AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಮಾಜಿ ನಾಯಕ SRH ತಂಡದ ಹೊಸ ಕೋಚ್..!

Daniel Vettori: ಐಪಿಎಲ್​ನಲ್ಲಿ ಆರ್​ಸಿಬಿ ಪರ 34 ಪಂದ್ಯಗಳನ್ನಾಡಿರುವ ವೆಟ್ಟೋರಿ ಒಟ್ಟು 38 ವಿಕೆಟ್ ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ 2011 ರಲ್ಲಿ ವೆಟ್ಟೋರಿ ನಾಯಕತ್ವದಲ್ಲಿ ಆರ್​ಸಿಬಿ ಫೈನಲ್​ ಪ್ರವೇಶಿಸಿತ್ತು ಎಂಬುದು ವಿಶೇಷ.

RCB ಮಾಜಿ ನಾಯಕ SRH ತಂಡದ ಹೊಸ ಕೋಚ್..!
Daniel Vettori
TV9 Web
| Edited By: |

Updated on:Aug 07, 2023 | 3:29 PM

Share

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಆರ್​ಸಿಬಿ (RCB), ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಹೊಸ ಕೋಚ್​ಗಳನ್ನು ನೇಮಿಸಿಕೊಂಡಿದೆ. ಇದೀಗ ಸನ್​ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿ ಕೂಡ ಕೋಚ್ ಸ್ಥಾನದಿಂದ ಬ್ರಿಯಾನ್ ಲಾರಾ ಅವರನ್ನು ಕೆಳಗಿಳಿಸಿದೆ. ಅಲ್ಲದೆ ಹೊಸ ಕೋಚ್ ಆಗಿ ನ್ಯೂಝಿಲೆಂಡ್​ನ ಡೇನಿಯಲ್ ವೆಟ್ಟೋರಿ (Daniel Vettori )ಅವರನ್ನು ನೇಮಿಸಿದೆ.

ಈ ಹಿಂದೆ ಆರ್​ಸಿಬಿ ತಂಡದ ನಾಯಕರಾಗಿ, ಆ ಬಳಿಕ ಕೋಚ್​ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ವೆಟ್ಟೋರಿ ಇದೀಗ ಸನ್​ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ಕೈ ಜೋಡಿಸಿದ್ದಾರೆ. ನ್ಯೂಝಿಲೆಂಡ್ ತಂಡದ ಮಾಜಿ ಎಡಗೈ ಸ್ಪಿನ್ನರ್ ವೆಟ್ಟೋರಿ ಪ್ರಸ್ತುತ ಹಂಡ್ರೆಡ್‌ ನಡೆಯುತ್ತಿರುವ ಹಂಡ್ರೆಡ್ ಲೀಗ್​ನಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡದ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ಸ್ಥಾನದಲ್ಲಿದ್ದಾರೆ. ಇದೀಗ ವರ್ಷಗಳ ಬಳಿಕ ಮತ್ತೆ ಐಪಿಎಲ್​ಗೆ ಹಿಂತಿರುಗುತ್ತಿರುವುದು ವಿಶೇಷ.

ಆರ್​ಸಿಬಿಯ ಮಾಜಿ ಕೋಚ್:

ಐಪಿಎಲ್​ನಲ್ಲಿ ಆರ್​ಸಿಬಿ ಪರ 34 ಪಂದ್ಯಗಳನ್ನಾಡಿರುವ ವೆಟ್ಟೋರಿ ಒಟ್ಟು 38 ವಿಕೆಟ್ ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ 2011 ರಲ್ಲಿ ವೆಟ್ಟೋರಿ ನಾಯಕತ್ವದಲ್ಲಿ ಆರ್​ಸಿಬಿ ಫೈನಲ್​ ಪ್ರವೇಶಿಸಿತ್ತು ಎಂಬುದು ವಿಶೇಷ. ಇದಾದ ಬಳಿಕ 2015 ರಿಂದ 2018 ರವರೆಗೆ ಆರ್​ಸಿಬಿ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಇವರ ತರಬೇತಿಯಲ್ಲಿ ಆರ್​ಸಿಬಿ 2015 ರಲ್ಲಿ ಪ್ಲೇಆಫ್ ಹಾಗೂ 2016 ರಲ್ಲಿ ಫೈನಲ್​ಗೆ ಪ್ರವೇಶಿಸಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಸನ್​ರೈಸರ್ಸ್ ಹೈದರಾಬಾದ್ ತಂಡವು ಡೇನಿಯಲ್ ವೆಟ್ಟೋರಿಯನ್ನು ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿದೆ.

ಎಸ್​ಆರ್​ಹೆಚ್ ಕಳಪೆ ಪ್ರದರ್ಶನ:

ಕಳೆದ ಎರಡು ಸೀಸನ್​ಗಳಿಂದ ಸನ್​ರೈಸರ್ಸ್​ ಹೈದರಾಬಾದ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಐಪಿಎಲ್ 2023 ರಲ್ಲಿ ಬ್ರಿಯಾನ್ ಲಾರಾ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು. ಆದರೆ ಲಾರಾ ಮುಂದಾಳತ್ವದಲ್ಲಿ ಎಸ್​ಆರ್​ಹೆಚ್​ ಮತ್ತಷ್ಟು ಮುಗ್ಗರಿಸಿತ್ತು.

ಇದನ್ನೂ ಓದಿ: IPL 2024: ಐಪಿಎಲ್​ನಲ್ಲಿ ಮಹತ್ವದ ಬದಲಾವಣೆ..!

ಕಳೆದ ಸೀಸನ್​​ನಲ್ಲಿ 14 ಪಂದ್ಯಗಳನ್ನಾಡಿದ್ದ ಎಸ್​​ಆರ್​ಹೆಚ್ ತಂಡವು ಕೇವಲ 4 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿತ್ತು. ಅಷ್ಟೇ ಅಲ್ಲದೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಇದೇ ಕಾರಣದಿಂದಾಗಿ ಇದೀಗ ಮುಖ್ಯ ಕೋಚ್​ ಆಗಿದ್ದ ಬ್ರಿಯಾನ್ ಲಾರಾ ಅವರ ತಲೆದಂಡವಾಗಿದೆ. ಅಲ್ಲದೆ ಆರ್​ಸಿಬಿ ತಂಡವನ್ನು ಫೈನಲ್​ಗೆ ತಲುಪಿಸಿದ್ದ ನಾಯಕ/ಕೋಚ್ ಡೇನಿಯಲ್ ವೆಟ್ಟೋರಿಯನ್ನು ಹೊಸ ಹೆಡ್ ಕೋಚ್​ ಆಗಿ ನೇಮಿಸಲಾಗಿದೆ.

Published On - 3:27 pm, Mon, 7 August 23

Follow Us
ಉರುಳಿ ಬಿದ್ದ ಪ್ರವಾಸಿಗರ ಬಸ್: ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!
ಉರುಳಿ ಬಿದ್ದ ಪ್ರವಾಸಿಗರ ಬಸ್: ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!
ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು
ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು
ರೋಗಿಗಳ ಮೇಲೂ ಯುದ್ಧದ ಎಫೆಕ್ಟ್: ಔಷಧಿಗಳ ದರ ಶೇ 15 ರಷ್ಟು ಏರಿಕೆ ಸಾಧ್ಯತೆ
ರೋಗಿಗಳ ಮೇಲೂ ಯುದ್ಧದ ಎಫೆಕ್ಟ್: ಔಷಧಿಗಳ ದರ ಶೇ 15 ರಷ್ಟು ಏರಿಕೆ ಸಾಧ್ಯತೆ
ಇಲೆಕ್ಷನ್ ಗೆಲ್ಲೋದು ಹೇಗೆ ಅಂತ AIನ ಕೇಳಿದ ಡಿಕೆಶಿ! AI ಹೇಳಿದ್ದೇನು ಗೊತ್ತಾ
ಇಲೆಕ್ಷನ್ ಗೆಲ್ಲೋದು ಹೇಗೆ ಅಂತ AIನ ಕೇಳಿದ ಡಿಕೆಶಿ! AI ಹೇಳಿದ್ದೇನು ಗೊತ್ತಾ
ತಿರುಮಲ ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು
ತಿರುಮಲ ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು
ಮುಸ್ಲಿಮರನ್ನ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಹೀಗೆಂದಿದ್ಯಾಕೆ ನೋಡಿ!
ಮುಸ್ಲಿಮರನ್ನ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಹೀಗೆಂದಿದ್ಯಾಕೆ ನೋಡಿ!
ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹ‌ನ ಅಪಘಾತ!
ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹ‌ನ ಅಪಘಾತ!
ಆಲೂಗಡ್ಡೆ ದರ ಪಾತಾಳಕ್ಕೆ ಕುಸಿತ, ಬೇಡಿಕೆಯೂ ಇಲ್ಲ! ರೈತರ ಗೋಳು ಕೇಳೋರಿಲ್ಲ
ಆಲೂಗಡ್ಡೆ ದರ ಪಾತಾಳಕ್ಕೆ ಕುಸಿತ, ಬೇಡಿಕೆಯೂ ಇಲ್ಲ! ರೈತರ ಗೋಳು ಕೇಳೋರಿಲ್ಲ
ಪ್ರತಿ ಓವರ್​ಗೆ 14.23 ರನ್: ಪಿಎಸ್​ಎಲ್​ನಲ್ಲಿ ಹೊಸ ಇತಿಹಾಸ
ಪ್ರತಿ ಓವರ್​ಗೆ 14.23 ರನ್: ಪಿಎಸ್​ಎಲ್​ನಲ್ಲಿ ಹೊಸ ಇತಿಹಾಸ
ಶಾಸಕನ ಮನೆಯಲ್ಲೇ ಕಾಫಿ ಕದಿಯುತ್ತಿದ್ದಿವನು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿದ!
ಶಾಸಕನ ಮನೆಯಲ್ಲೇ ಕಾಫಿ ಕದಿಯುತ್ತಿದ್ದಿವನು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿದ!