IPL 2021: ಡೆಲ್ಲಿ ತಂಡಕ್ಕೆ ಕೈಕೊಟ್ಟ ಮತ್ತೊಬ್ಬ ಇಂಗ್ಲೆಂಡ್​ ಕ್ರಿಕೆಟಿಗ; ಬದಲಿಯಾಗಿ ಬಂದ ಬಿಗ್ ಬ್ಯಾಷ್​ ಲೀಗ್ ಸೂಪರ್​ಸ್ಟಾರ್!

| Updated By: ಪೃಥ್ವಿಶಂಕರ

Updated on: Sep 13, 2021 | 4:17 PM

IPL 2021: ಇಂಗ್ಲೆಂಡಿನ ಆಲ್ ರೌಂಡರ್ ಕ್ರಿಸ್ ವೋಕ್ಸ್ ಭಾರತ-ಇಂಗ್ಲೆಂಡ್ ಮ್ಯಾಂಚೆಸ್ಟರ್ ಟೆಸ್ಟ್ ರದ್ದಾದ ನಂತರ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟುಕೊಂಡು ಪಂದ್ಯಾವಳಿಯಿಂದ ಹಿಂದೆ ಸರಿದರು.

IPL 2021: ಡೆಲ್ಲಿ ತಂಡಕ್ಕೆ ಕೈಕೊಟ್ಟ ಮತ್ತೊಬ್ಬ ಇಂಗ್ಲೆಂಡ್​ ಕ್ರಿಕೆಟಿಗ; ಬದಲಿಯಾಗಿ ಬಂದ ಬಿಗ್ ಬ್ಯಾಷ್​ ಲೀಗ್ ಸೂಪರ್​ಸ್ಟಾರ್!
ಬೆಂಜಮಿನ್ ದ್ವಾರಶುಯಿಸ್
Follow us on

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ತಂಡದ ಆಲ್​ರೌಂಡರ್ ಕ್ರಿಸ್ ವೋಕ್ಸ್‌ ಉಳಿದ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಬದಲಿಯಾಗಿ ಆಸ್ಟ್ರೇಲಿಯಾದ ಬೌಲರ್ ಬೆಂಜಮಿನ್ ದ್ವಾರಶೂಯಿಸ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಬೆಂಜಮಿನ್ ಅವರ ಎರಡನೇ ಐಪಿಎಲ್ ತಂಡವಾಗಿದೆ. ಈ ಹಿಂದೆ, ಪಂಜಾಬ್ ಕಿಂಗ್ಸ್ 2018 ರಲ್ಲಿ ಅವರನ್ನು ತಮ್ಮೊಂದಿಗೆ ಸೇರಿಸಿಕೊಂಡಿದ್ದರು.

ಇಂಗ್ಲೆಂಡಿನ ಆಲ್ ರೌಂಡರ್ ಕ್ರಿಸ್ ವೋಕ್ಸ್ ಭಾರತ-ಇಂಗ್ಲೆಂಡ್ ಮ್ಯಾಂಚೆಸ್ಟರ್ ಟೆಸ್ಟ್ ರದ್ದಾದ ನಂತರ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟುಕೊಂಡು ಪಂದ್ಯಾವಳಿಯಿಂದ ಹಿಂದೆ ಸರಿದರು. ಐಪಿಎಲ್ 2021 ರ ಎರಡನೇ ಹಂತದಿಂದ ಹೊರಬಂದ ಏಕೈಕ ಇಂಗ್ಲೀಷ್ ಆಟಗಾರ ಆತ ಮಾತ್ರವಲ್ಲ. ಅವರ ಜೊತೆಯಲ್ಲಿ ಜಾನಿ ಬೈರ್‌ಸ್ಟೊ, ಡೇವಿಡ್ ಮಲನ್, ಜೋಸ್ ಬಟ್ಲರ್ ಕೂಡ ಹಿಂದೆ ಸರಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಕ್ರಿಸ್ ವೋಕ್ಸ್ ಐಪಿಎಲ್​ನ ಮೊದಲ ಹಂತದಲ್ಲಿ 3 ಪಂದ್ಯಗಳಲ್ಲಿ 5 ವಿಕೆಟ್ ಪಡೆದರು.

ಬಿಗ್ ಬ್ಯಾಷ್​ನ ಯಶಸ್ವಿ ಬೌಲರ್​ಗಳಲ್ಲಿ ಒಬ್ಬರು
ಈಗ ದ್ವಿತೀಯಾರ್ಧದಲ್ಲಿ ಕ್ರಿಸ್ ವೋಕ್ಸ್ ಗೈರಾಗಿದ್ದರಿಂದ ದೆಹಲಿ ಕ್ಯಾಪಿಟಲ್ಸ್ ಬೆಂಜಮಿನ್ ದ್ವಾರಶೂಯಿಸ್ ಜೊತೆ ಕೈಜೋಡಿಸಿದೆ. ಬೆಂಜಮಿನ್ ಆಸ್ಟ್ರೇಲಿಯಾದ ಟಿ 20 ಲೀಗ್ ಬಿಗ್ ಬ್ಯಾಶ್‌ನ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರು ಬಿಗ್ ಬ್ಯಾಶ್​ನಲ್ಲಿ ಆಡಿದ 69 ಪಂದ್ಯಗಳಲ್ಲಿ 85 ವಿಕೆಟ್ ಪಡೆದಿದ್ದಾರೆ. ಸಿಡ್ನಿ ಸಿಕ್ಸರ್ಸ್ ಪರ ಆಡುವ ದ್ವಾರಶೂಯಿಸ್ ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 17.30 ರ ಸರಾಸರಿಯಲ್ಲಿ 100 ಟಿ 20 ವಿಕೆಟ್ ಗಳನ್ನು ಪಡೆದಿದ್ದಾರೆ. ಇದರಲ್ಲಿ, ಅವರ ಅತ್ಯುತ್ತಮ ಪ್ರದರ್ಶನವೆಂದರೆ 13 ರನ್​ಗಳಿಗೆ 4 ವಿಕೆಟ್ ಪಡೆದಿರುವುದು. ಈ ಹಿಂದೆ ದೆಹಲಿ ಕ್ಯಾಪಿಟಲ್ಸ್ ಯುಎಇಯಲ್ಲಿ ದ್ವಾರಶೂಯಿಸ್ ತಂಡದ ಬಯೋ ಬಬಲ್​ಗೆ ಶೀಘ್ರದಲ್ಲೇ ಸೇರಲಿದ್ದಾರೆ ಎಂದು ಹೇಳಿಕೆಯನ್ನು ನೀಡಿತು.

ಐಪಿಎಲ್ 2021 ರ ಮೊದಲ ಹಂತದ ನಂತರ, ದೆಹಲಿ ಕ್ಯಾಪಿಟಲ್ಸ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅವರು ಮೊದಲ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6 ಪಂದ್ಯ ಗೆದ್ದಿದ್ದಾರೆ. ಮತ್ತು, ಇದು 12 ಅಂಕಗಳನ್ನು ಹೊಂದಿದೆ.

ಇದನ್ನೂ ಓದಿ:IPL 2021: ಭಾರತದ ಮೇಲೆ ಇನ್ನಿಲ್ಲದ ಕೋಪ; ಪಾಕ್​ ಕ್ರಿಕೆಟ್ ಕದ ತಟ್ಟಿದ ಆಂಗ್ಲರು! ಐಪಿಎಲ್ ಪ್ಲೇಆಫ್​ಗೆ ಇಂಗ್ಲೆಂಡ್ ಪಡೆ ಅಲಭ್ಯ