ಕಾಶ್ಮೀರದಲ್ಲಿ ಬದಲಾವಣೆಯ ಪರ್ವ; ಭೂ ಲೋಕದ ಸ್ವರ್ಗದಲ್ಲಿ ಮಹಿಳಾ ಕ್ರಿಕೆಟ್ ಲೀಗ್ ಆಯೋಜಿಸಿದ ಭಾರತೀಯ ಸೇನೆ

Kashmir Women Cricket League: ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಶ್ಮೀರ ಮಹಿಳಾ ಕ್ರಿಕೆಟ್ ಲೀಗ್ ಆಯೋಜನೆಯಾಗುತ್ತಿದ್ದು, ಆ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿವೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಹೆಚ್ಚಿನ ಹುಡುಗಿಯರು ಕಾಶ್ಮೀರದ ದೂರದ ಹಳ್ಳಿಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

ಕಾಶ್ಮೀರದಲ್ಲಿ ಬದಲಾವಣೆಯ ಪರ್ವ; ಭೂ ಲೋಕದ ಸ್ವರ್ಗದಲ್ಲಿ ಮಹಿಳಾ ಕ್ರಿಕೆಟ್ ಲೀಗ್ ಆಯೋಜಿಸಿದ ಭಾರತೀಯ ಸೇನೆ
ಕಾಶ್ಮೀರ ಮಹಿಳಾ ಕ್ರಿಕೆಟ್ ಲೀಗ್
Follow us
ಪೃಥ್ವಿಶಂಕರ
|

Updated on: Aug 21, 2023 | 11:19 AM

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಒಂದಿಲ್ಲೊಂದು ಭಯೋತ್ಪಾದಕಾ ಚಟುವಟಿಕೆಯಿಂದ ನಲುಗಿ ಹೋಗಿದ್ದ ಭೂ ಲೋಕದ ಸ್ವರ್ಗ ಕಾಶ್ಮೀರದಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಬದಲಾವಣೆಯ ಗಾಳಿ ಬೀಸಲಾರಂಬಿಸಿದೆ. ಮುಸ್ಲಿಂ ಪ್ರಾಬಲ್ಯ ಇರುವ ಈ ನಾಡಿನಲ್ಲಿ ಎಲ್ಲ ರಂಗದಲ್ಲೂ ಭಾಗವಹಿಸಲು ಸ್ತ್ರೀಯರಿಗೆ ಮುಕ್ತ ಸ್ವಾತಂತ್ರ್ಯ ಇರಲಿಲ್ಲ. ಆದರೀಗ ಅಲ್ಲಿನ ಮಹಿಳೆಯರೂ ಕೂಡ ಎಲ್ಲ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಭಾರತ ಸರ್ಕಾರ (Government of India) ಮತ್ತು ಭಾರತೀಯ ಸೇನೆ (Indian Army) ಕೂಡ ಅಲ್ಲಿನ ಜನರ ಜೀವನಮಟ್ಟವನ್ನು ಸುಧಾರಿಸುವ ಸಲುವಾಗಿ ಹಾಗೂ ಭಯ ಮುಕ್ತ ವಾತಾವರಣವನ್ನು ಸೃಷ್ಟಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದೀಗ ಅದಕ್ಕೆ ಪೂರಕವಾಗಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ (Mammu and Kashmir) ಮಂಡಳಿಯ ಸಹಯೋಗದೊಂದಿಗೆ ಅಲ್ಲಿನ ಯುವ ಮಹಿಳಾ ಕ್ರಿಕೆಟಿಗರಿಗೆ ಎಂಟು ದಿನಗಳ ಟಿ20 ಪಂದ್ಯಾವಳಿಯನ್ನು (Kashmir Women Cricket League) ಆಯೋಜಿಸಿದೆ.

ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಶ್ಮೀರ ಮಹಿಳಾ ಕ್ರಿಕೆಟ್ ಲೀಗ್ ಆಯೋಜನೆಯಾಗುತ್ತಿದ್ದು, ಆ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿವೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಹೆಚ್ಚಿನ ಹುಡುಗಿಯರು ಕಾಶ್ಮೀರದ ದೂರದ ಹಳ್ಳಿಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹಾಗೆಯೇ ಆಗಸ್ಟ್ 26 ರಂದು ನಡೆಯಲ್ಲಿರುವ ಈ ಲೀಗ್​ನ ಫೈನಲ್ ಪಂದ್ಯಕ್ಕೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅತಿಥಿಯಾಗಿ ಆಗಮಿಸಿ, ಲೀಗ್​ಗೆ ಪ್ರೋತ್ಸಾಹ ತುಂಬಲ್ಲಿದ್ದಾರೆ.

ಏಕದಿನ ವಿಶ್ವಕಪ್​ನಲ್ಲಿ ಕಾಶ್ಮೀರ್ ವಿಲೋ ಬ್ಯಾಟ್​ಗಳಿಗೆ ಹೆಚ್ಚಿದ ಬೇಡಿಕೆ; ಈ ಬ್ಯಾಟ್​ಗಳ ವಿಶೇಷತೆ ಏನು ಗೊತ್ತಾ?

ಶೇರ್-ಎ-ಕಾಶ್ಮೀರ್ ಸ್ಟೇಡಿಯಂನಲ್ಲಿ ಪಂದ್ಯ

ಈ ಪಂದ್ಯಾವಳಿಯು ಸೇನೆಯ ಸದ್ಭಾವನಾ ಯೋಜನೆಯ ಭಾಗವಾಗಿದ್ದು, ಇಡೀ ಲೀಗ್, ಶೇರ್-ಎ-ಕಾಶ್ಮೀರ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ ಎಂದು ಭಾರತೀಯ ಸೇನೆಯ ಕರ್ನಲ್ ಡೊಬ್ರಿಯಲ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಇದರಲ್ಲಿ ಭಾಗವಹಿಸುತ್ತಿರುವ 12 ತಂಡಗಳ ಪೈಕಿ 3 ತಂಡಗಳು ಶ್ರೀನಗರದವಾಗಿದ್ದು, ಉಳಿದವು ಕಾಶ್ಮೀರದ ಇತರೆ ಜಿಲ್ಲೆಗಳಿಂದ ಬಂದಿವೆ. ಜಮ್ಮು ಮತ್ತು ಕಾಶ್ಮೀರದ ಯುವತಿಯರಿಗೆ ಇಂತಹ ಪಂದ್ಯಾವಳಿಯು ತಮ್ಮನ್ನು ತಾವು ಸಾಬೀತುಪಡಿಸಲು ಉತ್ತಮ ಅವಕಾಶವಾಗಿದೆ ಎಂದು ಕರ್ನಲ್ ಡೊಬ್ರಿಯಲ್ ತಮ್ಮ ಅಭಿಪ್ರಾಯ ಪಟ್ಟಿದ್ದಾರೆ.

ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ

ಕಾಶ್ಮೀರ ವಿಶ್ವವಿದ್ಯಾನಿಲಯದ ತಂಡದ ಕೋಚ್ ಸಕೀನಾ ಅಖ್ತರ್ ಹೇಳುವಂತೆ, ‘ಇಂತಹ ಘಟನೆಗಳು ಹೆಚ್ಚಾಗಿ ನಡೆಯಬೇಕು. ಇಂತಹ ಟೂರ್ನಿಯನ್ನು ನೋಡಿದ್ದು ಇದೇ ಮೊದಲು. ಈ ಟೂರ್ನಿಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಉಪಕ್ರಮವು ಇಲ್ಲಿನ ಅನೇಕ ಹೆಣ್ಣುಮಕ್ಕಳಿಗೆ ಕ್ರಿಕೆಟ್ ಆಡಲು ಉತ್ತೇಜನ ನೀಡುತ್ತದೆ’

ಅಲ್ಲದೆ ಈ ಟೂರ್ನಿಯಲ್ಲಿ ಆಡುತ್ತಿರುವ ಆಟಗಾರ್ತಿಯರು ಈ ಹಿಂದೆ ಇಂತಹ ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ. ಹೀಗಾಗಿ ಮಹಿಳಾ ಕ್ರಿಕೆಟಿಗರಿಗೆ ತೆಗೆದುಕೊಂಡ ಈ ನಿರ್ಧಾರ ನನಗೆ ತುಂಬಾ ಸಂತೋಷ ತಂದಿದೆ. ಜಮ್ಮು ಮತ್ತು ಕಾಶ್ಮೀರದ ಮಹಿಳಾ ಕ್ರಿಕೆಟಿಗರು ಇಂತಹ ಪಂದ್ಯಾವಳಿಗಳಿಗೆ ತಮ್ಮ ಮನೆಯಿಂದ ಹೊರಬಂದು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಇಂತಹ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿದರೆ, ಅನೇಕ ಮಹಿಳಾ ಕ್ರಿಕೆಟಿಗರು ಕ್ರಿಕೆಟ್ ಅನ್ನು ವೃತ್ತಿಯಾಗಿ ನೋಡಲಾರಂಭಿಸುತ್ತಾರೆ ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ