ಭಾರತ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಇದರಂತೆ ಓಪನರ್‌ಗಳಾದ ವೀರೇಂದ್ರ ಸೆಹ್ವಾಗ್ (68) ಹಾಗೂ ಗೌತಮ್ ಗಂಭೀರ್ (58) ಬಿರುಸಿನ ಆರಂಭವೊದಗಿಸಿದ್ದರು. ಬಳಿಕ ಕ್ರೀಸಿಗಿಳಿದ ಯುವರಾಜ್ ಸಿಂಗ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಇಂಗ್ಲೆಂಡ್ ಬಲಗೈ ವೇಗಿ ಸ್ಟುವರ್ಟ್ ಬ್ರಾಡ್ ಎಸೆದ ಓವರ್‌ನ ಎಲ್ಲ ಆರು ಎಸೆತಗಳನ್ನು ಯುವರಾಜ್ ಸಿಂಗ್ ಬೌಂಡರಿಗಟ್ಟಿದ್ದರು.
ಇದಕ್ಕೂ ಮೊದಲು ಆಂಡ್ರ್ಯೂ ಫ್ಲಿಂಟಾಫ್ ಕೆಣಕಲು ಮುಂದಾಗಿದ್ದರು. ಇದರಿಂದ ತೀವ್ರ ಕುಪಿತಗೊಂಡಿದ್ದ ಯುವಿ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದರು. ಅಷ್ಟೇ ಕೇವಲ 12 ಎಸೆತಗಳಲ್ಲೇ ಅರ್ಧಶತಕ ಬಾರಿಸುವ ಮೂಲಕ ವಿಶ್ವ ದಾಖಲೆ ಬರೆದರು. ಅಂತಿಮವಾಗಿ 16 ಎಸೆತಗಳನ್ನು ಎದುರಿಸಿದ ಯುವಿ ಮೂರು ಬೌಂಡರಿ ಹಾಗೂ ಏಳು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 58 ರನ್ ಗಳಿಸಿದರು. ಪರಿಣಾಮ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 218 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಬಳಿಕ ಗುರಿ ಬೆನ್ನಟ್ಟಿದ ಆಂಗ್ಲರ ತಂಡ ಆರು ವಿಕೆಟ್ ನಷ್ಟಕ್ಕೆ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ 18 ರನ್ ಅಂತರದ ರೋಚಕ ಗೆಲುವು ದಾಖಲಿಸಿತು.