“ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಪರ ನಾಯಕನಾಗಿ ಇದು ನನ್ನ ಕೊನೆಯ ಆವೃತ್ತಿ. ಮುಂದಿನ ಐಪಿಎಲ್ (IPL) ಸೀಸನ್ನಿಂದ ತಂಡದಲ್ಲಿ ಕೇವಲ ಆಟಗಾರನಾಗಿ ಮಾತ್ರ ಇರುತ್ತೇನೆ. ಐಪಿಎಲ್ 2021 (IPL 2021) ಟೂರ್ನಿ ಕೊನೆಗೊಂಡ ಬಳಿಕ ಆರ್‌ಸಿಬಿ (RCB) ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯಲಿದ್ದೇನೆ” ಎಂದು ವಿರಾಟ್ ಕೊಹ್ಲಿ (Virat Kohli) ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಆರ್‌ಸಿಬಿ ತಂಡಕ್ಕೆ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಯೂ ಎದ್ದಿದೆ. 2011ರ ಸಮಯದಲ್ಲಿ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ನಿಭಾಯಿಸಿದ್ದ ವಿರಾಟ್ ಕೊಹ್ಲಿ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಆಯ್ಕೆಯಾದದ್ದು 2013ರಲ್ಲಿ. 2013 ರಿಂದ ಇಲ್ಲಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ (RCB Captain) ವಿರಾಟ್ ಕೊಹ್ಲಿ ತಂಡವನ್ನು ಒಟ್ಟು 132 ಪಂದ್ಯಗಳಲ್ಲಿ ಮುನ್ನಡೆಸಿದ್ದು, 60 ಪಂದ್ಯದಲ್ಲಿ ಬೆಂಗಳೂರು ತಂಡ ಜಯಗಳಿಸಿದ್ದರೆ, 65 ಪಂದ್ಯಗಳಲ್ಲಿ ಸೋಲುಂಡಿದೆ ಮತ್ತು 3 ಪಂದ್ಯಗಳು ಟೈನೊಂದಿಗೆ ಅಂತ್ಯಗೊಂಡಿವೆ.
ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೇಳಿಕೊಳ್ಳುವಂತಹ ಯಶಸ್ಸನ್ನು ಸಾಧಿಸಿಲ್ಲ. 2016ರಲ್ಲಿ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಫೈನಲ್ ಪ್ರವೇಶಿಸಿದ್ದು ಬಿಟ್ಟರೆ ಉಳಿದ ಆವೃತ್ತಿಗಳಲ್ಲಿ ಉತ್ತಮ ಹಂತವನ್ನು ಹೆಚ್ಚಾಗಿ ತಲುಪಿಲ್ಲ. ಅದರಲ್ಲೂ ಈವರೆಗೆ ಒಮ್ಮೆಯೂ ಟ್ರೋಫಿ ಗೆಲ್ಲದಿರುವುದು ದೊಡ್ಡ ಹಿನ್ನಡೆಯಾಗಿದೆ.
ಸದ್ಯ ಐಪಿಎಲ್ 2022 ರಲ್ಲಿ ಆರ್‌ಸಿಬಿ ತಂಡವನ್ನು ನಾಯಕನಾಗಿ ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ. ಈ ಪೈಕಿ ಮೂವರು ಆಟಗಾರರ ಹೆಸರು ಇಲ್ಲಿದೆ.
ಯುಜ್ವೇಂದ್ರ ಚಾಹಲ್: ಕಳೆದ 5-6 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ಯುಜ್ವೇಂದ್ರ ಚಾಹಲ್ ಕೂಡ ವಹಿಸಿದ್ದಾರೆ. 106 ಐಪಿಎಲ್ ಪಂದ್ಯಗಳನ್ನು ಆಡಿರುವ ಅನುಭವ ಇರುವ ತಂಡದ ಆಟಗಾರರ ಜೊತೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ.
ದೇವದತ್ ಪಡಿಕ್ಕಲ್: ಕಳೆದೆರೆಡು ಐಪಿಎಲ್ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಎನಿಸಿಕೊಂಡಿರುವ ದೇವದತ್ ಪಡಿಕ್ಕಲ್ ಇನ್ನೂ ಯುವ ಆಟಗಾರನಾಗಿರುವ ಕಾರಣ ನಾಯಕ ಸ್ಥಾನಕ್ಕೇರುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ. ಅಲ್ಲದೆ ಬೆಂಗಳೂರು ತಂಡಕ್ಕೆ ಕನ್ನಡಿಗ ನಾಯಕನಾಗಬೇಕು ಎಂಬು ಕೂಗು ಇದ್ದೇ ಇದೆ.
ಗ್ಲೆನ್ ಮ್ಯಾಕ್ಸ್ವೆಲ್: ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಈ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ಬಿಗ್ಬ್ಯಾಶ್ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವವಿದೆ. ಅಲ್ಲದೆ ಆರ್ಸಿಬಿಯಲ್ಲಿ ಇದು ಅವರ ಮೊದಲ ಸೀನಸ್ ಆಗಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಎಬಿ ಡಿವಿಲಿಯರ್ಸ್ ನಾಯಕ ಯಾಕಿಲ್ಲ?:
ವಿರಾಟ್ ಕೊಹ್ಲಿ ನಂತರ ಆರ್‌ಸಿಬಿ ತಂಡದ ನಾಯಕ ಡಿವಿಲಿಯರ್ಸ್ ಎಂದೇ ಹೇಳಲಾಗಿತ್ತು. ಆದರೆ, ಎಬಿಡಿಗೆ ಈ ಜವಾಬ್ದಾರಿ ನೀಡುವುದು ಅನುಮಾನ. ಯಾಕಂದ್ರೆ ಎಬಿಡಿ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಅನ್ನೂ ನಿರ್ವಹಿಸಬೇಕು. ಇವರ ಮೇಲೆ ಹೆಚ್ಚಿನ ಒತ್ತಡ ಬಿದ್ದರೆ ಅದು ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ನಾಯಕತ್ವ ನೀಡುವುದು ಅನುಮಾನ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಹೇಳಿದ್ದೇನು?:
“ಆರ್‌ಸಿಬಿಯ ನಾಯಕನಾಗಿ ಇದು ನನ್ನ ಕೊನೆಯ ಐಪಿಎಲ್. ನಾನು ಕೊನೆಯ ಐಪಿಎಲ್ ಸೀಸನ್ ಪಂದ್ಯವನ್ನು ಆಡುವವರೆಗೂ ಆರ್‌ಸಿಬಿ ಆಟಗಾರನಾಗಿಯೇ ಮುಂದುವರಿಯುತ್ತೇನೆ. ನನ್ನ ಮೇಲೆ ವಿಶ್ವಾಸ ಇಟ್ಟಿರುವುದಕ್ಕೆ ಹಾಗೂ ನನ್ನನ್ನು ಬೆಂಬಲಿಸಿದ ಎಲ್ಲ ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಕೊಹ್ಲಿ ಅವರು ಆರ್‌ಸಿಬಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.
IPL 2021, RCB vs KKR: ಆರ್‌ಸಿಬಿ ಪಂದ್ಯಕ್ಕೆ ಇದೆಯೇ ವರುಣನ ಕಾಟ: ಇಲ್ಲಿದೆ ಹವಾಮಾನ ಮತ್ತು ಪಿಚ್ ವರದಿ
(IPL 2021 Not AB De Villiers After Virat Kohli step down Who Can lead RCB Captain In IPL 2022)