- Kannada News Sports Cricket news Indian Cricketer Sarfaraz Khan Gets Married In Kashmir pics goes viral
ಕಾಶ್ಮೀರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕ್ರಿಕೆಟಿಗ ಸರ್ಫರಾಜ್ ಖಾನ್
Sarfaraz Khan: ದೇಶೀ ಕ್ರಿಕೆಟ್ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುವ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆ ಮೂಲದ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
Updated on: Aug 07, 2023 | 1:08 PM

ದೇಶೀ ಕ್ರಿಕೆಟ್ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುವ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆ ಮೂಲದ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ಈ ವಿಚಾರವನ್ನು ಸ್ವತಃ ಸರ್ಫರಾಜ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ನಿಯೊಂದಿಗಿರುವ ಫೋಟೋವನ್ನು ಹಂಚಿಕೊಳ್ಳುವುದರೊಂದಿಗೆ ಖಚಿತಪಡಿಸಿದ್ದಾರೆ. ಮದುವೆಯಲ್ಲಿ ಸರ್ಫರಾಜ್ ಕಪ್ಪು ಶೆರ್ವಾನಿ ಧರಿಸಿ ಮಿಂಚಿರುವ ಹಲವು ವೀಡಿಯೊ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಸ್ಥಳೀಯ ಮಾಧ್ಯಮವೊಂದರೊಂದಿಗೆ ತಮ್ಮ ವಿವಾಹದ ಬಗ್ಗೆ ಮಾತನಾಡಿರುವ ಸರ್ಫರಾಜ್, ತನ್ನ ಮದುವೆಯನ್ನು ಕಾಶ್ಮೀರದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಹಾಗಾಗಿ ಭಾನುವಾರದಂದು ಮದುವೆ ಕಾರ್ಯಕ್ರಮ ನಡೆದಿದ್ದಾರೆ ಎಂದಿದ್ದಾರೆ.

ವೈವಾಹಿಕ ಜೀನಕ್ಕೆ ಕಾಲಿರಿಸಿದ ಸರ್ಫರಾಜ್ ಅವರಿಗೆ ಕ್ರಿಸ್ ಗೇಲ್, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್, ಖಲೀಲ್ ಅಹ್ಮದ್, ಉಮ್ರಾನ್ ಮಲಿಕ್, ಸಿಕಂದರ್ ರಜಾ, ಮನ್ದೀಪ್ ಸಿಂಗ್ ಮತ್ತು ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ಮದುವೆಯ ಶುಭಾಶಯ ಕೋರಿದ್ದಾರೆ.

ಇನ್ನು ಕಳೆದ 12 ತಿಂಗಳುಗಳಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಕಾಯುತ್ತಿರುವ ಸರ್ಫರಾಜ್, ದೇಶೀ ಕ್ರಿಕೆಟ್ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಆದರೆ ಇತ್ತೀಚಿಗೆ ಮುಗಿದ ದುಲೀಪ್ ಟ್ರೋಫಿಯಲ್ಲಿ ಸರ್ಫರಾಜ್ ಪ್ರದರ್ಶನ ಅಷ್ಟು ಉತ್ತಮವಾಗಿರಲಿಲ್ಲ. ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಸರ್ಫರಾಜ್ ಕೇವಲ 54 ರನ್ ಗಳಿಸಲಷ್ಟೇ ಶಕ್ತರಾದರು.

ಆದರೆ ಈ ಪಂದ್ಯಾವಳಿಯನ್ನು ಹೊರತುಪಡಿಸಿದರೆ, ದೇಶೀ ಲೀಗ್ನಲ್ಲಿ ಅಬ್ಬರಿಸಿರು ಸರ್ಫರಾಜ್, ಆಡಿರುವ 39 ಪಂದ್ಯಗಳ 58 ಇನ್ನಿಂಗ್ಸ್‌ಗಳಲ್ಲಿ 3559 ರನ್‌ಗಳೊಂದಿಗೆ 74.1 ರ ಸರಾಸರಿಯನ್ನು ಹೊಂದಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಗೆ ಸರ್ಫರಾಜ್ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿದ್ದವು. ಆದರೆ ಆಯ್ಕೆಯಾಗಲಿಲ್ಲ. ಆ ಬಳಿಕ ನಡೆದ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸರ್ಫರಾಜ್, ಸೀಮಿತ ಓವರ್ಗಳ ಮಾದರಿಯಲ್ಲಿ ಇನ್ನು ಕೊಂಚ ಪಳಗಬೇಕಿದೆ.



















