AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ದಕ್ಷಿಣ ಆಫ್ರಿಕಾಕ್ಕೆ ಹಾರಲಿದೆ ಟೀಂ ಇಂಡಿಯಾ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

BCCI Unveils India Women's SA Tour 2026: ಭಾರತ ಮಹಿಳಾ ಕ್ರಿಕೆಟ್ ತಂಡವು ಏಪ್ರಿಲ್ 2026 ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಈ ಪ್ರವಾಸದಲ್ಲಿ 5 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಏಪ್ರಿಲ್ 17 ರಿಂದ ಆರಂಭವಾಗಲಿದೆ. ಡರ್ಬನ್, ಜೋಹಾನ್ಸ್‌ಬರ್ಗ್ ಮತ್ತು ಬೆನೋನಿಯಲ್ಲಿ ಪಂದ್ಯಗಳು ಜರುಗಲಿವೆ. ಇದು ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದ ಸಿದ್ಧತೆಯ ಪ್ರಮುಖ ಭಾಗವಾಗಿದೆ.

IND vs SA: ದಕ್ಷಿಣ ಆಫ್ರಿಕಾಕ್ಕೆ ಹಾರಲಿದೆ ಟೀಂ ಇಂಡಿಯಾ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
Ind Vs Sa
ಪೃಥ್ವಿಶಂಕರ
|

Updated on:Jan 21, 2026 | 3:59 PM

Share

2026 ರ ಐಸಿಸಿ ಪುರುಷರ ಟಿ20 ವಿಶ್ವಕಪ್ (T20 World Cup 2026) ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯಾವಳಿ ಫೆಬ್ರವರಿ 7 ರಂದು ಭಾರತ ಮತ್ತು ಶ್ರೀಲಂಕಾದಲ್ಲಿ ಪ್ರಾರಂಭವಾಗಲಿದೆ. ಹೀಗಾಗಿ ಎಲ್ಲರ ಕಣ್ಣುಗಳು ಪ್ರಸ್ತುತ ಈ ಟಿ20 ವಿಶ್ವಕಪ್ ಮೇಲಿವೆ. ಟೀಂ ಇಂಡಿಯಾ ಕೂಡ ಅದಕ್ಕಾಗಿ ತಯಾರಿ ನಡೆಸುತ್ತಿದೆ. ಆದಾಗ್ಯೂ, ಈ ವರ್ಷ ಮತ್ತೊಂದು ಟಿ20 ವಿಶ್ವಕಪ್ ನಿಗದಿಯಾಗಿದ್ದು, ಭಾರತ ತಂಡವು ಪ್ರಶಸ್ತಿ ಸ್ಪರ್ಧಿಯಾಗಿ ಆ ಪಂದ್ಯಾವಳಿಯನ್ನು ಪ್ರವೇಶಿಸಲಿದೆ. ಹರ್ಮನ್​ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ಮಹಿಳಾ ತಂಡವು ಶೀಘ್ರದಲ್ಲೇ 2026 ರ ಮಹಿಳಾ ಟಿ20 ವಿಶ್ವಕಪ್ ಸಿದ್ಧತೆಗಳನ್ನು ಪ್ರಾರಂಭಿಸಲಿದೆ. ಅದರ ಭಾಗವಾಗಿ ಭಾರತ ಮಹಿಳಾ ಪಡೆ ಏಪ್ರಿಲ್​ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.

ಟಿ20 ವಿಶ್ವಕಪ್‌ಗೂ ಮುನ್ನ 3 ದೊಡ್ಡ ಸರಣಿಗಳು

ಭಾರತ ಮಹಿಳಾ ತಂಡವು ಏಪ್ರಿಲ್ 2026 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದ್ದು, ಇದೀಗ ಬಿಸಿಸಿಐ ಕೂಡ ಈ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎರಡೂ ತಂಡಗಳು ಏಪ್ರಿಲ್ 17 ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಕಳೆದ ವರ್ಷ ಏಕದಿನ ವಿಶ್ವಕಪ್ ಗೆದ್ದ ನಂತರ ಇದು ಭಾರತದ ಮೂರನೇ ಸರಣಿಯಾಗಿದೆ. ಟೀಂ ಇಂಡಿಯಾ ಡಿಸೆಂಬರ್ 2025 ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನು ಆಡಿತ್ತು. ಇದೀಗ ನಡೆಯುತ್ತಿರುವ ಡಬ್ಲ್ಯುಪಿಎಲ್ ಬಳಿಕ ಫೆಬ್ರವರಿ-ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಲಿದ್ದು, ಅಲ್ಲಿ ಮೂರು ಸ್ವರೂಪಗಳ ಸರಣಿಯನ್ನು ಆಡಲಿದೆ.

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ

ಆಸ್ಟ್ರೇಲಿಯಾ ಪ್ರವಾಸದ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಕೈಗೊಳ್ಳಲಿದೆ. ಇದೀಗ ಈ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಅದರ ಪ್ರಕಾರ ಎಲ್ಲಾ ಐದು ಪಂದ್ಯಗಳು ದಕ್ಷಿಣ ಆಫ್ರಿಕಾದ ಮೂರು ವಿಭಿನ್ನ ಸ್ಥಳಗಳಲ್ಲಿ ನಡೆಯಲಿವೆ. ಎರಡು ಪಂದ್ಯಗಳು ಡರ್ಬನ್‌ನಲ್ಲಿ, ಎರಡು ಪಂದ್ಯಗಳು ಜೋಹಾನ್ಸ್‌ಬರ್ಗ್‌ನಲ್ಲಿ ಮತ್ತು ಒಂದು ಪಂದ್ಯ ಬೆನೋನಿಯಲ್ಲಿ ನಡೆಯಲಿದೆ. ಈ ಪ್ರವಾಸದ ನಂತರ, ಟೀಂ ಇಂಡಿಯಾ ಮೇ ಅಂತ್ಯದಲ್ಲಿ ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಆದಾಗ್ಯೂ, ವಿಶ್ವಕಪ್‌ಗೆ ಮೊದಲು ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ವಿಶ್ವಕಪ್ ಜೂನ್ 12 ರಂದು ಆರಂಭವಾಗಲಿದೆ.

ಆಫ್ರಿಕಾ ಪ್ರವಾಸದ ವೇಳಾಪಟ್ಟಿ

  1. ಏಪ್ರಿಲ್ 17 – ಮೊದಲ ಟಿ20, ಡರ್ಬನ್
  2. ಏಪ್ರಿಲ್ 19 – ಎರಡನೇ ಟಿ20, ಡರ್ಬನ್
  3. ಏಪ್ರಿಲ್ 22 – 3ನೇ ಟಿ20, ಜೋಹಾನ್ಸ್‌ಬರ್ಗ್
  4. ಏಪ್ರಿಲ್ 25 – 4ನೇ ಟಿ20, ಜೋಹಾನ್ಸ್‌ಬರ್ಗ್
  5. ಏಪ್ರಿಲ್ 27 – ಐದನೇ ಟಿ20, ಬೆನೋನಿ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Wed, 21 January 26

ರೇವಣ್ಣನ ಮಾತಿಗೆ ಇದ್ದಕ್ಕಿದ್ದಂತೆ ಕೋಪಗೊಂಡ ಕುಮಾರಸ್ವಾಮಿ
ರೇವಣ್ಣನ ಮಾತಿಗೆ ಇದ್ದಕ್ಕಿದ್ದಂತೆ ಕೋಪಗೊಂಡ ಕುಮಾರಸ್ವಾಮಿ
ಚಿಕ್ಕಮಗಳೂರು: ದಾರಿ ಮಧ್ಯೆ ಕೆಟ್ಟು ನಿಂತ ಕೆಎಸ್​​​ಆರ್​​ಟಿಸಿ ಬಸ್
ಚಿಕ್ಕಮಗಳೂರು: ದಾರಿ ಮಧ್ಯೆ ಕೆಟ್ಟು ನಿಂತ ಕೆಎಸ್​​​ಆರ್​​ಟಿಸಿ ಬಸ್
ಸಮುದ್ರದಲ್ಲಿ ಮುಳುಗುತ್ತಿದ್ದ ಕಾರಿಂದ ಮಹಿಳೆಯನ್ನು ರಕ್ಷಿಸಿದ ಜನ
ಸಮುದ್ರದಲ್ಲಿ ಮುಳುಗುತ್ತಿದ್ದ ಕಾರಿಂದ ಮಹಿಳೆಯನ್ನು ರಕ್ಷಿಸಿದ ಜನ
ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹುಲಿ ಓಡಾಟ: ಆತಂಕದಲ್ಲಿ ಪ್ರವಾಸಿಗರು
ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹುಲಿ ಓಡಾಟ: ಆತಂಕದಲ್ಲಿ ಪ್ರವಾಸಿಗರು
ಮನೆಗಳ ಮುಂದೆ ನಿಲ್ಲಿಸಿದ ಕಾರುಗಳ ಮೇಲೆ ಕಲ್ಲು ತೂರಾಟ
ಮನೆಗಳ ಮುಂದೆ ನಿಲ್ಲಿಸಿದ ಕಾರುಗಳ ಮೇಲೆ ಕಲ್ಲು ತೂರಾಟ
ಪ್ರಯಾಗ್​ರಾಜ್​ನಲ್ಲಿ ವಾಯುಪಡೆಯ ಸಣ್ಣ ವಿಮಾನ ಪತನ
ಪ್ರಯಾಗ್​ರಾಜ್​ನಲ್ಲಿ ವಾಯುಪಡೆಯ ಸಣ್ಣ ವಿಮಾನ ಪತನ
ವಿಮಾನದಲ್ಲಿ ಬಂದವರ ಬಳಿ ಇತ್ತು ಆಮೆಗಳು ಸೇರಿ 35 ವನ್ಯಜೀವಿ! ಮೂವರ ಬಂಧನ
ವಿಮಾನದಲ್ಲಿ ಬಂದವರ ಬಳಿ ಇತ್ತು ಆಮೆಗಳು ಸೇರಿ 35 ವನ್ಯಜೀವಿ! ಮೂವರ ಬಂಧನ
‘ಆತ್ಮಸಾಕ್ಷಿ ಬೇಡ್ವಾ’; ಸುದೀಪ್ ಪ್ರಕರಣದ ಅಸಲಿಯತ್ತು ಬಿಚ್ಚಿಟ್ಟ ಚಕ್ರವರ್ತಿ
‘ಆತ್ಮಸಾಕ್ಷಿ ಬೇಡ್ವಾ’; ಸುದೀಪ್ ಪ್ರಕರಣದ ಅಸಲಿಯತ್ತು ಬಿಚ್ಚಿಟ್ಟ ಚಕ್ರವರ್ತಿ
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಕಲ್ಲಿನಿಂದ ಜಜ್ಜಿ ಹಲ್ಲೆ
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಕಲ್ಲಿನಿಂದ ಜಜ್ಜಿ ಹಲ್ಲೆ
ತೆಂಗಿನ ಗರಿಯಲ್ಲಿ ಅರಳಿದ ಡಾ. ಶಿವಕುಮಾರ ಸ್ವಾಮೀಜಿ ಕಲಾಕೃತಿ
ತೆಂಗಿನ ಗರಿಯಲ್ಲಿ ಅರಳಿದ ಡಾ. ಶಿವಕುಮಾರ ಸ್ವಾಮೀಜಿ ಕಲಾಕೃತಿ