AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG 3rd T20: ಭಾರತದ ವಿರುದ್ಧ ಸೋತರೂ, ಸರಣಿ ಗೆದ್ದ ಇಂಗ್ಲೆಂಡ್

India Women vs England Women: ಅರ್ಧಶತಕದ ಜೊತೆಯಾಟದ ಬೆನ್ನಲ್ಲೇ ಜೆಮಿಮಾ ರೊಡಿಗ್ರಾಸ್ (29) ಎಲ್​ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಇದರ ಬೆನ್ನಲ್ಲೇ 48 ರನ್ ಬಾರಿಸಿದ ಸ್ಮೃತಿ ಮಂಧಾನ ಕೂಡ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 19 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 127 ರನ್​ ಬಾರಿಸುವ ಮೂಲಕ ಐದು ವಿಕೆಟ್​ಗಳ ಜಯ ಸಾಧಿಸಿತು.

IND vs ENG 3rd T20: ಭಾರತದ ವಿರುದ್ಧ ಸೋತರೂ, ಸರಣಿ ಗೆದ್ದ ಇಂಗ್ಲೆಂಡ್
IND vs ENG
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 10, 2023 | 10:57 PM

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ (Team India) ಜಯ ಸಾಧಿಸಿದೆ. ಈ ಸೋಲಿನ ಹೊರತಾಗಿಯೂ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಇಂಗ್ಲೆಂಡ್ ತಂಡವು 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.

ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ವನಿತೆಯರು ಯಶಸ್ವಿಯಾಗಿದ್ದರು. ಮೊದಲ ಓವರ್​ನ ಮೂರನೇ ಎಸೆತದಲ್ಲೇ ರೇಣುಕಾ ಸಿಂಗ್ ಮಹಿಯಾ ಬೌಚಿಯರ್ (0) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ ಸೋಫಿಯಾ ಡಂಕ್ಲಿ (11) ವಿಕೆಟ್ ಒಪ್ಪಿಸಿದರು.

ಇನ್ನು ಆಲಿಸ್ ಕ್ಯಾಪ್ಸಿ (7) ಹಾಗೂ ಅಮಿ ಜೋನ್ಸ್​ (25) ರನ್ನು ಸೈಕಾ ಇಶಾಕ್ ಔಟ್ ಮಾಡಿದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ 42 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 52 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 126 ರನ್​ಗಳಿಸಿ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಸೈಕಾ ಇಶಾಕ್ 4 ಓವರ್​ಗಳಲ್ಲಿ 22 ರನ್ ನೀಡಿ 3 ವಿಕೆಟ್ ಕಬಳಿಸಿದರು.

127 ರನ್​ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ಸ್ಮೃತಿ ಮಂಧಾನ ಉತ್ತಮ ಆರಂಭ ಒದಗಿಸಿದರೂ, ಶಫಾಲಿ ವರ್ಮಾ (6) ಬೇಗನೆ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಸ್ಮತಿ ಹಾಗೂ ಜೆಮಿಮಾ 2ನೇ ವಿಕೆಟ್​ಗೆ 57 ರನ್​ಗಳ ಜೊತೆಯಾಟವಾಡಿದರು.

ಅರ್ಧಶತಕದ ಜೊತೆಯಾಟದ ಬೆನ್ನಲ್ಲೇ ಜೆಮಿಮಾ ರೊಡಿಗ್ರಾಸ್ (29) ಎಲ್​ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಇದರ ಬೆನ್ನಲ್ಲೇ 48 ರನ್ ಬಾರಿಸಿದ ಸ್ಮೃತಿ ಮಂಧಾನ ಕೂಡ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 19 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 127 ರನ್​ ಬಾರಿಸುವ ಮೂಲಕ ಐದು ವಿಕೆಟ್​ಗಳ ಜಯ ಸಾಧಿಸಿತು. ಈ ಸೋಲಿನ ಹೊರತಾಗಿಯೂ ಮೊದಲ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ ಇಂಗ್ಲೆಂಡ್ ತಂಡವು 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರೊಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ದೀಪ್ತಿ ಶರ್ಮಾ , ರಿಚಾ ಘೋಷ್ (ವಿಕೆಟ್ ಕೀಪರ್) , ಶ್ರೇಯಾಂಕಾ ಪಾಟೀಲ್ , ಟೈಟಾಸ್ ಸಾಧು , ಸೈಕಾ ಇಶಾಕ್ , ಅಮನ್ಜೋತ್ ಕೌರ್ , ರೇಣುಕಾ ಠಾಕೂರ್ ಸಿಂಗ್.

ಇದನ್ನೂ ಓದಿ: RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?

ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್: ಸೋಫಿಯಾ ಡಂಕ್ಲಿ , ಮಾಯಾ ಬೌಚಿಯರ್ , ಆಲಿಸ್ ಕ್ಯಾಪ್ಸೆ , ಆಮಿ ಜೋನ್ಸ್ (ವಿಕೆಟ್ ಕೀಪರ್) , ಹೀದರ್ ನೈಟ್ (ನಾಯಕಿ) ಡೇನಿಯಲ್ ಗಿಬ್ಸನ್ , ಬೆಸ್ ಹೀತ್ , ಫ್ರೇಯಾ ಕೆಂಪ್ , ಸೋಫಿ ಎಕ್ಲೆಸ್ಟೋನ್ , ಷಾರ್ಲೆಟ್ ಡೀನ್ , ಮಹಿಕಾ ಗೌರ್.

ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!