ಸ್ವಾತಂತ್ರ್ಯ ದಿನಾಚರಣೆ: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಬಿಗಿ ಭದ್ರತೆ
ಭಾರತವು ಈ ಬಾರಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದು, ಉತ್ತರ ಕಾಶ್ಮೀರದ ಪ್ರದೇಶಗಳಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಹೆಚ್ಚುವರಿ ಭದ್ರತೆಯನ್ನು ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆವಹಿಸಲಾಗಿದೆ.
ಭಾರತವು ಈ ಬಾರಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದು, ಉತ್ತರ ಕಾಶ್ಮೀರದ ಪ್ರದೇಶಗಳಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಹೆಚ್ಚುವರಿ ಭದ್ರತೆಯನ್ನು ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆವಹಿಸಲಾಗಿದೆ.ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾತಂತ್ರ್ಯ ದಿನದಂದು ಶಾಂತಿಯನ್ನು ಕದಡಲು ಭಯೋತ್ಪಾದಕರು ಗಡಿಯಾಚೆಯಿಂದ ನುಸುಳಲು ಪ್ರಯತ್ನಿಸಬಹುದು ಎನ್ನುವ ಆಲೋಚನೆಯಿಂದ ಭದ್ರತೆ ಹೆಚ್ಚಿಸಲಾಗಿದೆ.
ಕಳೆದ ಒಂದು ತಿಂಗಳಲ್ಲಿ, ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆಗಳು ಸುಮಾರು 12ಕ್ಕೂ ಅಧಿಕ ಮಂದಿಯ ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿವೆ. ಈ ಒಳನುಸುಳುವಿಕೆ ಪ್ರಯತ್ನಗಳಲ್ಲಿ 10 ಕ್ಕೂ ಅಧಿಕ ಭಯೋತ್ಪಾದಕರು ಮೃತಪಟ್ಟಿದ್ದಾರೆ.
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಸಂಪೂರ್ಣ ನಿಯಂತ್ರಣ ರೇಖೆಯು ದಟ್ಟ ಅರಣ್ಯದಿಂದ ಆವೃತವಾಗಿದೆ. ಇದರಿಂದಾಗಿ ಕಾಶ್ಮೀರ ಪ್ರದೇಶಕ್ಕೆ ಭಯೋತ್ಪಾದಕ ಗುಂಪುಗಳು ನುಸುಳಲು ಅವಕಾಶ ಸಿಗುತ್ತದೆ. ಕುಪ್ವಾರ ಜಿಲ್ಲೆ ಗಡಿಯಾಚೆಯಿಂದ ಅತಿ ಹೆಚ್ಚು ಭಯೋತ್ಪಾದಕರು ಒಳನುಸುಳುವಿಕೆ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ.
ಮತ್ತಷ್ಟು ಓದಿ: ಜಮ್ಮು-ಕಾಶ್ಮೀರ: ಭಾರತ ಒಳನುಸುಳಲು ಸಂಚು ರೂಪಿಸಿದ್ದ ಇಬ್ಬರು ಭಯೋತ್ಪಾದಕರ ಹತ್ಯೆ, ಮುಂದುವರಿದ ಕಾರ್ಯಚರಣೆ
ಅದೇ ಸಮಯದಲ್ಲಿ, ಈ ಸಂದರ್ಭದಲ್ಲಿ ಯಾವುದೇ ಆಡಳಿತಾತ್ಮಕ ನಿರ್ಬಂಧ ಅಥವಾ ಫೋನ್ ಮತ್ತು ಇಂಟರ್ನೆಟ್ ಸೇವೆಗಳನ್ನು ನಿಲ್ಲಿಸಲಾಗುವುದಿಲ್ಲ ಎಂದು ಆಡಳಿತ ಘೋಷಿಸಿದೆ. ಶನಿವಾರ ಕಣಿವೆಯ ವಿಭಾಗೀಯ ಆಯುಕ್ತ ವಿ.ಕೆ.ಬಿಧುರಿ ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಇದರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಕಣಿವೆಯಲ್ಲಿ ಯಾವುದೇ ಆಡಳಿತಾತ್ಮಕ ನಿರ್ಬಂಧಗಳಿಲ್ಲ ಮತ್ತು ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸಹ ನಿಲ್ಲಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯನ್ನು ಸುಗಮವಾಗಿ ನಡೆಸಲು ವಿಸ್ತೃತವಾದ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಈ ಐತಿಹಾಸಿಕ ದಿನದ ಮುಖ್ಯ ಕಾರ್ಯಕ್ರಮವು ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು. ಈ ಮೊದಲು ಈ ಕಾರ್ಯಕ್ರಮವನ್ನು ಶೇರ್-ಎ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು.
ಈ ಬಾರಿ ಕಾರ್ಯಕ್ರಮಕ್ಕೆ ಹಾಜರಾಗಲು ಯಾವುದೇ ಪ್ರವೇಶ ಪಾಸ್‌ನ ಅಗತ್ಯವಿಲ್ಲ ಮತ್ತು ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಭಾಗವಹಿಸಬಹುದು ಎಂದು ಅವರು ಸಮಾರಂಭಕ್ಕೆ ಹಾಜರಾಗುವಂತೆ ಮನವಿ ಮಾಡಿದರು.
ಲಡಾಖ್, ಗಲ್ವಾನ್ ಗಡಿಯಲ್ಲಿ ಹೆಚ್ಚುವರಿ ಸೇನೆ ನಿಯೋಜನೆ ಮಾಡಲಾಗಿದೆ, ಗಡಿ ಭಾಗಕ್ಕೆ ಹೆಚ್ಚುವರಿಯಾಗಿ 68 ಸಾವಿರ ಯೋಧರ ರವಾನೆ ಮಾಡಲಾಗಿದೆ. ಯುದ್ಧದ ಟ್ಯಾಂಕ್ಗಳು, ಶಸ್ತ್ರಸ್ತ್ರಾಗಳೊಂದಿಗೆ ಯೋಧರ ಏರ್ಲಿಫ್ಟ್ ಮಾಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ