Asia Cup 2022: ಏಷ್ಯಾಕಪ್ನ ಮೊದಲ ಸುತ್ತಿನಲ್ಲಿ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ (Team India) ಸೂಪರ್-4 ಹಂತಕ್ಕೇರಿದೆ. ಗ್ರೂಪ್-A ನಲ್ಲಿ ಅಗ್ರಸ್ಥಾನ ಪಡೆದಿರುವ ಟೀಮ್ ಇಂಡಿಯಾ ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಯಾರನ್ನು ಎದುರಿಸಲಿದೆ ಎಂಬುದೇ ಈಗ ಕುತೂಹಲ. ಏಕೆಂದರೆ ಟೀಮ್ ಇಂಡಿಯಾ ಮುಂದೆ ಎರಡು ಎದುರಾಳಿಗಳಿದ್ದು, ಇವರಲ್ಲಿ ಗೆಲ್ಲುವ ತಂಡದ ವಿರುದ್ದವೇ ಮೊದಲ ಪಂದ್ಯವಾಡಬೇಕಿದೆ. ಅಂದರೆ ಗ್ರೂಪ್-ಎ ನಲ್ಲಿ ಮೊದಲ ಸ್ಥಾನ ಪಡೆದ ತಂಡ ಅದೇ ಗ್ರೂಪ್ನಲ್ಲಿ 2ನೇ ಸ್ಥಾನ ಪಡೆಯುವ ತಂಡದ ವಿರುದ್ಧ ಸೂಪರ್-4 ನಲ್ಲಿ ಮೊದಲ ಪಂದ್ಯವನ್ನು ಆಡಲಿದೆ. ಗ್ರೂಪ್-ಎ ನಲ್ಲಿನ ಅಗ್ರ ತಂಡವಾಗಿ ಈಗಾಗಲೇ ಟೀಮ್ ಇಂಡಿಯಾ ಸೂಪರ್-4 ಹಂತವನ್ನು ಪ್ರವೇಶಿಸಿದೆ. ಹಾಗೆಯೇ ಇಲ್ಲಿ ಪಾಕಿಸ್ತಾನ್ ಹಾಗೂ ಹಾಂಗ್ ಕಾಂಗ್ ತಂಡಗಳಲ್ಲಿ ಒಂದು ತಂಡವು ಸೂಪರ್-4 ಹಂತಕ್ಕೇರಬಹುದು.
ಅಂದರೆ ಉಭಯ ತಂಡಗಳ ಮುಖಾಮುಖಿಯಲ್ಲಿ ಗೆಲ್ಲುವ ತಂಡ ಮುಂದಿನ ಸುತ್ತಿಗೆ ಪ್ರವೇಶಿಸಲಿದೆ. ಇಲ್ಲಿ ಪಾಕ್ ತಂಡವು ಬಲಿಷ್ಠವಾಗಿರುವ ಕಾರಣ ಸೂಪರ್-4 ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅದರಂತೆ ಸೆಪ್ಟೆಂಬರ್ 4 ರಂದು ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ದದ ಪಂದ್ಯದ ಮೂಲಕ ಸೂಪರ್-4 ಅಭಿಯಾನ ಆರಂಭಿಸಬಹುದು.
ಹೀಗಾಗಿ ಮುಂದಿನ ಹಂತದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗುವುದು ಬಹುತೇಕ ಖಚಿತ ಎನ್ನಬಹುದು. ಒಂದು ವೇಳೆ ಪಾಕ್ ತಂಡವು ಮುಂದಿನ ಪಂದ್ಯದಲ್ಲಿ ಸೋತರೆ ಟೀಮ್ ಇಂಡಿಯಾಗೆ ಹಾಂಗ್ ಕಾಂಗ್ ಎದುರಾಳಿಯಾಗಿ ಸಿಗಬಹುದು. ಆದರೆ ಮೇಲ್ನೋಟಕ್ಕೆ ಪಾಕ್ ತಂಡವೇ ಬಲಿಷ್ಠವಾಗಿದ್ದು, ಹೀಗಾಗಿ ಸೂಪರ್-4 ಹಂತಕ್ಕೇರುವ ತಂಡವಾಗಿ ಗುರುತಿಸಿಕೊಂಡಿದೆ.
ಅದರಂತೆ ಸೆಪ್ಟೆಂಬರ್-4 ರಂದು ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ್ ತಂಡಗಳು ಮತ್ತೆ ಮುಖಾಮುಖಿಯಾಗುವ ಸಾಧ್ಯತೆಯೇ ಹೆಚ್ಚು.
ಸೂಪರ್- 4 ವೇಳಾಪಟ್ಟಿ:
ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್. ಮೀಸಲು ಆಟಗಾರರು: ಅಕ್ಷರ್ ಪಟೇಲ್, ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.