಿ ಬೌಲರ್‌ಗಳ ಮೇಲೆ ವಿರಾಟ್ ಬ್ಯಾಟ್ ಅಬ್ಬರಿಸಿದ್ದು ತಮ್ಮ ಹಳೆಯ ಶೈಲಿಯಲ್ಲಿ ಕಾಣಿಸಿಕೊಂಡರು. ಈ ಪಂದ್ಯಕ್ಕೂ ಮುನ್ನ ವಿರಾಟ್ ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಅರ್ಧಶತಕ ಸಿಡಿಸಿದ್ದರು.
ಇದು ವಿರಾಟ್ ಅವರ 30ನೇ ಅರ್ಧಶತಕವಾಗಿದ್ದು, ಅವರು ಸಿಕ್ಸರ್‌ನೊಂದಿಗೆ ಪೂರ್ಣಗೊಳಿಸಿದರು. ವಿರಾಟ್ 50 ರನ್ ಗಳಿಸಲು 39 ಎಸೆತಗಳನ್ನು ಎದುರಿಸಿದರು. ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಇದು ವಿರಾಟ್ ಅವರ ಮೊದಲ ಅರ್ಧಶತಕವಾಗಿದೆ. ಏಕದಿನ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿದ್ದರು.
Virat Kohli at it from the word go. Brings up a fine FIFTY off 39 deliveries ??
This is his 30th in T20Is.
Live – https://t.co/vJtANowUFr #INDvWI @Paytm pic.twitter.com/PNnX5zGXbS
— BCCI (@BCCI) February 18, 2022
ಅರ್ಧಶತಕ ಗಳಿಸಿದ ನಂತರ ಔಟ್
ಆದರೆ, ಕೊಹ್ಲಿ ಅರ್ಧಶತಕ ದಾಖಲಿಸಿದ ನಂತರ ತಮ್ಮ ವಿಕೆಟ್ ಒಪ್ಪಿಸಿದರು. ರೋಸ್ಟನ್ ಚೇಸ್ ಎಸೆದ 14ನೇ ಓವರ್ನ ಎರಡನೇ ಎಸೆತದಲ್ಲಿ ಕೊಹ್ಲಿ ಸಿಕ್ಸರ್ ಬಾರಿಸಿ ಅರ್ಧಶತಕ ಪೂರೈಸಿದರು. ಆದರೆ ಎರಡು ಎಸೆತಗಳ ನಂತರ ಚೇಸ್ ಕೊಹ್ಲಿಗೆ ಪೆವಿಲಿಯನ್ ಹಾದಿ ತೋರಿಸಿದರು. ಚೇಸ್‌ನ ಫ್ಲೈಟ್ ಬಾಲ್‌ನಿಂದ ರನ್ ತೆಗೆದುಕೊಳ್ಳಲು ಕೊಹ್ಲಿ ಪ್ರಯತ್ನಿಸಿದರು ಆದರೆ ಕ್ಲಿನ್ ಬೌಲ್ಡ್ ಆದರು. ಕೊಹ್ಲಿ 41 ಎಸೆತಗಳಲ್ಲಿ 52 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ, ಈ ಬ್ಯಾಟ್ಸ್‌ಮನ್ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದಾರೆ.
ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಅನ್ನು ಕೊಹ್ಲಿ ಉತ್ತಮವಾಗಿ ನಿಭಾಯಿಸಿದ್ದಾರೆ. ಇಶಾನ್ ಕಿಶನ್ ಬೇಗನೇ ಔಟಾದರು. ಇದಾದ ನಂತರ ರೋಹಿತ್ ಶರ್ಮಾ ಕೂಡ ವೈಯಕ್ತಿಕ ಸ್ಕೋರ್ 19 ರಲ್ಲಿ ಔಟಾದರು. ಚೇಸ್ ಅವರೆ ರೋಹಿತ್ ಅವರನ್ನು ಔಟ್ ಮಾಡಿದರು. ಇದಾದ ನಂತರ ಚೇಸ್ ಸೂರ್ಯಕುಮಾರ್ ಯಾದವ್ ಅವರನ್ನು ಬಲಿಪಶು ಮಾಡಿದರು. ಸೂರ್ಯಕುಮಾರ್ ಚೇಸ್‌ಗೆ ಕ್ಯಾಚ್ ನೀಡಿದರು. ಏತನ್ಮಧ್ಯೆ, ಕೊಹ್ಲಿ ಇನ್ನೊಂದು ತುದಿಯಿಂದ ಭಾರತದ ಇನ್ನಿಂಗ್ಸ್ ಅನ್ನು ನಿಭಾಯಿಸುತ್ತಿದ್ದರೂ ಸ್ಕೋರ್ಬೋರ್ಡ್ ಅನ್ನು ಮೇಲಕ್ಕೆತ್ತಿದರು. ಅವರು ಎರಡನೇ ವಿಕೆಟ್‌ಗೆ ರೋಹಿತ್‌ರೊಂದಿಗೆ 49 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ನಂತರ ರಿಷಬ್ ಪಂತ್ ಅವರೊಂದಿಗೆ 34 ರನ್ ಸೇರಿಸಿದರು.
ಇದನ್ನೂ ಓದಿ:IND vs WI, 2nd T20, LIVE Score: ಕೊಹ್ಲಿ ಅರ್ಧಶತಕ ಗಳಿಸಿ ಔಟ್; ಭಾರತದ 150 ರನ್ ಪೂರ್ಣ