IND Vs AUS: ಆಸೀಸ್ ವಿರುದ್ಧದ ಟಿ20 ಸರಣಿಗೆ ಸದ್ಯದಲ್ಲೇ ಟೀಂ ಇಂಡಿಯಾ ಪ್ರಕಟ; 18 ಆಟಗಾರರಿಗೆ ಅವಕಾಶ?

| Updated By: ಪೃಥ್ವಿಶಂಕರ

Updated on: Aug 31, 2022 | 2:38 PM

IND Vs AUS: ವರದಿಯ ಪ್ರಕಾರ, ತಂಡವನ್ನು ಮುಂದಿನ ವಾರದ ಆರಂಭದಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ. ಅಕ್ಟೋಬರ್​ನಲ್ಲಿ ಆರಂಭವಾಗಲಿರುವ 2022ರ ವಿಶ್ವಕಪ್​ಗೆ ಸೆಪ್ಟಂಬರ್ 16ರೊಳಗೆ ಟೀಂ ಇಂಡಿಯಾ ಆಯ್ಕೆಯಾಗಬೇಕಿದೆ.

IND Vs AUS: ಆಸೀಸ್ ವಿರುದ್ಧದ ಟಿ20 ಸರಣಿಗೆ ಸದ್ಯದಲ್ಲೇ ಟೀಂ ಇಂಡಿಯಾ ಪ್ರಕಟ; 18 ಆಟಗಾರರಿಗೆ ಅವಕಾಶ?
Ind Vs Aus
Follow us on

ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಟೀಂ ಇಂಡಿಯಾವನ್ನು (Team India) ಶೀಘ್ರದಲ್ಲೇ ಪ್ರಕಟಿಸಲು ಬಿಸಿಸಿಐ (BCCI) ಸಜ್ಜಾಗಿದೆ. ವರದಿಗಳ ಪ್ರಕಾರ, ತಂಡವನ್ನು ಆಯ್ಕೆ ಮಾಡಲು ಮುಂದಿನ ವಾರ ಆಯ್ಕೆಗಾರರ ​​ಸಭೆ ನಡೆಯಲಿದೆ. ಇನ್‌ಸೈಡ್ ಸ್ಪೋರ್ಟ್‌ನ ವರದಿಯ ಪ್ರಕಾರ, T20 ವಿಶ್ವಕಪ್ (T20 World Cup) ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆಗಾರರು ತಂಡದಲ್ಲಿ 18 ಆಟಗಾರರಿಗೆ ಸ್ಥಳಾವಕಾಶ ಕಲ್ಪಿಸಬಹುದು ಎಂದು ತೋರುತ್ತದೆ.

ವರದಿಯ ಪ್ರಕಾರ, ತಂಡವನ್ನು ಮುಂದಿನ ವಾರದ ಆರಂಭದಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ. ಅಕ್ಟೋಬರ್​ನಲ್ಲಿ ಆರಂಭವಾಗಲಿರುವ 2022ರ ವಿಶ್ವಕಪ್​ಗೆ ಸೆಪ್ಟಂಬರ್ 16ರೊಳಗೆ ಟೀಂ ಇಂಡಿಯಾ ಆಯ್ಕೆಯಾಗಬೇಕಿದೆ. ಹೀಗಾಗಿ ಈಗ ತಂಡದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆಗಳು ತೀರ ಕಡಿಮೆ.

ನಾಯಕ ರೋಹಿತ್ ಶರ್ಮಾ ಹೊರತುಪಡಿಸಿ, ಕೆಎಲ್ ರಾಹುಲ್ ಮಾತ್ರ ಆರಂಭಿಕ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಮತ್ತು ಸೂರ್ಯಕುಮಾರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಆಲ್‌ರೌಂಡರ್‌ಗಳಾಗಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ತಂಡದಲ್ಲಿ ಇರಲಿದ್ದಾರೆ. ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಇದನ್ನೂ ಓದಿ
IND vs AUS: ಭಾರತಕ್ಕೆ ವೀರಾವೇಷದ ಸೋಲು; ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟ ಹರ್ಮನ್​ಪ್ರೀತ್ ಪಡೆ
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
Ind vs Aus: 49 ರನ್​ಗಳಿಗೆ 5 ವಿಕೆಟ್‌ ಉರುಳಿದರೂ ಭಾರತಕ್ಕೆ ಸೋಲು; ಕಣ್ಣೀರಿಟ್ಟ ಹರ್ಮನ್‌ಪ್ರೀತ್‌-ರೇಣುಕಾ..!

ಈ ಆಟಗಾರರಿಗೂ ಸ್ಥಳಾವಕಾಶ

ದೀಪಕ್ ಹೂಡಾ ಅವರನ್ನು ಬ್ಯಾಕಪ್ ಆಲ್ ರೌಂಡರ್ ಆಗಿ ತಂಡದಲ್ಲಿ ಆಯ್ಕೆಮಾಡಬಹುದು. ಯುಜುವೇಂದ್ರ ಚಹಾಲ್ ಕೂಡ ಸ್ಥಾನ ಪಡೆಯುವುದು ಖಚಿತವಾಗಿದೆ. ಇದಲ್ಲದೇ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭುವನೇಶ್ವರ್ ಕುಮಾರ್, ಅವೇಶ್ ಖಾನ್ ಮತ್ತು ಅರ್ಷದೀಪ್ ಸಿಂಗ್ ಕೂಡ ಸ್ಥಾನ ಪಡೆಯಲಿದ್ದಾರೆ.

ಟೀಂ ಇಂಡಿಯಾದ ನಂಬರ್ ಒನ್ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಪ್ರಸ್ತುತ, ಜಸ್ಪ್ರೀತ್ ಬುಮ್ರಾ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಫಿಟ್ನೆಸ್ಗಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಆಯ್ಕೆಗಾರರು ಬುಮ್ರಾ ಅವರ ಫಿಟ್‌ನೆಸ್‌ ಬಗ್ಗೆ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಬುಮ್ರಾ ಸಂಪೂರ್ಣ ಫಿಟ್ ಆಗಿದ್ದರೆ ಮಾತ್ರ ಆಯ್ಕೆಗಾರರು ಅವರಿಗೆ ತಂಡದಲ್ಲಿ ಸ್ಥಾನ ನೀಡಲಿದ್ದಾರೆ.

ಆರ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಅಕ್ಷರ್ ಪಟೇಲ್ ಮತ್ತು ಇಶಾನ್ ಕಿಶನ್ ಅವರಂತಹ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಆದರೆ ಈ ಆಟಗಾರರು ಆಡುವ 11ರಲ್ಲಿ ಸ್ಥಾನ ಪಡೆಯುವುದು ತುಂಬಾ ಕಷ್ಟಕರವಾಗಿ ಪರಿಣಮಿಸಿದೆ.