
ಟೀಂ ಇಂಡಿಯಾದ ನಾಯಕತ್ವವಹಿಸಿಕೊಂಡ ಬಳಿಕ ರನ್‌ಗಳ ಮಳೆ ಹರಿಸುತ್ತಿರುವ ಶುಭ್ಮನ್ ಗಿಲ್, ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿದ್ದಾರೆ. ಇದು ಏಕದಿನ ಮಾದರಿಯಲ್ಲಿ ಗಿಲ್ ಅವರ 10ನೇ ಏಕದಿನ ಶತಕವಾಗಿದೆ. ತಿರುವನಂತಪುರದಲ್ಲಿ ನಡೆದ ಈ ಪಂದ್ಯದಲ್ಲಿ ರೋಹಿತ್ ಜೊತೆಗೂಡಿ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿಕೊಟ್ಟ ಗಿಲ್, 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರ ಜೊತೆಗೆ ತಂಡವನ್ನು ಶತಕದ ಗಡಿ ಕೂಡ ದಾಟಿಸಿದರು. ಇದಾದ ಬಳಿಕವೂ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಗಿಲ್, 96 ಎಸೆತಗಳಲ್ಲಿ ಶತಕ ಪೂರೈಸಿದರು.
ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ಇದು ಭಾರತ ತಂಡದ ಮೂರನೇ ಪಂದ್ಯವಾಗಿದ್ದು, ಶುಭ್ಮನ್ ಗಿಲ್ ಅವರ ಎರಡನೇ ಪಂದ್ಯವಾಗಿತ್ತು. ಭಾರತ ಕೊನೆಯ ಬಾರಿಗೆ ಶ್ರೀಲಂಕಾವನ್ನು ಎದುರಿಸಿದ್ದು 2023 ರಲ್ಲಿ, ಆ ಪಂದ್ಯದಲ್ಲಿ ಶುಭ್ಮನ್ ಗಿಲ್ ಅದ್ಭುತ ಶತಕ ಬಾರಿಸಿದ್ದರು. ಅದು ಗಿಲ್ ಏಕದಿನ ವೃತ್ತಿಜೀವನದ ಎರಡನೇ ಶತಕವಾಗಿತ್ತು. ಇದೀಗ ಮೂರುವರೆ ವರ್ಷಗಳ ನಂತರ ಅಂದರೆ ಸೆಪ್ಟೆಂಬರ್ 27 ರ ಭಾನುವಾರದಂದು ಗಿಲ್ ಈ ಮೈದಾನದಲ್ಲಿ ತಮ್ಮ ಸತತ ಎರಡನೇ ಶತಕವನ್ನು ಮತ್ತು ಏಕದಿನ ವೃತ್ತಿಜೀವನದ 10ನೇ ಶತಕವನ್ನು ಪೂರೈಸಿದರು.
That feeling when you bring up ODI century No. 10 🤌💙
Captain @ShubmanGill taking a well-earned moment to soak in the applause 👏
Updates ▶️ https://t.co/O2cs86p4gq#TeamIndia | #INDvWI | @mflone_ pic.twitter.com/395GvC34x5
— BCCI (@BCCI) September 27, 2026
ಈ ಮೂರುವರೆ ವರ್ಷಗಳಲ್ಲಿನ ಅತಿದೊಡ್ಡ ವ್ಯತ್ಯಾಸವೆಂದರೆ ಈ ಬಾರಿ ಶುಭ್ಮನ್ ಗಿಲ್ ನಾಯಕನಾಗಿ ಈ ಶತಕ ಸಿಡಿಸಿದರು. 296 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಶುಭ್ಮನ್ ಗಿಲ್, ರೋಹಿತ್ ಶರ್ಮಾ ಜೊತೆಗೂಡಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಇದಾದ ಬಳಿಕ ವಿರಾಟ್ ಕೊಹ್ಲಿ ಅವರೊಂದಿಗೆ ಶತಕದ ಜೊತೆಯಾಟವನ್ನು ಕಟ್ಟಿದರು. ಇವರಿಬ್ಬರ ಆಟದಿಂದಾಗಿ ಟೀಂ ಇಂಡಿಯಾದ ಗೆಲುವು ಖಚಿತವಾಯಿತು. ಅಂತಿಮವಾಗಿ ಗಿಲ್ ತಮ್ಮ ಇನ್ನಿಂಗ್ಸ್ನಲ್ಲಿ 108 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 110 ರನ್ ಬಾರಿಸಿ ಔಟಾದರು.
ಮೊದಲ ಏಕದಿನ ಪಂದ್ಯದಿಂದ ಶುಭ್ಮನ್ ಗಿಲ್ ಔಟ್? ಕೋಚ್ ಹೇಳಿದ್ದಿದು
ಆದಾಗ್ಯೂ, ಗಿಲ್ ಸಿಡಿಸಿದ ಈ ಶತಕದಲ್ಲಿ ವಿಂಡೀಸ್ ಫಿಲ್ಡರ್ಗಳ ಪಾತ್ರವೂ ಅಪಾರವಾಗಿತ್ತು. ವಾಸ್ತವವಾಗಿ ಗಿಲ್ ಇನ್ನಿಂಗ್ಸ್‌ನ ಆರಂಭದಲ್ಲಿಯೇ ಅಂದರೆ ಕೇವಲ 11 ರನ್‌ಗಳಿಸಿದ್ದಾಗ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನೇರ ಕ್ಯಾಚ್ ನೀಡಿದ್ದರು. ಆದರೆ ವೆಸ್ಟ್ ಇಂಡೀಸ್ ಫೀಲ್ಡರ್ ಆ ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು. ಅದರ ನಂತರ ಗಿಲ್ ತಮ್ಮ ಶತಕವನ್ನು ಪೂರೈಸುವವರೆಗೆ ವಿಂಡೀಸ್ ಪಡೆಗೆ ಮತ್ತೊಂದು ಅವಕಾಶವನ್ನು ನೀಡಲಿಲ್ಲ. ಗಿಲ್ ಆನ್-ಡ್ರೈವ್ ಬೌಂಡರಿ ಮೂಲಕ 96 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಇದು ಈ ವರ್ಷ ಗಿಲ್ ಅವರ ಎರಡನೇ ಏಕದಿನ ಶತಕ ಮತ್ತು ಈ ಸ್ವರೂಪದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಶತಕವಾಗಿದೆ.
Published On - 9:03 pm, Sun, 27 September 26