Rohit Sharma: ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ದಾಖಲೆ ಬರೆಯಲು ಸಜ್ಜಾದ ಹಿಟ್​ಮ್ಯಾನ್ ರೋಹಿತ್ ಶರ್ಮಾ

IPL 2021 CSK vs MI: ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಿಟ್​ಮ್ಯಾನ್ ರೋಹಿತ್ ಶರ್ಮಾ ಇಂದಿನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೇ ಈ ದಾಖಲೆ ಬರೆಯುವ ಅಂದಾಜಿದೆ.

Rohit Sharma: ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ದಾಖಲೆ ಬರೆಯಲು ಸಜ್ಜಾದ ಹಿಟ್​ಮ್ಯಾನ್ ರೋಹಿತ್ ಶರ್ಮಾ
Rohit Sharma

ಭಾರತದಲ್ಲಿ ಅಪೂರ್ಣಗೊಂಡಿದ್ದ ಐಪಿಎಲ್ 2021ಕ್ಕೆ (IPL 2021) ಇಂದು ದುಬೈನಲ್ಲಿ ಮತ್ತೆ ಚಾಲನೆ ಸಿಗಲಿದ್ದು, ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSKvsMI) ತಂಡಗಳು ಮೊದಲ ಪಂದ್ಯದಲ್ಲಿ ಸೆಣೆಸಾಟ ನಡೆಸಲಿವೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ (Dubai International Stadium) ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಅರ್ಧದಷ್ಟು ಪ್ರೇಕ್ಷಕರಿಗೂ ಅನುಮತಿ ನೀಡಲಾಗಿದೆ. ಈ ಮೊದಲ ಪಂದ್ಯದಲ್ಲೇ ಹಿಟ್​ಮ್ಯಾನ್ ರೋಹಿತ್ ಶರ್ಮಾ (Rohit Sharma) ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಹೌದು, ಟಿ-20 (T20 Cricket) ಮಾದರಿಯ ಕ್ರಿಕೆಟ್​ನಲ್ಲಿ ಸ್ಟಾರ್ ಬ್ಯಾಟ್ಸ್​ಮನ್ ಆಗಿ ಗುರಿತಿಸಿಕೊಂಡಿರುವ ರೋಹಿತ್ ಶರ್ಮಾ ಇತಿಹಾಸ ರಚಿಸುವ ತವಕದಲ್ಲಿದ್ದಾರೆ. ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ರೋಹಿತ್ ಬರೋಬ್ಬರಿ 397 ಸಿಕ್ಸರ್ ಸಿಡಿಸಿದ್ದಾರೆ. ಇನ್ನೂ ಕೇವಲ 3 ಸಿಕ್ಸರ್ ಬಾರಿಸಿದರೆ ಇವರ ಸಿಕ್ಸರ್​ಗಳ ಸಂಖ್ಯೆ 400 ತಲುಪಲಿದೆ.

ಈ ಮೂಲಕ ಟಿ-20 ಕ್ರಿಕೆಟ್​ನಲ್ಲಿ 400 ಸಿಕ್ಸರ್ ಬಾರಿಸಿದ ಮೊಟ್ಟ ಮೊದಲ ಭಾರತೀಯ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ಬರೆಯಲಿದ್ದಾರೆ. ಈ ಸಾಧನೆಯನ್ನು ಹಿಟ್​ಮ್ಯಾನ್ ಇಂದಿನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೇ ಮಾಡುವ ಅಂದಾಜಿದೆ.

ರೋಹಿತ್ ಶರ್ಮಾ ಒಟ್ಟು ಈವರೆಗೆ 397 ಸಿಕ್ಸರ್ ಬಾರಿಸಿದ್ದಾರೆ. ಇದರಲ್ಲಿ 224 ಸಿಕ್ಸರ್ ಐಪಿಎಲ್​ನಿಂದಲೇ ಬಂದಿದೆ. ಮುಂಬೈ ಇಂಡಿಯನ್ಸ್ ಪರ 173 ಮತ್ತು ಡೆಕ್ಕನ್ ಚಾರ್ಜೆಸ್ ಪರ 51 ಸಿಕ್ಸರ್ ಬಾರಿಸಿದ್ದರು. ಇನ್ನೂ 300 ಸಿಕ್ಸರ್​ಗಳ ಗಡಿ ದಾಟಿದ ಭಾರತೀಯ ಬ್ಯಾಟ್ಸ್​ಮನ್​ಗಳ ಸಾಲಿನಲ್ಲಿ ರೋಹಿತ್ ಮೊದಲ ಸ್ಥಾನದಲ್ಲಿದ್ದರೆ, ಸುರೇಶ್ ರೈನಾ (324) ಎರಡನೇ ಸ್ಥಾನ, ವಿರಾಟ್ ಕೊಹ್ಲಿ (315), ಎಂ. ಎಸ್ ಧೋನಿ (303) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

ನಾಲ್ಕುವರೆ ತಿಂಗಳ ಬಳಿಕ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಇಂದು ಮತ್ತೆ ಚಾಲನೆ ಸಿಗುತ್ತಿದೆ. ಅರಬ್ ನಾಡಿನಲ್ಲಿ ಅಬ್ಬರಿಸಲು ಆಟಗಾರರು ತಯಾರಾಗಿದ್ದು, ಅಭಿಮಾನಿಗಳಂತು ಕಾದುಕುಳಿತಿದ್ದಾರೆ. ಐಪಿಎಲ್ ಇತಿಹಾಸದ ಸಾಂಪ್ರದಾಯಿಕ ಎದುರಾಳಿ, ಎರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಸಂಜೆ 7:30ಕ್ಕೆ ದುಬೈ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ ಒಟ್ಟು 32 ಬಾರಿ ಮುಖಾಮುಖಿ ಆಗಿವೆ. ಈ ಪೈಕಿ 19 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ 13 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಸಂಭಾವ್ಯ ಪ್ಲೇಯಿಂಗ್ XI:

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಫಾಫ್ ಡು ಪ್ಲೆಸಿಸ್ / ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಸುರೇಶ್ ರೈನಾ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್‌), ಮೊಯೀನ್ ಅಲಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಜೋಶ್ ಹೇಜಲ್‌ವುಡ್.

ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಜಸ್​ಪ್ರೀತ್ ಬುಮ್ರಾ, ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್, ಮಾರ್ಕೊ ಜಾನ್ಸನ್.

IPL 2021: ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್: ಯಾವ ತಂಡ ಬಲಿಷ್ಠ?, ಪಿಚ್ ವರದಿ, ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

IPL 2021: ಅರಬ್ ನಾಡಿನಲ್ಲಿ ಐಪಿಎಲ್ ಅಬ್ಬರ ಶುರು: ಇಂದು ಚೆನ್ನೈ-ಮುಂಬೈ ನಡುವೆ ಮೊದಲ ಸೆಣೆಸಾಟ

(IPL 2021 CSK vs MI Mumbai Indians captain Rohit Sharma only 3 sixes away to create Sixes Record)

Read Full Article

Click on your DTH Provider to Add TV9 Kannada