MI vs DC: ಟಾಸ್ ಗೆದ್ದ ಡೆಲ್ಲಿ; ಎರಡೂ ತಂಡಗಳಲ್ಲಿ ಒಂದೊಂದು ಬದಲಾವಣೆ.. ಪ್ಲೇಯಿಂಗ್ ಇಲೆವೆನ್ ಹೀಗಿದೆ
IPL 2021: ಇಂದಿನ ಯುದ್ಧ ಶಾರ್ಜಾದಲ್ಲಿ ನಡೆಯುತ್ತಿದ್ದು ಟಾಸ್ ಗೆದ್ದ ಡೆಲ್ಲಿ ತಂಡ ಬೌಲಿಂಗ್ ಆಯ್ದುಕೊಂಡಿದೆ. ಜೊತೆಗೆ ಎರಡೂ ತಂಡಗಳ ನಾಯಕರು ಕೂಡ ಪ್ಲೇಯಿಂಗ್ ಇಲೆವನ್‌ಗೆ ಸಂಬಂಧಿಸಿದಂತೆ ತಮ್ಮ ಕಾರ್ಡ್‌ಗಳನ್ನು ತೆರೆದಿದ್ದಾರೆ.
ಐಪಿಎಲ್ 2021 ರಲ್ಲಿ ಇಂದು ಡಬಲ್ ಹೆಡರ್ ಪಂದ್ಯ ಇದೆ. ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿದೆ. ಉಭಯ ತಂಡಗಳ ನಡುವಿನ ಇಂದಿನ ಯುದ್ಧ ಶಾರ್ಜಾದಲ್ಲಿ ನಡೆಯುತ್ತಿದ್ದು ಟಾಸ್ ಗೆದ್ದ ಡೆಲ್ಲಿ ತಂಡ ಬೌಲಿಂಗ್ ಆಯ್ದುಕೊಂಡಿದೆ. ಜೊತೆಗೆ ಎರಡೂ ತಂಡಗಳ ನಾಯಕರು ಕೂಡ ಪ್ಲೇಯಿಂಗ್ ಇಲೆವನ್‌ಗೆ ಸಂಬಂಧಿಸಿದಂತೆ ತಮ್ಮ ಕಾರ್ಡ್‌ಗಳನ್ನು ತೆರೆದಿದ್ದಾರೆ. ಇಂದಿನ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್‌ಗೆ ಗೆಲುವು ಬಹಳ ಮುಖ್ಯವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಮುಂಬೈ ಸೋತರೆ, ಅವರ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಮತ್ತೊಂದೆಡೆ, ದೆಹಲಿ ತಂಡವು ಪ್ಲೇಆಫ್‌ಗೆ ಟಿಕೆಟ್ ಪಡೆದುಕೊಂಡಿದೆ. ಹಾಗಾಗಿ ಅವರು ಕೇವಲ 2 ನೇ ಸ್ಥಾನದಲ್ಲಿ ಉಳಿಯಲು ಪ್ರಯತ್ನಿಸುತ್ತಾರೆ. ಅದೇ ಸಮಯದಲ್ಲಿ, ಮುಂಬೈ ಇಂಡಿಯನ್ಸ್‌ಗೆ ಈ ಗೆಲುವು ಅನಿವಾರ್ಯ. ಅವರು ಈ ಪಂದ್ಯವನ್ನು ಗೆದ್ದರೆ, ಪ್ಲೇಆಫ್ ಹಾದಿ ಸುಗಮವಾಗಲಿದೆ.
ಉಭಯ ತಂಡಗಳ ಆಡುವ XI ನಲ್ಲಿ 1-1 ಬದಲಾವಣೆ ದೆಹಲಿ ಮತ್ತು ಮುಂಬೈ ಎರಡೂ ತಮ್ಮ ತಂಡಗಳಲ್ಲಿ ಬದಲಾವಣೆ ಮಾಡಿವೆ. ಲಲಿತ್ ಯಾದವ್ ಬದಲಿಗೆ ಪೃಥ್ವಿ ಶಾ ಅವರಿಗೆ ದೆಹಲಿ ಅವಕಾಶ ನೀಡಿದೆ. ಅದೇ ಸಮಯದಲ್ಲಿ, ಮುಂಬೈ ತಂಡದಲ್ಲಿ ರಾಹುಲ್ ಚಹರ್ ಬದಲಿಗೆ ಜಯಂತ್ ಯಾದವ್ ಅವರಿಗೆ ಅವಕಾಶ ಸಿಕ್ಕಿದೆ.
ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ
ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್ ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಶಿಮ್ರಾನ್ ಹೆಟ್ಮೀರ್, ಸ್ಟೀವ್ ಸ್ಮಿತ್, ಅಕ್ಸರ್ ಪಟೇಲ್, ಆರ್. ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಎನ್ರಿಕ್ ನಾರ್ಖಿಯಾ
Published On - 3:16 pm, Sat, 2 October 21