IPL 2021: ಐಪಿಎಲ್ ಕ್ರೇಜ್ ಶುರು: ಟಿಕೆಟ್ ಖರೀದಿಸಲು ಹೀಗೆ ಮಾಡಿ

| Updated By: ಝಾಹಿರ್ ಯೂಸುಫ್

Updated on: Sep 16, 2021 | 4:32 PM

How to buy online IPL tickets: ಒಟ್ಟು 31 ಪಂದ್ಯಗಳು ಉಳಿದಿದ್ದು, ಇದರಲ್ಲಿ 13 ಪಂದ್ಯಗಳು ದುಬೈನಲ್ಲಿ, 10 ಪಂದ್ಯಗಳು ಶಾರ್ಜಾದಲ್ಲಿ ಮತ್ತು 8 ಪಂದ್ಯಗಳು ಅಬುಧಾಬಿಯಲ್ಲಿ ನಡೆಯಲಿದೆ.

IPL 2021: ಐಪಿಎಲ್ ಕ್ರೇಜ್ ಶುರು: ಟಿಕೆಟ್ ಖರೀದಿಸಲು ಹೀಗೆ ಮಾಡಿ
IPL tickets
Follow us on

IPL 2021: ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ದ್ವಿತಿಯಾರ್ಧ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಸೆಪ್ಟೆಂಬರ್ 19 ರಿಂದ ಯುಎಇನಲ್ಲಿ (UAE) ಟೂರ್ನಿಯ ಉಳಿದ ಪಂದ್ಯಗಳಿಗೆ ಚಾಲನೆ ಸಿಗಲಿದ್ದು, ಈ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೂ ಕೂಡ ಅವಕಾಶವಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕಳೆದ ಬಾರಿ  ಪ್ರೇಕ್ಷಕರಿಗೆ ಅವಕಾಶ ನೀಡಿರಲಿಲ್ಲ. ಆದರೆ ಈ ಬಾರಿ ಯುಎಇ ಸರ್ಕಾರ ಪ್ರೇಕ್ಷಕರಿಗೆ ಅವಕಾಶ ನೀಡಲು ಒಪ್ಪಿಕೊಂಡಿದ್ದು, ಅದರಂತೆ ಕೊರೋನಾ ಲಸಿಕೆ ಪಡೆದವರು ಅಬುಧಾಬಿ , ಶಾರ್ಜಾ ಹಾಗೂ ದುಬೈ ಸ್ಟೇಡಿಯಂಗಳಲ್ಲಿ ಕೂತು ಪಂದ್ಯವನ್ನು ವೀಕ್ಷಿಸಬಹುದು. ಈಗಾಗಲೇ ಉಳಿದ 31 ಪಂದ್ಯಗಳ ಟಿಕೆಟ್ ಮಾರಾಟ ಕೂಡ ಶುರುವಾಗಿದ್ದು, ಆನ್​ಲೈನ್​ ಮೂಲಕ ಪಂದ್ಯಗಳ ಟಿಕೆಟ್​ಗಳನ್ನು ಮುಂಗಡವಾಗಿ ಖರೀದಿಸಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ…

ಆಯ್ಕೆ 1-
ಇಂಡಿಯನ್ ಪ್ರೀಮಿಯರ್ ಲೀಗ್​ನ ಅಧಿಕೃತ ವೆಬ್‌ಸೈಟ್ www.iplt20.com ನಲ್ಲಿ ಟೂರ್ನಿಯ ಉಳಿದ ಪಂದ್ಯಗಳ ಟಿಕೆಟ್ ಖರೀದಿಸಬಹುದು.

ಹಂತ 1 : ನಿಮ್ಮ ಬ್ರೌಸರ್​ನಲ್ಲಿ ಅಧಿಕೃತ ವೆಬ್‌ಸೈಟ್ www.iplt20.com ಗೆ ಹೋಗಿ.

ಹಂತ 2 : ಮೆನುಬಾರ್‌ನಲ್ಲಿ ಟಿಕೆಟ್ ಖರೀದಿಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 3 : ನಿಮ್ಮ ವಿವರಗಳನ್ನು ನಮೂದಿಸುವ ಮೂಲಕ ನೀವು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಬಹುದು

ಹಂತ 4 : ನೀವು ಖರೀದಿಸಲು ಬಯಸುವ ಟಿಕೆಟ್‌ಗಳ ಸಂಖ್ಯೆಯನ್ನು ಪರಿಶೀಲಿಸಿ ಮತ್ತು ನಂತರ ಪಾವತಿಸಿ.

ಹಂತ 5 : ಪಾವತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಪಿಡಿಎಫ್ ಫೈಲ್ ಅನ್ನು ಡೌನ್‌ಲೋಡ್ ಮಾಡಬಹುದು.

ಹಂತ 6 : ಗೇಟ್ ಪ್ರವೇಶಕ್ಕಾಗಿ ಸ್ಕ್ರೀನ್ ಗ್ರಾಬ್ ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ನಿಯಮಗಳು ಮತ್ತು ನಿಬಂಧನೆಗಳು: ಕೊರೋನಾ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಹೀಗಾಗಿ ನೀವು ಲಸಿಕೆ ಪಡೆದಿರುವುದರ ದಾಖಲೆ ಕೊಂಡೊಯ್ಯಬೇಕು ಅಥವಾ ನಿಮ್ಮ ಮೊಬೈಲ್ ಮೂಲಕ ಮಾಹಿತಿ ದಾಖಲೆ ತೋರಿಸಬೇಕು.

ಆಯ್ಕೆ 2:-

PlatinumList.net ನಲ್ಲಿಯೂ ಮೂರು ಸ್ಟೇಡಿಯಂಗಳ ಟಿಕೆಟ್ ಖರೀದಿಸಬಹುದು.

ಹಂತ 1 : platinumlist.ent ವೆಬ್‌ಸೈಟ್ ಓಪನ್ ಮಾಡಿರಿ.

ಹಂತ 2 : ನಿಮ್ಮ Google ಅಕೌಂಟ್ ಬಳಸಿ ಸೈನ್ ಅಪ್ ಮಾಡಿ

ಹಂತ 3 : ನಿಮ್ಮ ಮೊಬೈಲ್ ಸಂಖ್ಯೆ ಮತ್ತು ದೇಶದ ಕೋಡ್ ನಮೂದಿಸಿ

ಹಂತ 4 : ಬಳಿಕ ನಿಮ್ಮನ್ನು ಹೋಮ್​ಪೇಜ್​ಗೆ ಮರುನಿರ್ದೇಶಿಸಲಾಗುತ್ತದೆ

ಹಂತ 5 : ಅಲ್ಲಿ ನಿಮ್ಮ ಯುಎಇ ನಗರವನ್ನು ಆಯ್ಕೆ ಮಾಡಿ– ಶಾರ್ಜಾ, ಅಬುಧಾಬಿ ಅಥವಾ ದುಬೈ

ಹಂತ 6 : ಆ ಬಳಿಕ ಐಪಿಎಲ್‌ ಡೈಲಾಗ್​ ಬಾಕ್ಸ್ (dialog box) ಹುಡುಕಿ ಅಥವಾ ಕ್ಯಾಲೆಂಡರ್ ಆಯ್ಕೆ ಕಾಣ ಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ

ಹಂತ 7 : ಈಗ ನಿಮಗೆ ಬೇಕಾದ ಸೀಟ್​ / ಪ್ಯಾಕೇಜ್ ಅನ್ನು ಆಯ್ಕೆ ಮಾಡಿ

ಹಂತ 8 : ವಿವರಗಳನ್ನು ನಮೂದಿಸಿದ ನಂತರ ಟಿಕೆಟ್ ಮೊತ್ತ ಪಾವತಿಸಿ

ಹಂತ 9 : ನೀವು ಪಿಡಿಎಫ್ ಫೈಲ್ ಡೌನ್‌ಲೋಡ್ ಮಾಡಿದ ನಂತರ ಸ್ಕ್ರೀನ್ ಗ್ರಾಬ್/ ಪ್ರಿಂಟ್ ಔಟ್ ತೆಗೆದುಕೊಳ್ಳಿ

COVID-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ವರ್ಷ ಮೇ ತಿಂಗಳಲ್ಲಿ ಮುಂದೂಡಲ್ಪಟ್ಟ ಐಪಿಎಲ್​ 14ನೇ ಸೀಸನ್​ನ ದ್ವಿತಿಯಾರ್ಧ ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ದುಬೈನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಒಟ್ಟು 31 ಪಂದ್ಯಗಳು ಉಳಿದಿದ್ದು, ಇದರಲ್ಲಿ 13 ಪಂದ್ಯಗಳು ದುಬೈನಲ್ಲಿ, 10 ಪಂದ್ಯಗಳು ಶಾರ್ಜಾದಲ್ಲಿ ಮತ್ತು 8 ಪಂದ್ಯಗಳು ಅಬುಧಾಬಿಯಲ್ಲಿ ನಡೆಯಲಿದೆ.

ಇದನ್ನೂ ಓದಿ: IPL 2021: ಪ್ಲೇ ಆಫ್ ಪ್ರವೇಶಿಸಲು ದ್ವಿತಿಯಾರ್ಧದಲ್ಲಿ ಪ್ರತಿ ತಂಡಗಳು ಎಷ್ಟು ಪಂದ್ಯ ಗೆಲ್ಲಬೇಕು?

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭಾಗ್ಯ ಕೊಹ್ಲಿ, ಗೇಲ್, ಎಬಿಡಿಗೆ ಇನ್ನೂ ಸಿಕ್ಕಿಲ್ಲ

ಇದನ್ನೂ ಓದಿ: Crime News: ಅಕ್ಕನಿಗೆ ಯುವಕನೊಂದಿಗೆ ಸಂಬಂಧ: ಕಥೆ ಮುಗಿಸಿ ನಗುತ್ತಾ ನಿಂತಿದ್ದ ತಮ್ಮ..!

ಇದನ್ನೂ ಓದಿ: IPL 2021: ಐಪಿಎಲ್ ದ್ವಿತಿಯಾರ್ಧದಲ್ಲಿ ಸೃಷ್ಟಿಯಾಗಲಿದೆ ಹೊಸ ದಾಖಲೆ

(IPL 2021: How to buy online IPL tickets for matches in UAE)