IND vs SL: ಭಾರತ- ಶ್ರೀಲಂಕಾ ನಡುವೆ ಟಿ20 ಸರಣಿ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
IND W vs SL W T20 series schedule: ಮಹಿಳಾ ವಿಶ್ವಕಪ್ ಗೆದ್ದ ನಂತರ ಭಾರತ ತಂಡವು ಡಿಸೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಐದು ಪಂದ್ಯಗಳ T20 ಸರಣಿಯನ್ನು ಆಡಲಿದೆ. ಬಿಸಿಸಿಐ ವೇಳಾಪಟ್ಟಿ ಪ್ರಕಟಿಸಿದ್ದು, ವಿಶಾಖಪಟ್ಟಣ ಮತ್ತು ತಿರುವನಂತಪುರಂನಲ್ಲಿ ಪಂದ್ಯಗಳು ನಡೆಯಲಿವೆ. ಸ್ಮೃತಿ ಮಂಧಾನಾ ಅವರ ವೈಯಕ್ತಿಕ ಕಾರಣಗಳಿಂದ ಸರಣಿಯಲ್ಲಿ ಆಡುವ ಬಗ್ಗೆ ಅನುಮಾನವಿದ್ದು, ಈ ಸರಣಿ ವಿಶ್ವ ಚಾಂಪಿಯನ್‌ರಿಗೆ ಮಹತ್ವದ್ದಾಗಿದೆ.

ಮೊದಲ ಬಾರಿಗೆ ಮಹಿಳಾ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತ ತಂಡವು ಮುಂದಿನ ತಿಂಗಳು ಮತ್ತೊಮ್ಮೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದೆ. ಡಿಸೆಂಬರ್‌ನಲ್ಲಿ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಇದೀಗ ಈ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಈ ತಿಂಗಳ ಆರಂಭದಲ್ಲಿ ಏಕದಿನ ವಿಶ್ವಕಪ್ ಗೆದ್ದ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮೊದಲ ಅಂತರರಾಷ್ಟ್ರೀಯ ಸರಣಿ ಇದಾಗಿದೆ.
ಸ್ಮೃತಿ ಆಡುತ್ತಾರೋ ಇಲ್ಲವೋ?
ಈ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಉಪನಾಯಕಿ ಸ್ಮೃತಿ ಮಂಧಾನ ಆಡುತ್ತಾರೋ ಇಲ್ಲವೋ? ಈ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಕಾರಣ ಸ್ಮೃತಿ ಅವರ ವೈಯಕ್ತಿಕ ಬದುಕಿನಲ್ಲಿ ಉಂಟಾಗಿರುವ ಗೊಂದಲ. ವಾಸ್ತವವಾಗಿ ನವೆಂಬರ್ 23 ರಂದು ಸ್ಮೃತಿ ಮಂಧಾನ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ಅವರ ತಂದೆಯ ಆರೋಗ್ಯ ಹದಗೆಟ್ಟ ಕಾರಣದಿಂದಾಗಿ ಮದುವೆಯನ್ನು ಮುಂದೂಡಲಾಗಿತ್ತು. ಆದ್ದರಿಂದ, ಸ್ಮೃತಿ ಈ ಸರಣಿಗೆ ಲಭ್ಯವಾಗುತ್ತಾರೋ ಇಲ್ಲವೋ? ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಭಾರತ-ಶ್ರೀಲಂಕಾ ಟಿ20 ಸರಣಿ
ಉಭಯ ತಂಡಗಳ ನಡುವಿನ ಈ ಟಿ20 ಸರಣಿ ಡಿಸೆಂಬರ್ 21 ರಿಂದ ಆರಂಭವಾಗಲಿದೆ. ಸರಣಿಯ ಆರಂಭಿಕ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಡಿಸೆಂಬರ್ 23 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಿನ ಮೂರನೇ ಪಂದ್ಯ ಡಿಸೆಂಬರ್ 26 ರಂದು ತಿರುವನಂತಪುರದಲ್ಲಿ ನಡೆಯಲಿದೆ. ನಾಲ್ಕನೇ ಮತ್ತು ಐದನೇ ಪಂದ್ಯಗಳು ಸಹ ಅದೇ ಮೈದಾನದಲ್ಲಿ ನಡೆಯಲಿವೆ.
🚨 News 🚨
Schedule for @IDFCFIRSTBank T20I series against Sri Lanka Women announced.
Details ▶️ https://t.co/jYCdTE8YhA#TeamIndia | #WomenInBlue | #INDvSL pic.twitter.com/wK4d5c0XLQ
— BCCI Women (@BCCIWomen) November 28, 2025
ಹೆಡ್ ಟು ಹೆಡ್ ರೆಕಾರ್ಡ್
ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಪ್ರಾಬಲ್ಯ ಸಾಧಿಸಿದೆ. ಇಲ್ಲಿಯವರೆಗೆ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಒಟ್ಟು 26 ಪಂದ್ಯಗಳು ನಡೆದಿವೆ. ಈ 26 ಪಂದ್ಯಗಳಲ್ಲಿ ಭಾರತ 20 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ ಕೇವಲ 5 ಪಂದ್ಯಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಎರಡೂ ತಂಡಗಳ ನಡುವಿನ ಏಕೈಕ ಪಂದ್ಯ ಡ್ರಾ ಆಗಿದೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಈ 5 ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ ಏಕಪಕ್ಷೀಯವಾಗಿ ಗೆಲ್ಲುವ ಸಾಧ್ಯತೆಗಳಿವೆ.
ಟಿ20 ಸರಣಿಯ ವೇಳಾಪಟ್ಟಿ
- ಮೊದಲ ಪಂದ್ಯ, ಡಿಸೆಂಬರ್ 21, ವಿಶಾಖಪಟ್ಟಣ
- ಎರಡನೇ ಪಂದ್ಯ, ಡಿಸೆಂಬರ್ 23, ವಿಶಾಖಪಟ್ಟಣ
- ಮೂರನೇ ಪಂದ್ಯ, ಡಿಸೆಂಬರ್ 26, ತಿರುವನಂತಪುರಂ
- ನಾಲ್ಕನೇ ಪಂದ್ಯ, ಡಿಸೆಂಬರ್ 28, ತಿರುವನಂತಪುರಂ
- ಐದನೇ ಪಂದ್ಯ, ಡಿಸೆಂಬರ್ 30, ತಿರುವನಂತಪುರಂ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
