AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mukesh Kumar Marriage: ವೈವಾಹಿಕ ಜೀವನಕ್ಕೆ ಕಾಲಿರಿಸಿದ ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ

Mukesh Kumar Marriage: ಟೀಂ ಇಂಡಿಯಾದ ಯುವ ವೇಗದ ಬೌಲರ್ ಮುಖೇಶ್ ಕುಮಾರ್ ತಮ್ಮ ಬಾಲ್ಯದ ಗೆಳತಿ ಬಿಹಾರದ ದಿವ್ಯಾ ಸಿಂಗ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ನಿನ್ನೆ ಅಂದರೆ ನವೆಂಬರ್ 28 ರ ಮಂಗಳವಾರದಂದು ಗೋರಖ್‌ಪುರದ ಹೋಟೆಲ್‌ನಲ್ಲಿ ಈ ಪ್ರಣಯ ಪಕ್ಷಿಗಳ ವಿವಾಹ ಅದ್ಧೂರಿಯಾಗಿ ನೆರವೇರಿತು.

Mukesh Kumar Marriage: ವೈವಾಹಿಕ ಜೀವನಕ್ಕೆ ಕಾಲಿರಿಸಿದ ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ
ಮಡದಿಯೊಂದಿಗೆ ಮುಖೇಶ್ ಕುಮಾರ್
ಪೃಥ್ವಿಶಂಕರ
|

Updated on: Nov 29, 2023 | 2:37 PM

Share

ಟೀಂ ಇಂಡಿಯಾದ (Team India) ಯುವ ವೇಗದ ಬೌಲರ್ ಮುಖೇಶ್ ಕುಮಾರ್ (Mukesh Kumar) ತಮ್ಮ ಬಾಲ್ಯದ ಗೆಳತಿ ಬಿಹಾರದ ದಿವ್ಯಾ ಸಿಂಗ್ (Divya Singh) ಅವರೊಂದಿಗೆ ವೈವಾಹಿಕ ಜೀವನಕ್ಕೆ (wedding) ಕಾಲಿರಿಸಿದ್ದಾರೆ. ನಿನ್ನೆ ಅಂದರೆ ನವೆಂಬರ್ 28 ರ ಮಂಗಳವಾರದಂದು ಗೋರಖ್‌ಪುರದ ಹೋಟೆಲ್‌ನಲ್ಲಿ ಈ ಪ್ರಣಯ ಪಕ್ಷಿಗಳ ವಿವಾಹ ಅದ್ಧೂರಿಯಾಗಿ ನೆರವೇರಿತು. ಇದೀಗ ನವ ಜೋಡಿಗಳ ಮದುವೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಡಿಸೆಂಬರ್ 4 ರಂದು ಗೋರಖ್‌ಪುರದಲ್ಲಿ ಮುಖೇಶ್-ದಿವ್ಯಾ ವಿವಾಹ ಆರತಕ್ಷತೆ ನಡೆಯಲಿದೆ.

ಟೀಂ ಇಂಡಿಯಾದಿಂದ ರಜೆ

ವಾಸ್ತವವಾಗಿ ಪ್ರಸ್ತುತ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಮುಖೇಶ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಮೊದಲೆರಡು ಪಂದ್ಯಗಳನ್ನು ಆಡಿದ್ದ ಮುಖೇಶ್ ಆ ಬಳಿಕ ಟೀಂ ಇಂಡಿಯಾದಿಂದ ರಜೆ ಪಡೆದಿದ್ದರು. ಮೂರನೇ ಟಿ20 ಪಂದ್ಯ ಆರಂಭವಾಗುವ ಮೊದಲು ಮುಖೇಶ್ ಅಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದ ನಾಯಕ ಸೂರ್ಯ, ಮುಖೇಶ್ ಇಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅವರು ತಂಡದಿಂದ ಹೊರನಡೆದಿದ್ದಾರೆ ಎಂದಿದ್ದರು.

ಎರಡನೇ ಭಾರತೀಯ: ಮುಖೇಶ್ ಕುಮಾರ್ ವಿಶೇಷ ದಾಖಲೆ

ಮೂರನೇ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದ ಮುಖೇಶ್ ಕುಮಾರ್ ಇದೀಗ, ರಾಯಪುರದಲ್ಲಿ ನಡೆಯಲಿರುವ ನಾಲ್ಕನೇ ಟಿ20ಪಂದ್ಯಕ್ಕೂ ಮುನ್ನ ಶುಕ್ರವಾರ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ಬಿಸಿಸಿಐ ಬಹಿರಂಗಪಡಿಸಿದೆ.

3 ಮಾದರಿಯಲ್ಲೂ ಆಡಿರುವ ಮುಖೇಶ್

ಇನ್ನು ಮುಖೇಶ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ವರ್ಷದ ಹಿಂದೆ ಟೀಂ ಇಂಡಿಯಾವನ್ನು ಸೇರಿಕೊಂಡ ಮುಖೇಶ್ ವರ್ಷದೊಳಗೆ ತಂಡದ ಪರವಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಪದಾರ್ಪಣೆ ಮಾಡಿರುವುದು ಗಮನಾರ್ಹ. ಈ ವರ್ಷದ ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಏಕದಿನ, ಟೆಸ್ಟ್ ಮತ್ತು ಟಿ20 ಸ್ವರೂಪಗಳಲ್ಲಿ ಭಾರತದ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮುಖೇಶ್ ಪಾದಾರ್ಪಣೆ ಮಾಡಿದ್ದರು.

ಮುಖೇಶ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, 2022 ರ ಐಪಿಎಲ್ ಹರಾಜಿನಲ್ಲಿ ಮುಖೇಶ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 5 ಕೋಟಿಗೆ ಖರೀದಿಸಿತು. ಮುಖೇಶ್ ಕುಮಾರ್ ಇದುವರೆಗೆ ಭಾರತದ ಪರ ಒಂದು ಟೆಸ್ಟ್, ಮೂರು ಏಕದಿನ ಮತ್ತು ಏಳು ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಟೆಸ್ಟ್​ನಲ್ಲಿ ಎರಡು ವಿಕೆಟ್, ಏಕದಿನ ಮತ್ತು ಟಿ20 ಮಾದರಿಯಲ್ಲಿ ತಲಾ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್