ಭಾರತೀಯ ಕ್ರಿಕೆಟ್ ತಂಡವು (Indian Cricket Team) ಏಷ್ಯಾಕಪ್ 2023 ಕ್ಕಾಗಿ ಬೆಂಗಳೂರಿನ ಆಲೂರಿನಲ್ಲಿ ಕಠಿಣ ಅಭ್ಯಾಸ ಮುಂದುವರೆಸಿದೆ. ಭಾನುವಾರ ಆಟಗಾರರಿಗೆ ಶಿಬಿರದಿಂದ ವಿರಾಮ ನೀಡಿತ್ತಾದರೂ ವಿಶ್ರಾಂತಿ ನೀಡಲಾಗಿರಲಿಲ್ಲ. ಎನ್ಸಿಎನಲ್ಲಿ ನಡೆದ ಸಭೆಯಲ್ಲಿ ಕೊಹ್ಲಿ, ರೋಹಿತ್ ಸೇರಿದಂತೆ ಎಲ್ಲ ಆಟಗಾರರು ಹಾಜರಿದ್ದರು. ಜೊತೆಗೆ ಡೆಕ್ಸಾ ಪರೀಕ್ಷೆಯಲ್ಲಿ ತೊಡಗಿಕೊಂಡರು. ಇಂದು ಸೋಮವಾರ ಭಾರತ ವಿಶೇಷ ರೀತಿಯಲ್ಲಿ ಪ್ರ್ಯಾಕ್ಟೀಸ್ ನಡೆಸಲಿದೆ. ಮಂಗಳವಾರ ಆಗಸ್ಟ್ 29 ರಂದು ಟೀಮ್ ಇಂಡಿಯಾ ಶ್ರೀಲಂಕಾಕ್ಕೆ ತೆರಳಲಿದೆ.
ಭಾರತ ಏಷ್ಯಾಕಪ್ಗಾಗಿ ಸಿಂಹಳೀಯರ ನಾಡಿಗೆ ತೆರಳಲು ಸಜ್ಜಾಗಿದ್ದಾರೆ. ಆದರೆ, ಮಂಡಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೆಎಲ್ ರಾಹುಲ್ ಇನ್ನೂ ಶೇ. 100 ರಷ್ಟು ಚೇತರಿಸಿಕೊಂಡಿಲ್ಲ. ಸಂಪೂರ್ಣವಾಗಿ ಫಿಟ್ನೆಸ್‌ಗೆ ಮರಳಬೇಕಷ್ಟೆ. ಕೀಪಿಂಗ್ನಲ್ಲಿ ಕಠಿಣ ಅಭ್ಯಾಸ ಮಾಡಿದ ಹೊರತಾಗಿಯೂ, ಫುಲ್ ಫಿಟ್ನೆಸ್ ಪಡೆದುಕೊಂಡಿಲ್ಲ. ಈಗಾಗಲೇ ಭಾರತ ಮತ್ತು ಪಾಕಿಸ್ತಾನದ ನಡುವಣ ಪಂದ್ಯದಿಂದ ಇವರು ಹೊರಗುಳಿದಿದ್ದಾರೆ. ಆದಾಗ್ಯೂ, ಕೆಎಲ್ ರಾಹುಲ್ ಅವರ ಸುಧಾರಣೆಯಿಂದ ತಂಡ ಮತ್ತು ವೈದ್ಯಕೀಯ ಘಟಕ ತೃಪ್ತವಾಗಿದೆ ಎಂದು ವರದಿಗಳು ಹೇಳಿದೆ.
VIDEO: ಮೊದಲ ಎಸೆತ ಫೌಲ್, ಎರಡನೇ ಎಸೆತದಲ್ಲೇ ಚಿನ್ನ..!
ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ತಮ್ಮ ಬೆನ್ನಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಶೇ. 100 ರಷ್ಟು ಫಿಟ್ ಆಗಿದ್ದಾರೆ. ಆದರೆ 3 ತಿಂಗಳ ಸುದೀರ್ಘ ಅವಧಿಯ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಉತ್ಸುಕರಾಗಿರುವ ರಾಹುಲ್, ಪಂದ್ಯಾವಳಿಯ ಕೊನೆಯ ಭಾಗದಲ್ಲಿ ಭಾರತ ತಂಡ ಸೇರಿಕೊಳ್ಳಬಹುದು.
ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಈ ಹಿಂದೆ, ರಾಹುಲ್ ಅವರು ಭಾರತ-ಪಾಕ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಹೇಳಿದ್ದರು. ಆದ್ದರಿಂದ ಅವರ ಸ್ಥಾನದಲ್ಲಿ ಇಶಾನ್ ಕಿಶನ್ ಅವರನ್ನು ಕಣಕ್ಕಿಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದರು. ಭಾರತವು ಸಂಜು ಸ್ಯಾಮ್ಸನ್ ಅವರಂತಹ ಟ್ರಾವೆಲಿಂಗ್ ರಿಸರ್ವ್ ಆಗಿ ಬ್ಯಾಕ್ಅಪ್ ಹೊಂದಿದೆ. ಭಾರತ-ಐರ್ಲೆಂಡ್ ಟಿ20 ಸರಣಿಯ ಭಾಗವಾಗಿದ್ದ ಜಸ್ಪ್ರಿತ್ ಬುಮ್ರಾ ಮತ್ತು ಇತರ ಕ್ರಿಕೆಟಿಗರು ಸೋಮವಾರ ಬೆಂಗಳೂರಿನ ಆಲೂರಿನಲ್ಲಿ ನಡೆಯುತ್ತಿರುವ ಶಿಬಿರವನ್ನು ಸೇರಲಿದ್ದಾರೆ ಎಂದು ಹೇಳಲಾಗಿದೆ.
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್ಪ್ರಿತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ , ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ.
ಸ್ಟ್ಯಾಂಡ್-ಬೈ ಆಟಗಾರ: ಸಂಜು ಸ್ಯಾಮ್ಸನ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ