WTC ಫೈನಲ್ಗೂ ಮುನ್ನ ಟೀಮ್ ಇಂಡಿಯಾ ಮುಂದಿದೆ 10 ಪಂದ್ಯಗಳು
Team India: ಭಾರತ ತಂಡವು ಮುಂದಿನ ಆರು ತಿಂಗಳಲ್ಲಿ 7 ಟಿ20 ಪಂದ್ಯಗಳನ್ನಾಡಲಿದೆ. ಆದರೆ ಇದರ ನಡುವೆ 10 ಟೆಸ್ಟ್ ಪಂದ್ಯಗಳಲ್ಲೂ ಕಣಕ್ಕಿಳಿಯಲಿವೆ. ಈ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕಾರಣ ಟೀಮ್ ಇಂಡಿಯಾ ಪಾಲಿಗೆ ನಿರ್ನಾಯಕ ಎಂಬುದು ವಿಶೇಷ.
ಟೀಮ್ ಇಂಡಿಯಾ ಕಣಕ್ಕಿಳಿದು ತಿಂಗಳು ಕಳೆದಿವೆ. ಆಗಸ್ಟ್ 7 ರಂದು ಶ್ರೀಲಂಕಾ ವಿರುದ್ಧ ಕೊನೆಯ ಪಂದ್ಯವಾಡಿದ ಭಾರತ ತಂಡವು ಇದೀಗ ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗುತ್ತಿದೆ. ಅದರಂತೆ ಸೆಪ್ಟೆಂಬರ್ 19 ರಿಂದ ಶುರುವಾಗಲಿರುವ ಬಾಂಗ್ಲಾದೇಶ್ ವಿರುದ್ಧದ ಸರಣಿಯ ಮೂಲಕ ಭಾರತ ತಂಡವು ಟೆಸ್ಟ್ ಕ್ರಿಕೆಟ್ಗೆ ಮರಳಲಿದೆ. ವಿಶೇಷ ಎಂದರೆ ಸೆಪ್ಟೆಂಬರ್ 19 ರಿಂದ ಜನವರಿ 7 ರವರೆಗೆ ಟೀಮ್ ಇಂಡಿಯಾ ಮೂರು ಟೆಸ್ಟ್ ಸರಣಿಗಳನ್ನು ಆಡಲಿದೆ.
ಈ ಟೆಸ್ಟ್ ಸರಣಿಗಳಲ್ಲಿ ಭಾರತ ತಂಡವು ಒಟ್ಟು 10 ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಇಲ್ಲಿ ಟೀಮ್ ಇಂಡಿಯಾ ಎದುರಾಳಿಗಳಾಗಿ ಕಾಣಿಸಿಕೊಳ್ಳಲಿರುವುದು ಬಾಂಗ್ಲಾದೇಶ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಎಂಬುದು ವಿಶೇಷ. ಈ ಸರಣಿಗಳು ಭಾರತದ ಪಾಲಿಗೆ ತುಂಬಾ ಮಹತ್ವದ್ದು.
ಏಕೆಂದರೆ ಈ ಮೂರು ಸರಣಿಗಳ ಮೂಲಕ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಭವಿಷ್ಯ ಕೂಡ ನಿರ್ಧಾರವಾಗಲಿದೆ. ಒಂದು ವೇಳೆ ಬಾಂಗ್ಲಾದೇಶ್ ವಿರುದ್ಧದ 2 ಪಂದ್ಯಗಳನ್ನು ಹಾಗೂ ನ್ಯೂಝಿಲೆಂಡ್ ವಿರುದ್ಧದ 3 ಪಂದ್ಯಗಳನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡರೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಆಡುವುದು ಖಚಿತವಾಗಲಿದೆ.
ಇನ್ನು ಬಾಂಗ್ಲಾದೇಶ್ ಹಾಗೂ ನ್ಯೂಝಿಲೆಂಡ್ ವಿರುದ್ಧದ ಸರಣಿಗಳಲ್ಲಿ ಟೀಮ್ ಇಂಡಿಯಾ ಕೆಲ ಪಂದ್ಯಗಳಲ್ಲಿ ಸೋತರೆ, ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಿರ್ಣಾಯಕವಾಗಲಿದೆ. ಹೀಗಾಗಿಯೇ ಬಾಂಗ್ಲಾ ಹಾಗೂ ಕಿವೀಸ್ ವಿರುದ್ಧದ ಸರಣಿಗಳು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು.
ಇದನ್ನೂ ಓದಿ: ಒಂದೇ ವರ್ಷ ಟೀಮ್ ಇಂಡಿಯಾದ 8 ಆಟಗಾರರು ನಿವೃತ್ತಿ..!
ಅದರಲ್ಲೂ ಬಾಂಗ್ಲಾದೇಶ್ ಹಾಗೂ ನ್ಯೂಝಿಲೆಂಡ್ ತಂಡಗಳನ್ನು ಟೀಮ್ ಇಂಡಿಯಾ ಭಾರತದಲ್ಲೇ ಎದುರಿಸಲಿದೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.
ಭಾರತ ತಂಡದ ಟೆಸ್ಟ್ ಸರಣಿಗಳ ವೇಳಾಪಟ್ಟಿ:
ಭಾರತ vs ಬಾಂಗ್ಲಾದೇಶ್ ಸರಣಿ ವೇಳಾಪಟ್ಟಿ:
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ | ಗುರುವಾರ, 19 ಸೆಪ್ಟೆಂಬರ್ 2024 | 9:30 AM | ಚೆನ್ನೈ |
2ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ | ಶುಕ್ರವಾರ, 27 ಸೆಪ್ಟೆಂಬರ್ 2024 | 9:30 AM | ಕಾನ್ಪುರ |
1ನೇ ಟಿ20, ಭಾರತ vs ಬಾಂಗ್ಲಾದೇಶ | ಸೋಮವಾರ, 7 ಅಕ್ಟೋಬರ್ 2024 | 7 PM | ಗ್ವಾಲಿಯರ್ |
2ನೇ ಟಿ20, ಭಾರತ vs ಬಾಂಗ್ಲಾದೇಶ | ಗುರುವಾರ, 10 ಅಕ್ಟೋಬರ್ 2024 | 7 PM | ದೆಹಲಿ |
3ನೇ ಟಿ20, ಭಾರತ vs ಬಾಂಗ್ಲಾದೇಶ | ಭಾನುವಾರ, 13 ಅಕ್ಟೋಬರ್ 2024 | 7 PM | ಹೈದರಾಬಾದ್ |
ಭಾರತ vs ನ್ಯೂಝಿಲೆಂಡ್ ಸರಣಿ:
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ | ಬುಧವಾರ, 16 ಅಕ್ಟೋಬರ್ 2024 | 9:30 AM | ಚೆನ್ನೈ |
2ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ | ಗುರುವಾರ, 24 ಅಕ್ಟೋಬರ್ 2024 | 9:30 AM | ಕಾನ್ಪುರ |
3ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ | ಶುಕ್ರವಾರ, 1 ನವೆಂಬರ್ 2024 | 9:30 AM | ಹೈದರಾಬಾದ್ |
ಭಾರತ vs ಆಸ್ಟ್ರೇಲಿಯಾ ಸರಣಿ:
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 22 ನವೆಂಬರ್ 2024 | 7:50 AM | ಪರ್ತ್ |
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) | ಶುಕ್ರವಾರ, 6 ಡಿಸೆಂಬರ್ 2024 | 9:30 AM | ಅಡಿಲೇಡ್ |
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶನಿವಾರ, 14 ಡಿಸೆಂಬರ್ 2024 | 5:50 AM | ಬ್ರಿಸ್ಬೇನ್ |
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಗುರುವಾರ, 26 ಡಿಸೆಂಬರ್ 2024 | 5 AM | ಮೆಲ್ಬೋರ್ನ್ |
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 3 ಜನವರಿ 2025 | 5 AM | ಸಿಡ್ನಿ |