AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಮುಂಬೈ ಇಂಡಿಯನ್ಸ್​ಗೆ ಸೋಲಾಗಲಿ! ರೋಹಿತ್ ತಂಡಕ್ಕೆ ವೀರೇಂದ್ರ ಸೆಹ್ವಾಗ್ ಶಾಪ ಹಾಕಿದ್ಯಾಕೆ?

IPL 2021: ಈ ವರ್ಷ ಮುಂಬೈ ಇಂಡಿಯನ್ಸ್ ಅಗ್ರಸ್ಥಾನಕ್ಕೇರುವುದು ನನಗೆ ಇಷ್ಟವಿಲ್ಲ. ಮುಂಬೈ ಬದಲಿಗೆ ಹೊಸ ತಂಡ ಅರ್ಹತೆ ಪಡೆಯಬೇಕು ಮತ್ತು ನಾವು ಹೊಸ ಚಾಂಪಿಯನ್ ಪಡೆಯಬೇಕು ಎಂದು ಹೇಳಿದರು.

IPL 2021: ಮುಂಬೈ ಇಂಡಿಯನ್ಸ್​ಗೆ ಸೋಲಾಗಲಿ! ರೋಹಿತ್ ತಂಡಕ್ಕೆ ವೀರೇಂದ್ರ ಸೆಹ್ವಾಗ್ ಶಾಪ ಹಾಕಿದ್ಯಾಕೆ?
ಮುಂಬೈ ಇಂಡಿಯನ್ಸ್​
TV9 Web
| Updated By: ಪೃಥ್ವಿಶಂಕರ|

Updated on: Oct 02, 2021 | 2:43 PM

Share

ಐಪಿಎಲ್ 2021ರಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಕ್ಕೆ ತುಂಬಾ ನಿರಾಶಾದಾಯಕವಾಗಿದೆ. ಕಳೆದ ಋತುವಿನ ಚಾಂಪಿಯನ್ ಈ ಬಾರಿ ಪ್ಲೇಆಫ್‌ಗೆ ಪ್ರವೇಶಿಸಲು ಹೆಣಗಾಡುತ್ತಿದ್ದಾರೆ. ಈ ತಂಡವು 11 ಪಂದ್ಯಗಳಿಂದ ಐದು ಗೆಲುವು ಮತ್ತು 10 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಅಭಿಮಾನಿಗಳು ತಂಡದ ಮರಳುವಿಕೆಗಾಗಿ ಕಾಯುತ್ತಿದ್ದಾರೆ. ಆದಾಗ್ಯೂ, ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್​ಗೆ ಮುಂಬೈ ತಂಡ ಮತ್ತೊಮ್ಮೆ ಚಾಂಪಿಯನ್ ಆಗುವುದು ಇಷ್ಟವಿಲ್ಲ ಎಂದು ಕಾಣುತ್ತದೆ. ಇದಕ್ಕೆ ಅವರು ನೀಡಿರುವ ಹೇಳಿಕೆಯೇ ಸಾಕ್ಷಿಯಾಗಿದೆ.

ಮುಂಬೈ ಇಂಡಿಯನ್ಸ್ ತಂಡಕ್ಕೆ ಎರಡನೇ ಹಂತದ ಐಪಿಎಲ್​ನ ಪಯಣ ಸುಲಭವಲ್ಲ. ಯುಎಇಗೆ ಬಂದ ನಂತರ, ಅವರು ಸತತ ಮೂರು ಪಂದ್ಯಗಳಲ್ಲಿ ಸೋಲನ್ನು ಎದುರಿಸಿಬೇಕಾಯಿತು. ಇದರ ನಂತರ, ತಂಡವು ತನ್ನ ಪ್ಲೇಆಫ್ ಭರವಸೆಯನ್ನು ಜೀವಂತವಾಗಿಟ್ಟುಕೊಂಡು ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿತು. ಮುಂಬೈ ಇಂಡಿಯನ್ಸ್ ಮೂರು ಪಂದ್ಯಗಳ ರೂಪದಲ್ಲಿ ಮೂರು ಅವಕಾಶಗಳನ್ನು ಹೊಂದಿದೆ. ಅವರು ಮೂರರಲ್ಲಿ ಗೆದ್ದರೆ, ಪ್ಲೇಆಫ್‌ಗೆ ಅರ್ಹತೆ ಪಡೆಯಲು ಎಲ್ಲ ಅವಕಾಶಗಳನ್ನು ಹೊಂದಿರುತ್ತಾರೆ. ಆದರೆ ಮುಂಬೈ ಮತ್ತೊಮ್ಮೆ ಚಾಂಪಿಯನ್‌ ಆಗುವುದು ವೀರೇಂದ್ರ ಸೆಹ್ವಾಗ್​ಗೆ ಇಷ್ಟವಿಲ್ಲ. ಐಪಿಎಲ್ 2021 ರಲ್ಲಿ ಅಭಿಮಾನಿಗಳು ಹೊಸ ಚಾಂಪಿಯನ್ ನೋಡಲು ಅವಕಾಶ ಪಡೆಯಬೇಕು ಎಂದು ಸೆಹ್ವಾಗ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಹೊಸ ಚಾಂಪಿಯನ್ ಬೇಕೆಂದ ವೀರೇಂದ್ರ ಸೆಹ್ವಾಗ್ ಕ್ರಿಕ್ ಬಜ್ ಜೊತೆ ಮಾತನಾಡಿದ ಮಾಜಿ ಭಾರತೀಯ ಓಪನರ್, ಈ ವರ್ಷ ಮುಂಬೈ ಇಂಡಿಯನ್ಸ್ ಅಗ್ರಸ್ಥಾನಕ್ಕೇರುವುದು ನನಗೆ ಇಷ್ಟವಿಲ್ಲ. ಮುಂಬೈ ಬದಲಿಗೆ ಹೊಸ ತಂಡ ಅರ್ಹತೆ ಪಡೆಯಬೇಕು ಮತ್ತು ನಾವು ಹೊಸ ಚಾಂಪಿಯನ್ ಪಡೆಯಬೇಕು ಎಂದು ಹೇಳಿದರು. ಅದು ಬೆಂಗಳೂರು, ದೆಹಲಿ ಅಥವಾ ಪಂಜಾಬ್ ಆಗಿರಬಹುದು. ಆದರೂ ಮುಂಬೈ ಇಂಡಿಯನ್ಸ್‌ಗೆ ಪ್ಲೇಆಫ್‌ ಹಾದಿ ಸುಲಭವಲ್ಲ. ಈ ಬಗ್ಗೆ ಮಾತನಾಡಿದ ಸೆಹ್ವಾಗ್, ಐಪಿಎಲ್‌ನಲ್ಲಿ ಮುಂಬೈ ಅತ್ಯುತ್ತಮ ತಂಡವಾಗಿದೆ ಮತ್ತು ಪ್ರತಿದಾಳಿ ಮಾಡುವುದು ಹೇಗೆ ಎಂದು ತಿಳಿದಿದೆ. ಆದರೆ ಮುಂಬೈ ಪ್ಲೇಆಫ್‌ಗೆ ಹೋಗಲು ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು, ಆಗ ಮಾತ್ರ ಅದನ್ನು ತಲುಪಲು ಸಾಧ್ಯವಾಗುತ್ತದೆ. ಆದಾಗ್ಯೂ, ಮುಂಬಯಿಗೆ ಮುಂಬರುವ ಎಲ್ಲಾ ಪಂದ್ಯಗಳು ಅಷ್ಟು ಸುಲಭವಲ್ಲ.

ಇತಿಹಾಸ ಮುಂಬೈ ಇಂಡಿಯನ್ಸ್‌ ಹೆಸರಿನಲ್ಲಿದೆ ಕೆಲವೊಮ್ಮೆ ನೀವು ಗೆಲ್ಲಲು ಹಂಬಲಿಸಿದಾಗ ನೀವು ತಪ್ಪುಗಳನ್ನು ಮಾಡುತ್ತೀರಿ ಮತ್ತು ಆ ತಪ್ಪುಗಳು ನಿಮ್ಮ ಸೋಲಿಗೆ ಕಾರಣವಾಗುತ್ತವೆ, ಆದರೆ ಮುಂಬೈನ ಇತಿಹಾಸವನ್ನು ನೋಡಿದಾಗ, ಅವರು ಪಂದ್ಯವನ್ನು ಗೆಲ್ಲಬೇಕಾದರೆ ಮಾಡಿ ಇಲ್ಲವೆ ಮಡಿ ಎಂಬಂತೆ ಹೋರಾಡುತ್ತಾರೆ. ನಂತರ ಅವರು ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತಾರೆ. ಆದ್ದರಿಂದ, ನಾವು ಇತಿಹಾಸವನ್ನು ನೋಡಿದರೆ, ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಇತಿಹಾಸವನ್ನು ಪುನರಾವರ್ತಿಸಬಹುದು, ಆದರೆ ನಾನು ಇತಿಹಾಸವನ್ನು ಹೆಚ್ಚು ನಂಬುವುದಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ:ಗಂಗೂಲಿ ಅಥವಾ ಧೋನಿ ಈ ಇಬ್ಬರಲ್ಲಿ ಯಾರು ಅತ್ಯುತ್ತಮ ನಾಯಕ? ಒಂದೇ ಪದದಲ್ಲಿ ಉತ್ತರಿಸಿದ ಸೆಹ್ವಾಗ್

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್