6,2,4,1,6,6.. ಕೊನೆಯ ಓವರ್​ನಲ್ಲಿ ಸುನಾಮಿ ಎಬ್ಬಿಸಿದ ಬ್ರಾವೋ- ಜದ್ರಾನ್! ಸುಸ್ತಾದ ರಸೆಲ್

ILT20: ವಾಸ್ತವವಾಗಿ ಕೊನೆಯ ಓವರ್‌ನಲ್ಲಿ ಎಂಐ ಎಮಿರೇಟ್ಸ್ ತಂಡದ ಗೆಲುವಿಗೆ 20 ರನ್‌ಗಳ ಅಗತ್ಯವಿತ್ತು. ಹೀಗಾಗಿ ಪ್ರತಿಯೊಬ್ಬರೂ ಅಬುಧಾಬಿ ನೈಟ್ ರೈಡರ್ಸ್ ತಂಡಕ್ಕೆ ಗೆಲುವು ಖಚಿತ ಎಂತಲೇ ಭಾವಿಸಿದ್ದರು.

6,2,4,1,6,6.. ಕೊನೆಯ ಓವರ್​ನಲ್ಲಿ ಸುನಾಮಿ ಎಬ್ಬಿಸಿದ ಬ್ರಾವೋ- ಜದ್ರಾನ್! ಸುಸ್ತಾದ ರಸೆಲ್
ಡ್ವೇನ್ ಬ್ರಾವೋ ಮತ್ತು ನಜಿಬುಲ್ಲಾ ಜದ್ರಾನ್
Updated By: ಪೃಥ್ವಿಶಂಕರ

Updated on: Jan 22, 2023 | 10:00 AM

6,2,4,1,6,6… ಒಂದೇ ಓವರ್​ನಲ್ಲಿ ಬರೋಬ್ಬರಿ 25 ರನ್ ಚಚ್ಚಿದ ಡ್ವೇನ್ ಬ್ರಾವೋ ಮತ್ತು ನಜಿಬುಲ್ಲಾ ಜದ್ರಾನ್ (Dwayne Bravo and Najibullah Zadran ) ಜೋಡಿ ಕೊನೆಯ ಓವರ್‌ನಲ್ಲಿ ಅಬ್ಬರಿಸುವುದರೊಂದಿಗೆ ಮುಂಬೈ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಟಿ20 ಲೀಗ್​ನಲ್ಲಿ ಅಬುಧಾಬಿ ನೈಟ್ ರೈಡರ್ಸ್ ಮತ್ತು ಎಂಐ ಎಮಿರೇಟ್ಸ್ (Abu Dhabi Knight Riders and MI Emirates) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ 19ನೇ ಓವರ್​ವರೆಗೂ ಗೆಲುವಿನ ಡ್ರೈವಿಂಗ್ ಸೀಟ್​ನಲ್ಲಿ ಕುಳಿತಿದ್ದ ಅಬುಧಾಬಿ ನೈಟ್ ರೈಡರ್ಸ್ ತಂಡಕ್ಕೆ ಒಂದೆಡೆ ತನ್ನ ತಂಡದ ಭರವಸೆಯ ಆಟಗಾರ ಆಂಡ್ರೆ ರಸೆಲ್ ( Andre Russell) ವಿಲನ್ ಆದರೆ, ಇನ್ನೊಂದೆಡೆ ಕೊನೆಯ ಓವರ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಸಿದ ಡ್ವೇನ್ ಬ್ರಾವೋ ಮತ್ತು ನಜಿಬುಲ್ಲಾ ಜದ್ರಾನ್ ಎಂಐ ಎಮಿರೇಟ್ಸ್ ತಂಡದ ಗೆಲುವಿನ ಹೀರೋ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಬುಧಾಬಿ ತಂಡ ಎಂಐಗೆ 171 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಕೀರಾನ್ ಪೊಲಾರ್ಡ್ ನೇತೃತ್ವದ ಎಂಐ ತಂಡ 5 ವಿಕೆಟ್ ಕಳೆದುಕೊಂಡು ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿತು.

ವಾಸ್ತವವಾಗಿ ಕೊನೆಯ ಓವರ್‌ನಲ್ಲಿ ಎಂಐ ಎಮಿರೇಟ್ಸ್ ತಂಡದ ಗೆಲುವಿಗೆ 20 ರನ್‌ಗಳ ಅಗತ್ಯವಿತ್ತು. ಹೀಗಾಗಿ ಪ್ರತಿಯೊಬ್ಬರೂ ಅಬುಧಾಬಿ ನೈಟ್ ರೈಡರ್ಸ್ ತಂಡಕ್ಕೆ ಗೆಲುವು ಖಚಿತ ಎಂತಲೇ ಭಾವಿಸಿದ್ದರು. ಆದರೆ ಇಡೀ ಪಂದ್ಯದ ದಿಕ್ಕನೇ ಬದಲಿಸಿದ ಬ್ರಾವೋ ಮತ್ತು ಜದ್ರಾನ್, ಆಂಡ್ರೆ ರಸೆಲ್​ಗೆ ಚಳಿ ಜ್ವರ ಬಿಡಿಸಿದ್ದಾರೆ. ಅಬುಧಾಬಿ ನೈಟ್ ರೈಡರ್ಸ್ ತಂಡದ ಕೊನೆಯ ಓವರ್​ ಎಸೆಯುವ ಜವಬ್ದಾರಿಯನ್ನು ರಸೆಲ್ ವಹಿಸಿಕೊಂಡರೆ, ಎಂಐ ತಂಡದ ಗೆಲುವಿನ ಜವಬ್ದಾರಿಯನ್ನು ಬ್ರಾವೋ ಮತ್ತು ಜದ್ರಾನ್ ಹೊತ್ತುಕೊಂಡಿದ್ದರು.

IND vs NZ 3rd ODI: ಭಾರತ- ನ್ಯೂಜಿಲೆಂಡ್ ಅಂತಿಮ ತೃತೀಯ ಏಕದಿನ ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ?

ಬರೋಬ್ಬರಿ 25 ರನ್ ನೀಡಿದ ರಸೆಲ್

ಕೊನೆಯ ಓವರ್​ನಲ್ಲಿ 20 ರನ್ ಬೇಕಿದ್ದರಿಂದ ಗೆಲುವು ನಮ್ಮದೆ ಎಂದು ಬೌಲಿಂಗ್ ಆರಂಭಿಸಿದ ರಸೆಲ್​ಗೆ ಅನಿರೀಕ್ಷಿತ ಸ್ವಾಗತ ಸಿಕ್ಕಿತು. ಇಡೀ ಓವರ್​ನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆ ಸುರಿಯಲಾರಂಭಿಸಿತು. ಕೊನೆಯ ಓವರ್‌ನಲ್ಲಿ 3 ಸಿಕ್ಸರ್, ಒಂದು ಬೌಂಡರಿ ಸೇರಿದಂತೆ ಒಟ್ಟು 25 ರನ್ ಹರಿದುಬಂದವು. ಕೊನೆಯ ಓವರ್‌ನಲ್ಲಿ 25 ರನ್ ನೀಡಿದ ರಸೆಲ್, ಅಬುಧಾಬಿಯ ಗೆಲುವಿನ ಕನಸಿಗೆ ಕೊಳ್ಳಿ ಇಟ್ಟರು. ಅಬುಧಾಬಿ ಪರ ಧನಂಜಯ್ ಡಿ ಸಿಲ್ವಾ 40 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ ಗರಿಷ್ಠ 65 ರನ್ ಗಳಿಸಿದರೆ, ನಾಯಕ ಸುನಿಲ್ ನರೈನ್ 18 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿದರು.

ಜದ್ರಾನ್ ಅಬ್ಬರ

ಇನ್ನು ಎಂಐ ತಂಡದ ಪರ ಆಂಡ್ರೆ ಫ್ಲೆಚರ್ ಅತ್ಯಧಿಕ 53 ರನ್ ಗಳಿಸಿದರ ಫಲವಾಗಿ, 19 ಓವರ್‌ಗಳ ಆಟದಲ್ಲಿ ಎಂಐ 5 ವಿಕೆಟ್‌ಗೆ 151 ರನ್ ಗಳಿಸಿತ್ತು. ಹೀಗಾಗಿ ಅಬುಧಾಬಿಯ ಗೆಲುವು ನಿಶ್ಚಿತವಾಗಿತ್ತು. ಆದರೆ ಕೊನೆಯ ಓವರ್‌ನಲ್ಲಿ, ಬ್ರಾವೋ ಮತ್ತು ಜದ್ರಾನ್ ಅಬುಧಾಬಿಯ ಕಠಿಣ ಪರಿಶ್ರಮಕ್ಕೆ ಎಳ್ಳು ನೀರು ಬಿಟ್ಟರು. 20ನೇ ಓವರ್‌ ಕೊನೆಯ 2 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿದ ಜದ್ರಾನ್ ಗೆಲುವಿನ ಹೀರೋ ಎನಿಸಿಕೊಂಡರೆ, ಬ್ರಾವೋ ಬ್ಯಾಟ್‌ನಿಂದ ಒಂದು ಸಿಕ್ಸರ್ ಮತ್ತು 1 ಬೌಂಡರಿ ಕೂಡ ಸಿಡಿಯಿತು. ಜದ್ರಾನ್ 17 ಎಸೆತಗಳಲ್ಲಿ ಅಜೇಯ 35 ರನ್ ಸೇರಿಸಿದರೆ, ಬ್ರಾವೋ 6 ಎಸೆತಗಳಲ್ಲಿ 15 ರನ್ ಗಳಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:56 am, Sun, 22 January 23